ಕೊರೋನಾದಿಂದಾಗಿ ಸಿಪಿಎಂ ನಾಯಕ ಸೀತಾರಾಮ್ ಯೆಚೂರಿ ಮಗ ಸಾವು; ಬಿಜೆಪಿ ಉಪಾಧ್ಯಕ್ಷನಿಂದ ವಿಕೃತಿ!

ತನಿಖಾ ಪತ್ರಕರ್ತರಾಗಿದ್ದ 35 ವರ್ಷದ ಆಶಿಶ್ ಯೆಚೂರಿ ಗುರುವಾರ ಬೆಳಿಗ್ಗೆ ಗುರಗಾಂವ್‌ನ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿನಿಂದಾಗಿ ಎರಡು ವಾರಗಳ ಹೋರಾಟದ ನಂತರ ಇಂದು ನಿಧನರಾಗಿದ್ದಾರೆ.

ನರೇಂದ್ರ ಮೋದಿ, ಬಿಜೆಪಿ ಉಪಾಧ್ಯಕ್ಷ ಮಿಥಿಲೇಶ್‌ ಕುಮಾರ್‌ ತಿವಾರಿ.

ನರೇಂದ್ರ ಮೋದಿ, ಬಿಜೆಪಿ ಉಪಾಧ್ಯಕ್ಷ ಮಿಥಿಲೇಶ್‌ ಕುಮಾರ್‌ ತಿವಾರಿ.

 • Share this:
  ನವ ದೆಹಲಿ (ಏಪ್ರಿಲ್ 22); ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್‌ ಯಚೂರಿ ಅವರ ಹಿರಿಯ ಮಗ, ಪತ್ರಕರ್ತ ಆಶಿಶ್‌ ಯಚೂರಿ ಇಂದು ಬೆಳಿಗ್ಗೆ ಕೊರೊನಾದಿಂದ ಮೃತಪಟ್ಟಿದ್ದಾರೆ. ಬಿಹಾರದ ಮಾಜಿ ಶಾಸಕ ಹಾಗೂ ಪ್ರಸ್ತುತ ಬಿಜೆಪಿಯ ರಾಜ್ಯ ಉಪಾಧ್ಯಕ್ಷ ಮಿಥಿಲೇಶ್‌ ಕುಮಾರ್‌ ತಿವಾರಿ ಅವರು, ‘ಚೀನಾ ಬೆಂಬಲಿಗ ಯಚೂರಿಯ ಮಗ ಆಶಿಶ್ ಚೀನೀ ಕೊರೊನಾಗೆ ನಿಧನರಾಗಿದ್ದಾರೆ’ ಎಂದು ಹಂಗಿಸಿ ವಿಕೃತಿ ಮೆರೆದಿದ್ದಾರೆ. ವಿಥಿಲೇಶ್‌‌ ಕುಮಾರ್‌ ತಿವಾರಿ ಅವರು 2015 ರಲ್ಲಿ ಬೈಕುಂತ್‌ಪುರ ಕ್ಷೇತ್ರದಿಂದ ಬಿಹಾರ ವಿಧಾನಸಭೆಗೆ ಬಿಜೆಪಿಯಿಂದ ಆಯ್ಕೆಯಾಗಿದ್ದರು. ಇಂದು ಅವರು ಟ್ವೀಟ್ ಮಾಡಿದ ನಂತರ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಹಾಗಾಗಿ ಅದನ್ನು ಅವರು ಡಿಲಿಟ್ ಮಾಡಿದ್ದಾರೆ. ಟ್ವೀಟ್‌ನಲ್ಲಿ ಅವರು, “ಚೀನಾ ಬೆಂಬಲಿಗ, ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯಚೂರಿ ಅವರ ಮಗ ಆಶಿಶ್‌ ಯಚೂರಿ ಚೀನೀ ಕೊರೊನಾದಿಂದ ನಿಧನ” ಎಂದು ಬರೆದಿದ್ದರು.  ಅವರ ಟ್ವೀಟ್‌ಗೆ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ಜಮ್ಮುಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  ಇದನ್ನೂ ಓದಿ: CoronaVirus: ಇದು ಕೊಲೆಗಡುಕ ಸರ್ಕಾರ, ಸಚಿವರು ಹೆಣವನ್ನು ಕುಕ್ಕಿ ತಿನ್ನುವ ರಣ ಹದ್ದುಗಳು; ಕಾಂಗ್ರೆಸ್ ಆಕ್ರೋಶ

  ತನಿಖಾ ಪತ್ರಕರ್ತರಾಗಿದ್ದ 35 ವರ್ಷದ ಆಶಿಶ್ ಯೆಚೂರಿ ಗುರುವಾರ ಬೆಳಿಗ್ಗೆ ಗುರಗಾಂವ್‌ನ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿನಿಂದಾಗಿ ಎರಡು ವಾರಗಳ ಹೋರಾಟದ ನಂತರ ಇಂದು ನಿಧನರಾಗಿದ್ದಾರೆ.

  ಸೀತಾರಾಮ್ ಯೆಚೂರಿ ಅವರ ಪುತ್ರನ ನಿಧನಕ್ಕೆ ರಾಷ್ಟ್ರಪತಿ, ಉಪಾ ರಾಷ್ಟ್ರಪತಿ, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮತ್ತು ಇತರ ರಾಜಕೀಯ ಮುಖಂಡರು ಸಂತಾಪ ಸೂಚಿಸಿದ್ದಾರೆ.
  Published by:MAshok Kumar
  First published: