Shocking News: ಸ್ವಂತ ಅಪ್ಪನನ್ನೇ ಕೊಲ್ಲಲು ಫೇಸ್​ಬುಕ್​ನಲ್ಲಿ ಹಂತಕರನ್ನು ಬುಕ್ ಮಾಡಿ ಮಗ!

ಪ್ರಕರಣದ ಒಂದು ಹಂತದಲ್ಲಿ ಸ್ವತಃ ಕೊಲೆಗೀಡಾದ ಮಗ ಅಂಕಿತ್‌ನ ವಿಚಾರಣೆ ನಡೆಸಿದ ಪೊಲೀಸರಿಗೆ ಆತ ಮದ್ಯದ ಚಟ ಮತ್ತು ಜೂಜಾಟ ಮತ್ತು ಇತರ ಅಪರಾಧ ಚಟುವಟಿಕೆಗಳು ಪತ್ತೆಯಾಗಿದೆ. ತನ್ನ ಚಟುವಟಿಕೆಗಳಿಗೆ ಹಣ ಕೊಡಲು ನಿರಾಕರಿಸಿದ್ದಾರೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

 • Share this:
  ಸಾಮಾಜಿಕ ಜಾಲತಾಣಗಳಿಂದ ಏನೇನೆಲ್ಲ ಆಗ್ತಿದೆ. ಎಷ್ಟು ಉಪಯೋಗ ಇದೆಯೋ ಅಷ್ಟೇ ಅಪಾಯವೂ ಇದೆ ಎಂಬುದು ಆಗಾಗ ಸಾಬೀತಾಗುತ್ತಲೆ ಇದೆ. ಇತ್ತೀಚಿಗಂತೂ ಉಪಯೋಗಕ್ಕಿಂತ ದುರುಪಯೋಗ ಮಾಡಿಕೊಳ್ತಿರುವವರ ಸಂಖ್ಯೆಯೇ ಹೆಚ್ಚಾಗ್ತಿದೆ. ಮಧ್ಯಪ್ರದೇಶದ ವ್ಯಕ್ತಿಯೊಬ್ಬ ತನ್ನ ಅಪ್ಪನನ್ನೇ ಕೊಲೆ ಮಾಡಿಸಲು ಫೇಸ್‌ಬುಕ್ ಮೂಲಕ ಕೊಲೆಗಾರನನ್ನು ನೇಮಿಸಿಕೊಂಡ ಕರಾಳ ಘಟನೆಯೊಂದು ಇದೀಗ ಬೆಳಕಿಗೆ ಬಂದಿದೆ. ಹಣಕ್ಕಾಗಿ ತನ್ನ 59 ವರ್ಷದ ತಂದೆಯನ್ನು ಕೊಲೆ ಮಾಡಿಸಿರುವ ವ್ಯಕ್ತಿಗೆ ಕೊಲೆ ಮಾಡೋಕೆ ಜನ ಸಿಕ್ಕಿದ್ದು ಫೇಸ್​ಬುಕ್​ನಿಂದ (Facebook) ಎಂಬುದನ್ನು ತಿಳಿದು ಸ್ವತಃ ಪೊಲೀಸರು ಶಾಕ್ (Shocking News) ಆಗಿದ್ದಾರೆ. ಫೇಸ್​ಬುಕ್ ಬಳಸಿ ಸ್ವತಃ ಅಪ್ಪನನ್ನೇ ಕೊಲೆಗೈದ ಈ ಘಟನೆಗೆ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.

  ಮಧ್ಯಪ್ರದೇಶದ ಪಿಚ್ಚೋರ್​​ನಲ್ಲೇ ಈ ಭಯಾನಕ ಘಟನೆ ನಡೆದಿರುವುದು. ಜುಲೈ 21 ರ ಮಧ್ಯರಾತ್ರಿ ಜಿಲ್ಲಾ ಕೇಂದ್ರದಿಂದ 75 ಕಿಮೀ ದೂರದಲ್ಲಿರುವ ಪಿಚೋರ್ ಪಟ್ಟಣದ ತನ್ನ ಮನೆಯ ಕೋಣೆಯಲ್ಲಿ ಮಲಗಿದ್ದಾಗ ಮಹೇಶ್ ಗುಪ್ತಾ ಎಂಬ ವ್ಯಕ್ತಿಯನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ರಾಜೇಶ್ ಸಿಂಗ್ ಚಂದೇಲ್ ತಿಳಿಸಿದ್ದಾರೆ. ಆದರೆ ಈ ಬಂಧನ ಪ್ರಕ್ರಿಯೆ ವೇಳೆ ಆಘಾತಕಾರಿ ಮಾಹಿತಿ ಬಹಿರಂಗಗೊಂಡಿದೆ.

  ಅಪ್ಪನ ಕೊಲೆಯಾಗುವ ವೇಳೆ ಮಗನೂ ಮನೆಯಲ್ಲೇ ಇದ್ದ!
  ಅವರ ತಂದೆಯನ್ನು ಮೂರನೇ ಮಹಡಿಯಲ್ಲಿ ಗುಂಡಿಕ್ಕಿ ಕೊಂದರೆ, ಅವರು ತಮ್ಮ ಮನೆಯ ನೆಲ ಮಹಡಿಯಲ್ಲಿ ಮಲಗಿದ್ದರಿಂದ ಅಪರಾಧದಲ್ಲಿ ಗುಪ್ತಾ ಅವರ ಮಗನ ಪಾತ್ರವಿದೆ ಎಂದು ಪೊಲೀಸರು ಶಂಕಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

  ಇದನ್ನೂ ಓದಿ: Viral Love Story: ಭಾರತ-ಪಾಕ್ ಗಡಿಯನ್ನೂ ಮೀರಿಸಿದ ಹುಡುಗಿಯರ ಲವ್ ಸ್ಟೋರಿ!

  ಜೂಜಾಟ, ಮದ್ಯ ಸೇವನೆಯ ಚಟವಿತ್ತಂತೆ
  ಪ್ರಕರಣದ ಒಂದು ಹಂತದಲ್ಲಿ ಸ್ವತಃ ಕೊಲೆಗೀಡಾದ ಮಗ ಅಂಕಿತ್‌ನ ವಿಚಾರಣೆ ನಡೆಸಿದ ಪೊಲೀಸರಿಗೆ ಆತ ಮದ್ಯದ ಚಟ ಮತ್ತು ಜೂಜಾಟ ಮತ್ತು ಇತರ ಅಪರಾಧ ಚಟುವಟಿಕೆಗಳು ಪತ್ತೆಯಾಗಿದೆ. ತನ್ನ ಚಟುವಟಿಕೆಗಳಿಗೆ ಹಣ ಕೊಡಲು ನಿರಾಕರಿಸಿದ್ದಾರೆ.

  ಇದನ್ನೂ ಓದಿ: Vladimir Putin: ಪುಟಿನ್ ರೀತಿಯೇ ಕಾಣುವ ಇನ್ನೋರ್ವ ವ್ಯಕ್ತಿ? ರಷ್ಯಾದಿಂದ ಹೊಸ ತಂತ್ರ?

  ಅಪ್ಪನ ಮೇಲೆ ಭಾರೀ ಸಿಟ್ಟಿತ್ತಂತೆ
  ಇದೇ ಕಾರಣಕ್ಕೆ ತಂದೆಯ ಮೇಲೆ ಸಿಟ್ಟಿಗೆದ್ದು ಫೇಸ್​ಬುಕ್ ಮೂಲಕ ತಂದೆಯನ್ನು ಕೊಲ್ಲಲು ಹಂತಕರನ್ನು ಹುಡುಕಿ ಬುಕ್ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಮಧ್ಯಪ್ರದೇಶ ಪೊಲೀಸರು ಮಾಹಿತಿ ನೀಡಿದ್ದಾರೆ. 

  ಡಬಲ್‌ ಡೆಕ್ಕರ್ ಬಸ್ಸುಗಳ ಡಿಕ್ಕಿ
  ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇನಲ್ಲಿ ಇಂದು ಡಬಲ್ ಡೆಕ್ಕರ್ ಬಸ್‌ಗಳು ಮುಖಾಮುಖಿ ಡಿಕ್ಕಿಯಾಗಿವೆ. ಪರಿಣಾಮ ಬಸ್‌ನಲ್ಲಿದ್ದ ಎಂಟು ಜನರು ಸಾವನ್ನಪ್ಪಿದ್ದಾರೆ. ಜೊತೆಗೆ ಸುಮಾರು 20 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಿಎಚ್‌ಸಿ ಹೈದರ್‌ಗಢ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಈ ಪೈಕಿ ಮೂವರ ಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸೆಗಾಗಿ ಲಕ್ನೋದ ಟ್ರಾಮಾ ಸೆಂಟರ್‌ಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಲೋನಿಕ್ತ್ರಾ ಪೊಲೀಸ್ ಠಾಣಾ ವ್ಯಾಪ್ತಿಯ ನರೇಂದ್ರಪುರ ಮದ್ರಹಾ ಗ್ರಾಮದ ಬಳಿ ಡಬಲ್ ಡೆಕ್ಕರ್ ಬಸ್ ಮತ್ತೊಂದು ಬಸ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಎರಡೂ ಬಸ್‌ಗಳು ಬಿಹಾರದಿಂದ ದೆಹಲಿಗೆ ತೆರಳುತ್ತಿದ್ದವು ಎನ್ನಲಾಗಿದೆ.

  ಸಾವಿನ ಸಂಖ್ಯೆ ಏರಿಕೆ ಸಾಧ್ಯತೆ

  ಲೋನಿ ಕತ್ರಾ ಪೊಲೀಸ್ ಠಾಣಾ ವ್ಯಾಪ್ತಿಯ ಅಪಘಾತ ಸಂಭವಿಸಿದ್ದು ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಾಯಳುಗಳನ್ನು ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಿದ್ದಾರೆ. ಇನ್ನು ಗಾಯಾಳುಗಳ ಪೈಕಿ ಮೂವರ ಸ್ಥಿತಿ ಗಂಭೀರವಾಗಿದ್ದು, ಮೃತರ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಹೆಚ್ಚಿದೆ. ಸ್ಥಳಕ್ಕೆ ಬಾರಾಬಂಕಿ ಪೋಲೀಸರು ಧಾವಿಸಿದ್ದು ಉನ್ನತಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
  Published by:guruganesh bhat
  First published: