Viral News: ಪತ್ತೆಯಾಯ್ತು 80 ವರ್ಷಗಳ ಹಿಂದೆ ನೆಲದಲ್ಲಿ ಹೂತಿಟ್ಟ ನಿಧಿ!

ನಿಧಿ ಪತ್ತೆ!

ನಿಧಿ ಪತ್ತೆ!

ಬೆಳ್ಳಿಯ ಮೇಣದಬತ್ತಿಗಳು, ಕ್ಯಾಂಡೆಲಾಬ್ರಾಸ್, ಹಾಲಿನ ಪಾತ್ರೆಗಳು, ನಾಣ್ಯಗಳು ಮತ್ತು ಪದಕಗಳು,  ಕೆಲವು ಬೇಟೆಯ ಬಂದೂಕುಗಳು ಮತ್ತು ಹುದುಗಿರುವ ಚಿನ್ನದ ಶಿಲುಬೆಯನ್ನು ಈ ನಿಧಿಯಲ್ಲಿ ಪತ್ತೆಯಾಗಿವೆ.

  • Trending Desk
  • 4-MIN READ
  • Last Updated :
  • New Delhi, India
  • Share this:

    ಹಿಂದೆಲ್ಲಾ ಹಳ್ಳಿಗಳಲ್ಲಿ ಜನರು ಬೆಲೆಬಾಳುವ ವಸ್ತುಗಳನ್ನು ಮತ್ತು ಕೆಲವೊಮ್ಮೆ ದುಡ್ಡು, ಚಿನ್ನಾಭರಣಗಳನ್ನು (Gold) ಅನೇಕ ಕಾರಣಗಳಿಂದಾಗಿ ಭೂಮಿಯಲ್ಲಿ ಹೂತಿಡುತ್ತಿದ್ದರು ಎಂದು ಅನೇಕ ಬಾರಿ ನಾವು ಕೇಳಿರುತ್ತೇವೆ. ಹೌದು, ಹೀಗೆ ಹೂತಿಟ್ಟ ನಂತರ ಮುಂದಿನ ಪೀಳಿಗೆಯವರ ಬಳಿ ಅದನ್ನು ಹುಡುಕಲು ಯಾವುದೇ ಒಂದು ಚಿಕ್ಕ ಸುಳಿವು ಸಹ ಇರುತ್ತಿರಲಿಲ್ಲ. ಕೆಲವೊಮ್ಮೆ ಅಂತೂ ನಮ್ಮ ಪೂರ್ವಜರು ಹೀಗೆ ನಿಧಿಯನ್ನು (Treasure) ಇಂತಹ ಸ್ಥಳದಲ್ಲಿ ಹೂತ್ತಿಟ್ಟಿದ್ದಾರೆ ಅನ್ನೋದು ಸಹ ಪ್ರಸ್ತುತ ಪೀಳಿಗೆಯವರಿಗೆ ಗೊತ್ತಿರುವುದಿಲ್ಲ.


    ಎರಡನೇ ಮಹಾಯುದ್ದದ ಸಂದರ್ಭದಲ್ಲಿ ನಿಧಿ ಹೂತಿಟ್ಟಿದ್ದರು!
    ಎರಡನೇ ಮಹಾಯುದ್ಧದ ಸಮಯದಲ್ಲಿ ತನ್ನ ಕುಟುಂಬವು ಹೂತಿಟ್ಟಿದ ಅಮೂಲ್ಯವಾದ ನಿಧಿಯನ್ನು ಒಬ್ಬ ವ್ಯಕ್ತಿಯು ಕಂಡು ಹಿಡಿದಿದ್ದಾರೆ. 80 ವರ್ಷಗಳ ನಂತರ ಈ ಅದ್ಭುತ ಆವಿಷ್ಕಾರದ ಸುದ್ದಿಯನ್ನು ಕೇಪ್‌ಟೌನ್ ವಿಶ್ವವಿದ್ಯಾಲಯದ ವೆಬ್​ಸೈಟ್​ನಲ್ಲಿ ಪ್ರಕಟಿಸಲಾಗಿದೆ.


    ದೊಡ್ಡ ರಂಧ್ರದಲ್ಲಿ ಇತ್ತು ನಿಧಿ!
    2ನೇ ಮಹಾಯುದ್ಧದ ನಂತರ ಗ್ಲೇಜೆವ್ಸ್ಕಿಅವರು ಕುಟುಂಬದ ನಾಲ್ವರು ಪುತ್ರರು ಪ್ರಪಂಚದ ವಿವಿಧ ಭಾಗಗಳಿಗೆ ಹೋಗಿ ನೆಲೆಸಿದರು. ಆದರೆ ಅವರು ಬಿಟ್ಟುಹೋದ ಸಂಪತ್ತನ್ನು ಅವರು ಎಂದಿಗೂ ಮರೆಯಲಿಲ್ಲ. ಮನೆಯಿಂದ ಹೊರಡುವ ಮೊದಲು ನಾಲ್ವರು ಸಹೋದರರು ಕುಟುಂಬದ ಬೆಳ್ಳಿಯನ್ನು ತಮ್ಮ ಆಸ್ತಿಯಲ್ಲಿ ಮೊಣಕಾಲು ಆಳದ ಒಂದು ದೊಡ್ಡ ರಂಧ್ರದಲ್ಲಿ ಹೂತಿಟ್ಟು ಹೋಗಿದ್ದರು.


    ಅವರ ತಂದೆ ಆಡಮ್ ಪೋಲೆಂಡ್​ನಲ್ಲಿಯೇ ಉಳಿದರು. ಈ ಘಟನೆಯ ನಂತರ 20 ವರ್ಷಗಳ ಕಾಲ ಬದುಕಿದರು. ಆದರೆ ಅವರನ್ನು ಮತ್ತೆ ನೋಡಲು ಆ ಮಕ್ಕಳಿಗೆ ಸಾಧ್ಯವಾಗಲಿಲ್ಲ ಎಂದು ವಿಶ್ವವಿದ್ಯಾಲಯದ ವೆಬ್ಸೈಟ್ ತಿಳಿಸಿದೆ.


    ತಂದೆ ರಚಿಸಿದ ಮ್ಯಾಪ್ ಅನ್ನು ಬಳಸಿಕೊಂಡು ನಿಧಿ ಪತ್ತೆ!


    ಆಡಮ್​ನ ಮೊಮ್ಮಗ ಜಾನ್ ಗ್ಲೇಜೆವ್ಸ್ಕಿ ಅಂತಿಮವಾಗಿ ತನ್ನ ತಂದೆ ಗುಸ್ಟಾವ್ ರಚಿಸಿದ ನಕ್ಷೆಯನ್ನು ಬಳಸಿಕೊಂಡು ಆ ನಿಧಿಯನ್ನು ಕಂಡು ಹಿಡಿದರು. ಅವರು 1989 ರಲ್ಲಿ ಕೈಯಿಂದ ರಚಿಸಿದ ನಕ್ಷೆಯನ್ನು ಪಡೆದರು. ಈ ನಕ್ಷೆಯೊಂದಿಗೆ ಶಸ್ತ್ರಸಜ್ಜಿತರಾದ ಜಾನ್ ಗ್ಲೇಜೆವ್ಸ್ಕಿ ಕುಟುಂಬದ ನಿಧಿಯನ್ನು ಕಂಡು ಹಿಡಿಯುವ ಕೆಲಸವನ್ನು ಶುರು ಮಾಡಿದರು. ಆಗ ಅವರು ತಮ್ಮ ಕುಟುಂಬದ ಹಳೆಯ ಮನೆಗೆ ಭೇಟಿ ನೀಡಿದಾಗ ಅಲ್ಲಿ ನೆಲಮಾಳಿಗೆ ಮಾತ್ರ ಉಳಿದಿರುವುದನ್ನು ಕಂಡುಕೊಂಡರು. ಇದರಿಂದ ಅವರಿಗೆ ನಿಧಿ ಹುಡುಕುವ ಭರವಸೆಗಳು ಸ್ವಲ್ಪ ಮಟ್ಟಿಗೆ ವಿಚಲಿತಗೊಂಡವು.


    ನಿಧಿ ಹುಡುಕುವ ಕೆಲಸದ ಬಗ್ಗೆ ಏನ್ ಹೇಳಿದ್ರು ಗ್ಲೇಜೆವ್ಸ್ಕಿ?


    "ಈ ನಿಧಿಯನ್ನು ಕಂಡು ಹಿಡಿಯುವುದು ನಿಜವಾಗಿಯೂ ಹುಲ್ಲಿನ ಕಡ್ಡಿಯಲ್ಲಿ ಸೂಜಿಯನ್ನು ಹುಡುಕಿದ ಪರಿಸ್ಥಿತಿಯಂತೆ ಇತ್ತು" ಎಂದು ಗ್ಲೇಜೆವ್ಸ್ಕಿ ವಿಶ್ವವಿದ್ಯಾಲಯದ ಉಪನ್ಯಾಸದಲ್ಲಿ ಹೇಳಿದರು. ಅವರು 2019 ರಲ್ಲಿ ಆ ಮನೆಯ ಬಳಿ ಮತ್ತೆ ಹೋಗಿದ್ದು, ಆ ಸ್ಥಳವು ಪೊದೆಗಳಿಂದ ತುಂಬಿತ್ತು. ನೆಲಮಾಳಿಗೆಯು ಮೊದಲಿನಂತೆ ಕಾಣುತ್ತಿರಲಿಲ್ಲ. ಇದರಿಂದಾಗಿ ನಿಧಿಯನ್ನು ಕಂಡು ಹಿಡಿಯುವುದು ಅಸಾಧ್ಯವಾದ ಕೆಲಸವಾಯಿತು.


    ಇದನ್ನೂ ಓದಿ: City Name Change: ಔರಂಗಾಬಾದ್ ಮತ್ತು ಒಸ್ಮಾನಾಬಾದ್‌ ನಗರಗಳ ಮರುನಾಮಕರಣ ಮಾಡಿದ ಕೇಂದ್ರ! ಹೊಸ ಹೆಸರು ಏನು?




    ಆದರೆ ದೃಢನಿಶ್ಚಯದಿಂದ ಗ್ಲೇಜೆವ್ಸ್ಕಿ ಹಾಗೆಯೇ ತಮ್ಮ ಶೋಧನೆ ಕೆಲಸವನ್ನು ಕೈ ಬಿಡಲಿಲ್ಲ. ಸ್ಥಳೀಯರಿಂದ ಸ್ವಲ್ಪ ಸಹಾಯವನ್ನು ಕೇಳಿದರು. 92 ವರ್ಷದ ಶಾಲಾ ಪ್ರಾಂಶುಪಾಲರು ಸಹ ಬಂದರು. ಮೂರು ದಿನಗಳ ಹುಡುಕಾಟದ ನಂತರ ನೆಲಮಾಳಿಗೆ, ಪಕ್ಕದ ಅಂಗಳದ ಗೋಡೆಯ ಬಳಿ ಆಗ ಹೂತಿಟ್ಟಂತಹ ಬೆಳ್ಳಿಯನ್ನು ಕಂಡು ಹಿಡಿಯಲು ಸಾಧ್ಯವಾಯಿತು.


    ಅಪ್ಪ ಏನನ್ನೂ ಹೇಳಿರ್ಲಿಲ್ಲ!


    "ನನ್ನ ತಂದೆ ಏನನ್ನು ಹೂತಿಟ್ಟಿದ್ದಾರೆ ಎಂಬುದರ ಬಗ್ಗೆ ನನಗೆ ಎಂದಿಗೂ ಹೇಳಲಿಲ್ಲ. ನಾನು ಸಹ ಅವರನ್ನು ಇದರ ಬಗ್ಗೆ ಎಂದೂ ಕೇಳಲಿಲ್ಲ ಎಂಬುದನ್ನು ನೆನಸಿಕೊಂಡರೆ ಈಗ ಬೇಸರ ಅನ್ನಿಸುತ್ತದೆ. ಇದು ನಮ್ಮ ತಂದೆಯ ಕಾಲದಲ್ಲಿ ಹೂತಿಟ್ಟ ನಿಧಿಯಾಗಿದ್ದು, ಅದು ತಲೆಮಾರುಗಳ ಹಿಂದಿನದು ಅಂತ ಹೇಳಬಹುದು. ಕೇವಲ ಒಂದು ಟೀಸ್ಪೂನ್ ಅನ್ನು ಮೊದಲು ಕಂಡುಕೊಂಡಿದ್ದನ್ನು ನೋಡಿ ನನಗೆ ಸಂತೋಷವಾಯಿತು. ನಂತರ ಅದಕ್ಕಿಂತ ಹೆಚ್ಚಿನದನ್ನು ನಾನು ಕಂಡುಕೊಂಡೆ" ಎಂದು ಕೇಪ್‌ಟೌನ್ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಗ್ಲೇಜೆವ್ಸ್ಕಿ ಹೇಳಿದರು.


    ಇದನ್ನೂ ಓದಿ: Crime News: ಸ್ನೇಹಿತನ ಎದೆ ಸೀಳಿ ಪ್ರೇಯಸಿಗೆ ಹೃದಯದ ಫೋಟೋ ಕಳುಹಿಸಿದ ಯುವಕ; 'Very Good' ಎಂದ ಯುವತಿ, ಮುಂದೇನಾಯ್ತು?


    ಗ್ಲೇಜೆವ್ಸ್ಕಿ ಬೆಳ್ಳಿಯ ಮೇಣದಬತ್ತಿಗಳು, ಕ್ಯಾಂಡೆಲಾಬ್ರಾಸ್, ಹಾಲಿನ ಪಾತ್ರೆಗಳು, ನಾಣ್ಯಗಳು ಮತ್ತು ಪದಕಗಳು,  ಕೆಲವು ಬೇಟೆಯ ಬಂದೂಕುಗಳು ಮತ್ತು ಹುದುಗಿರುವ ಚಿನ್ನದ ಶಿಲುಬೆಯನ್ನು ಈ ನಿಧಿಯಲ್ಲಿ ಕಂಡುಕೊಂಡರು.

    First published: