Sonam Kapoor House Theft : ನಟಿ ಸೋನಂ ಮನೆಗೆ ಕನ್ನ ಹಾಕಿದ್ದವರು ಸಿಕ್ಕಿಬಿದ್ರು: ಹಣ-ಒಡವೆ ಏನಾಯ್ತು?

ಸುಮಾರು 2.4 ಕೋಟಿ ರೂಪಾಯಿ ಬೆಲೆ ಬಾಳುವ ನಗದು ಮತ್ತು ಆಭರಣಗಳು ನಾಪತ್ತೆಯಾಗಿವೆ ಎಂದು ಆಹುಜಾ ಕುಟುಂಬದ ಸದಸ್ಯರು ದೂರಿದ್ದಾರೆ.

ನಟಿ ಸೋನಂ ಕಪೂರ್​​

ನಟಿ ಸೋನಂ ಕಪೂರ್​​

  • Share this:
    ಬಾಲಿವುಡ್ ತಾರೆ ಸೋನಮ್ ಕಪೂರ್ (Sonam Kapoor)  ಮತ್ತು ಅವರ ಪತಿ ಆನಂದ್ ಅಹುಜಾ (Anand Ahuja) ಅವರ ದೆಹಲಿಯ ನಿವಾಸದಲ್ಲಿ (Delhi House)  2.4 ಕೋಟಿ ಮೌಲ್ಯದ ಆಭರಣಗಳು ಮತ್ತು ನಗದು ಕಳವಾಗಿದ್ದು, ಆ ಅಪರಾಧಕ್ಕೆ ಸಂಬಂಧಿಸಿದಂತೆ, ಆಹುಜಾ ಮನೆಯಲ್ಲಿ ಕೆಲಸ ಮಾಡುವ ನರ್ಸ್ ಮತ್ತು ಆಕೆಯ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಮೃತಾ ಶೇರ್ಗಿಲ್ ಮಾರ್ಗದ ಸಮೀಪವಿರುವ ಸೋನಮ್ ಕಪೂರ್ ಅವರ ಮನೆಯಲ್ಲಿ, ಆ ನರ್ಸ್ ಕೇರ್‌ ಟೇಕರ್‌ ಆಗಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಇದನ್ನೂ ಓದಿ: Alia-Ranbir Wedding: ಆಲಿಯಾ ಕೈಗೆ ಮೆಹಂದಿ ಹಚ್ಚಿದ ಕರಣ್ ಜೋಹರ್, ಭಾವುಕರಾದ ನೀತು ಕಪೂರ್..!

    ಫೆಬ್ರವರಿ 11 ರಂದು ಕಳವು

    ಅಹುಜಾ ಕುಟುಂಬವು ತುಘಲಕ್ ರೋಡ್ ಪೊಲೀಸ್ ಸ್ಟೇಶನ್‍ನಲ್ಲಿ, ಫೆಬ್ರವರಿ 23 ರಂದು ಈ ಪ್ರಕರಣದ ಕುರಿತು ದೂರು ದಾಖಲಿಸಲಾಗಿದೆ. ಸುಮಾರು 2.4 ಕೋಟಿ ರೂಪಾಯಿ ಬೆಲೆ ಬಾಳುವ ನಗದು ಮತ್ತು ಆಭರಣಗಳು ನಾಪತ್ತೆಯಾಗಿವೆ ಎಂದು ಆಹುಜಾ ಕುಟುಂಬದ ಸದಸ್ಯರು ದೂರಿದ್ದಾರೆ. ಫೆಬ್ರವರಿ 11 ರಂದೇ, ಮನೆಯಲ್ಲಿ ಅಷ್ಟು ಬೆಲೆ ಬಾಳುವ ನಗದು ಮತ್ತು ಆಭರಣಗಳು ಕಳವಾಗಿರುವುದು ಅಹುಜಾ ಕುಟುಂಬದವ ಗಮನಕ್ಕೆ ಬಂದಿತ್ತು, ಆದರೆ ಅವರು ತಡವಾಗಿ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಇಬ್ಬರ ಬಂಧನ 

    ಬುಧವಾರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಪರ್ಣಾ ರುತ್ ವಿಲ್ಸನ್ (30) ಮತ್ತು ಆಕೆಯ ಪತಿ ನರೇಶ್ ಸಾಗರ್ (31) ನನ್ನು ಪೊಲೀಸರು ಬಂಧಿಸಿದ್ದಾರೆ. ವಿಲ್ಸನ್, ಆನಂದ್ ಅಹುಜಾ ಅವರ ತಾಯಿ ಪ್ರಿಯಾ ಅಹುಜಾ ಅವರ ಕೇರ್‌ಟೇಕರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಆಕೆಯ ಪತಿ ನರೇಶ್ ಸಾಗರ್ ಶಾಕರ್‌ಪುರ್‌ ಎಂಬಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಅಕೌಟೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಪ್ರಕರಣವನ್ನು ಕ್ರೈಂ ಬ್ರಾಂಚ್‍ಗೆ ವರ್ಗಾಯಿಸಲಾಯಿತು. ಆಹುಜಾ ನಿವಾಸಕ್ಕೆ ಪೊಲೀಸ್ ತಂಡ ತೆರಳಿ, ಅಲ್ಲಿನ ಮನೆ ಕೆಲಸದವರು ಮತ್ತು ಇತರ ಸಿಬ್ಬಂದಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ತಪ್ಪೊಪ್ಪಿಕೊಂಡ ಆರೋಪಿಗಳು 

    “ವಿಚಾರಣೆ ಮತ್ತು ಇತರ ಮಾಹಿತಿಗಳ ಆಧಾರದ ಮೇಲೆ , ನಾವು ಸರಿತಾ ವಿಹಾರ್‌ಗೆ ತಂಡವನ್ನು ಕಳುಹಿಸಿದೆವು ಮತ್ತು ಅಲ್ಲಿ ಅಪರ್ಣಾ ರುತ್ ವಿಲ್ಸನ್ ಮತ್ತು ನರೇಶ್ ಸಾಗರ್ ಅವರನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ಗಂಡ ಮತ್ತು ಹೆಂಡತಿ ಇಬ್ಬರೂ ತಮ್ಮ ಆರೋಪವನ್ನು ಒಪ್ಪಿಕೊಂಡಿದ್ದು, ಅವರನ್ನು ಬಂಧಿಸಲಾಗಿದೆ ಎಂದು ಆ ಅಧಿಕಾರಿ ತಿಳಿಸಿದ್ದಾರೆ.

    ಇದನ್ನೂ ಓದಿ: ಬುಕ್ ಮೈ ಶೋ -IMDB ಗಳಲ್ಲಿಯೂ KGF 2 ಹವಾ, ದಾಖಲೆಗಳನ್ನೆಲ್ಲಾ ಧೂಳಿಪಟ ಮಾಡಲಿದ್ದಾನಾ ರಾಕಿಬಾಯ್?

    ಆರೋಪಿಗಳನ್ನು ಬಂಧಿಸಲಾಗಿದ್ದರೂ, ಕಳವಾದ ಆಭರಣ ಮತ್ತು ಹಣವನ್ನು ಇನ್ನೂ ವಶಕ್ಕೆ ಪಡೆಯಲಾಗಿಲ್ಲ. ಐಪಿಸಿ ಸೆಕ್ಷನ್ 381 (ಯಜಮಾನನ ಆಸ್ತಿಯಲ್ಲಿ ಸೇವಕನ ಕಳ್ಳತನ) ಅಡಿಯಲ್ಲಿ, ಎಫ್‍ಐಆರ್ ದಾಖಲಿಸಲಾಗಿದೆ. ಈ ಪ್ರಕರಣದ ತನಿಖೆಯ ಸಂದರ್ಭದಲ್ಲಿ, ಸೋನಮ್ ಕಪೂರ್ ನಿವಾಸದಲ್ಲಿ ಕೆಲಸ ನಿರ್ವಹಿಸುತ್ತಿರುವ 20 ಕ್ಕೂ ಹೆಚ್ಚು ಮಂದಿ ನೌಕರರನ್ನು ವಿಚಾರಣೆಗೆ ಒಳ ಪಡಿಸಲಾಯಿತು.

    ನರ್ಸ್​​ ಆಗಿದ್ದ ಆರೋಪಿ 

    “ಆನಂದ್ ಅಹುಜಾ ಅವರ ಮನೆಯಲ್ಲಿ, ಅನುಪಮಾ ರುತ್ ವಿಲ್ಸನ್ ಹಲವಾರು ಸಂದರ್ಭಗಳಲ್ಲಿ ಒಬ್ಬ ಮೆಡಿಕಲ್ ಕೇರ್ ಅಸಿಸ್ಟೆಂಟ್ ಆಗಿ ಕೆಲಸ ಮಾಡಿದ್ದರು. ಮನೆಯಲ್ಲಿ ಆಭರಣಗಳನ್ನು ಎಲ್ಲಿ ಇಟ್ಟಿದ್ದಾರೆ ಎಂಬ ಬಗ್ಗೆ ಆಕೆಗೆ ಮಾಹಿತಿ ತಿಳಿದು, ಅದನ್ನು ಕದ್ದಿದ್ದಾಳೆ ಮತ್ತು ತನ್ನ ಗಂಡನಿಗೆ ನೀಡಿದ್ದಾಳೆ ಎಂಬ ಸಂಶಯ ನಮಗಿದೆ. ಕ್ರೈಂ ಬ್ರಾಂಚ್ ತಂಡವು ಸಾಗರ್‌ನನ್ನು ವಿಚಾರಣೆಗೆ ಒಳಪಡಿಸಿದ ಬಳಿಕ ಬಂಧಿಸಿದೆ” ಎಂದು ಡಿಸಿಪಿ (ದೆಹಲಿ) ಅಮೃತ್ ಗುಗುಲೋತ್ ಹೇಳಿದ್ದಾರೆ.

    ಸೋನಮ್ ಕಪೂರ್ ಮತ್ತು ಆಕೆಯ ಪತಿ ಆನಂದ್ ಆಹುಜಾ, ದೆಹಲಿಯ ನಿವಾಸದಲ್ಲಿ ವಾಸ ಮಾಡುತ್ತಿಲ್ಲ. ಲಂಡನ್‍ನಲ್ಲಿ ನೆಲೆಸಿರುವ ಅವರು, ಆಗಾಗ ಭಾರತಕ್ಕೆ ಬಂದಾಗ ಮುಂಬೈನ ನಿವಾಸದಲ್ಲಿ ಉಳಿದುಕೊಳ್ಳುತ್ತಾರೆ. ಸೋನಮ್ ಕಪೂರ್ ಕಳೆದ ತಿಂಗಳು, ತಾನು ತಾಯಿ ಆಗುತ್ತಿರುವ ವಿಚಾರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು.
    Published by:Kavya V
    First published: