ಫೀಲ್ಡಿಗೆ ಇಳಿದ ಸೋನಿಯಾ ಗಾಂಧಿ; ಮುಂಗಾರು ಅಧಿವೇಶನಕ್ಕೂ ಮುನ್ನ ಭಿನ್ನಮತೀಯರಿಗೆ ಮಣೆ

"ಈ ನೂತನ ತಂಡವು ಅಧಿವೇಶನಕ್ಕೆ ಪ್ರತಿದಿನ ಭೇಟಿಯಾಗುವುದಲ್ಲದೆ, ಪ್ರತಿ ಚರ್ಚೆಯಲ್ಲೂ ಭಾಗವಹಿಸುತ್ತದೆ ಮತ್ತು ದೇಶ ಎದುರಿಸುತ್ತಿರುವ ಸಮಸ್ಯೆಗಳಿಗೆ ಸಂಬಂಧಪಟ್ಟಂತೆ ಪಕ್ಷದ ನಿಲುವು ಏನಿರಬೇಕೆಂದು ನಿರ್ಧರಿಸಲಿದೆ’’

ಸೋನಿಯಾ ಗಾಂಧಿ.

ಸೋನಿಯಾ ಗಾಂಧಿ.

 • Share this:
  ಸಂಸತ್ತಿನ ಮುಂಗಾರು ಅಧಿವೇಶನಕ್ಕೂ ಮುನ್ನಾ ದಿನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸಂಸತ್ತಿನಲ್ಲಿರುವ ಕಾಂಗ್ರೆಸ್​ ಸಂಸದೀಯ ತಂಡದ ಪುನರ್​ರಚನೆಗೆ ಕೈ ಹಾಕಿದ್ದಾರೆ. ಅಲ್ಲದೇ ‘ಜಿ -23 ಭಿನ್ನಮತೀಯರು’ ಎಂದು ಕರೆಯಲ್ಪಡುವವರಿಗೆ ಪ್ರಮುಖ ಸ್ಥಾನಗಳನ್ನು ನೀಡಲಾಗಿದ್ದು, ಹಿರಿಯ ಮುಖಗಳಿಗೆ ಮಣೆ ಹಾಕಲಾಗಿದೆ. ಮಾಜಿ ಕೇಂದ್ರ ಸಚಿವರಾದ ಪಿ.ಚಿದಂಬರಂ, ಮನೀಶ್ ತಿವಾರಿ, ಅಂಬಿಕಾ ಸೋನಿ, ಮತ್ತು ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ಅವರನ್ನು ಮುನ್ನೆಲೆಗೆ ಬಿಡಲಾಗಿದೆ.

  ‘ಜಿ -23’ ನಾಯಕರು ಎಂದು ಕರೆಯಲ್ಪಡುವ ಕಾಂಗ್ರೆಸ್​ ನಾಯಕರುಗಳು ಕಳೆದ ವರ್ಷ ನಾಯಕತ್ವದ ಕುರಿತು ಹಾಗೂ ಪಕ್ಷದ ಇತರೇ ನಿಲುವುಗಳ ಕುರಿತು ಬಹಿರಂಗವಾಗಿ ಹಾಗೂ ಪತ್ರ ಬರೆದು ತಮ್ಮ ಆಕ್ರೋಶ ಹೊರಗೆ ಹಾಕಿದ್ದರು. ಅಲ್ಲದೇ ಪಕ್ಷದಲ್ಲಿ ಇವರಿಗೆ ನೀಡಿದ್ದ ಒಂದಷ್ಟು ಪ್ರಮುಖ ಸ್ಥಾನಗಳನ್ನು ಸಹ ಕಳೆದುಕೊಂಡಿದ್ದರು.  ‘ಜಿ -23 ಭಿನ್ನಮತೀಯರ ಗುಂಪಿನಲ್ಲಿ ಪ್ರಮುಖವಾಗಿ ಪಕ್ಷದ ಬಂಗಾಳದ ಅಧ್ಯಕ್ಷ ಆದಿರ್ ರಂಜನ್ ಚೌಧರಿ, ಶಶಿ ತರೂರ್ ಮತ್ತು ಮನೀಶ್ ತಿವಾರಿ ಅವರುಗಳ ಸಹ ಇದ್ದರು. ಪ್ರಸ್ತುತ ಮುಂಗಾರು ಅಧಿವೇಶನಕ್ಕೆ ಮುನ್ನಾ ಲೋಕಸಭೆಯಲ್ಲಿ ಏಳು ಸದಸ್ಯರ ಗುಂಪಿನಲ್ಲಿ ಈ ಮೂರು ಜನರು ಇರಲಿದ್ದಾರೆ.

  ದಿವಂಗತ ತರುಣ್ ಗೊಗೊಯ್ ಅವರ ಪುತ್ರ ಗೌರವ್ ಗೊಗೊಯ್ ಅವರು ಸಂಸತ್ತಿನ ಉಪನಾಯಕ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಕಳೆದ ವರ್ಷದ ಭಿನ್ನಾಭಿಪ್ರಾಯಗಳು ಹೆಚ್ಚಾದ ಹಿನ್ನೆಲೆಯಲ್ಲಿ ಚೌಧರಿ ಅವರನ್ನು ಬದಲಾಯಿಸಬಹುದೆಂದು ಕಾಂಗ್ರೆಸ್ ಪಕ್ಷದ ಸದಸ್ಯರು ಹೇಳಿದ್ದರು.

  ಸೋನಿಯಾ ಗಾಂಧಿಯವರು ಬರೆದ ಪತ್ರದಲ್ಲಿ ಈ ರೀತಿಯಾಗಿ ಉಲ್ಲೇಖಿಸಿದ್ದು, “ಸಿಪಿಪಿ (ಕಾಂಗ್ರೆಸ್ ಪಾರ್ಲಿಮೆಂಟರಿ ಪಾರ್ಟಿ) ಅಧ್ಯಕ್ಷರಾಗಿ, ಸಂಸತ್ತಿನ ಉಭಯ ಸದನಗಳಲ್ಲಿ ನಮ್ಮ ಪಕ್ಷದ ಪರಿಣಾಮಕಾರಿ ಕಾರ್ಯನಿರ್ವಹಣೆಯನ್ನು ಸುಲಭಗೊಳಿಸಲು ಮತ್ತು ಇನ್ನೂ ಸಮರ್ಥಗೊಳಿಸಲು ಒಂದು ಸಮರ್ಥ ತಂಡವನ್ನು ನಿರ್ಮಾಣ ಮಾಡುವ ಸಲುವಾಗಿ ಈ ನಿರ್ಧಾರಕ್ಕೆ ಬಂದಿದ್ದೇನೆ. ಇದರಿಂದ ಪಕ್ಷದ ಕಾರ್ಯವೈಖರಿ ಸಾಕಷ್ಟು ಗಟ್ಟಗೊಳ್ಳುತ್ತದೆ ಎಂದು ತಿಳಿಸಿದ್ದಾರೆ. ನಮ್ಮ ಈ ತಂಡವು ಅಧಿವೇಶನನಕ್ಕೆ ಪ್ರತಿದಿನ ಹಾಜರಾಗುತ್ತದೆ ಮತ್ತು ಸಂಸತ್ತಿನ ಅವಧಿಯಲ್ಲಿ ಮತ್ತು ಸಂಸತ್ತಿನಲ್ಲಿ ಚರ್ಚೆಗೆ ಬಂದ ಸಮಸ್ಯೆಗಳ ಬಗ್ಗೆ ಹಾಗೂ ಸಮಸ್ಯೆ ಇರುವ ಸ್ಥಳಗಳಿಗೆ ಭೇಟಿ ಕೊಡುತ್ತದೆ ಎಂದು ಹೇಳಿದ್ದಾರೆ.

  ಕೆ ಸುರೇಶ್ ಲೋಕಸಭೆಯಲ್ಲಿ ಮುಖ್ಯ ವಿಪ್ ಆಗಿ ತಮ್ಮ ಸ್ಥಾನದಲ್ಲಿ ಮುಂದುವರೆದಿದ್ದು, ರಾನ್​ವೀತ್​ ಸಿಂಗ್ ಬಿಟ್ಟು ಮತ್ತು ಮಾಣಿಕಮ್ ಟ್ಯಾಗೋರ್ ಅವರುಗಳು ಸಹ ಈ ತಂಡದಲ್ಲಿ ಸ್ಥಾನ ಪಡೆದಿದ್ದು ಸರ್ಕಾರದ ಕಾರ್ಯವೈಖರಿಯ ವಿರುದ್ಧ ಚಾಟಿ ಬೀಸಲು ಅಣಿಯಾಗಿದ್ದಾರೆ.

  "ಈ ನೂತನ ತಂಡವು ಅಧಿವೇಶನಕ್ಕೆ ಪ್ರತಿದಿನ ಭೇಟಿಯಾಗುವುದಲ್ಲದೆ, ಪ್ರತಿ ಚರ್ಚೆಯಲ್ಲೂ ಭಾಗವಹಿಸುತ್ತದೆ ಮತ್ತು ದೇಶ ಎದುರಿಸುತ್ತಿರುವ ಸಮಸ್ಯೆಗಳಿಗೆ ಸಂಬಂಧಪಟ್ಟಂತೆ ಪಕ್ಷದ ನಿಲುವು ಏನಿರಬೇಕೆಂದು ನಿರ್ಧರಿಸಲಿದೆ" ಎಂದು ಸೋನಿಯಾ ಗಾಂಧಿ ಅವರು ಸಹಿ ಮಾಡಿದ ಪತ್ರವನ್ನು ಪಕ್ಷದ ನಾಯಕರುಗಳಿಗೆ ತಲುಪಿಸಿದ್ದಾರೆ.

  ಮಲ್ಲಿಕಾರ್ಜುನ್ ಖರ್ಗೆ ಈ ಜಂಟಿ ಸಭೆಗಳ ಸಮನ್ವಯಕಾರರಾಗಿ ಕೆಲಸ ಮಾಡುತ್ತಾರೆ ಅಲ್ಲದೆ, ಈ  ಗುಂಪುಗಳು ಅಗತ್ಯ ಸಮಯ ಬಂದಾಗ ಭೇಟಿಯಾಗಬಹುದು. ವಿವಿಧ ವಿಷಯಗಳ ಮೆಲೆ ಸಂಸತ್ತಿನಲ್ಲಿ ಸದಸ್ಯರನ್ನು ಒಟ್ಟುಗೂಡಿಸುವುದು, ವಿವಿಧ ರಾಜಕೀಯ ಪಕ್ಷಗಳೊಂದಿಗೆ ಸಮನ್ವಯ ಸಾಧಿಸುವುದು ಮತ್ತು ಮಸೂದೆಗೆ ಬೆಂಬಲ ಅಥವಾ ಸರ್ಕಾರದ ಸಹಕಾರದ ವ್ಯಾಪ್ತಿಯಂತಹ ಪ್ರಮುಖ ವಿಷಯಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದು ಸೇರಿದಂತೆ ವಿವಿಧ ಪಾತ್ರಗಳನ್ನು ಹೊಂದಿರುತ್ತದೆ.

  ಇದನ್ನೂ ಓದಿ: Unlock Karnataka: ಮತ್ತಷ್ಟು ನಿಯಮ ಸಡಿಲ, ರಾತ್ರಿ 10ರಿಂದ ನೈಟ್ ಕರ್ಫ್ಯೂ, ಸಿನಿಮಾ ಥಿಯೇಟರ್, ಕಾಲೇಜುಗಳು ಓಪನ್

  ಅಲ್ಲದೇ ಕಾಂಗ್ರೆಸ್​ ಪಕ್ಷವು ಯಾವ ವಿಷಯಗಳನ್ನು ಇಟ್ಟುಕೊಂಡು ಸರ್ಕಾರದ ಕೆಟ್ಟ ಆಡಳಿತದ ವಿರುದ್ದ ತಂತ್ರ ರೂಪಿಸುವುದು ಹಾಗೂ ಸರ್ಕಾರದ ವೈಫಲ್ಯಗಳನ್ನು ಹೇಗೆ ಜನರಿಗೆ ತಿಳಿಸಬೇಕು ಹೀಗೆ ಹಲವಾರು ವಿಷಯಗಳ ಬಗ್ಗೆ ಈ ತಂಡವು ನಿರ್ಧಾರ ತೆಗೆದುಕೊಳ್ಳುತ್ತದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: