ಲೋಕಸಭಾ ಚುನಾವಣೆ: ಸೋನಿಯಾ, ರಾಹುಲ್ ಸೇರಿ 15 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಕಾಂಗ್ರೆಸ್

ಸೋನಿಯಾ ಗಾಂಧಿ ಅವರಿಗೆ ಅನಾರೋಗ್ಯ ಸಮಸ್ಯೆ ಇರುವುದರಿಂದ ಈ ಚುನಾವಣೆಯಲ್ಲಿ ಸ್ಪರ್ಧಿಸುವುದು ಅನುಮಾನ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಈಗ ಆ ವದಂತಿಗೆ ತೆರೆಬಿದ್ದಂತಾಗಿದೆ. ಈ ಬಾರಿಯೂ ಸೋನಿಯಾ ಗಾಂಧಿ ರಾಯ್​ಬರೇಲಿಯಿಂದ ಸ್ಪರ್ಧಿಸಲಿದ್ದಾರೆ.

Sushma Chakre | news18
Updated:March 11, 2019, 3:55 PM IST
ಲೋಕಸಭಾ ಚುನಾವಣೆ: ಸೋನಿಯಾ, ರಾಹುಲ್ ಸೇರಿ 15 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಕಾಂಗ್ರೆಸ್
ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ
  • News18
  • Last Updated: March 11, 2019, 3:55 PM IST
  • Share this:
ನವದೆಹಲಿ (ಮಾ.8): ಈ ಬಾರಿಯ ಲೋಕಸಭಾ ಚುನಾವಣೆ ಭಾರೀ ಕುತೂಹಲ ಮೂಡಿಸಿದ್ದು, ಮುಂದಿನ ವಾರದೊಳಗೆ ಚುನಾವಣಾ ಆಯೋಗ ದಿನಾಂಕ ಪ್ರಕಟಿಸಲಿದೆ. ಈಗಾಗಲೇ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್​ ತಮ್ಮ ಪ್ರಚಾರ ಕಾರ್ಯವನ್ನು ಆರಂಭಿಸಿದ್ದು, ಚುನಾವಣೆಯಲ್ಲಿ ತೀವ್ರ ಪೈಪೋಟಿ ಎದುರಾಗುವ ಸಾಧ್ಯತೆಯಿದೆ. ಇದೀಗ ಕಾಂಗ್ರೆಸ್​ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದೆ.

ಕಾಂಗ್ರೆಸ್​ ನಾಯಕರಾದ ಸೋನಿಯಾ ಗಾಂಧಿ ಕಾಂಗ್ರೆಸ್​ ಅಧ್ಯಕ್ಷ ರಾಹುಲ್ ಗಾಂಧಿ ಸೇರಿ 15 ಅಭ್ಯರ್ಥಿಗಳ ಪಟ್ಟಿಯನ್ನು ಮೊದಲ ಹಂತದಲ್ಲಿ ಪ್ರಕಟಿಸಲಾಗಿದೆ. ಉತ್ತರಪ್ರದೇಶದ 11 ಕ್ಷೇತ್ರ ಮತ್ತು ಗುಜರಾತ್​ನ 4 ಕ್ಷೇತ್ರಗಳಿಗೆ ಕಾಂಗ್ರೆಸ್​ ಅಭ್ಯರ್ಥಿಗಳ ಆಯ್ಕೆ ಅಂತಿಮವಾಗಿದೆ. 1 ಗಂಟೆಯ ಕಾಲ ನಡೆದ ಸಭೆಯ ಬಳಿಕ ಈ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ.

8 ಹಂತಗಳಲ್ಲಿ ಲೋಕಸಭೆ ಚುನಾವಣೆ? ಶೀಘ್ರದಲ್ಲೇ ದಿನಾಂಕ ಘೋಷಣೆ ಸಾಧ್ಯತೆ

ಸೋನಿಯಾ ಗಾಂಧಿ ಅವರಿಗೆ ಅನಾರೋಗ್ಯ ಸಮಸ್ಯೆ ಇರುವುದರಿಂದ ಈ ಚುನಾವಣೆಯಲ್ಲಿ ಸ್ಪರ್ಧಿಸುವುದು ಅನುಮಾನ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಈಗ ಆ ವದಂತಿಗೆ ತೆರೆಬಿದ್ದಂತಾಗಿದೆ. ಈ ಬಾರಿಯೂ ಸೋನಿಯಾ ಗಾಂಧಿ ರಾಯ್​ಬರೇಲಿಯಿಂದ ಸ್ಪರ್ಧಿಸಲಿದ್ದಾರೆ. 2004ರಿಂದ ಅವರು ಸತತವಾಗಿ ಇದೇ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಹಾಗೇ, ಅಮೇಥಿಯಿಂದ 3 ಬಾರಿ ಸಂಸದರಾಗಿ ಆಯ್ಕೆಯಾಗಿರುವ ರಾಹುಲ್ ಗಾಂಧಿ ಈ ಬಾರಿಯೂ ಅದೇ ಕ್ಷೇತ್ರದಿಂದ ಕಣಕ್ಕೆ ಇಳಿಯಲಿದ್ದಾರೆ. ಉತ್ತರಪ್ರದೇಶದ ಈ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹೆಚ್ಚು ಪ್ರಭಾವ ಹೊಂದಿದೆ. ಹೀಗಾಗಿ, ಈ ಬಾರಿ ಉತ್ತರಪ್ರದೇಶದಲ್ಲಿ ಎಸ್​ಪಿ ಮತ್ತು ಬಿಎಸ್​ಪಿ ಮೈತ್ರಿ ಮಾಡಿಕೊಂಡಿದ್ದರೂ ಈ ಎರಡು ಕ್ಷೇತ್ರಗಳನ್ನು ಕಾಂಗ್ರೆಸ್​ಗೆ ಬಿಟ್ಟುಕೊಡಲು ನಿರ್ಧರಿಸಿದ್ದವು.

ಲೋಕಪಾಲ್​ ಆಯ್ಕೆ ಸಮಿತಿ ರಚನೆ ಕುರಿತು ಸಭೆ ನಡೆಸಲು ಸುಪ್ರೀಂನಿಂದ 10 ದಿನ ಗಡುವು

15 ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳು:

ಉತ್ತರಪ್ರದೇಶದ  ರಾಯ್ ಬರೇಲಿ- ಸೋನಿಯಾ ಗಾಂಧಿ,  ಅಮೇಥಿ- ರಾಹುಲ್ ಗಾಂಧಿ, ಫರುಖಾಬಾದ್- ಸಲ್ಮಾನ್ ಖುರ್ಷಿದ್,  ಖುಷಿ ನಗರ್​- ಆರ್​ಪಿಎನ್ ಸಿಂಗ್, ಧೌರಾಹ್ರಾ- ಜತಿನ್ ಪ್ರಸಾದ್, ಸಹರಾನ್​ಪುರ- ಇಮ್ರಾನ್ ಮಸೂದ್​, ಬದೌನ್- ಸಲೀಂ ಇಕ್ಬಾಲ್ ಶೇರ್ವಾನಿ, ಉನ್ನಾವ್​- ಅನು ಟಂಡನ್ -ಅಕ್ಬರ್​ಪುರ್​- ರಾಜಾರಾಂ ಪಾಲ್, ಜಲೌನ್- ಬ್ರಿಜ್ ಲಾಲ್ ಕಬೀರ್, ಫೈಜಾಬಾದ್​- ನಿರ್ಮಲ್ ಖಾತ್ರಿ, ಗುಜರಾತ್​ನ ಅಹಮದಾಬಾದ್-  ರಾಜು ಪಾರ್ಮರ್, ವಡೋದರ- ಪ್ರಶಾಂತ್​ ಪಟೇಲ್, ಚೋಟಾ ಉದಯಪುರ್- ರಂಜಿತ್​ ಮೋಹನ್ ಸಿನ್ಹಾ ರಾವತ್​, ಆನಂದ್​- ಭರತ್ ಸಿನ್ಹಾ ಎಂ. ಸೋಲಂಕಿ ಸ್ಪರ್ಧಿಸಲಿದ್ದಾರೆ.Exclusive | ಲೋಕಸಭಾ ಚುನಾವಣೆ; ಕಾಂಗ್ರೆಸ್​ನ​ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ

ಎಸ್​ಪಿ- ಬಿಎಸ್​ಪಿ ಒಂದಾಗಿ ಉತ್ತರಪ್ರದೇಶದಲ್ಲಿ ಸ್ಪರ್ಧಿಸಲು ನಿರ್ಧರಿಸಿರುವುದರಿಂದ ಅಲ್ಲಿನ ಚುನಾವಣೆ ಭಾರೀ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಇಲ್ಲಿ ಕಾಂಗ್ರೆಸ್​ ತನ್ನ 11 ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುತ್ತಿರುವುದು ಅಚ್ಚರಿ ಮೂಡಿಸಿದೆ. ಈ ಹಿಂದೆ ಕಾಂಗ್ರೆಸ್​ ಇಲ್ಲಿನ 80 ಕ್ಷೇತ್ರಗಳಲ್ಲೂ ಸ್ಪರ್ಧಿಸುವುದಾಗಿ ಹೇಳಿಕೊಂಡಿತ್ತು. ಅಂದಹಾಗೆ, ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಪ್ರಿಯಾಂಕಾ ಗಾಂಧಿ ಅವರ ಹೆಸರು ಇಲ್ಲದಿರುವುದು ಕುತೂಹಲ ಮೂಡಿಸಿದೆ. ಅವರು ಇತ್ತೀಚೆಗಷ್ಟೇ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಳ್ಳಲು ಮುಂದಾಗಿದ್ದರು. ಉತ್ತರಪ್ರದೇಶ ಪೂರ್ವ ಭಾಗದ ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿಯಾಗಿ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.

First published:March 8, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading