ಮಹಾರಾಷ್ಟ್ರ ಬಿಕ್ಕಟ್ಟು: ಸೇನೆ ಜತೆ ಸರ್ಕಾರ ರಚನೆ ಕುರಿತಂತೆ ನ.17ಕ್ಕೆ ಸೋನಿಯಾ-ಶರದ್ ಮಹತ್ವದ​​​ ಮಾತುಕತೆ

ಈ ಕರಡು ಕಾಂಗ್ರೆಸ್​​-ಎನ್​​ಸಿಪಿ ಮತ್ತು ಶಿವಸೇನೆ ವರಿಷ್ಠರಿಗೆ ಒಪ್ಪಿಗೆಯಾದ ಕೂಡಲೇ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಮುಂದೆ ತಮ್ಮ ಹಕ್ಕು ಮಂಡನೆ ಮಾಡಲಿವೆ. ಸರ್ಕಾರ ರಚನೆಗೆ ಬೇಕಾದ ಸಂಖ್ಯಾಬಲ ಎಂದು ಹೇಳಿದ್ದಾರೆ.

news18-kannada
Updated:November 14, 2019, 10:44 PM IST
ಮಹಾರಾಷ್ಟ್ರ ಬಿಕ್ಕಟ್ಟು: ಸೇನೆ ಜತೆ ಸರ್ಕಾರ ರಚನೆ ಕುರಿತಂತೆ ನ.17ಕ್ಕೆ ಸೋನಿಯಾ-ಶರದ್ ಮಹತ್ವದ​​​ ಮಾತುಕತೆ
ಸೋನಿಯಾ, ಶರದ್​ ಪವಾರ್​​, ಉದ್ಧವ್​​ ಠಾಕ್ರೆ
  • Share this:
ಬೆಂಗಳೂರು(ನ.14): ಮಹಾರಾಷ್ಟ್ರದ ರಾಜಕಾರಣವೀಗ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ರಾಜ್ಯಪಾಲ ಭಗತ್​​ ಸಿಂಗ್​ ಕೊಶ್ಯಾರಿ ಗಡುವು ಕೊಟ್ಟರೂ ಭಾರತೀಯ ಜನತಾ ಪಕ್ಷ ಸೇರಿದಂತೆ ಶಿವಸೇನೆ ಮತ್ತು ಕಾಂಗ್ರೆಸ್-ಎನ್​​ಸಿಪಿಯೂ ಸರ್ಕಾರ ರಚನೆ ಮಾಡುವಲ್ಲಿ ವಿಫಲವಾದವು. ರಾಜ್ಯಪಾಲರ ಶಿಫಾರಸು ಮೇರೆಗೆ ರಾಷ್ಟ್ರಪತಿ ಆಳ್ವಿಕೆಯೂ ಜಾರಿಗೆ ಬಂದಾಯ್ತು. ಈ ಬೆನ್ನಲ್ಲೀಗ ಸರ್ಕಾರ ರಚನೆ ವಿಳಂಬ ಕುರಿತಂತೆ ಕಾಂಗ್ರೆಸ್​​ ಸೋನಿಯಾ ಗಾಂಧಿ ಜತೆಗೆ ನ್ಯಾಷನಲಿಸ್ಟ್​​ ಕಾಂಗ್ರೆಸ್​​ ಪಕ್ಷದ ಮುಖ್ಯಸ್ಥ ಶರದ್​​ ಪವಾರ್​ ನವೆಂಬರ್​​​ 17ಕ್ಕೆ ಮಹತ್ವದ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ. ಹಾಗೆಯೇ ಶಿವಸೇನೆ ಜತೆಗೂ ಸರ್ಕಾರ ರಚನೆ ಸಂಬಂಧ ಕಾಂಗ್ರೆಸ್​​ ಮತ್ತು ಎನ್​​ಸಿಪಿ ಮಾತುಕತೆ ನಡೆಸಲಿವೆ ಎಂದೇಳಲಾಗುತ್ತಿದೆ.

ಈಗಾಗಲೇ ಕಾಂಗ್ರೆಸ್​​-ಎನ್​​ಸಿಪಿ ಮತ್ತು ಶಿವಸೇನೆ ಹಲವು ಬಾರಿ ಮಾತುಕತೆ ನಡೆಸಿವೆ. ಅಲ್ಲದೇ ಸಾಮಾನ್ಯ ಕನಿಷ್ಠ ಕಾರ್ಯಕ್ರಮದ (ಸಿಎಂಪಿ) ಕರಡು ಅಂತಿಗೊಳಿಸಲಾಗಿದೆ. ಈ ಕರಡು ಅಂತಿಮಗೊಳಿಸಿದ್ದರಿಂದ ಮಹಾರಾಷ್ಟ್ರದಲ್ಲಿ ಮೂರು ಪಕ್ಷಗಳು ಸೇರಿ ಸರ್ಕಾರ ರಚಿಸುವ ಪ್ರಯತ್ನದ ಹಾದಿ ಸುಗಮಗೊಂಡಿದೆ ಎನ್ನಲಾಗುತ್ತಿದೆ.

ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಕರಡು ಅಂತಿಮ ಅನುಮತಿಗಾಗಿ ಆಯಾ ಪಕ್ಷದ ಹೈಕಮಾಂಡ್​​ಗೆ ಕಳಿಸಿಕೊಡಲಾಗಿದೆ. ಈ ಕರಡು ಕಾಂಗ್ರೆಸ್​​-ಎನ್​​ಸಿಪಿ ಮತ್ತು ಶಿವಸೇನೆ ವರಿಷ್ಠರಿಗೆ ಒಪ್ಪಿಗೆಯಾದ ಕೂಡಲೇ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಮುಂದೆ ತಮ್ಮ ಹಕ್ಕು ಮಂಡನೆ ಮಾಡಲಿವೆ. ಸರ್ಕಾರ ರಚನೆಗೆ ಬೇಕಾದ ಸಂಖ್ಯಾಬಲ ಎಂದು ಹೇಳಲಿದ್ದಾರೆ.

ಈ ಮುನ್ನ ಸರ್ಕಾರ ರಚಿಸುವಂತೆ ಮೊದಲು ಬಿಜೆಪಿಗೆ ನಂತರ ಶಿವಸೇನಾಗೆ ಮಹಾರಾಷ್ಟ್ರ ರಾಜ್ಯಪಾಲ ಭಗತ್​​ ಸಿಂಗ್​ ಕೊಶ್ಯಾರಿ ಆಹ್ವಾನಿ ನೀಡಿದ್ದರು. ಆದರೆ, ಉಭಯ ಪಕ್ಷಗಳು ರಾಜ್ಯಪಾಲರು ನೀಡಿದ ಗಡುವಿನೊಳಗೆ ಸರ್ಕಾರ ರಚಿಸಲು ವಿಫಲವಾದವು. ಹಾಗಾಗಿ ಮತ್ತೆ ನಿನ್ನೆ ಸರ್ಕಾರ ರಚನೆಗೆ ಎನ್​ಸಿಪಿಗೆ ಆಹ್ವಾನ ನೀಡಿದ್ದರು. ಅಲ್ಲದೇ ಎನ್​​ಸಿಪಿಗೆ ಸರ್ಕಾರ ರಚಿಸಲು ಇಂದು ರಾತ್ರಿ 8:30ರವರೆಗೂ ಗಡುವು ನೀಡಿದ್ದರು. ಈ ಮಧ್ಯೆಯೀಗ ರಾಜ್ಯಪಾಲರು ಏಕಾಏಕಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿರುವುದು ಈಗ ರಾಜಕೀಯ ವಲದಲ್ಲಿ ತೀವ್ರ ಅಚ್ಚರಿ ಮೂಡಿಸಿದೆ. ರಾಜ್ಯಪಾಲರ ಶಿಫಾರಸು ಕಳುಹಿಸಿದ ಬಳಿಕ ಕೇಂದ್ರ ಸಂಪುಟವು ಸಭೆ ನಡೆಸಿ ಒಪ್ಪಿಗೆ ಸೂಚಿಸಿತು. ಈ ಶಿಫಾರಸಿಗೆ ರಾಷ್ಟ್ರಪತಿಯವರೂ ಅಂಕಿತ ಹಾಕಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರ ಗವರ್ನರ್​​ ಬಿಜೆಪಿ ಅಪ್ಪಣೆಯಂತೆ ನಡೆಯುತ್ತಿದ್ದಾರೆ: ಶಿವಸೇನೆ ಮುಖ್ಯಸ್ಥ ಉದ್ಧವ್​​ ಠಾಕ್ರೆ

ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಿದ ರಾಜ್ಯಪಾಲರ ಕ್ರಮಕ್ಕೆ ಎನ್​ಸಿಪಿ, ಕಾಂಗ್ರೆಸ್​ ಮತ್ತು ಶಿವಸೇನೆಯಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಈ ನಡುವೆಯೇ ಶಿವಸೇನೆ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದು, ಎನ್​ಸಿಪಿ ಪಕ್ಷಕ್ಕೆ ನೀಡಿರುವ ಗಡುವು ಅಂತ್ಯವಾಗುವ ಮುನ್ನ ರಾಷ್ಟ್ರಪತಿ ಆಳ್ವಿಕೆ ಹೇರಿಕೆ ಮಾಡಿರುವುದನ್ನು ಪ್ರಶ್ನಿಸಿದೆ. ಎನ್​ಸಿಪಿಗೆ ಬಹುಮತ ಸಾಬೀತುಪಡಿಸಲು ಇನ್ನಷ್ಟು ಸಮಯ ನೀಡದೇ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿದ್ದನ್ನು ಶಿವಸೇನೆ ಪ್ರಶ್ನಿಸಿ, ತುರ್ತು ಅರ್ಜಿ ವಿಚಾರಣೆ ಮಾಡುವಂತೆ ಮನವಿ ಮಾಡಿದೆ. ಕಾಂಗ್ರೆಸ್​ ಹಿರಿಯ ಮುಖಂಡ ಮತ್ತು ಹಿರಿಯ ನ್ಯಾಯವಾದಿ ಕಪಿಲ್​ ಸಿಬಲ್​ ಶಿವಸೇನೆ ಪರ ಅರ್ಜಿ ಸಲ್ಲಿಸಿದ್ದಾರೆ.

ಯಾವುದೇ ಪಕ್ಷದಿಂದಲೂ ಸರ್ಕಾರ ರಚಿಸುವ ಪ್ರಯತ್ನ ಕಂಡುಬರದ ಹಿನ್ನೆಲೆಯಲ್ಲಿ ರಾಜ್ಯಪಾಲರು ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿದ್ದಾರೆನ್ನಲಾಗಿದೆ. ರಾಜ್ಯಪಾಲರ ಶಿಫಾರಸು ಪತ್ರ ಕೇಂದ್ರ ಸರ್ಕಾರವನ್ನು ತಲುಪಿದ್ದು, ಸಂಪುಟ ಸಭೆಯಲ್ಲಿ ಇದಕ್ಕೆ ಒಪ್ಪಿಗೆ ಸಿಕ್ಕಿದೆ. ಈ ಮೂಲಕ ಬಿಜೆಪಿ, ಶಿವಸೇನೆ, ಕಾಂಗ್ರೆಸ್​ ಮತ್ತು ಎನ್​ಸಿಪಿ ನಡುವಿನ ಹಗ್ಗಜಗ್ಗಾಟಕ್ಕೆ ರಾಷ್ಟ್ರಪತಿ ಅಂಕುಶದ ಅಂತ್ಯ ಸಿಗಲಿದೆಯಾ? ಸಿಕ್ಕಿದ್ದೇ ಆದಲ್ಲಿ ಮುಂದಿನ ಬೆಳವಣಿಗೆಯ ಬಗ್ಗೆ ಇನ್ನೂ ಹೆಚ್ಚು ಕುತೂಹಲ ಮನೆ ಮಾಡುವಂತಾಗಿದೆ.-----------
First published:November 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading