ಸಮಾಜವಾದಿ ಪಕ್ಷದ (ಎಸ್ಪಿ Samajwadi Party (SP)) ಮಾಜಿ ಶಾಸಕರ ಪುತ್ರನ ಮೇಲೆ ಅತ್ಯಾಚಾರ ಮತ್ತು ಲೂಟಿ ಪ್ರಕರಣ ದಾಖಲಿಸಲಾಗಿದೆ. ಅತ್ಯಾಚಾರ ಮತ್ತು ಲೂಟಿಯ ಆರೋಪದ ಮೇಲೆ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಫುಲ್ಪುರ್ ಸಮಾಜವಾದಿ (Phulpur Samajwadi) ಪಕ್ಷದ ಮಾಜಿ ಶಾಸಕ ಸಯೀದ್ ಅಹ್ಮದ್ ಅವರ ಪುತ್ರ ಖವಿ ಅಹ್ಮದ್ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂದು ವರದಿಯಾಗಿದೆ.
ಎಫ್ಐಆರ್ ಪ್ರಕಾರ, ಆರೋಪಿಯು ತನ್ನ ಹೆಸರನ್ನು ಬದಲಾಯಿಸಿಕೊಂಡು ನಂತರ ಮಹಿಳೆಯೊಂದಿಗೆ ಸ್ನೇಹ ಬೆಳೆಸಿಕೊಂಡು, ಇದೇ ಸಲಿಗೆಯನ್ನು ದುರುಪಯೋಗ ಮಾಡಿಕೊಂಡು ಅವಳಿಗೆ ನಿದ್ರಾಜನಕ ಮಾತ್ರೆಗಳನ್ನು ನೀಡುವ ಮೂಲಕ ಮದುವೆಯ ನೆಪದಲ್ಲಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಶಾಸಕರ ಪತ್ನಿ ಮತ್ತು ಮಗಳು ಕೂಡ ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಸಂತ್ರಸ್ತ ಮಹಿಳೆ ಆರೋಪಿಸಿದ್ದಾರೆ.
ಮಹಿಳೆ ತಾನು ನೀಡಿರುವ ಪೊಲೀಸ್ ದೂರಿನಲ್ಲಿ, ಮಹಿಳೆ ತಾನು ಮಿಸ್ ಇಂಡಿಯಾ ಸ್ಪರ್ಧೆಗೆ ತಯಾರಿ ನಡೆಸುತ್ತಿದ್ದೇನೆ ಮತ್ತು ಸಿವಿಲ್ ಲೈನ್ಸ್ ನಲ್ಲಿ ಜಿಮ್ ನಡೆಸುತ್ತಿದ್ದೆ ಎಂದು ಹೇಳಿಕೊಂಡಿದ್ದಾಳೆ.
2018 ರಲ್ಲಿ, ಅವಳು ಖವಿ ಅಹ್ಮದ್ನೊಂದಿಗೆ ಸಂಪರ್ಕಕ್ಕೆ ಬಂದಳು, ಅವನು ತನ್ನ ಹೆಸರನ್ನು ಬದಲಾಯಿಸಿಕೊಂಡು, ಆ ಮೂಲಕ ಅವಳೊಂದಿಗೆ ಸ್ನೇಹ ಬೆಳೆಸಿದನು. ಬ್ಯೂಟಿ ಪಾರ್ಲರ್ ನಡೆಸುವ ನೆಪದಲ್ಲಿ ಆರೋಪಿಗಳು ಆಕೆಯನ್ನು ಲಕ್ನೋಗೆ (Lucknow) ಕರೆದುಕೊಂಡು ಹೋದರು. ಇಲ್ಲಿ ಆರೋಪಿಯು ಆಕೆಗೆ ಮತ್ತು ಬರುವ ಮಾತ್ರೆ ನೀಡಿ, ಆನಂತರ ಲೈಂಗಿಕವಾಗಿ ಶೋಷಣೆ ಮಾಡಿದ್ದಾನೆ. ಆನಂತರ ಆತ ಆಕೆಯ ಅಶ್ಲೀಲ ವಿಡಿಯೋಗಳನ್ನು ವಿಡಿಯೋ ಮಾಡಿಕೊಂಡು ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿದ, ಎಂದು ದೂರಿನಲ್ಲಿ ವಿವರಿಸಲಾಗಿದೆ.
ಆಕೆ ಪ್ರಯಾಗರಾಜ್ಗೆ ಹಿಂತಿರುಗಿದಾಗ ಆರೋಪಿ ತನ್ನನ್ನು ಹಿಂಬಾಲಿಸುತ್ತಲೇ ಇದ್ದ ಎಂದು ಮಹಿಳೆ ಆರೋಪಿಸಿದ್ದಾರೆ. ಆತ ಪ್ರಯಾಗರಾಜ್ ನಲ್ಲಿ ನನ್ನ ಮೇಲೆ ಗನ್ ಪಾಯಿಂಟ್ ನಲ್ಲಿ ಅತ್ಯಾಚಾರ ಎಸಗಿದ್ದಾನೆ ಮತ್ತು ಹಲ್ಲೆ ಮಾಡಿ ಗಾಯಗೊಳಿಸಿದ್ದಾನೆ.
ಭಾನುವಾರ, ಆಕೆ ಸಿವಿಲ್ ಲೈನ್ಸ್ಗೆ ಹೋಗಿದ್ದಾಗ, ಆರೋಪಿ ಮತ್ತು ಆತನ ಸಹಾಯಕ ತನ್ನನ್ನು ಅಡ್ಡಗಟ್ಟಿದ ಎಂದು ಆಕೆ ಆರೋಪಿಸಿದ್ದಾಳೆ. ಆರೋಪಿಯು ಸಂತ್ರಸ್ತೆಯನ್ನು ಬೆದರಿಸಿದನು ಮತ್ತು ಸಾವಿರ ರೂಪಾಯಿ ಮೌಲ್ಯದ ಆಕೆಯ ಚಿನ್ನದ ಸರವನ್ನು ಕಸಿದುಕೊಂಡರು ಮತ್ತು ಆಕೆಯ ಸಿಮ್ ಕಾರ್ಡ್ ತೆಗೆದುಕೊಂಡು ಹೋದರು ಎಂದು ಆರೋಪಿಸಲಾಗಿದೆ.
ಸಿವಿಲ್ ಲೈನ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (SHO), ಶಿಶುಪಾಲ್ ಶರ್ಮಾ, "ಮಹಿಳೆಯ ದೂರಿನ ಮೇಲೆ, ಅತ್ಯಾಚಾರ, ಲೂಟಿ ಮತ್ತು ಐಪಿಸಿಯ ಇತರ ಸಂಬಂಧಿತ ವಿಭಾಗಗಳ ಮೇಲೆ ಐಪಿಸಿ ಸೆಕ್ಷನ್ಗಳ ಮೇಲೆ ಮಾಜಿ ಶಾಸಕನ ಮಗನ ಮೇಲೆ ಎಫ್ಐಆರ್ ದಾಖಲಿಸಲಾಗಿದೆ. ಆರೋಪಿ ತಲೆಮರೆಸಿಕೊಂಡಿದ್ದು ಆರೋಪಿಗಾಗಿ ಶೋಧ ಆರಂಭಿಸಲಾಗಿದೆ. "
ಈ ಮಧ್ಯೆ, ಮಾಜಿ ಎಸ್ಪಿ ಶಾಸಕ ಸಯೀದ್ ಅಹ್ಮದ್ ಮಾಧ್ಯಮಗಳ ಮುಂದೆ ಮಾತನಾಡಿ, ಬ್ಯೂಟಿ ಪಾರ್ಲರ್ ನಡೆಸುವುದಕ್ಕಾಗಿ ಮಹಿಳೆ ತನ್ನ ಮಗನಿಂದ 6 ಲಕ್ಷ ರೂಪಾಯಿಗಳನ್ನು ಸಾಲವಾಗಿ ಪಡೆದಿದ್ದಾರೆ ಮತ್ತು ಹಣವನ್ನು ಹಿಂದಿರುಗಿಸುವಂತೆ ಕೇಳಿದಾಗ ಈ ರೀತಿಯ ಆರೋಪ ಮಾಡಿದ್ದಾಳೆ, ಅವಳು ನಕಲಿ ಎಫ್ಐಆರ್ ದಾಖಲಿಸಿದ್ದಾರೆ ಎಂದು ತಮ್ಮ ಮಗನ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ.
ಇದನ್ನೂ ಓದಿ: Kolkata: ಕಲ್ಕತ್ತಾ ಬಿಜೆಪಿ ಸಂಸದ ಅರ್ಜುನ್ ಸಿಂಗ್ ಮನೆ ಮೇಲೆ ಎರಡನೇ ಬಾರಿ ಬಾಂಬ್ ದಾಳಿ
"ಮಹಿಳೆ ತನಗೆ ತಾನೇ ಹೊಡೆದುಕೊಳ್ಳುತ್ತಿರುವ ವಿಡಿಯೋ ತುಣುಕುಗಳು ಲಭ್ಯವಿದೆ. ನನ್ನ ಕುಟುಂಬದ ಘನತೆಗೆ ಧಕ್ಕೆ ತರುವ ಕಾರಣಕ್ಕೆ ರಾಜಕೀಯ ಪ್ರತಿಸ್ಪರ್ಧಿಗಳಿಂದ ಈ ಕುತಂತ್ರ ರೂಪಿಸಲಾಗಿದೆ "ಎಂದು ಅವರು ಆರೋಪಿಸಿದರು.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ