Sonia Gandhi: 2024ರವರೆಗೂ ಸೋನಿಯಾ ಗಾಂಧಿಯೇ ಕಾಂಗ್ರೆಸ್​ ಅಧ್ಯಕ್ಷೆ

ಸೋನಿಯಾ ಗಾಂಧಿ.

ಸೋನಿಯಾ ಗಾಂಧಿ.

ಇದೇ ವೇಳೆ ಪಕ್ಷದಲ್ಲಿ ನಾಲ್ವರು ಕಾರ್ಯಕಾರಿ ಅಧ್ಯಕ್ಷರನ್ನು ಕೂಡ ನೇಮಕ ಮಾಡಲಾಗುವುದು ಇವರು ಪ್ರಮುಖ ನಿರ್ಧಾರ ಕೈ ಗೊಳ್ಳುವಲ್ಲಿ ರಾಹುಲ್​ ಗಾಂಧಿ ಮತ್ತು ಸೋನಿಯಾ ಗಾಂಧಿಗೆ ಸಹಾಯ ಮಾಡಲಿದ್ದಾರೆ

  • Share this:

ನವದೆಹಲಿ (ಜು. 21): ರಾಷ್ಟ್ರೀಯ ಪಕ್ಷ ಕಾಂಗ್ರೆಸ್​ ನಾಯಕತ್ವ ಬದಲಾವಣೆ ಕುರಿತು ಈಗಾಗಲೇ ಹಲವು ಹಿರಿಯ ಭಿನ್ನಮತೀಯರು ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದ್ದಾರೆ. ಗಾಂಧಿ ಕುಟುಂಬದ ಹೊರತಾದ ವ್ಯಕ್ತಿ ನಾಯಕತ್ವ ವಹಿಸಬೇಕು ಎಂಬ ಕೂಗಿನ ನಡುವೆಯೂ ಮತ್ತೆ ಸೋನಿಯಾ ಗಾಂಧಿ ಮತ್ತೊಂದು ಅವಧಿಗೆ ಅಧ್ಯಕ್ಷೆ ಸ್ಥಾನದಲ್ಲಿ ಮುಂದುವರೆಯುವುದು ಖಚಿತ ಎಂಬ ಮಾತುಗಳು ಪಕ್ಷದಲ್ಲಿ ಕೇಳಿ ಬಂದಿದೆ. 2024ರವರೆರೂ ಸೋನಿಯಾ ಗಾಂಧಿ ಅವರೇ ಹಂಗಾಮಿ ಅಧ್ಯಕ್ಷರಾಗಿ ಮುಂದುವೆಯುವ ಸಾಧ್ಯತೆ ಹೆಚ್ಚಿದೆ. ಇದರ ಜೊತೆಗೆ ಪಕ್ಷದ ಇತರೆ ನಾಯಕರ ಮುನಿಸು ತಣ್ಣಗಾಗಿಸಲು ಅವರು ಯುವ ನಾಯಕರಿಗೆ ಪಕ್ಷದ ಪ್ರಮುಖ ಹುದ್ದೆಗೆಯನ್ನು ನೀಡಲು ತಯಾರಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.


2024ರ ಚುನಾವಣೆ ಹಿನ್ನಲೆ ಪಕ್ಷವನ್ನು ಸಜ್ಜುಗೊಳಿಸುವ ಅವಶ್ಯಕತೆ ಇದೆ. ಇದೆ ಹಿನ್ನಲೆಯಲ್ಲಿ ರಾಹುಲ್​ ಗಾಂಧಿಗೂ ಪಕ್ಷದ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ. ಮುಂದಿನ ಚುನಾವಣೆ ದೃಷ್ಟಿಯಿಂದ ಪಕ್ಷದ ಯುವ ನಾಯಕರು ಮತ್ತು ಗಾಂಧಿ ಕುಟುಂಬದ ನಿಷ್ಠಾವಂತರು ಪಕ್ಷದ ಸಂಘಟನೆಯಲ್ಲಿ ಪ್ರಮುಖ ಪಾತ್ರವಹಿಸಲಿದ್ದಾರೆ ಎನ್ನಲಾಗಿದೆ
ಇದೇ ವೇಳೆ ಪಕ್ಷದಲ್ಲಿ ನಾಲ್ವರು ಕಾರ್ಯಕಾರಿ ಅಧ್ಯಕ್ಷರನ್ನು ಕೂಡ ನೇಮಕ ಮಾಡಲಾಗುವುದು ಇವರು ಪ್ರಮುಖ ನಿರ್ಧಾರ ಕೈ ಗೊಳ್ಳುವಲ್ಲಿ ರಾಹುಲ್​ ಗಾಂಧಿ ಮತ್ತು ಸೋನಿಯಾ ಗಾಂಧಿಗೆ ಸಹಾಯ ಮಾಡಲಿದ್ದಾರೆ. ಈ ಸ್ಥಾನಕ್ಕೆ ಗುಲಾಂ ನಬಿ ಆಜಾದ್​, ಸಚಿನ್​ ಪೈಲಟ್​, ಕುಮಾರಿ ಸೆಲ್ಜಾ, ಮುಕಲ್​ ವಾಸ್ನಿಕ್​​ ಮತ್ತು ರಮೇಶ್​ ಚೆನ್ನಿಥಾಲ ಕಾರ್ಯಕಾರಿ ಅಧ್ಯಕ್ಷರ ಸ್ಥಾನದ ರೇಸ್​ನಲ್ಲಿದ್ದಾರೆ.


ಪಕ್ಷದ ಪುನರ್ರಚನೆ ಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಯಾವ ಸ್ಥಾನ ಹೊಂದಲಿದ್ದಾರೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಮುಂದಿನ ವರ್ಷ ಚುನಾವಣೆ ಎದುರಿಸಲಿರುವ ಉತ್ತರ ಪ್ರದೇಶದಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಅವರು ಮುನ್ನಡೆಸಲಿದ್ದಾರೆ.


ಇದನ್ನು ಓದಿ: ಯಡಿಯೂರಪ್ಪರನ್ನ ಇಳಿಸಿದರೆ, ಆಂಧ್ರದಲ್ಲಾಗಿದ್ದು ಕರ್ನಾಟಕದಲ್ಲಾಗುತ್ತೆ: ಬಿಜೆಪಿ ವರಿಷ್ಠರನ್ನ ಎಚ್ಚರಿಸಿದ ಸುರೇಶ್ ಗೌಡ


ಕಳೆದೆರಡು ವರ್ಷಗಳಿಂದಲೂ ಸೋನಿಯಾ ಗಾಂಧಿ ಹಂಗಾಮಿ ನಾಯಕರಾಗಿ ಪಕ್ಷದ ಅಧಿಕಾರ ಮುನ್ನಡೆಸುತ್ತಿದ್ದು, ಪಕ್ಷದ ಅಧ್ಯಕ್ಷ ಸ್ಥಾನದ ಚುನಾವಣೆಯನ್ನು ಮುಂದೂಡುತ್ತಿದ್ದಾರೆ. ಈ ಬಾರಿ ಚುನಾವಣೆ ನಡೆಯುವ ಸಾಧ್ಯತೆ ಇದ್ದು, 2019ರ ಚುನಾವಣಾ ಸೋಲಿನ ಹೊಣೆ ಹೊತ್ತು ಕಳೆಗಿಳಿದಿದ್ದ ರಾಹುಲ್ ಗಾಂಧಿ ಈ ಬಾರಿ​ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲು ಮುಂದಾಗಿದ್ದರು ಎನ್ನಲಾಗಿತ್ತು. ಆದರೆ, ಕೋವಿಡ್​ ಹಿನ್ನಲೆಯಲ್ಲಿ ಪಕ್ಷ ಅಧ್ಯಕ್ಷ ಸ್ಥಾನದ ಚುನಾವಣೆಯನ್ನು ಮುಂದೂಡಿದೆ. ರಾಹುಲ್​ ಗಾಂಧಿ ಪಕ್ಷದ ಸಂಘಟನೆಯ ಸಂಪೂಣ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.


ಇದೇ ವೇಳೆ ಪಕ್ಷ ರಾಜಸ್ಥಾನ, ಪಂಜಾಬ್​, ಛತ್ತೀಸ್​ಗಢ, ಕೇರಳ ಮತ್ತು ಕರ್ನಾಟಕದಲ್ಲಿ ನಾಯಕತ್ವದ ಪೈಪೋಟಿ ಸಮಸ್ಯೆ ಎದುರಿಸುತ್ತಿದೆ. ಕರ್ನಾಟಕದಲ್ಲಿ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ಸ್ಪರ್ಧೆ ಎರ್ಪಟ್ಟರೆ ಪಂಜಾಬ್​ನಲ್ಲಿ ಅಮರಿಂದರ್​ ಸಿಂಗ್​ ಮತ್ತು ನವಜೋತ್​ ಸಿಂಗ್​ ಸಿಧು ಮತ್ತು ರಾಜಸ್ಥಾನದಲ್ಲಿ ಅಶೋಕ್​ ಗೆಲ್ಹೋಟ್ ಮತ್ತು ಸಚಿನ್​ ಪೈಲಟ್​ ನಡುವೆ ಜಟಾಪಟಿ ಮುಂದುವರೆದಿದೆ.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು

First published: