ಪಂಚರಾಜ್ಯ ಚುನಾವಣಾ ಸೋಲು; ಐದು ರಾಜ್ಯ ಕಾಂಗ್ರೆಸ್​ ಅಧ್ಯಕ್ಷರನ್ನು ಕಿತ್ತೆಸೆದ Sonia Gandhi

ಉತ್ತರಾಖಂಡ ಕಾಂಗ್ರೆಸ್ ಮುಖ್ಯಸ್ಥ ಗಣೇಶ್ ಗೋಡಿಯಾಲ್ ಮತ್ತು ಗೋವಾ ಕಾಂಗ್ರೆಸ್ ಮುಖ್ಯಸ್ಥ ಗಿರೀಶ್ ಚೋಡಂಕರ್ ಅವರು ಸೋಲಿನ ನೈತಿಕ ಹೊಣೆ ಹೊತ್ತು ಈಗಾಗಲೇ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ

ಸೋನಿಯಾ ಗಾಂಧಿ

ಸೋನಿಯಾ ಗಾಂಧಿ

 • Share this:
  ನವದೆಹಲಿ (ಮಾ. 15):  ಪಂಚ ರಾಜ್ಯ ಚುನಾವಣೆಯಲ್ಲಿ (Five State Election) ಕಾಂಗ್ರೆಸ್ (Congress)​ ಹೀನಾಯ ಸೋಲು ಕಂಡಿತು. ಈ ಸೋಲು ಇದೀಗ ಐವರು ಕಾಂಗ್ರೆಸ್​ ನಾಯಕರ ತಲೆ ದಂಡಕ್ಕೆ ಕಾರಣವಾಗಿದೆ. ಚುನಾವಣಾ ಸೋಲಿನ ಬಳಿಕ ಇಂದು ಸಭೆ ನಡೆಸಿದ ಕಾಂಗ್ರೆಸ್​​ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಉತ್ತರಾ ಖಂಡ್​, ಪಂಜಾಬ್​, ಗೋವಾ, ಉತ್ತರ ಪ್ರದೇಶ ಮತ್ತು ಮಣಿಪುರ ​​ಕಾಂಗ್ರೆಸ್​ ಅಧ್ಯಕ್ಷರನ್ನು ವಜಾಗೊಳಿಸಿ ಆದೇಶಿಸಿದ್ದಾರೆ. ಅಲ್ಲದೇ, ತಮ್ಮ  ಈ ನಿರ್ಧಾರವನ್ನು ಮರು ಸಂಘಟನೆ ಯ ಮೊದಲ ಹೆಜ್ಜೆ ಎಂದು ಕೂಡ ಬಿಂಬಿಸಿದ್ದಾರೆ.

  ಪಂಚ ರಾಜ್ಯಗಳ ಕಾಂಗ್ರೆಸ್​ ಅಧ್ಯಕ್ಷರ ರಾಜೀನಾಮೆ

  ಉತ್ತರಾಖಂಡ ಕಾಂಗ್ರೆಸ್ ಮುಖ್ಯಸ್ಥ ಗಣೇಶ್ ಗೋಡಿಯಾಲ್ ಮತ್ತು ಗೋವಾ ಕಾಂಗ್ರೆಸ್ ಮುಖ್ಯಸ್ಥ ಗಿರೀಶ್ ಚೋಡಂಕರ್ ಅವರು ಸೋಲಿನ ನೈತಿಕ ಹೊಣೆ ಹೊತ್ತು ಈಗಾಗಲೇ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಉತ್ತರ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಅಜಯ್ ಕುಮಾರ್ ಲಲ್ಲು, ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಮತ್ತು ಮಣಿಪುರ ಕಾಂಗ್ರೆಸ್ ಮುಖ್ಯಸ್ಥ ನಾಮೀರಕ್ಪಂ ಲೋಕೇನ್ ಸಿಂಗ್ ಅವರಿಗೆ ರಾಜೀನಾಮೆ ಸಲ್ಲಿಸುವಂತೆ ತಿಳಿಸಲಾಗಿದೆ.

  ಟ್ವೀಟ್​ ಮೂಲಕ ಸ್ಪಷ್ಟಪಡಿಸಿದ ರಣದೀಪ್​ ಸುರ್ಜೆವಾಲಾ

  ಈ ಸಂಬಂಧ ಟ್ವೀಟರ್​​ನಲ್ಲಿ ತಿಳಿಸಿರುವ ಕಾಂಗ್ರೆಸ್​ ನಾಯಕ ರಣದೀಪ್​ ಸುರ್ಜೆವಾಲಾ, ಪಕ್ಷದ ಮರು ಸಂಘಟನೆ ದೃಷ್ಟಿಯಿಂದಾಗಿ ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು, ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ ಮತ್ತು ಮಣಿಪುರದ ಪ್ರದೇಶ ಕಾಂಗ್ರೆಸ್​ ಅಧ್ಯಕ್ಷರ ರಾಜೀನಾಮೆ ನೀಡುವಂತೆ ಕೋರಿದ್ದಾರೆ ಎಂದಿದ್ದಾರೆ.

  ಭಾನುವಾರ ಕಾರ್ಯಕಾರಿ ಸಮಿತಿ ನಡೆಸಿದ್ದ ನಾಯಕರು 
  ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್​ ಕಳಪೆ ಪ್ರದರ್ಶನ ಸಂಬಂಧ ಪಕ್ಷ ಭಾನುವಾರ ಸೋನಿಯಾ ಗಾಂಧಿ ಅಧ್ಯಕ್ಷತೆಯಲ್ಲಿ ಕಾರ್ಯಕಾರಿ ಸಮಿತಿ ಸಭೆ ನಡೆಸಿತು. ಸುಮಾರು ಐದು ಗಂಟೆಗಳ ಕಾಲ ನಡೆದ ಸಭೆಯಲ್ಲಿ, ಪಕ್ಷದ ಕಾರ್ಯ ವೈಖರಿ, ಸೋಲಿನ ಪರಾಮರ್ಶೆ ನಡೆಸಲಾಯಿತು.

  ಇದನ್ನು ಓದಿ: The Kashmir Files' ಚಿತ್ರದಲ್ಲಿ ಹಲವಾರು ವರ್ಷಗಳಿಂದ ಹೂತಿಟ್ಟ ಸತ್ಯ ತೋರಿಸಲಾಗಿದೆ; ಪ್ರಧಾನಿ ಮೋದಿ

  ಸ್ಥಾನ ತೊರೆಯದಂತೆ ಸದಸ್ಯರ ಮನವಿ

  ಈ ವೇಳೆ ಸೋನಿಯಾ ಗಾಂಧಿ ಅವರು ಮುಖ್ಯಸ್ಥ ಸ್ಥಾನ ತೊರೆಯುವ ಕುರಿತು ಪ್ರಸ್ತಾಪಿಸಿದರು. ಜೊತೆಗೆ ರಾಹುಲ್​ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ರಾಜೀನಾಮೆ ಕುರಿತು ತಿಳಿಸಿದರು. ಆದರೆ, ಪಕ್ಷದ ಮುನ್ನಡೆಸುವ ಜವಾಬ್ದಾರಿಯನ್ನು ಮುಂದುವರೆಸುವಂತೆ ಪಕ್ಷದ ಸದಸ್ಯರು ಸೋನಿಯಾ ಗಾಂಧಿ ಅವರನ್ನು ಕೋರಿದ್ದರು. ಜೊತೆಗೆ ಈ ವೇಳೆ ಪಕ್ಷಕ್ಕೆ ಅಗತ್ಯವಾದ ಬದಲಾವಣೆ ನಡೆಸುವಂತೆ ಕೂಡ ಕೇಳಿದ್ದರು.

  ಇದನ್ನು ಓದಿ: Pizza loversಗೆ ನಿರಾಸೆ​; ಜಿಎಸ್​ಟಿ ದರ ಹೆಚ್ಚಳ, ಮತ್ತಷ್ಟು ದುಬಾರಿ ಆಯ್ತು ಪಿಜ್ಜಾ

  ಆದರೆ, ಕಾಂಗ್ರೆಸ್​​ ಭಿನ್ನಮತೀಯ ಗುಂಪಿನಲ್ಲಿ ಕಾಣಿಸಿಕೊಂಡಿರುವ ಜಿ-23 ನಾಯಕರು ಮಾತ್ರ ಪಕ್ಷದ ನಾಯಕತ್ವದ ಸಂಪೂರ್ಣ ಬದಲಾವಣೆಗೆ ಆಗ್ರಹಿಸಿದ್ದರು. ಅಲ್ಲದೇ ಭಿನ್ನಮತೀಯ ಗುಂಪಿನ ನಾಯಕರರಲ್ಲಿ ಒಬ್ಬರಾಗಿರುವ ಹಿರಿಯ ಕಾಂಗ್ರೆಸ್​ ನಾಯಕ ಗುಲಾಂ ನಬಿ ಆಜಾದ್​, ಪಕ್ಷದ ಜವಾಬ್ದಾರಿಗಳನ್ನು ನಿಗದಿಪಡಿಸುವ ಕುರಿತು ಧ್ವನಿ ಎತ್ತಿದ್ದರು.

  ಚುನಾವಣೆಯಲ್ಲಿ ಕಳಪೆ ಪ್ರದರ್ಶನ

  ಉತ್ತರ ಪ್ರದೇಶದಲ್ಲಿ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಅಜಯ್ ಕುಮಾರ್ ಲಲ್ಲು ಮತ್ತು ಉತ್ತರ ಪ್ರದೇಶ ಉಸ್ತುವಾರಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ನೇತೃತ್ವದಲ್ಲಿ ಕಾಂಗ್ರೆಸ್​​ 403 ಸ್ಥಾನಗಳಲ್ಲಿ ಕೇವಲ ಎರಡು ಸ್ಥಾನಗಳನ್ನು ಗಳಿಸಿತು.
  ಉತ್ತರಾಖಂಡದಲ್ಲಿ 70 ಸ್ಥಾನಗಳಲ್ಲಿ ಕೇವಲ 19 ಸ್ಥಾನಗಳನ್ನು ಮಾತ್ರ ಕಾಂಗ್ರೆಸ್​ ಗೆಲುವು ಸಾಧಿಸಿತು. ಗೋವದ 40 ವಿಧಾನಸಭಾ ಸ್ಥಾನಗಳಲ್ಲಿ 11 ಸ್ಥಾನ, ಮಣಿಪುರದಲ್ಲಿ ಐದು ಸ್ಥಾನಗಳಲ್ಲಿ ಮಾತ್ರ ಪಕ್ಷ ಗೆದಿತ್ತು. ರಾಜಕೀಯವಾಗಿ ಬಹು ಹಳೆಯ ಪಕ್ಷವಾಗಿರುವ ಕಾಂಗ್ರೆಸ್​ನ ಈ ಪ್ರದರ್ಶನ ಬಹಳಷ್ಟು ಚರ್ಚೆಗೆ ಗ್ರಾಸವಾಯಿತು.
  Published by:Seema R
  First published: