ನವದೆಹಲಿ: ಕೋವಿಡ್ ಸೋಂಕಿನಿಂದ (Covid Infection) ಬಳಲುತ್ತಿರುವ ಎಐಸಿಸಿ ಅಧ್ಯಕ್ಷೆ (AICC President) ಸೋನಿಯಾ ಗಾಂಧಿ (Sonia Gandhi) ಇದೀಗ ಕೊಂಚ ಚೇತರಿಸಿಕೊಳ್ಳುತ್ತಿದ್ದರು. ಇದೀಗ ಅವರಿಗೆ ಫಂಗಲ್ ಸೋಂಕು (Fungal Infection) ಕಾಣಿಸಿಕೊಂಡಿದೆ ಅಂತ ಹೇಳಲಾಗ್ತಿದೆ. ಸದ್ಯ ಗಂಗಾರಾಮ್ ಆಸ್ಪತ್ರೆಯಲ್ಲಿ (Gangaram Hospital) ಸೋನಿಯಾ ಗಾಂಧಿ ಅವರಿಗೆ ಚಿಕಿತ್ಸೆ (Treatment) ಮುಂದುವರೆದಿದೆ. ಸೋನಿಯಾ ಗಾಂಧಿ ಅವರ ಶ್ವಾಸಕೋಶಕ್ಕೆ ಫಂಗಲ್ ಸೋಂಕು ತಗುಲಿದೆ ಅಂತ ವೈದ್ಯರು ತಿಳಿಸಿದ್ದಾರೆ.
ಅಧಿಕೃತ ಮಾಹಿತಿ ನೀಡಿದ ಎಐಸಿಸಿ
ಈ ಕುರಿತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಪಕ್ಷದ ವತಿಯಿಂದ ಅಧಿಕೃತ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ. "ಇತ್ತೀಚೆಗೆ ಕೋವಿಡ್ ಸೋಂಕಿಗೆ ಒಳಗಾದ ಬಳಿಕ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಮೂಗಿನಲ್ಲಿ ವಿಪರೀತ ರಕ್ತಸ್ರಾವ ಉಂಟಾದ ಕಾರಣ ಜೂನ್ 12 ರಂದು ನವದೆಹಲಿಯ ಗಂಗಾ ರಾಮ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರನ್ನು ಕೂಡಲೇ ಚಿಕಿತ್ಸೆಗೆ ಒಳಪಡಿಸಲಾಗಿತ್ತು. ಗುರುವಾರ ಬೆಳಗ್ಗೆ ಫಾಲೋ ಅಪ್ ಪ್ರಕ್ರಿಯೆಗೆ ಕೂಡ ಒಳಗಾಗಿದ್ದರು" ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಫಂಗಲ್ ಸೋಂಕಿಗೂ ಚಿಕಿತ್ಸೆ
ಸೋನಿಯಾ ಗಾಂಧಿ ಅವರಿಗೆ ದಾಖಲಾತಿ ಸಂದರ್ಭದಲ್ಲಿ ಅವರಲ್ಲಿ ಲೋವರ್ ರೆಸ್ಪಿರೇಟರಿ ಟ್ರ್ಯಾಕ್ಟ್‌ನಲ್ಲಿ ಶಿಲೀಂದ್ರ ಸೋಂಕು ಕೂಡ ಪತ್ತೆಯಾಗಿದೆ. ಅವರಿಗೆ ಪ್ರಸ್ತುತ ಇತರೆ ಕೋವಿಡ್ ನಂತರದ ಲಕ್ಷಣಗಳ ಜತೆಗೆ ಈ ಸಮಸ್ಯೆಗೂ ಕೂಡ ಚಿಕಿತ್ಸೆ ನೀಡಲಾಗುತ್ತಿದೆ. ಅವರು ತೀವ್ರ ನಿಗಾದಲ್ಲಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ಪಕ್ಷದ ಹೇಳಿಕೆ ತಿಳಿಸಿದೆ.
ಇದನ್ನೂ ಓದಿ: National Herald Case: ಕೈ ಸುಡುತ್ತಿರುವುದೇಕೆ ನ್ಯಾಷನಲ್ ಹೆರಾಲ್ಡ್ ಕೇಸ್? ಅಷ್ಟಕ್ಕೂ ನೆಹರೂ ಕುಟುಂಬದ ವಿರುದ್ಧ ಏನಿದು ಆರೋಪ?
ಕಳೆದ ಭಾನುವಾರ ಆಸ್ಪತ್ರೆಗೆ ದಾಖಲು
ಸೋನಿಯಾ ಗಾಂಧಿ ಅವರನ್ನು ಕಳೆದ ಭಾನುವಾರ ಆಸ್ಪತ್ರೆಯ ತುರ್ತು ವಿಭಾಗಕ್ಕೆ ಕರೆದೊಯ್ಯಲಾಗಿದ್ದು, ಸೋಂಕಿನಿಂದಾಗಿ ಮೂಗಿನಿಂದ ಅಪಾರ ರಕ್ತಸ್ರಾವವಾಗಿತ್ತು. ಆಸ್ಪತ್ರೆಗೆ ದಾಖಲಾಗುವ ಹತ್ತು ದಿನಗಳ ಮೊದಲು ಅವರು ಕೋವಿಡ್ -19 ಗೆ ಪಾಸಿಟಿವ್‌ಗೆ ತುತ್ತಾಗಿದ್ದರು. ಸಾಮಾನ್ಯ ಜ್ವರ ಮತ್ತು ಇತರ ಕೆಲವು ರೋಗಲಕ್ಷಣಗಳು ಕಾಣಿಸಿಕೊಂಡ ನಂತರ ಮನೆಯಲ್ಲೇ ಪ್ರತ್ಯೇಕವಾಗಿ ಉಳಿದಿದ್ದರು.
A statement on Congress President’s health condition. pic.twitter.com/4tVBtgyhEi
— Jairam Ramesh (@Jairam_Ramesh) June 17, 2022
ಸೋನಿಯಾ ಗಾಂಧಿ ಅವರು ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಮುಂದೆ ಜೂನ್ 8ರಂದು ಹಾಜರಾಗಬೇಕಿತ್ತು. ಆದರೆ ಅನಾರೋಗ್ಯದ ಕಾರಣದಿಂದ ಹೆಚ್ಚಿನ ಸಮಯ ನೀಡುವಂತೆ ಅವರು ಮನವಿ ಮಾಡಿದ್ದರು. ಇದರಿಂದ ಇಡಿ ವಿಚಾರಣೆಯನ್ನು ಜೂನ್ 23ಕ್ಕೆ ನಿಗದಿಪಡಿಸಲಾಗಿತ್ತು.
ಇಡಿ ಅಧಿಕಾರಿಗಳಿಂದ ರಾಹುಲ್ ಗಾಂಧಿ ವಿಚಾರಣೆ
ರಾಹುಲ್ ಗಾಂಧಿಗೂಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಇಬ್ಬರಿಗೂ ನ್ಯಾಷನಲ್ ಹೆರಾಲ್ಡ್ ಪ್ರಕರಣದ ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿತ್ತು. ಜೂನ್ 2 ರಂದು ರಾಹುಲ್ ಗಾಂಧಿ ಹಾಗೂ ಜೂನ್ 8 ರಂದು ಸೋನಿಯಾ ಗಾಂಧಿ ವಿಚಾರಣೆಗೆ ಹಾಜರಾಗಬೇಕೆಂದು ಇಡಿ ಸೂಚಿಸಿತ್ತು. ಆದರೆ ತಾನು ವಿದೇಶಿ ಪ್ರವಾಸದಲ್ಲಿರುವುದರಿಂದ ಜೂನ್ 5 ರ ನಂತರ ವಿಚಾರಣೆಗೆ ಹಾಜರಾಗುತ್ತೇನೆ ಎಂದು ರಾಹುಲ್ ಗಾಂಧಿ ಮನವಿ ಮಾಡಿದ್ದರು.
ಜೂನ್ 20ರಂದು ಮತ್ತೆ ರಾಹುಲ್ ಗಾಂಧಿ ವಿಚಾರಣೆ
ಜೂನ್ 13 ರಿಂದ ಸತತ ಮೂರು ದಿನಗಳ ಕಾಲ ರಾಹುಲ್ ಗಾಂಧಿಗೆ ಇಡಿ ಅಧಿಕಾರಿಗಳು ವಿಚಾರಣೆ ಮಾಡಿದ್ದಾರೆ. ಜೂನ್ 20 ರಂದು ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ