Congress Chintan Shivir: ಪಕ್ಷ ನಮಗೆಲ್ಲ ಸಾಕಷ್ಟು ನೀಡಿದೆ; ಅದರ ಋಣ ತೀರಿಸುವ ಸಮಯ ಬಂದಿದೆ; ಸೋನಿಯಾ ಗಾಂಧಿ

ಸಾಮೂಹಿಕ ಪ್ರಯತ್ನದಿಂದ ಮಾತ್ರ ಸುಧಾರಣೆ ಸಾಧ್ಯ. ಕಾಂಗ್ರೆಸ್ ಪಕ್ಷ ನಮಗೆಲ್ಲರಿಗೂ ಸಾಕಷ್ಟು ನೀಡಿದೆ. ಈಗ ಪಕ್ಷದ ಋಣ ತೀರಿಸುವ ಸಮಯ ಬಂದಿದೆ.

ಸೋನಿಯಾ ಗಾಂಧಿ

ಸೋನಿಯಾ ಗಾಂಧಿ

  • Share this:
    ಉದಯಪುರ (ಮೇ. 13):  ಚುನಾವಣಾ ಸೋಲುಗಳಿಂದ ಕಂಗೆಟ್ಟಿರುವ ಕಾಂಗ್ರೆಸ್​ ಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಸಜ್ಜುಗೊಳಿಸಲು ಮುಂದಾಗಿದೆ. ಈ ಹಿನ್ನಲೆ ಉದಯಪುರದಲ್ಲಿ ಕಾಂಗ್ರೆಸ್​ ಚಿಂತನಾ ಶಿಬಿರ (Congress Chintan Shivir)  ನಡೆಸಿದೆ. ಮೂರು ದಿನಗಳ ಕಾಲ ನಡೆಯಲಿರುವ ಈ ಶಿಬಿರದಲ್ಲಿ ಎಲ್ಲಾ ರಾಜ್ಯಗಳ ಕೈ ಮುಖಂಡರು (Congress Leaders) ಭಾಗಿಯಾಗಿದ್ದು, ಅನೇಕ ವಿಚಾರಗಳ ಕುರಿತು ಚರ್ಚೆ ನಡೆಸಲಿದ್ದಾರೆ. ಇನ್ನು ಈ ಸಮಾವೇಶದಲ್ಲಿ ಅನೇಕ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ನಿರೀಕ್ಷೆ ಇದ್ದು, ಪಕ್ಷದಲ್ಲಿ ದೊಡ್ಡ ಸಾಂಸ್ಥಿಕ ಬದಲಾವಣೆಗಳ ಭರವಸೆ ಇದೆ ಎನ್ನಲಾಗಿದೆ.

    ಆತ್ಮಾವಲೋಕನ ಮಾಡಿಕೊಳ್ಳಲು ಇದು ಉತ್ತಮ ಅವಕಾಶ

    ಕಾಂಗ್ರೆಸ್ ಚಿಂತನ ಶಿಬಿರ ಉದ್ಘಾಟಿಸಿ ಮಾತನಾಡಿದ ಸೋನಿಯಾ ಗಾಂಧಿ (Sonia Gandhi), ಕಾಂಗ್ರೆಸ್ ಪಕ್ಷ ಸುಧಾರಣೆಯ ಅವಶ್ಯಕತೆಯಿದೆ. ಸಾಮೂಹಿಕ ಪ್ರಯತ್ನದಿಂದ ಮಾತ್ರ ಸುಧಾರಣೆ ಸಾಧ್ಯ. ಕಾಂಗ್ರೆಸ್ ಪಕ್ಷ ನಮಗೆಲ್ಲರಿಗೂ ಸಾಕಷ್ಟು ನೀಡಿದೆ. ಈಗ ಪಕ್ಷದ ಋಣ ತೀರಿಸುವ ಸಮಯ ಬಂದಿದೆ. ಚುನಾವಣಾ ವೈಫಲ್ಯವನ್ನು ನಾವು ಮರೆಯಬಾರದು. ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದ್ದು, ಇದೊಂದು ಉತ್ತಮ ಅವಕಾಶ ಆಗಿದೆ ಎಂದರು.

    ಬಿಜೆಪಿ ವಿರುದ್ಧ ಸೋನಿಯಾ ಕಿಡಿ

    ಇದೇ ವೇಳೆ ಬಿಜೆಪಿ ವಿರುದ್ಧ ಹರಿಹಾಯ್ದ ಅವರು, ಅಲ್ಪಸಂಖ್ಯಾತರ ವಿರೋಧಿ ನೀತಿ ಮೂಲಕ ಹೊತ್ತಿ ಉರಿಯುತ್ತಿರುವ ದ್ವೇಷದ ಬೆಂಕಿಯನ್ನು ಬಿತ್ತಲಾಗುತ್ತಿದೆ. ಇದು ಜನಜೀವನದ ಮೇಲೆ ಭಾರಿ ಪರಿಣಾಮ ಬೀರಿದೆ. ಇದು ಗಂಭೀರವಾದ ಸಾಮಾಜಿಕ ಪರಿಣಾಮಗಳನ್ನು ಉಂಟು ಮಾಡಿದ್ದು, ನಾವು ಊಹಿಸಿಕೊಳ್ಳುವುದಕ್ಕಿಂತ ಹೆಚ್ಚು ಗಂಭೀರವಾಗಿದೆ. ಜನರು ನಿರಂತರ ಭಯ ಮತ್ತು ಅಭದ್ರತೆಯ ಸ್ಥಿತಿಯಲ್ಲಿ ಬದುಕುವಂತೆ ಆಗಿದೆ. ಗಣರಾಜ್ಯದ ಸಮಾನ ನಾಗರಿಕರಾಗಿರುವ ಅಲ್ಪಸಂಖ್ಯಾತರನ್ನು ಬಲಿಪಶು ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.

    ಇದನ್ನು ಓದಿ:  ಕಾಶ್ಮೀರಿ ಪಂಡಿತನ ಹತ್ಯೆ, ಕಣಿವೆ ರಾಜ್ಯದಲ್ಲಿ ರಾತ್ರಿ ಪ್ರತಿಭಟನೆ

    ಒಂದು ಕುಟುಂಬ, ಒಂದು ಟಿಕೆಟ್​

    ಇನ್ನು ಚಿಂತನ ಶಿಬಿರದಲ್ಲಿ ಮಾತನಾಡಿದ ಕಾಂಗ್ರೆಸ್​ ನಾಯಕ ಅಜಯ್​ ಮಾಕನ್​, ಒಂದು ಕುಟುಂಬ, ಒಂದು ಟಿಕೆಟ್ ನಿಯಮದ ಬಗ್ಗೆ ಸಂಪೂರ್ಣ ಒಮ್ಮತವಿದೆ. ಪಕ್ಷದ ಮುಖಂಡರು ತಮ್ಮ ಆತ್ಮೀಯರು ಮತ್ತು ಕುಟುಂಬದ ಸಂಬಂಧಿಕರಿಗೆ ಟಿಕೆಟ್​ ನೀಡುವಂತಿಲ್ಲ. ಒಂದು ವೇಳೆ ಟಿಕೆಟ್​ ನೀಡುವುದಿದ್ದರೂ ಅವರು ಐದು ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿದಿರಬೇಕು. ಈ ನಿರ್ಧಾರಕ್ಕೆ ಸಮಿತಿ ಸದಸ್ಯರಲ್ಲೂ ಒಮ್ಮತವಿದೆ.
    ಪಕ್ಷದಲ್ಲಿ ಐದು ವರ್ಷಕ್ಕಿಂತ ಹೆಚ್ಚುಕಾಲ ನಿರಂತರವಾಗಿ ಹುದ್ದೆಯನ್ನು ಹೊಂದಿರುವ ಯಾವುದೇ ವ್ಯಕ್ತಿ ಆ ಹುದ್ದೆಯಿಂದ ಕೆಳಗಿಳಿಯಬೇಕು. ಒಂದು ವೇಳೆ ಆ ಹುದ್ದೆಗೆ ಆ ವ್ಯಕ್ತಿ ಮರಳಿ ಬರಬೇಕು ಎಂದರೆ ಮೂರು ವರ್ಷಗಳ ಬಳಿಕವೇ ಬರಬೇಕು.

    ಇದನ್ನು ಓದಿ:  Udaipurದಲ್ಲಿ ಕೈ​​ ನಾಯಕರ ಒಗ್ಗಟ್ಟಿನ ಪ್ರದರ್ಶನ; ರಮ್ಯಾ ಕಾಂಗ್ರೆಸ್​ನಲ್ಲಿದ್ದರೋ ಇಲ್ವೋ ಗೊತ್ತಿಲ್ಲ ಎಂದ ನಲಪಾಡ್

    ಪಕ್ಷದಲ್ಲಿನ  50 ಕ್ಕಿಂತ ಕಡಿಮೆ ವಯಸ್ಸಿನವರಿಗೆ ಕಾಂಗ್ರೆಸ್‌ನಲ್ಲಿ ಪ್ರತಿ ಹಂತದಲ್ಲೂ"ಅರ್ಧದಷ್ಟು ಪಕ್ಷದ ಸ್ಥಾನಗಳನ್ನು ಮೀಸಲಿಡುವ ಯೋಜನೆಯನ್ನು ಪಕ್ಷವು ಪರಿಗಣಿಸುವುದಾಗಿ ಇದೇ ವೇಳೆ ತಿಳಿಸಿದರು. ನಾವು ಮೌಲ್ಯಮಾಪನ ವಿಭಾಗವನ್ನು ಸ್ಥಾಪಿಸುವ ಬಗ್ಗೆ ಯೋಚಿಸುತ್ತಿದ್ದೇವೆ . ಕಾರ್ಯಕ್ಷಮತೆಯನ್ನು ನಿರ್ಣಯಿಸಲು ಮಾನದಂಡಗಳನ್ನು ಇರಿಸಲು ಇದು ಸಹಾಯಕವಾಗಿದೆ. ಈಗ ಪಕ್ಷವು ಪ್ರಜಾಪ್ರಭುತ್ವದ ಹೊಸ ಸಾಧನಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸುತ್ತದೆ ಎಂದು ತಿಳಿಸಿದರು.

    ಭಾರತದ ಜನಸಂಖ್ಯೆಯ 60 ಪ್ರತಿಶತ 40 ಕ್ಕಿಂತ ಕಡಿಮೆ ಇರುವ ಕಾರಣ ಪಕ್ಷವು ಯುವಕರನ್ನು ಪ್ರತಿನಿಧಿಸಬೇಕಾಗಿದೆ, ಇದು ನಮ್ಮ ಎಲ್ಲಾ ಪಕ್ಷದ ಘಟಕಗಳು ಮತ್ತು ನಾವು ಹೊಂದಿರುವ ಹುದ್ದೆಗಳಲ್ಲಿ ಪ್ರತಿಫಲಿಸಬೇಕು.

    ಶಿಬಿರದಲ್ಲಿ ಕಾಂಗ್ರೆಸ್​, ಕೋಮು ಧ್ರುವೀಕರಣ ಮತ್ತು ರಾಜ್ಯ ಚುನಾವಣೆ ಹಾಗೂ 2024 ರ ಲೋಕ ಸಭಾ ಚುನಾವಣೆ ಸಿದ್ಧತೆಗಳ ಕುರಿತು ಚರ್ಚೆಗಳನ್ನು ಯೋಜಿಸಿದೆ.
    Published by:Seema R
    First published: