ರಾಯ್​ಬರೇಲಿಯಲ್ಲಿ ಇಂದು ನಾಮಪತ್ರ ಸಲ್ಲಿಸಲಿರುವ ಸೋನಿಯಾ ಗಾಂಧಿ; ಇದಕ್ಕೂ ಮುನ್ನ ಪಕ್ಷದ ಕಚೇರಿಯಲ್ಲಿ ಹೋಮ- ಹವನ!

ರೋಡ್​ ಶೋಗೂ ಮುನ್ನ ಸೋನಿಯಾ ಗಾಂಧಿ ಕುಟುಂಬ ಪಕ್ಷದ ಕೇಂದ್ರ ಕಚೇರಿಯಲ್ಲಿ ಹೋಮ ಹವನ ನಡೆಸಲಿದೆ ಎಂದು ಪಕ್ಷದ ವಕ್ತಾರ ಎಲ್​ಕೆಪಿ ಸಿಂಗ್​ ತಿಳಿಸಿದ್ದಾರೆ.

Seema.R | news18
Updated:April 11, 2019, 11:42 AM IST
ರಾಯ್​ಬರೇಲಿಯಲ್ಲಿ ಇಂದು ನಾಮಪತ್ರ ಸಲ್ಲಿಸಲಿರುವ ಸೋನಿಯಾ ಗಾಂಧಿ; ಇದಕ್ಕೂ ಮುನ್ನ ಪಕ್ಷದ ಕಚೇರಿಯಲ್ಲಿ ಹೋಮ- ಹವನ!
ಸೋನಿಯಾ ಗಾಂಧಿ
  • News18
  • Last Updated: April 11, 2019, 11:42 AM IST
  • Share this:
ಲಕ್ನೋ (ಏ.11): ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಇಂದು ರಾಯ್​ಬರೇಲಿ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮುನ್ನ ಬೃಹತ್​ ರೋಡ್​ ಶೋ ನಡೆಸುವ ಮೂಲಕ ತಮ್ಮ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದ್ದಾರೆ. ಇವರೊಂದಿಗೆ ಮಗಳು ಪ್ರಿಯಾಂಕಾ ಗಾಂಧಿ ಜೊತೆಗೆ ಇರಲಿದ್ದಾರೆ.

ರೋಡ್​ ಶೋಗೂ ಮುನ್ನ ಸೋನಿಯಾ ಗಾಂಧಿ ಕುಟುಂಬ ಪಕ್ಷದ ಕೇಂದ್ರ ಕಚೇರಿಯಲ್ಲಿ ಹೋಮ-ಹವನ ನಡೆಸಲಿದೆ ಎಂದು ಪಕ್ಷದ ವಕ್ತಾರ ಎಲ್​ಕೆಪಿ ಸಿಂಗ್​ ತಿಳಿಸಿದ್ದಾರೆ.

ಐದನೇ ಬಾರಿ ಲೋಕಸಭಾ ಚುನಾವಣೆಗೆ ನಿಲ್ಲುತ್ತಿರುವ ಸೋನಿಯಾ ಗಾಂಧಿ ಪ್ರತಿಸ್ಪರ್ಧಿಯಾಗಿ ಈ ಬಾರಿ ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿರುವ ದಿನೇಶ್​ ಪ್ರತಾಪ್​ ಸಿಂಗ್​ ಸ್ಪರ್ಧಿಸಲಿದ್ದಾರೆ. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಹಾಗೂ ಬಹುಜನ ಸಮಾಜವಾದಿ ಪಕ್ಷ ಮೈತ್ರಿ ಮಾಡಿಕೊಂಡಿದ್ದು, ರಾಯ್​ಬರೇಲಿ ಹಾಗೂ ಅಮೇಥಿ ಕ್ಷೇತ್ರವನ್ನು ಕಾಂಗ್ರೆಸ್​ಗೆ ಬಿಟ್ಟುಕೊಡಲಾಗಿದೆ. ಇನ್ನು ಈ ಕ್ಷೇತ್ರದಲ್ಲಿ ಐದನೇ ಹಂತದ ಮತದಾನ ಮೇ 6ರಂದು ನಡೆಯಲಿದೆ. ನೆನ್ನೆಯಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ನಾಮಪತ್ರ ಸಲ್ಲಿಕೆಗೆ 18 ಕೊನೇ ದಿನವಾಗಿದೆ. ಅಮೇಥಿ ಕ್ಷೇತ್ರದಿಂದ ರಾಹುಲ್ ಗಾಂಧಿ ನೆನ್ನೆ ನಾಮಪತ್ರ ಸಲ್ಲಿಸಿದ್ದರು.

ಇದನ್ನು ಓದಿ: ಬಿಜೆಪಿ ಪ್ರಣಾಳಿಕೆಗೆ 100ಕ್ಕೆ200 ಅಂಕ: ಶಿವಸೇನೆ ಮುಖವಾಣಿ ಸಾಮ್ನಾ ಸಂಪಾದಕೀಯದಲ್ಲಿ ಮೋದಿಯನ್ನು ಹಾಡಿಹೊಗಳಿದ ಠಾಕ್ರೆ

2004, 2006 (ಉಪಚುನಾವಣೆ) 2009 ಮತ್ತು 2014ರಲ್ಲಿ ಈ ಕ್ಷೇತ್ರಗಳಲ್ಲಿ ಸೋನಿಯಾ ಗಾಂಧಿ ಜಯಗಳಿಸಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ 5,26,434 ಮತಗಳಿಂದ ಅವರು ಜಯಗಳಿಸಿದ್ದರು.

First published:April 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading