ಮದುವೆ (Marriage) ಅಂದ್ರೆ ಎಲ್ಲರಿಗೂ ಏನೋ ಖುಷಿ. ಸಂತೋಷ. ಅದ್ರಲ್ಲೂ ಪೋಷಕರು (Perents) ತಮ್ಮ ಮಗನಿಗೂ, ಮಗಳಿಗೂ ಒಳ್ಳೆಯ ಸಂಬಂಧ ಹುಡುಕಿ ಅದ್ಧೂರಿಯಾಗಿ (Grand) ಮದುವೆ ಮಾಡಬೇಕು ಎಂದು ಎಷ್ಟೋ ದಿನದಿಂದ ಅಂದು ಕಂಡಿರುತ್ತಾರೆ. ತಮ್ಮ ಮಕ್ಕಳ ಮದುವೆ ಬಗ್ಗೆ ಸಾವಿರಾರು ಕನಸು (Dream) ಕಂಡಿರುತ್ತಾರೆ. ಮದುವೆ ಜೀವನದ ತಿರುವೂ ಕೂಡ ಆಗಿರುವುದರಿಂದ ಜಾತಕ, ರಾಶಿ, ಹೊಂದಾಣಿಕೆ, 2 ಕುಟುಂಬಗಳ ಸಾಮರಸ್ಯ ನೋಡಿ, ಎಲ್ಲಾ ಕೂಡಿ ಬಂದ್ರೆ ಮದುವೆ ಮಾಡಲು ನಿರ್ಧಾರ ಮಾಡ್ತಾರೆ. ಆದ್ರೆ ಇಲ್ಲೊಬ್ಬ ಮಗ ತಮ್ಮ ತಾಯಿಯ ಹೆಣವನ್ನು(Dead body) ಮನೆಯಲ್ಲೇ ಇಟ್ಟುಕೊಂಡು ಸಾವಿರಾರು ಜನರನ್ನು ಸೇರಿಸಿ ಅದ್ಧೂರಿಯಾಗಿ ಮದುವೆಯಾಗಿದ್ದಾನೆ. ಅದು ಕೂಡ ಅವನ ಮೃತ ಪಟ್ಟ ತಾಯಿಯ ಕೊನೆ ಆಸೆ ಈಡೇರಿಸಲು. ಅಷ್ಟುಕ್ಕೂ ಆಗಿದ್ದೇನು? ಶವವನ್ನು ಇಟ್ಟುಕೊಂಡು ಮದುವೆಯಾಗಿದ್ಯಾಕೆ ಮುಂದೆ ಓದಿ.
ಮನೆ ಒಳಗೆ ಹೆತ್ತಮ್ಮನ ಹೆಣ, ಹೊರಗೆ ಗ್ರ್ಯಾಂಡ್ ಆಗಿ ಮದುವೆ!
ಈ ಕಥೆಯ ನಾಯಕನ ಹೆಸರು ಓಂ ಕುಮಾರ್ ಅಂತ. ಬಿಹಾರದ ಕೇಂದು ಆಡೀಹ್ ಠಾಣೆ ವ್ಯಾಪ್ತಿಯ ನ್ಯೂ ಮೆರಿನ್ ಗೋಪಾಲಿಚಕ್ ಪ್ರದೇಶದವನು. ಇವನ ತಾಯಿಯು ಇವನ ಮದುವೆ ಮಾಡುವುದೇ ಒಂದು ದೊಡ್ಡ ಕನಸಾಗಿತ್ತು. ಎಷ್ಟೋ ಕಡೆ ಮಗನಿಗೆ ಹೆಣ್ಣು ನೋಡಿ, ಪುತ್ರನಿಗೆ ಸರಿ ಹೊಂದುವ ಹುಡುಗಿ ಜೊತೆ ಮದುವೆ ಫಿಕ್ಸ್ ಮಾಡಿದ್ರು. ಅದ್ಧೂರಿಯಾಗಿ ಮದುವೆ ಮಾಡಲು ಎಲ್ಲಾ ತಯಾರಿ ನಡೆಸಿದ್ರು. ದೂರದೂರಿನ ನೆಂಟರು, ಗ್ರಾಮಸ್ಥರು, ಪರಿಚಯಸ್ಥರಿಗೆ ಲಗ್ನ ಪತ್ರಿಕೆಯನ್ನು ಹಂಚಿದ್ರು. ಆದ್ರೆ ವಿಧಿಯಾಟವೇ ಬೇರೆಯಾಗಿತ್ತು. ಎಲ್ಲಾ ಮುಂದೆ ನಿಂತು ಮದುವೆ ಕೆಲಸ ನೋಡಿಕೊಂಡ ತಾಯಿ , ಮಗನ ಮದುವೆ ಕಣ್ತುಂಬಿಕೊಳ್ಳುವ ಅದೃಷ್ಟ ಪಡೆದಿರಲಿಲ್ಲ. ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿ, ಮಗನ ಮದುವೆಗೆ 2 ದಿನ ಬಾಕಿ ಇರುವಾಗಲೇ ಸಾವನ್ನಪ್ಪಿದ್ದಾರೆ.
ಮದುವೆ ಇದ್ದದ್ದು ಯಾವಾಗ? ನಡೆದಿದ್ದು ಯಾವಾಗ?
ಸಾವಿರಾರು ಕನಸು ಕಟ್ಟಿದ್ದ ತಾಯಿ ಜ್ಯೋತಿಷಿಗಳ ಬಳಿ ದಿನಾಂಕ ಕೇಳಿ, ಮಗ-ಸೊಸೆಗೆ ಒಳ್ಳೆಯದಾಗಲಿ ಅಂತ ಜುಲೈ 10ರಂದು ಮದುವೆ ನಿಗದಿ ಮಾಡಿದ್ರು. ಆದ್ರೆ ಕಳೆದ ಕೆಲ ದಿನಗಳಿಂದ ಮದುಮಗನ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ರು. ಮದುವೆ ಆಗೋ ವರೆಗೆ ಬದುಕಿದ್ರೆ ಸಾಕು ಎಂದುಕೊಂಡಿದು. ಆದ್ರೆ ಯಮರಾಯ ಬಿಡಲೇ ಇಲ್ಲ. ಜುಲೈ 8 ಅಂದ್ರೆ ಮದುವೆಗೆ 2 ದಿನ ಬಾಕಿ ಇರುವಾಗಲೇ ತಾಯಿ ಸಾವನ್ನಪ್ಪಿದ್ದಾಳೆ. ತಾಯಿಯ ಕೊನೆ ಆಸೆ ಪೂರೈಸಲು ಶವವನ್ನು ಮನೆಯಲ್ಲೇ ಇಟ್ಟುಕೊಂಡು ಸಾವಿರಾರು ಜನರ ಸಮ್ಮಖದಲ್ಲಿ ಮಗ ಮದುವೆಯಾಗಿದ್ದಾನೆ. ಜುಲೈ 10ರಂದು ಮದುವೆ ಆಗಿಲ್ಲ. ಬದಲಿಗೆ ಒಂದು ದಿನ ಮುಂಚೆಯೇ ಆಗಿದ್ದಾನೆ.
ಇದನ್ನೂ ಓದಿ: Marriage Dokha: ವಯಸ್ಸು 30 ಅಂತ ಯಾಮಾರಿಸಿ ಯುವಕನನ್ನು ಮದ್ವೆಯಾದ 52ರ ಆಂಟಿ! ಮೇಕಪ್ ನೋಡಿ ಮೋಸ ಹೋದ ಹುಡುಗ
ಮೃತ ತಾಯಿಯ ಆಸೆ ಏನಾಗಿತ್ತು..?
ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಗೆ ತಾನು ಹೆಚ್ಚು ಕಾಲ ಬದುಕಲ್ಲ ಎಂಬ ಸತ್ಯ ಗೊತ್ತಿತ್ತೋ ಏನೋ? ಪದೇ ಪದೇ ನಾನು ಸಾಯೋಕು ಮುಂಚೆ ನನ್ನ ಮಗನ ಮದುವೆ ನೋಡಬೇಕು ಅಂತಿದ್ರಂತೆ. ಅದಕ್ಕೆ ಮಗನ ಬಳಿ ಪ್ರಮಾಣ ಮಾಡಿಸಿಕೊಂಡಿದ್ರಂತೆ. ತಾನು ಸತ್ತರೂ ಯಾವುದೇ ಕಾರಣಕ್ಕೂ ಮದುವೆ ನಿಲ್ಲಿಸಬೇಡ ಎಂದು ಮಗನ ಬಳಿ ಆಣೆ ತೆಗೆದುಕೋಮಡಿದ್ರಂತೆ. ಅಂತೆಯೇ ಅಮ್ಮನ ಆಸೆಯಂತೆ ಮಗ ಮದುವೆ ನಿಲ್ಲಿಸದೇ, ಶವವನ್ನು ಮನೆಯಲ್ಲೇ ಇಟ್ಟುಕೊಂಡು ಅದ್ಧೂರಿಯಾಗಿ ಮದುವೆಯಾಗಿದ್ದಾನೆ.
ಇದನ್ನೂ ಓದಿ: MS Dhoni: ಕಡಕ್‌ನಾತ್ ಕೋಳಿ ಮಾರಾಟಕ್ಕೆ ರೆಡಿಯಾದ ಧೋನಿ, ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!
ಮಗ ಮದುವೆಯಾದ ಬಳಿಕ ತಾಯಿಯ ಮೃತದೇಹದ ಪಾದವನ್ನು ಹೆಂಡತಿ ಮತ್ತು ಆತನ ತಲೆ ಮೇಲೆ ಇಟ್ಟುಕೊಂಡು ಆಶೀರ್ವಾದ ಪಡೆದಿದ್ದಾನೆ. ನಂತರ ತನ್ನ ತಾಯಿಯ ಅಂತ್ಯಕ್ರಿಯೆ ಮಾಡಿದ್ದಾನೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ