Indian Army: ತಾಯಿ ನೇಮಕಗೊಂಡಿದ್ದ ಅಕಾಡೆಮಿಯ ಮೂಲಕ ಸೇನೆ ಸೇರಿದ ಪುತ್ರ: ಹೆಮ್ಮೆಯ ಕ್ಷಣಕ್ಕೆ ಸಾಕ್ಷಿಯಾದ ಸಮಾರಂಭ

ಇತ್ತೀಚೆಗೆ ಭಾರತೀಯ ಸೇನೆಗೆ ಭಾರತದಿಂದ ಕೆಡೆಟ್‌ಗಳನ್ನು ನಿಯೋಜಿಸಲಾಯಿತು. ಚೆನ್ನೈನಲ್ಲಿ ನಡೆದ ಈ ಅಧಿಕಾರಿಗಳ ತರಬೇತಿ ಅಕಾಡೆಮಿಯ ಸಮಾರಂಭವನ್ನು ಮಾಲ್ಡೀವ್ಸ್‌ನ ರಕ್ಷಣಾ ಪಡೆಗಳ ಮುಖ್ಯಸ್ಥ ಮೇಜರ್ ಜನರಲ್ ಅಬ್ದುಲ್ಲಾ ಶಮಾಲ್ ಅವರು ಪರಿಶೀಲಿಸಿದರು. ಇಲಾಖೆಗೆ ಸಂಬಂಧಪಟ್ಟ ಕಾರ್ಯಗಳು, ಸಮಾರಂಭಗಳು ಒಂದು ಕಡೆಯಾದರೆ, ಇದೇ ಸಮಾರಂಭ ಒಂದು ವಿಶೇಷವಾದ ಕ್ಷಣಕ್ಕೆ ಕೂಡ ಸಾಕ್ಷಿಯಾಯಿತು.

ತಾಯಿ-ಮಗ

ತಾಯಿ-ಮಗ

  • Share this:
ಇತ್ತೀಚೆಗೆ ಭಾರತೀಯ ಸೇನೆಗೆ (Indian Army) ಭಾರತದಿಂದ ಕೆಡೆಟ್‌ಗಳನ್ನು ನಿಯೋಜಿಸಲಾಯಿತು. ಚೆನ್ನೈನಲ್ಲಿ (Chennai) ನಡೆದ ಈ ಅಧಿಕಾರಿಗಳ ತರಬೇತಿ ಅಕಾಡೆಮಿಯ ಸಮಾರಂಭವನ್ನು ಮಾಲ್ಡೀವ್ಸ್‌ನ ರಕ್ಷಣಾ ಪಡೆಗಳ ಮುಖ್ಯಸ್ಥ ಮೇಜರ್ ಜನರಲ್ ಅಬ್ದುಲ್ಲಾ ಶಮಾಲ್ ಅವರು ಪರಿಶೀಲಿಸಿದರು. ಇಲಾಖೆಗೆ ಸಂಬಂಧಪಟ್ಟ ಕಾರ್ಯಗಳು, ಸಮಾರಂಭಗಳು ಒಂದು ಕಡೆಯಾದರೆ, ಇದೇ ಸಮಾರಂಭ ಒಂದು ವಿಶೇಷವಾದ ಕ್ಷಣಕ್ಕೆ ಕೂಡ ಸಾಕ್ಷಿಯಾಯಿತು. ಹೌದು, ಶನಿವಾರ ಭಾರತೀಯ ಸೇನೆಗೆ ಸೇರ್ಪಡೆಗೊಂಡವರಲ್ಲಿ, 27 ವರ್ಷಗಳ ಹಿಂದೆ ತನ್ನ ತಾಯಿಯಂತೆಯೇ (Mother) ಅದೇ ಅಕಾಡೆಮಿಯಲ್ಲಿ ಮಗನೂ ಕೂಡ ನೇಮಕಗೊಂಡಿದ್ದಾನೆ. ಚೆನ್ನೈನ ಸಾರ್ವಜನಿಕ ಸಂಪರ್ಕ ಅಧಿಕಾರಿಯ ಅಧಿಕೃತ ಟ್ವಿಟರ್ ಹ್ಯಾಂಡಲ್ ವಿಶೇಷ ದಿನದ ತಾಯಿ ಮತ್ತು ಮಗನ ಚಿತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ತಾಯಿ ಮತ್ತು ಮಗನ ಸ್ಪೂರ್ತಿ ಕಥೆ ಸದ್ಯ ನೆಟ್ಟಿಗರ ಮನಗೆದ್ದಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಮಕ್ಕಳ ಯಶಸ್ಸನ್ನು ಕಣ್ತುಂಬಿಕೊಳ್ಳುವುದು ಪ್ರತಿ ಪೋಷಕರ ಹೆಬ್ಬಯಕೆ. ಇದೇ ರೀತಿಯ ಖುಷಿಗೆ ಇಲ್ಲೊಬ್ಬರು ಸೇನೆಯ ನಿವೃತ್ತ ಮಹಿಳಾಧಿಕಾರಿ ಸಾಕ್ಷಿಯಾಗಿದ್ದಾರೆ. ತಾವು ಕಾರ್ಯನಿರ್ವಹಿಸುತ್ತಿದ್ದ ಅದೇ ವಿಭಾಗದಲ್ಲಿ ಈಗ ತಮ್ಮ ಮಗ ಕೂಡ ನಿಯೋಜನೆಗೊಂಡಿದ್ದು, ತಾಯಿ ಸಂಭ್ರಮಕ್ಕೆ ಕೊನೆ ಇಲ್ಲದಂತಾಗಿದೆ.

27 ವರ್ಷಗಳ ಹಿಂದೆ ತಾಯಿ ನೇಮಕಗೊಂಡಿದ್ದ ಸೇನೆಗೆ ಮಗ ನೇಮಕ
ನಿವೃತ್ತ ಲೇಡಿ ಆಫೀಸರ್‌ ಮೇಜರ್ ಸ್ಮಿತಾ ಚತುರ್ವೇದಿಗೆ ನಿಜಕ್ಕೂ ಇದು ಅಪರೂಪದ ಸಂಭ್ರಮದ ಕ್ಷಣ. 1995 ರಲ್ಲಿ 27 ವರ್ಷಗಳ ಮೊದಲು ಚೆನ್ನೈನ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಿಂದ ಇವರು ನೇಮಕಗೊಂಡು ಸೇವೆ ಸಲ್ಲಿಸಿದ್ದರು. ಸದ್ಯ ಮಗನೂ ಕೂಡ ಸೇನೆಯಲ್ಲಿ ಸೇವೆ ಸಲ್ಲಿಸುವ ಸಲುವಾಗಿ ನಿಯೋಜನೆಗೊಂಡಿದ್ದಾನೆ.

ಇದನ್ನೂ ಓದಿ:  Real Hero: ಮುಸ್ಲಿಂ ಯುವಕನ ಜೀವ ಉಳಿಸಿದ ಹಿಂದೂ ಯುವಕ! ಮಾನವೀಯತೆಗಿಂತ ಮಿಗಿಲಾದ ಧರ್ಮ ಇಹುದೇನು?

ತಾಯಿ ಕರ್ತವ್ಯ ನಿರ್ವಹಿಸುತ್ತಿದ್ದ ಅದೇ ಅಕಾಡೆಮಿಯಲ್ಲಿ ಮಗನೂ ಅಧಿಕಾರಿಯಾಗಿದ್ದು, ತಾಯಿಗೆ ಹೆಮ್ಮೆಯ ಕ್ಷಣವಾಗಿದೆ. ತಾಯಿ ಮತ್ತು ಮಗನ ಕಥೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನಿಜಕ್ಕೂ ಸ್ಪೂರ್ತಿ ನೀಡುತ್ತದೆ ಎಂದು ಎಲ್ಲರೂ ಕೊಂಡಾಡಿದ್ದಾರೆ.

ಸ್ಮಿತಾ ಚತುರ್ವೇದಿಯ ತರಬೇತಿ ದಿನಗಳ ಫೋಟೋ ಹಂಚಿಕೊಂಡ ಚೆನ್ನೈನ ಡಿಫೆನ್ಸ್ ಪ್ರೊ
ಮೇಜರ್ ಸ್ಮಿತಾ ಚತುರ್ವೇದಿ (ನಿವೃತ್ತ) ಅವರ ತರಬೇತಿ ದಿನಗಳ ಫೋಟೋವನ್ನು ಚೆನ್ನೈನ ಡಿಫೆನ್ಸ್ ಪ್ರೊ. ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ. "ಮೇಜರ್ ಸ್ಮಿತಾ ಚತುರ್ವೇದಿ (ನಿವೃತ್ತ) ಅವರು ಸುಪ್ರಸಿದ್ಧ ಅಕಾಡೆಮಿಯಲ್ಲಿ ಕೆಡೆಟ್ ಆಗಿದ್ದ ಹಳೆಯ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ ಮತ್ತು ತಮ್ಮ ಮಗ ತನ್ನಂತೆಯೇ ಸೈನ್ಯಕ್ಕೆ ಸೇರುವ ಅದ್ಭುತವಾದ ಕನಸನ್ನು ನನಸು ಮಾಡಿಕೊಂಡು ಭಾವಪರವಶರಾಗಿದ್ದಾರೆ" ಎಂದು ಅವರು ವಿಡಿಯೋವನ್ನು ಟ್ವೀಟ್ ಮಾಡುವ ಮೂಲಕ ಹಂಚಿಕೊಂಡಿದೆ.  ಮೇಜರ್ ಸ್ಮಿತಾ ಚತುರ್ವೇದಿ (ನಿವೃತ್ತ), ಅಕಾಡೆಮಿಯಲ್ಲಿನ ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡರು. ಈ ಪೀಳಿಗೆಯು ನಮಗಿಂತ ಮುಂದಿದೆ ಮತ್ತು ಸವಾಲುಗಳನ್ನು ಎದುರಿಸಲು ಸಿದ್ಧವಾಗಿದೆ ಎಂದು ಅವರು ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳಲಾದ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.

ಮೆಚ್ಚುಗೆ ಪಡೆದ ತಾಯಿ-ಮಗನ ಸ್ಪೂರ್ತಿದಾಯಕ ಕಥೆ
ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ ಸಾಕಷ್ಟು ಲೈಕ್ಸ್ ಮತ್ತು ಕಾಮೆಂಟ್ ಗಳಿಸುವ ಮೂಲಕ ನೆಟ್ಟಿಗರ ಮೆಚ್ಚುಗೆ ಪಡೆದುಕೊಂಡಿದೆ. ಹಲವಾರು ಟ್ವಿಟ್ಟರ್ ಬಳಕೆದಾರರು "ಅಭಿನಂದನೆಗಳು" ಎಂದು ಪೋಸ್ಟ್ ಮಾಡಿದ್ದಾರೆ. ಮತ್ತು "ತಾಯಿಯಂತೆ, ಮಗ " ಎಂದು ಹೆಮ್ಮೆಯಿಂದ ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಇದು ಎಲ್ಲರಿಗೂ ಸ್ಪೂರ್ತಿ ತುಂಬುವ ಫೋಟೋ ಮತ್ತು ಸಾಧನೆ ಎಂದಿದ್ದಾರೆ.

ಇದನ್ನೂ ಓದಿ: Love Marriage: ಯುದ್ಧ ಪೀಡಿತ ರಾಷ್ಟ್ರದಲ್ಲಿ ಪ್ರೀತಿ ಅರಳಿತು! ಭಾರತಕ್ಕೆ ಬಂದು ಸಪ್ತಪದಿ ತುಳಿದ ಜೋಡಿ

27 ವರ್ಷಗಳ ಹಿಂದೆ ತಾಯಿ ಮಿಲಿಟರಿ ವೃತ್ತಿಜೀವನವನ್ನು ಪ್ರಾರಂಭಿಸಿದ ಅದೇ ಅಕಾಡೆಮಿಯಿಂದ ಮಗ ಕೂಡ ನಿಯೋಜನೆಗೊಂಡಿರುವುದು ನಿಜಕ್ಕೂ ಹೆಮ್ಮೆ ಪಡುವ ವಿಚಾರವಾಗಿದೆ. ಈ ಸಮಾರಂಭದಲ್ಲಿ ಒಟ್ಟಾರೆ, 125 ಪುರುಷ ಮತ್ತು 41 ಲೇಡಿ ಕೆಡೆಟ್‌ಗಳನ್ನು ಚೆನ್ನೈನ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ಭಾರತೀಯ ಸೇನೆಗೆ ನಿಯೋಜಿಸಲಾಯಿತು.
Published by:Ashwini Prabhu
First published: