ನಟಿ ಸೊನಾಲಿ ಬೇಂದ್ರೆಗೆ 'ಹೈ ಗ್ರೇಡ್' ಕ್ಯಾನ್ಸರ್; ಇನ್ಸ್ಟಾಗ್ರಾಂನಲ್ಲಿ ಭಾವನಾತ್ಮಕ ಪೋಸ್ಟ್
news18
Updated:July 4, 2018, 1:51 PM IST
news18
Updated: July 4, 2018, 1:51 PM IST
-ನ್ಯೂಸ್ 18 ಕನ್ನಡ
ಮುಂಬೈ,(ಜು.04): ಇತ್ತೀಚೆಗಷ್ಟೇ ಬಾಲಿವುಡ್ನ ಖ್ಯಾತ ನಟ ಇರ್ಫಾನ್ ಖಾನ್ ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ ಎಂಬ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿತ್ತು. ಅದರ ಬೆನ್ನಲ್ಲೇ ಕನ್ನಡದ 'ಪ್ರೀತ್ಸೆ' ಚಿತ್ರದಲ್ಲಿ ಅಭಿನಯಿಸಿರುವ ಬಾಲಿವುಡ್ ನಟಿ ಸೊನಾಲಿ ಬೇಂದ್ರೆ ಕ್ಯಾನ್ಸರ್ ನಿಂದ ಬಳಲುತ್ತಿರುವುದಾಗಿ ಸ್ವತಃ ಅವರೇ ಬಹಿರಂಗಪಡಿಸಿದ್ದಾರೆ. ಸದ್ಯ ಅಮೇರಿಕಾದ ನ್ಯೂಯಾರ್ಕ್ನಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ.
ಈ ಸಂಬಂಧ ಸೊನಾಲಿ ಇನ್ಸ್ಟಾಗ್ರಾಂನಲ್ಲಿ ಒಂದು ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿದ್ದಾರೆ. " ಜೀವನದಲ್ಲಿ ನೀವು ಸ್ವಲ್ಪ ನಿರೀಕ್ಷೆ ಮಾಡಿದರೆ, ಅದು ನಿಮಗೆ ಅನಿರೀಕ್ಷಿತ ಆಘಾತ ನೀಡುತ್ತದೆ. ಇತ್ತೀಚೆಗೆ ನನಗೆ ಕ್ಯಾನ್ಸರ್ ಇರುವುದಾಗಿ ಗೊತ್ತಾಯಿತು. ಹಲವು ಪರೀಕ್ಷೆಗಳನ್ನು ಮಾಡಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದೇನೆ. ಈಗ ಹೈ ಗ್ರೇಡ್ ಕ್ಯಾನ್ಸರ್ ಇರುವುದಾಗಿ ಗೊತ್ತಾಗಿದೆ. ನನ್ನ ಜೊತೆಗಿರುವ ನನ್ನ ಕುಟುಂಬದವರು ಮತ್ತು ಸ್ನೇಹಿತರಿಗೆ ನನ್ನ ಅಭಿನಂದನೆಗಳು" ಎಂದು ಬರೆದುಕೊಂಡಿದ್ದಾರೆ. ಇದು ಸೊನಾಲಿ ಬೇಂದ್ರೆ ಅವರ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿಯಾಗಿದೆ.
1994 ರಲ್ಲಿ ಕೆ.ರವಿಶಂಕರ್ ಅವರ 'ಆಗ್' ಚಿತ್ರದೊಂದಿಗೆ ತಮ್ಮ ಚಿತ್ರ ವೃತ್ತಿ ಜೀವನವನ್ನು ಪ್ರಾರಂಭಿಸಿದ ಸೊನಾಲಿ, ಕನ್ನಡ, ತಮಿಳು, ತೆಲುಗು ಸೇರಿದಂತೆ ಹಿಂದಿ ಭಾಷೆಯಲ್ಲಿ 45 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಸರ್ಫರೋಶ್, ದಿಲ್ಜಾಲೆ, ಹಮ್ ಸಾಥ್ ಸಾಥ್ ಹೇನ್ ಮತ್ತು ಮೇಜರ್ ಸಾಬ್ ಇನ್ನೂ ಹಲವಾರು ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಜನಪ್ರಿಯರಾಗಿದ್ದಾರೆ.

Loading...