ಜೈಪುರ: ಅತ್ತೆ (Mother in Law) ಮತ್ತು ಅಳಿಯನ (Son in Law) ವಿಚಿತ್ರ ಲವ್ ಸ್ಟೋರಿಯೊಂದು (Love Story) ರಾಜಸ್ಥಾನದ (Rajasthan) ಸಿರೋಹಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. 40 ವರ್ಷದ ಅತ್ತೆ ತನ್ನ 27 ವರ್ಷದ ಅಳಿಯನನ್ನು ಪ್ರೀತಿಸುತ್ತಿದ್ದಳು. ಇಬ್ಬರ ನಡುವೆ ಪ್ರೀತಿ ಅರಳಿದ ನಂತರ ಅತ್ತೆ ಮತ್ತು ಅಳಿಯ ಮನೆಯಿಂದ ಪರಾರಿಯಾಗಿದ್ದಾರೆ. ಮೊದಲಿಗೆ ಮಾವನ (Father in Law ಜೊತೆ ಕುಳಿತು ಮದ್ಯ (Alcohal) ಸೇವಿಸಿದ ಅಳಿಯ, ಮಾವ ಪ್ರಜ್ಞೆ ತಪ್ಪಿದ ನಂತರ ಅತ್ತೆಯನ್ನು ಕರೆದುಕೊಂಡು ಓಡಿಹೋಗಿದ್ದಾನೆ. ಬಳಿಕ ಪ್ರಜ್ಞೆ ಬಂದ ವ್ಯಕ್ತಿ ತನ್ನ ಹೆಂಡತಿ ಮತ್ತು ಅಳಿಯ ಕಾಣದೇ ಇರುವುದನ್ನು ಕಂಡು ಗಾಬರಿಯಾಗಿ, ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ತಲೆಮರೆಸಿಕೊಂಡಿರುವ ಅಳಿಯ ಮತ್ತು ಪತ್ನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಈ ವಿಚಿತ್ರ ಪ್ರೇಮ ಪ್ರಕರಣ ಸಿರೋಹಿ ಜಿಲ್ಲೆಯ ಅನದಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿ ಘಟನೆ
ಪ್ರೀತಿ ಕುರುಡು ಎಂದು ಹೇಳಲಾಗುತ್ತದೆ. ಪ್ರೀತಿಸುವವರು ವಯಸ್ಸು, ಸಂಬಂಧಗಳು, ಜಾತಿ, ಧರ್ಮ ಮತ್ತು ಮಿತಿಗಳನ್ನು ನೋಡುವುದಿಲ್ಲ. ಇದೀಗ ಸಿರೋಹಿ ಜಿಲ್ಲೆಯಲ್ಲಿ ಇಂತಹದ್ದೇ ಘಟನೆಯೊಂದು ನಡೆದಿದೆ. ಸಿಯಾಕರ ಹಳ್ಳಿಯಲ್ಲಿ ಅತ್ತೆಯೊಬ್ಬಳು ತನ್ನ ಅಳಿಯನನ್ನು ಪ್ರೀತಿಸುತ್ತಿದ್ದಳು. ಭಾನುವಾರ ಸಿಕ್ಕಿದ್ದೆ ಚಾನ್ಸ್, ಕೂಡಲೇ ಇಬ್ಬರು ಪರಾರಿಯಾಗಿದ್ದಾರೆ. ಮಾವನಿಗೆ ಈ ವಿಷಯ ತಿಳಿದು ಭೂಮಿಯೇ ಕುಸಿದ ಅನುಭವವಾಗಿದೆ. ಸದ್ಯ ಭಾನುವಾರ ಮಾವ ಸಸೂರ್ ರಮೇಶ್ ತನ್ನ ಅಳಿಯ ನಾರಾಯಣ ಜೋಗಿ ವಿರುದ್ಧ ದೂರು ದಾಖಲಿಸಿದ್ದಾರೆ.
ಮಾವನ ಜೊತೆ ಕುಳಿತು ಗುಂಡು ಹಾಕಿದ್ದ ಅಳಿಯ
ದೂರಿನಲ್ಲಿ, ರಮೇಶ್ ಅವರು ತಮ್ಮ ಮಗಳು ಕಿಸ್ನಾಳನ್ನು ನಾರಾಯಣ ಜೋಗಿಗೆ ಮದುವೆ ಮಾಡಿಕೊಟ್ಟಿದ್ದರು. ಮದುವೆಯ ನಂತರ ಮಗಳು ಮತ್ತು ಅಳಿಯ ಇಬ್ಬರು ತಮ್ಮ ಮನೆಯಲ್ಲಿಯೇ ವಾಸಿಸುತ್ತಿದ್ದರು ಎಂದು ತಿಳಿಸಿದ್ದಾರೆ. ಒಂದು ದಿನ ನಾರಾಯಣ್ ಜೊತೆಗೆ ಅಳಿಯ ಮದ್ಯಪಾನ ಮಾಡಿದ್ದಾನೆ. ಇದೇ ಅವಕಾಶವನ್ನು ಬಳಸಿಕೊಂಡ ಅಳಿಯ ಅತ್ತೆಯೊಂದಿಗೆ ಓಡಿ ಹೋಗಿದ್ದಾನೆ.
ಪ್ರಜ್ಞೆಗೊಂಡ ಮಾವನಿಗೆ ಪತ್ನಿ, ಅಳಿಯ ಕಾಣದೇ ಕಕ್ಕಾಬಿಕ್ಕಿ
ಸಂಜೆ ನಾಲ್ಕು ಗಂಟೆಗೆ ರಮೇಶ್ ಎದ್ದು ನೋಡಿದಾಗ ಮನೆಯಲ್ಲಿ ಪತ್ನಿ ಮತ್ತು ಅಳಿಯ ಇರಲಿಲ್ಲ. ಹೀಗಾಗಿ ಇಬ್ಬರಿಗಾಗಿ ಎಲ್ಲಾ ಕಡೆ ರಮೇಶ್ ಮತ್ತು ಅವರ ಮಗಳು ಹುಡುಕಾಟ ನಡೆಸಿದರೂ ಪತ್ತೆಯಾಗಲಿಲ್ಲ. ಕೊನೆಗೆ ಮಾವನಿಗೆ ಸಂಪೂರ್ಣ ವಿಚಾರ ತಿಳಿದುಬಂದಿದೆ. ನಂತರ ಪೊಲೀಸರಿಗೆ ದೂರು ನೀಡಿದ್ದಾರೆ.
ತಲೆಮರೆಸಿಕೊಂಡಿರುವ ಅತ್ತೆಗೆ ಐವರು ಮಕ್ಕಳು
ಈ ಬಗ್ಗೆ ಪ್ರತಿಕ್ರಿಯಿಸಿರುವ ಅಣದಾರ ಪೊಲೀಸ್ ಠಾಣೆಯ ಅಧಿಕಾರಿ ಅಳಿಯ ಅತ್ತೆಯೊಂದಿಗೆ ಓಡಿ ಹೋಗಿರುವುದಾಗಿ ತಿಳಿದುಬಂದಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತಲೆಮರೆಸಿಕೊಂಡಿರುವ ಅತ್ತೆಗೆ ಮೂವರು ಪುತ್ರಿಯರು ಹಾಗೂ ಒಬ್ಬ ಪುತ್ರನಿರುವುದು ಪ್ರಾಥಮಿಕ ತನಿಖೆ ವೇಳೆ ತಿಳಿದುಬಂದಿದೆ. ಅವರಲ್ಲಿ ನಾಲ್ಕು ಜನ ಮಕ್ಕಳಿಗೂ ಮದುವೆಯಾಗಿದೆ. ಹೀಗಿದ್ದರೂ ಅಳಿಯ ತನ್ನ ಅತ್ತೆ ಮತ್ತು ಒಂದು ವರ್ಷದ ಮಗಳೊಂದಿಗೆ ಓಡಿ ಹೋಗಿದ್ದಾನೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Love Affair: ಬಾಯ್ಫ್ರೆಂಡ್ ಜೊತೆ ಸಿಕ್ಕಿಬಿದ್ದ ವಿವಾಹಿತೆ; ಮನೆಯವರ ಮುಂದೆ ಅವನೇ ಬೇಕು ಅಂತ ರಂಪಾಟ!
14ರ ಬಾಲಕನೊಂದಿಗೆ ಎಸ್ಕೇಪ್ ಆಗಿದ್ದ 34ರ ಆಂಟಿ
ಈ ಮುನ್ನ ಆಂಧ್ರಪ್ರದೇಶದ ಗುಡುವಾಡ ಪಟ್ಟಣದ ಗುಡ್ಮೆನ್ ಪೇಟಾ ಎನ್ನುವ ಕಾಲೋನಿಯಲ್ಲಿ, 34 ವರ್ಷದ ಮಹಿಳೆಯೊಬ್ಬಳು ತನ್ನ ಎದುರು ಮನೆಯ 14 ವರ್ಷದ ಅಪ್ರಾಪ್ತ ಬಾಲಕನೊಂದಿಗೆ ಪರಾರಿಯಾಗಿದ್ದಳು. ಬಾಲಕ, ಆಂಟಿ ಮೊಬೈಲ್ ಎರಡು ಸ್ವಿಚ್ಛ್ ಆಫ್ ಆಗಿತ್ತು. ಮಹಿಳೆಯನ್ನು 34 ವರ್ಷದ ಸ್ವಪ್ನಾ ಎಂದು ಗುರುತಿಸಲಾಗಿತ್ತು. ಮದುವೆಯಾಗಿ ನಾಲ್ವರು ಮಕ್ಕಳಿದ್ದರೂ, 8ನೇ ತರಗತಿ ಓದುತ್ತಿದ್ದು ಎದುರು ಮನೆಯ ಬಾಲಕನೊಂದಿಗೆ ಓಡಿ ಹೋಗಿದ್ದಳು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ