• Home
  • »
  • News
  • »
  • national-international
  • »
  • ಕೆಲವರು ಸತ್ತವರ ಮೂಳೆ ತಿಂದರೆ, ಉಳಿದವರು ಪುಟ್ಟ ಮಕ್ಕಳನ್ನು ಮೇಲಿಂದ ಎಸೆಯುತ್ತಾರೆ: ಜಗತ್ತಿನ ಚಿತ್ರವಿಚಿತ್ರ ಆಚರಣೆಗಳು

ಕೆಲವರು ಸತ್ತವರ ಮೂಳೆ ತಿಂದರೆ, ಉಳಿದವರು ಪುಟ್ಟ ಮಕ್ಕಳನ್ನು ಮೇಲಿಂದ ಎಸೆಯುತ್ತಾರೆ: ಜಗತ್ತಿನ ಚಿತ್ರವಿಚಿತ್ರ ಆಚರಣೆಗಳು

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಅವಿವಾಹಿತ ಸ್ತ್ರೀಯ ಕೊಠಡಿಯಲ್ಲಿ ಇವರು ರಾತ್ರಿ ಕಳೆಯಬೇಕು. ಸಿಕ್ಕಿಬಿದ್ದರೆ ಅವರು ಆಕೆಯನ್ನು ವಿವಾಹ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ತಂದೆಯ ಹೊಲದಲ್ಲಿ ಶಿಕ್ಷೆಯ ರೂಪದಲ್ಲಿ ಕೆಲಸ ಮಾಡಬೇಕು.

  • Share this:

ಪ್ರಪಂಚವು ತನ್ನೊಳಗೆ ಅಪರಿಮಿತ ವಿಸ್ಮಯಗಳನ್ನು ಒಳಗೊಂಡಿದ್ದು ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳು ಹಾಗೂ ಸಾಮಾಜಿಕ ತಾಣಗಳ ಮೂಲಕ ಅವು ಹೊರಲೋಕಕ್ಕೆ ಬರುತ್ತಿವೆ. ವಿಶ್ವದ ಕೆಲವು ಭಾಗಗಳಲ್ಲಿ ನಡೆಯುವ ಕೆಲವೊಂದು ಆಚರಣೆಗಳು ನಮ್ಮನ್ನು ದಿಗ್ಭ್ರಮೆಗೊಳಪಡಿಸುತ್ತವೆ ಹಾಗೂ ಇಂತಹ ಆಚರಣೆಗಳು ಇನ್ನೂ ಇವೆಯೇ ಎಂದು ನಿಬ್ಬೆರಗಾಗಿಸುತ್ತವೆ. ಹಾಗಾದರೆ ಆ ಆಚರಣೆಗಳೇನು ಮತ್ತು ನಮ್ಮ ದೇಶಕ್ಕೆ ಹೋಲಿಸಿದಾಗ ಇವುಗಳು ಭಿನ್ನವಾಗಿ ಹೇಗೆ ಕಾಣುತ್ತವೆ ಎಂಬುದನ್ನು ತಿಳಿದುಕೊಳ್ಳೋಣ.


ಭೂತಾನ್‌ನ ರಾತ್ರಿಬೇಟೆ


ಹಿಮಾಲಯದ ಪೂರ್ವಭಾಗಗಳಲ್ಲಿ ಬೊಮೆನಾ ಹೆಸರಿನ ಯುವಕರು ಪ್ರೀತಿಯನ್ನು ಪಡೆಯಲು ಹಾಗೂ ವಿವಾಹ ಮಾಡಿಕೊಳ್ಳುವ ಸಲುವಾಗಿ ವಿಚಿತ್ರ ರೀತಿಯ ಬೇಟೆಯನ್ನು ಆಡುತ್ತಾರೆ. ಅವಿವಾಹಿತ ಸ್ತ್ರೀಯ ಕೊಠಡಿಯಲ್ಲಿ ಇವರು ರಾತ್ರಿ ಕಳೆಯಬೇಕು. ಸಿಕ್ಕಿಬಿದ್ದರೆ ಅವರು ಆಕೆಯನ್ನು ವಿವಾಹ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ತಂದೆಯ ಹೊಲದಲ್ಲಿ ಶಿಕ್ಷೆಯ ರೂಪದಲ್ಲಿ ಕೆಲಸ ಮಾಡಬೇಕು.


ಇರುವೆಗಳ ಗ್ಲೌಸ್ ಧರಿಸುವುದು


ಅಮೆಜೋನಿಯನ್ ಯುವಕರು ವಯಸ್ಸಿಗೆ ಬಂದಾಗ ಮಾರಣಾಂತಿಕ ಬುಲೆಟ್ ಇರುವೆಗಳಿಂದ ತುಂಬಿರುವ ಕೈಗವಸನ್ನು ಧರಿಸಿ ನೃತ್ಯ ಮಾಡಬೇಕು


ಥೈಪೂಸಮ್


ದಕ್ಷಿಣ ಭಾರತ ಮತ್ತು ಆಗ್ನೇಯ ಏಷ್ಯಾದಲ್ಲಿ ಹಿಂದುಗಳಿಂದ ಆಚರಿಸಲಾದ ಥೈಪೂಸಮ್ ಹಬ್ಬವು ದುಷ್ಟಶಕ್ತಿಯ ಮೇಲೆ ಸುಬ್ರಹ್ಮಣ್ಯ ಸ್ವಾಮಿಯ ವಿಜಯ ದ ಸಂಕೇತವಾಗಿ ಆಚರಿಸುತ್ತದೆ. ಭಕ್ತರು ತೀಕ್ಷ್ಣವಾದ ವಸ್ತುಗಳನ್ನು ದೇಹಕ್ಕೆ ಚುಚ್ಚಿ ಬೆನ್ನಿಗೆ ಕೊಕ್ಕೆ ಸಿಕ್ಕಿಸಿಕೊಂಡು ಭಾರವಾದ ವಾಹನವನ್ನು ಎಳೆಯುತ್ತಾರೆ.


ವಿವಾಹದ ನಂತರ ಸ್ನಾನಗೃಹ ನಿಷಿದ್ಧ


ಇಂಡೋನೇಷ್ಯಾದ ಟೈಡೋಂಗ್ ಸಮುದಾಯದ ವಿವಾಹಿತ ಜೋಡಿಗಳು ತಮ್ಮ ವಿವಾಹದ ಮೂರು ದಿನಗಳವರೆಗೆ ಸ್ನಾನಗೃಹವನ್ನು ಬಳಸುವಂತಿಲ್ಲ. ನಿಯಮವನ್ನು ಉಲ್ಲಂಘಿಸಿದರೆ ಅಪಶಕುನವೆಂದು ಪರಿಗಣಿಸಲಾಗುತ್ತದೆ.


ಇದನ್ನೂ ಓದಿ: ವಿಶ್ವದ ಅತ್ಯಂತ ವಿಶೇಷ ಸೇತುವೆಗಳಿವು: ಒಂದಕ್ಕಿಂತ ಒಂದು ವಿಭಿನ್ನ... ನೀವು ನೋಡಲೇಬೇಕು!

ಜಪಾನ್‌ನ ಶಿಶ್ನದ ಹಬ್ಬ


ಕನಾಮಾರ ಮತ್‌ಸೂರಿ ಎಂದೇ ಕರೆಯಲಾದ ಈ ಹಬ್ಬದಲ್ಲಿ ಭಕ್ತರು ಶಿಶ್ನದ ಆಕಾರದ ದೊಡ್ಡ ಪ್ರತಿಮೆಯನ್ನು ಮೆರವಣಿಗೆಯಲ್ಲಿ ಕೊಂಡೊಯ್ಯುತ್ತಾರೆ. ಈ ಹಬ್ಬದ ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಲೈಂಗಿಕ ಕಾರ್ಯಕರ್ತರು ಪಾಲ್ಗೊಳ್ಳುತ್ತಾರೆ.


ಮೃತಶರೀರದ ಸೇವನೆ


ಅಮೆಜಾನ್ ಅರಣ್ಯಗಳಲ್ಲಿ ವಾಸವಾಗಿರುವ ಯನೊಮಾಮಿ ಬುಡಕಟ್ಟು ಜನಾಂಗದವರು ಮೃತ ಶರೀರದ ಅಸ್ಥಿ ಹಾಗೂ ಮೂಳೆಯ ಪುಡಿಯನ್ನು ಸೂಪ್‌ನಲ್ಲಿ ಬೆರೆಸಿ ಮೃತ ವ್ಯಕ್ತಿಯ ಕುಟುಂಬ ಸದಸ್ಯರು ಸೇವಿಸುತ್ತಾರೆ


ಫಮದಿಹಾನ, ಮಡಗಾಸ್ಕರ್


ಮೃತಶರೀರವನ್ನು ಸಮಾಧಿಯಿಂದ ಹೊರತೆಗೆದು ಅದನ್ನು ತಾಜಾ ಬಟ್ಟೆಯಲ್ಲಿ ಸುತ್ತಿ ಪುನಃ ಹೂಳುವುದನ್ನು ಮಡಗಾಸ್ಕರ್‌ನ ಪ್ರಜೆಗಳು ಅನುಸರಿಸುತ್ತಾರೆ.


ಅಂಬೆಗಾಲಿಡುವ ಮಗುವನ್ನು ಎಸೆಯುವುದು


ಗುಜರಾತ್, ಮಹಾರಾಷ್ಟ್ರ ಹಾಗೂ ಕರ್ನಾಟಕದ ಕೆಲವು ಭಾಗಗಳಲ್ಲಿ ಅಂಬೆಗಾಲಿಡುವ ಮಗುವನ್ನು ದೇವಾಲಯಗಳ ಮೇಲ್ಛಾವಣಿಯಿಂದ ಎಸೆಯಲಾಗುತ್ತದೆ ಮತ್ತು ಕೆಳಗೆ ನಿಂತಿರುವ ಭಕ್ತರು ಕಂಬಳಿಯ ಸಹಾಯದಿಂದ ಮಗುವನ್ನು ಹಿಡಿಯುತ್ತಾರೆ. ಮಗುವಿಗೆ ಅದೃಷ್ಟ ತರುವ ಈ ಸಂಪ್ರದಾಯವನ್ನು ಹಿಂದಿನಿಂದಲೂ ಆಚರಿಸಲಾಗುತ್ತಿದೆ.


ಹಲ್ಲುಗಳನ್ನುಉಜ್ಜುವುದು


ನಮ್ಮಲ್ಲಿ ಹೆಚ್ಚಿನವರು ಉಗುರುಗಳನ್ನು ಉಜ್ಜಿದರೆ ಬಾಲಿಯಲ್ಲಿರುವ ಜನರು ವಿವಾಹದ ತಯಾರಿಗಾಗಿ ಹಲ್ಲುಗಳನ್ನು ಉಜ್ಜಿಸಿಕೊಳ್ಳುತ್ತಾರೆ. ಈ ಪದ್ಧತಿ ಅತ್ಯಂತ ನೋವಿನ ಅನುಭವವನ್ನು ನೀಡುತ್ತದೆ.
ಗೆರೆವೊಲ್ ಹಬ್ಬ


ವೊಡಾಬೊ ಬುಡಕಟ್ಟು ಜನಾಂಗದ ಪುರುಷರು ಉಡುಗೆ ತೊಡುಗೆಗಳನ್ನು ಧರಿಸಿ ಮಹಿಳೆಯ ಮುಂದೆ ಕಾಣಿಸಿಕೊಳ್ಳಬೇಕು. ನೃತ್ಯ ಸ್ಪರ್ಧೆಯಲ್ಲಿ ಪುರುಷರು ಭಾಗವಹಿಸಬೇಕು. ಸುಂದರ ಹಾಗೂ ಉತ್ತಮವಾಗಿ ನರ್ತಿಸಿದ ಪುರುಷರನ್ನು ವಿಜಯಿಗಳಾಗಿ ಘೋಷಿಸಲಾಗುತ್ತದೆ.

Published by:Soumya KN
First published: