• Home
  • »
  • News
  • »
  • national-international
  • »
  • Sonia Gandhi: ತೀಸ್ತಾ ಸೆಟಲ್ವಾಡ್​ಗೆ ಸೋನಿಯಾ ಗಾಂಧಿ ಹಣದ ನೆರವು? ಹೊಸ ಬಾಂಬ್ ಸಿಡಿಸಿದ ಪಠಾಣ್!

Sonia Gandhi: ತೀಸ್ತಾ ಸೆಟಲ್ವಾಡ್​ಗೆ ಸೋನಿಯಾ ಗಾಂಧಿ ಹಣದ ನೆರವು? ಹೊಸ ಬಾಂಬ್ ಸಿಡಿಸಿದ ಪಠಾಣ್!

ತೀಸಾ ಸೆಟಲ್‍ವಾಡ್-ಸೋನಿಯಾ ಗಾಂಧಿ

ತೀಸಾ ಸೆಟಲ್‍ವಾಡ್-ಸೋನಿಯಾ ಗಾಂಧಿ

ತೀಸ್ತಾ ಅವರಿಗೆ ಹಣದ ಕೊರತೆ ಇದೆಯೇ ಎಂದು ಸೋನಿಯಾ ಗಾಂಧಿ ಕೇಳಿದ್ದರು. ಆಗ ನಾನು ಮತ್ತು ತೀಸ್ತಾ ದೆಹಲಿಯಲ್ಲಿ ಸೋನಿಯಾ ಗಾಂಧಿಯನ್ನು ಭೇಟಿಯಾಗಿದ್ದೇವೆ ಎಂದು ಪಠಾಣ್ ಹೇಳಿಕೊಂಡಿದ್ದಾರೆ.

  • Share this:

ಸಾಮಾಜಿಕ ಕಾರ್ಯಕರ್ತೆ (Social Activist) ತೀಸ್ತಾ ಸೆಟಲ್‍ವಾಡ್ (Teesta Setalvad)  ಅವರು ಗುಜರಾತ್‍ (Gujarat) ನಲ್ಲಿ ಆಗಿನ ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸಲು ಸಂಚು ರೂಪಿಸಿದ್ದರು. ಮತ್ತು 2002ರ ಗುಜರಾತ್ ಗಲಭೆ ನಂತರ ದಿವಂಗತ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಅವರಿಂದ ಹಣವನ್ನು ಪಡೆದಿದ್ದಾರೆ ಎಂದು ಎಸ್‍ಐಟಿ ಆರೋಪಿಸಿದೆ. ತನಿಖೆ ಸಹ ನಡೆಯುತ್ತಿದೆ. ಈ ಮಧ್ಯೆಯೇ ತೀಸ್ತಾ ಸೆಟಲ್‍ವಾಡ್ ಮಾಜಿ ಸಹವರ್ತಿ ರೈಸ್ ಖಾನ್ ಪಠಾಣ್ ಅವರು ಆಘಾತಕಾರಿ ಸುದ್ದಿಯೊಂದನ್ನು ಬಹಿರಂಗಪಡಿಸಿದ್ದಾರೆ. ತೀಸ್ತಾ ಅವರಿಗೆ ಹಣದ ಕೊರತೆ ಇದೆಯೇ ಎಂದು ಸೋನಿಯಾ ಗಾಂಧಿ (Sonia Gandhi) ಕೇಳಿದ್ದರು. ಆಗ ನಾನು ಮತ್ತು ತೀಸ್ತಾ ದೆಹಲಿಯಲ್ಲಿ ಸೋನಿಯಾ ಗಾಂಧಿಯನ್ನು ಭೇಟಿಯಾಗಿದ್ದೇವೆ ಎಂದು ಪಠಾಣ್ (Pathan) ಹೇಳಿಕೊಂಡಿದ್ದಾರೆ.


ಸೋನಿಯಾ ಗಾಂಧಿಗೂ, ತೀಸ್ತಾ ಸೆಟಲ್‍ವಾಡ್‍ಗೆ ಇತ್ತಾ ಲಿಂಕ್?
ಈಗಾಗಲೇ ಎಸ್‍ಐಟಿ ಪ್ರಕಾರ ತೀಸ್ತಾ ಸೆಟಲ್‍ವಾಡ್ ಗುಜರಾತ್‍ನಲ್ಲಿ ಆಗಿನ ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸಲು ಸಂಚು ರೂಪಿಸಿದ್ದರು. ದಿವಂಗತ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಅವರಿಂದ ಹಣವನ್ನು ಪಡೆದಿದ್ದಾರೆ ಎಂದು ತಿಳಿದಿದೆ. ನರೇಂದ್ರ ಮೋದಿ ನೇತೃತ್ವದ ಗುಜರಾತ್ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನದಲ್ಲಿ ಅಹ್ಮದ್ ಪಟೇಲ್ ಮತ್ತು ಸೋನಿಯಾ ಗಾಂಧಿ ಭಾಗಿಯಾಗಿದ್ದರು ಎಂದು ತೀಸ್ತಾ ಸೆಟಲ್‍ವಾಡ್ ಮಾಜಿ ಸಹವರ್ತಿ ರೈಸ್ ಖಾನ್ ಪಠಾಣ್ ಹೇಳಿದ್ದಾರೆ. ಅದಕ್ಕಾಗಿಯೇ ತೀಸ್ತಾಗೆ ಹಣದ ನೆರವು ನೀಡಲು ಸೋನಿಯಾ ಮುಂದಾಗಿದ್ರು ಎಂದು ಪಠಾಣ್ ಹೇಳ್ತಿದ್ದಾರೆ.


ತೀಸ್ತಾಗೆ ಹಣದ ಕೊರತೆ ಇದೆಯೇ ಎಂದು ಸೋನಿಯಾ ಕೇಳಿದ್ದರು
ತಾನು ಮತ್ತು ತೀಸ್ತಾ ಕೂಡ ಸೋನಿಯಾ ಗಾಂಧಿ ಅವರನ್ನು ದೆಹಲಿಯ ಅವರ ನಿವಾಸದಲ್ಲಿ ಭೇಟಿಯಾಗಿದ್ದೆವು ಎಂದು ರೈಸ್ ಖಾನ್ ಪಠಾಣ್ ಹೇಳಿದ್ದಾರೆ. ಆ ಸಮಯದಲ್ಲಿ, ಸೋನಿಯಾ ಅವರು ತೀಸ್ತಾ ಅವರನ್ನು ಕೇಳಿದರು, ಏನಾದ್ರೂ ಹಣದ ಕೊರತೆ ಇದೆಯೇ ಎಂದು. ತೀಸ್ತಾ ಇಲ್ಲ ಎಂದು ಹೇಳಿದ್ದರು.


ಸೋನಿಯಾ ಗಾಂಧಿ ವಿರುದ್ಧ ಎಸ್‍ಐಟಿ ತನಿಖೆಯಾಗಬೇಕು!
ಅಂದಿನ ನರೇಂದ್ರ ಮೋದಿ ನೇತೃತ್ವದ ಗುಜರಾತ್ ಸರ್ಕಾರವನ್ನು ಅಸ್ಥಿರಗೊಳಿಸುವಲ್ಲಿ ಸೋನಿಯಾ ಗಾಂಧಿ ಪಾತ್ರ ಇದೆ. ಅವರ ವಿರುದ್ಧ ಎಸ್‍ಐಟಿ ತನಿಖೆಗೆಯಾಗ ಬೇಕು ಎಂದು ಪಠಾಣ್ ಒತ್ತಾಯಿಸಿದ್ದಾರೆ. ಎಸ್‍ಐಟಿ ತನಿಖೆಯಾದ್ರೆ ಎಲ್ಲಾ ಸತ್ಯವೂ ಬಯಲಾಗಲಿದೆ ಎಂದು ಹೇಳಿದ್ದಾರೆ.


ಇದನ್ನೂ ಓದಿ: Ahmed Patel: ಮೋದಿ ಸರ್ಕಾರ ಉರುಳಿಸಲು ಪ್ಲಾನ್ ಮಾಡಿದ್ದರಾ ಅಹ್ಮದ್ ಪಟೇಲ್? ಎಸ್‌ಐಟಿ ಅಫಿಡವಿಟ್ ವಿಚಾರಕ್ಕೆ ಬಿಜೆಪಿ-ಕಾಂಗ್ರೆಸ್ ಫೈಟ್


ತೀಸ್ತಾ ಒಪ್ಪಂದಕ್ಕೆ ನಾನೇ ಸಾಕ್ಷಿ
ತೀಸ್ತಾ ಸೆಟಲ್ವಾಡ್ ಮತ್ತು ಅಹ್ಮದ್ ಪಟೇಲ್ ನಡುವಿನ ಒಪ್ಪಂದಕ್ಕೆ ನಾನೇ ಪ್ರತ್ಯಕ್ಷದರ್ಶಿಯಾಗಿದ್ದೇನೆ ಎಂದು ರೈಸ್ ಖಾನ್ ಪಠಾಣ್ ಹೇಳಿದ್ದಾರೆ. ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರ ಮಾನಹಾನಿ ಮತ್ತು ಬಿಜೆಪಿ ಸರ್ಕಾರವನ್ನು ಉರುಳಿಸಲು ಆರಂಭಿಕ ಹಂತದಲ್ಲಿ 5 ಲಕ್ಷ ಮತ್ತು 48 ಗಂಟೆಗಳ ನಂತರ 25 ಲಕ್ಷ ನೀಡಲಾಯಿತು ಎಂದು ಪಠಾಣ್ ಬಹಿರಂಗಪಡಿಸಿದ್ದಾರೆ.


30 ಲಕ್ಷ ಕೊಟ್ಟಿದ್ದರಾ ಅಹ್ಮದ್ ಪಟೇಲ್?
ಚುನಾಯಿತ ಸರ್ಕಾರವೊಂದನ್ನು ಉರುಳಿಸುವುದು ಅಥವಾ ಅಸ್ಥಿರಗೊಳಿಸುವುದು ತೀಸ್ತಾ ಸೆಟಲ್‍ವಾಡ್ ಅವರ ರಾಜಕೀಯ ಉದ್ದೇಶವಾಗಿತ್ತು ಅಂತ ಎಸ್‍ಐಟಿ ಹೇಳಿದೆ. ಗುಜರಾತ್‍ನ ನಿರಪರಾಧಿ ವ್ಯಕ್ತಿಗಳನ್ನು ಪ್ರಕರಣಗಳಲ್ಲಿ ಸಿಲುಕಿಸುವ ಅವರ ಪ್ರಯತ್ನಕ್ಕೆ ಪ್ರತಿಫಲವಾಗಿ ಪ್ರತಿಸ್ಪರ್ಧಿ ರಾಜಕೀಯ ಪಕ್ಷವು ಹಣಕಾಸು ಮತ್ತು ಇತರ ನೆರವುಗಳನ್ನು ಅಕ್ರಮವಾಗಿ ನೀಡಿತ್ತು. 2002ರ ಗೋಧ್ರಾ ಗಲಭೆಯ ಬಳಿಕ ಅಹ್ಮದ್ ಪಟೇಲ್ ಕಡೆಯಿಂದ ತೀಸ್ತಾ ಸೆಟಲ್‍ವಾಡ್ ಅವರು 30 ಲಕ್ಷ ರೂಪಾಯಿ ಪಡೆದಿದ್ದರು. ದೆಹಲಿಯಲ್ಲಿ ಆಗ ಅಧಿಕಾರದಲ್ಲಿದ್ದ ಪ್ರಮುಖ ರಾಷ್ಟ್ರೀಯ ಪಕ್ಷದ ಮುಖಂಡರನ್ನು ಸೆಟಲ್‍ವಾಡ್ ಭೇಟಿಯಾಗಿದ್ದಾರೆ ಎಂದು ಎಸ್‍ಐಟಿ ಪ್ರಮಾಣಪತ್ರದಲ್ಲಿ ಹೇಳಲಾಗಿದೆ.


ಇದನ್ನೂ ಓದಿ: Sonia Gandhi: ಸೋನಿಯಾ ಗಾಂಧಿಗೆ ಸಂಕಷ್ಟದ ಸುರಿಮಳೆ; ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮತ್ತೆ ಸಮನ್ಸ್


ಅಹ್ಮದ್ ಪಟೇಲ್ ಕುಟುಂಬಸ್ಥರ ಆಕ್ಷೇಪ


ಎಸ್‌ಐಟಿ ಪ್ರಮಾಣ ಪತ್ರದಲ್ಲಿ ಅಹ್ಮದ್ ಪಟೇಲ್ ಹೆಸರು ಪ್ರಸ್ತಾಪಿಸಿರುವುದುಕ್ಕೆ ಅವರ ಕುಟುಂಬಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅಹ್ಮದ್ ಪಟೇಲ್ ಪುತ್ರಿ ಮುಮ್ತಾದ್, ವಿರೋಧ ಪಕ್ಷಗಳಿಗೆ ಮಸಿ ಬಳಿಯುವ ರಾಜಕೀಯ ಷಡ್ಯಂತ್ರಕ್ಕಾಗಿ ನಮ್ಮ ತಂದೆಯ ಹೆಸರು ಬಳಕೆ ಆಗಿರುವುದು ದುರದೃಷ್ಟಕರ ಎಂದಿದ್ದಾರೆ. ಇಷ್ಟು ದೊಡ್ಡ ಪಿತೂರಿ ಮಾಡಿದ್ದಕ್ಕಾಗಿ ನನ್ನ ತಂದೆಯನ್ನು ಕೇಂದ್ರವು 2020ಕ್ಕೆ ಮೊದಲೇ ಏಕೆ ವಿಚಾರಣೆಗೆ ಒಳಪಡಿಸಲಿಲ್ಲ ಅಂತ ಪ್ರಶ್ನಿಸಿದ್ದಾರೆ.

Published by:Savitha Savitha
First published: