ಸಾಮಾನ್ಯವಾಗಿ ನಮ್ಮಲ್ಲಿ ತಂದೆ, ತಾಯಿ (Parents) ತಮ್ಮ ಮಕ್ಕಳು (Childrens) ಚೆನ್ನಾಗಿ ಓದಿ ಒಂದು ಒಳ್ಳೆಯ ಸಂಬಳ (Salary) ಬರೋ ಕೆಲಸಕ್ಕೆ ಸೇರಿಕೊಳ್ಳಲಿ ಅಂತ ಕನಸು ಕಾಣುತ್ತಾರೆ. ಅದೇ ರೀತಿ ಕೆಲವು ಮಕ್ಕಳಿಗೂ ತಮ್ಮ ತಂದೆ ತಾಯಿಗೆ ತಮಗೆ ಕೆಲಸ ಕೊಟ್ಟಿರುವ ಕಂಪನಿಯನ್ನು ಮತ್ತು ಕಂಪನಿ ಇರುವ ದೇಶವನ್ನು ತೋರಿಸಬೇಕು ಅಂತ ತುಂಬಾನೇ ಆಸೆ ಇರುತ್ತದೆ. ಎಷ್ಟೋ ಪೋಷಕರು ತಾವು ಹಳ್ಳಿಯಲ್ಲಿ (Village) ಹೊಲದಲ್ಲಿ ದುಡಿದು ತಮ್ಮ ಮಕ್ಕಳನ್ನು ಚೆನ್ನಾಗಿ ಓದಿಸಿ ವಿದೇಶಕ್ಕೆ (International Trip) ಕಳುಹಿಸಿರುತ್ತಾರೆ. ಆದರೆ ಆ ಪೋಷಕರು ಮಾತ್ರ ಆ ಹಳ್ಳಿ ಬಿಟ್ಟು ದೂರ ಹೋಗಿರುವುದಿಲ್ಲ. ಇಲ್ಲಿ ಒಬ್ಬ ಮಗ ತನ್ನ ತಾಯಿಯನ್ನು ಸಿಂಗಪೂರ್ ಗೆ (Singapore) ಕರೆದುಕೊಂಡು ಹೋಗಿದ್ದಾನೆ ನೋಡಿ.
ತಾಯಿಯನ್ನು ಸಿಂಗಪೂರ್‌ಗೆ ಕರೆದುಕೊಂಡು ಹೋದ ಮಗ
ತಮ್ಮ ಜೀವನದಲ್ಲಿಯೇ ಹಳ್ಳಿ ಬಿಟ್ಟು ಹೊರಗೆ ಹೋಗಿರದ ತಾಯಿಯೊಬ್ಬಳನ್ನು ಮಗ ವಿಮಾನದಲ್ಲಿ ಕರೆದುಕೊಂಡು ಹೋಗಿ ಸಿಂಗಾಪೂರ್ ಅನ್ನು ತೋರಿಸಿಕೊಂಡು ಬಂದಿದ್ದಾರೆ. ಇದು ಆ ತಾಯಿಯ ಜೀವನದ ಮೊದಲ ಅಂತರರಾಷ್ಟೀಯ ಪ್ರವಾಸ ಅಂತಾನೆ ಹೇಳಲಾಗುತ್ತಿದೆ. ದತ್ತಾತ್ರೇಯ ಜಾಧವ್ ಎಂಬವರು ಸಿಂಗಾಪುರದಲ್ಲಿ ತಮ್ಮ ಮತ್ತು ಅವರ ತಾಯಿಯ ಫೋಟೋಗಳನ್ನು ಇತ್ತೀಚೆಗೆ ಲಿಂಕ್ಡ್ಇನ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ವಾಸ್ತವವಾಗಿ ಹೇಳಬೇಕೆಂದರೆ ದತ್ತಾತ್ರೇಯ ಅವರ ತಾಯಿ ಹಳ್ಳಿಯಲ್ಲಿ ವಾಸಿಸುತ್ತಿದ್ದು, ವಿಮಾನವನ್ನು ಹತ್ತುವುದಿರಲಿ, ಹತ್ತಿರದಿಂದ ಸಹ ಯಾವತ್ತೂ ನೋಡಿರಲಿಲ್ಲ. ಆದ್ದರಿಂದ, ದತ್ತಾತ್ರೇಯ ಅವಳನ್ನು ವಿದೇಶಕ್ಕೆ ಕರೆದೊಯ್ಯಲು ನಿರ್ಧರಿಸಿದರು ಮತ್ತು ಅದರ ಪೋಸ್ಟ್ ಅನ್ನು ಹಂಚಿಕೊಂಡರು. ಈಗ ಇವರ ಪೋಸ್ಟ್ ಅನೇಕ ನೆಟ್ಟಿಗರ ಹೃದಯವನ್ನು ಗೆಲ್ಲುತ್ತಿದೆ ಅಂತ ಹೇಳಬಹುದು.
ಲಿಂಕ್ಡ್ಇನ್ ನಲ್ಲಿ ಪೋಸ್ಟ್ ಹಂಚಿಕೊಂಡ ಮಗ
ದತ್ತಾತ್ರೇಯ ಜಾಧವ್ ಲಿಂಕ್ಡ್ಇನ್ ನಲ್ಲಿ ವೈರಲ್ ಪೋಸ್ಟ್ ಹಂಚಿಕೊಂಡಿದ್ದಾರೆ. ಇಬ್ಬರೂ ಸಿಂಗಾಪುರದಲ್ಲಿದ್ದಾಗ ಅವರು ತಮ್ಮ ತಾಯಿಯೊಂದಿಗೆ ತೆಗೆಸಿಕೊಂಡಿರುವ ಎರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯ ಪ್ರಕಾರ, ಇದು ಅವರ ತಾಯಿಯ ಮೊದಲ ಅಂತರರಾಷ್ಟ್ರೀಯ ಪ್ರವಾಸ ಮತ್ತು ಅವರು ವಿಮಾನ ಹತ್ತಿದ್ದು ಸಹ ಮೊದಲನೇ ಬಾರಿ. ಅವರ ತಾಯಿ ತಮ್ಮ ಇಡೀ ಜೀವನವನ್ನು ಹಳ್ಳಿಯಲ್ಲಿ ಕಳೆದರು ಮತ್ತು ಅವರ ಪೀಳಿಗೆಯಲ್ಲಿ ವಿದೇಶಕ್ಕೆ ಪ್ರಯಾಣಿಸಿದ ಮೊದಲ ಮಹಿಳೆ ಮತ್ತು ಅವರ ಹಳ್ಳಿಯಲ್ಲಿ ಎರಡನೇ ಮಹಿಳೆ. ಈ ಮುನ್ನ ತಮ್ಮ ಹಳ್ಳಿಯಲ್ಲಿ ವಿಮಾನದಲ್ಲಿ ಪ್ರಯಾಣಿಸಿದ ಮೊದಲ ಮಹಿಳೆ ತಮ್ಮ ಹೆಂಡತಿ ಎಂದು ದತ್ತಾತ್ರೇಯ ತಿಳಿಸಿದ್ದಾರೆ.
ಏನ್ ಹೇಳಿದ್ದಾರೆ ನೋಡಿ ದತ್ತಾತ್ರೇಯ ತಮ್ಮ ತಾಯಿಯ ಬಗ್ಗೆ?
"ನಿನ್ನೆ ನಾನು ನನ್ನ ತಾಯಿಯನ್ನು ವಿಶ್ವದ ಸುಂದರವಾದ ಸ್ಥಳವನ್ನು ತೋರಿಸಲು ಸಿಂಗಾಪೂರಕ್ಕೆ ಕರೆ ತಂದಿದ್ದೇನೆ, ಮತ್ತು ಇಂದು ನಾನು ಅವರನ್ನು ನನ್ನ ಕಚೇರಿ ಮತ್ತು ನಗರ ಪ್ರದೇಶವನ್ನು ತೋರಿಸಲು ಕರೆದೊಯ್ಯಲು ನಿರ್ಧರಿಸಿದ್ದೇನೆ. ಅವರು ಅನುಭವಿಸುತ್ತಿರುವ ಭಾವನೆಗಳು ಮತ್ತು ಸಂತೋಷವನ್ನು ವ್ಯಕ್ತಪಡಿಸುವುದು ಕಷ್ಟ. ತನ್ನ ಇಡೀ ಜೀವನವನ್ನು ಹಳ್ಳಿಯಲ್ಲಿ ಕಳೆದ ಅವರು ಇದೀಗ ವಿಮಾನವನ್ನು ಹತ್ತಿರದಿಂದ ನೋಡಿದ್ದನ್ನು ಕಲ್ಪಿಸಿಕೊಳ್ಳಿ. ಹೌದು, ಅವಳು ತನ್ನ ತಲೆಮಾರಿನಲ್ಲಿ ವಿದೇಶಕ್ಕೆ ಪ್ರಯಾಣಿಸಿದ ಮೊದಲ ಮಹಿಳೆ ಮತ್ತು ನನ್ನ ಹಳ್ಳಿಯ ಎರಡನೇ ಮಹಿಳೆ. ಇದು ನನಗೆ ಮತ್ತು ನನ್ನ ಕುಟುಂಬಕ್ಕೆ ಬಹಳ ವಿಶೇಷವಾದ ಕ್ಷಣ" ಎಂದು ದತ್ತಾತ್ರೇಯ ಕ್ಯಾಪ್ಪನ್ನಲ್ಲಿ ಬರೆದುಕೊಂಡಿದ್ದಾರೆ.
"ನನಗೆ ತುಂಬಾನೇ ಕಾಡುವ ವಿಚಾರವೆಂದರೆ ನನ್ನ ತಂದೆ ಇದನ್ನೆಲ್ಲಾ ಅನುಭವಿಸಲು ಇರಬೇಕಿತ್ತು! ನೀವು ಪ್ರಯಾಣಿಸುವ ಅವಧಿಯನ್ನು ಲೆಕ್ಕಿಸದೆ, ವಿಶ್ವದ ಇತರ ಸುಂದರವಾದ ಸ್ಥಳವನ್ನು ನಿಮ್ಮ ಹೆತ್ತವರಿಗೆ ತೋರಿಸಿ ಎಂದು ಜನರನ್ನು ಒತ್ತಾಯಿಸುತ್ತೇನೆ. ನನ್ನನ್ನು ನಂಬಿ, ಅವರ ಸಂತೋಷಕ್ಕಿಂತ ಮತ್ತೊಂದಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Tourist ship: ಭಾರತಕ್ಕೆ ಬಂದ ವಿದೇಶಿ ಪ್ರವಾಸಿಗರ ಹಡಗು, ಅಮೇರಿಕನ್ಸ್ ಅಂತೂ ಫುಲ್ ಖುಷಿ!
ಪೋಸ್ಟ್ ನೋಡಿ ಭೇಷ್ ಎಂದ ನೆಟ್ಟಿಗರು
ಇದೀಗ ಈ ಪೋಸ್ಟ್ ವೈರಲ್ ಆಗಿದೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ದತ್ತಾತ್ರೇಯ ಮತ್ತು ಅವರ ತಾಯಿಯ ಮೇಲೆ ಇಟ್ಟಿರುವ ಪ್ರೀತಿಗೆ ಕೊನೆ ಇಲ್ಲ. "ಅಭಿನಂದನೆಗಳು! ತಮ್ಮ ಕೆಲಸದ ಸ್ಥಳಕ್ಕೆ ತಮ್ಮ ಹೆತ್ತವರನ್ನು ಕರೆದೊಯ್ಯುವ ಬಗ್ಗೆ ಕೆಲವೇ ಕೆಲವು ಜನರು ಯೋಚಿಸುತ್ತಾರೆ. ಈ ಉತ್ಸಾಹವನ್ನು ಹೀಗೆ ಉಳಿಸಿಕೊಳ್ಳಿ. ನಿಮ್ಮ ತಾಯಿ ನಿಮ್ಮ ಬಗ್ಗೆ ಹೆಮ್ಮೆ ಪಡಬೇಕು" ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಅನೇಕರು ಪೋಸ್ಟ್ ನೋಡಿ “ಸೂಪರ್” ಮತ್ತು “ಗೌರವ ತರುವಂತದ್ದು” ಅಂತೆಲ್ಲಾ ಕಾಮೆಂಟ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ