ಉತ್ತರಪ್ರದೇಶದ ರಾಯ್​ಬರೇಲಿ ಕ್ಷೇತ್ರದಿಂದಲೇ ಸೋನಿಯಾ ಗಾಂಧಿ ಮತ್ತೊಮ್ಮೆ ಸ್ಪರ್ಧೆ?

ಕಾಂಗ್ರೆಸ್​ನ ಹಿರಿಯ ನಾಯಕರೊಬ್ಬರು ಹೇಳುವಂತೆ, ಕಾಂಗ್ರೆಸ್​ನಲ್ಲಿಯೇ ಎರಡು ಕಾಂಗ್ರೆಸ್​ಗಳಿವೆ. ಒಂದು ಸೋನಿಯಾ ಕಾಂಗ್ರೆಸ್​ ಮತ್ತೊಂದು ರಾಹುಲ್​ ಕಾಂಗ್ರೆಸ್​. ಸೋನಿಯಾ ಗಾಂಧಿ ಇಲ್ಲಿಂದ ಮತ್ತೊಮ್ಮೆ ಸ್ಪರ್ಧೆ ಮಾಡಬೇಕಿರುವುದು ಸೋನಿಯಾ ಕಾಂಗ್ರೆಸ್​ಗೆ ಬೇಕಿದೆ ಎಂದು ಹೇಳುತ್ತಾರೆ.

HR Ramesh | news18
Updated:February 19, 2019, 10:09 PM IST
ಉತ್ತರಪ್ರದೇಶದ ರಾಯ್​ಬರೇಲಿ ಕ್ಷೇತ್ರದಿಂದಲೇ ಸೋನಿಯಾ ಗಾಂಧಿ ಮತ್ತೊಮ್ಮೆ ಸ್ಪರ್ಧೆ?
ಸೋನಿಯಾ ಗಾಂಧಿ
HR Ramesh | news18
Updated: February 19, 2019, 10:09 PM IST
ನವದೆಹಲಿ: ಸದ್ಯ ಎಲ್ಲರ ಕಣ್ಣು ಸೋನಿಯಾ ಗಾಂಧಿ ಅವರ ಕ್ಷೇತ್ರ ಉತ್ತರಪ್ರದೇಶದ ರಾಯ್​ಬರೇಲಿ ಮೇಲಿದೆ. ಅದಕ್ಕೆ ಕಾರಣವೂ ಇದೆ. ಮುಂದಿನ ಚುನಾವಣೆಯಲ್ಲಿ ಸೋನಿಯಾ ಅವರು ಸಕ್ರಿಯ ರಾಜಕಾರಣದಿಂದ ನಿವೃತ್ತಿ ಪಡೆಯಲಿದ್ದಾರೆ ಅಥವಾ ಈ ಕ್ಷೇತ್ರವನ್ನು ತಮ್ಮ ಮಗಳು ಹಾಗೂ ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರಿಗೆ ಬಿಟ್ಟುಕೊಡಲಿದ್ದಾರಾ ಎಂಬ ಕಾರಣಕ್ಕೆ ಈ ಕ್ಷೇತ್ರ ಬಾರೀ ಕುತೂಹಲ ಕೆರಳಿಸಿದೆ.

ನ್ಯೂಸ್​ 18ಗೆ ಆಪ್ತ ಮೂಲಗಳು ತಿಳಿಸಿರುವ ಪ್ರಕಾರ, ಪಕ್ಷದ ಹಿರಿಯ ಮುಖಂಡರು, ರಾಯ್​ಬರೇಲಿಯಿಂದ ಸ್ಪರ್ಧೆ ಮಾಡುವಂತೆ ಸೋನಿಯಾ ಗಾಂಧಿ ಅವರಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.


Loading...

ಪ್ರಿಯಾಂಕಾ ಗಾಂಧಿ ಉತ್ತರಪ್ರದೇಶ ರಾಜ್ಯದ ಚುನಾವಣೆ ಬಗ್ಗೆ ಗಮನ ಕೇಂದ್ರಿಕರಿಸಿದ್ದಾರೆ. ಹೀಗಾಗಿ ತಮ್ಮದೇ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಗಮನ ಕೇಂದ್ರೀಕರಿಸುವುದು ಅವರ ಪ್ರಾಥಮಿಕ ಜವಾಬ್ದಾರಿಯಾಗಿರುತ್ತದೆ. ಮತ್ತು ಉತ್ತರಪ್ರದೇಶದಲ್ಲಿ ತಮ್ಮ ಸ್ಥಾನವನ್ನು ಹೆಚ್ಚು ಬಲಪಡಿಸಿಕೊಳ್ಳಬೇಕಿದೆ.

ಗಾಂಧಿ ಕುಟುಂಬ ಈವರೆಗೂ ರಾಯ್​ಬರೇಲಿ ಕ್ಷೇತ್ರವನ್ನು ತಮ್ಮ ಕುಟುಂಬ ಸದಸ್ಯರಲ್ಲದೆ ಇತರರಿಗೆ ಎಂದಿಗೂ ಬಿಟ್ಟುಕೊಟ್ಟಿಲ್ಲ. ಪಕ್ಷದ ಮೂಲಗಳ ಪ್ರಕಾರ, ಈ ಕ್ಷೇತ್ರದಲ್ಲಿ ಖಂಡಿತವಾಗಿಯೂ ಗೆಲ್ಲುವುದು ಅವರೆ. ಹೀಗಾಗಿ ಈ ಕ್ಷೇತ್ರವನ್ನು ಸೋನಿಯಾ ಗಾಂಧಿ ಅವರೇ ತಮ್ಮ ಬಳಿ ಇಟ್ಟುಕೊಳ್ಳುವುದರಿಂದ ಮುಂದೆ ಅದು ಪ್ರಿಯಾಂಕಾ ಗಾಂಧಿ ಅವರಿಗೂ ಅನುಕೂಲವಾಗುತ್ತದೆ.

ಇದನ್ನು ಓದಿ: ರಾಬರ್ಟ್​​ ವಾದ್ರಾ ಪ್ರಕರಣ: ತನಿಖೆಗೆ ಅಂತ್ಯವಿಲ್ಲ; ಬಿಜೆಪಿಗೆ ಪ್ರಿಯಾಂಕಾ ಗಾಂಧಿ ಪರೋಕ್ಷ ತಿರುಗೇಟು

ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ರಾಯ್​ಬರೇಲಿ ಕ್ಷೇತ್ರದಿಂದ ಸ್ಪರ್ಧೆ ಮಾಡಿದರೆ, ಬಿಜೆಪಿಯ ಸ್ಮೃತಿ ಇರಾನಿಯೊಂದಿಗೆ ಸೆಣಸುವುದು ಕಷ್ಟವಾಗಬಹುದು. ಹೀಗಾಗಿ ಸೋನಿಯಾ ಗಾಂಧಿ ಅವರೇ ಈ ಕ್ಷೇತ್ರದಿಂದ ಸ್ಪರ್ಧಿಸುವುದು ಸೂಕ್ತ ಎನ್ನಲಾಗುತ್ತಿದೆ.

ರಾಯ್​ಬರೇಲಿ ಕ್ಷೇತ್ರ ಸೋನಿಯಾ ಗಾಂಧಿ ಅವರ ಗೆಲುವಿಗೆ ಸಕ್ಕರೆ ಪಾಕವಿದ್ದಂತೆ. ಆದಾಗ್ಯೂ ಬಿಜೆಪಿಯ ಕಠಿಣ ಸ್ಪರ್ಧೆ ಇದ್ದೆ ಇದೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ರಾಯ್​ಬರೇಲಿಯಲ್ಲಿ ಅಭಿವೃದ್ಧಿ ಯೋಜನೆಯನ್ನು ಉದ್ಘಾಟಿಸಿದ್ದರು.

ಕಾಂಗ್ರೆಸ್​ನ ಹಿರಿಯ ನಾಯಕರೊಬ್ಬರು ಹೇಳುವಂತೆ, ಕಾಂಗ್ರೆಸ್​ನಲ್ಲಿಯೇ ಎರಡು ಕಾಂಗ್ರೆಸ್​ಗಳಿವೆ. ಒಂದು ಸೋನಿಯಾ ಕಾಂಗ್ರೆಸ್​ ಮತ್ತೊಂದು ರಾಹುಲ್​ ಕಾಂಗ್ರೆಸ್​. ಸೋನಿಯಾ ಗಾಂಧಿ ಇಲ್ಲಿಂದ ಮತ್ತೊಮ್ಮೆ ಸ್ಪರ್ಧೆ ಮಾಡಬೇಕಿರುವುದು ಸೋನಿಯಾ ಕಾಂಗ್ರೆಸ್​ಗೆ ಬೇಕಿದೆ ಎಂದು ಹೇಳುತ್ತಾರೆ.
First published:February 19, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...