ಕೊರೋನಾದಿಂದ ಸಂಕಷ್ಟ ಎದುರಾಗಿದೆ, ಜಿಎಸ್​​ಟಿಯನ್ನು ಆಯಾ ರಾಜ್ಯಗಳಿಗೆ ಬಿಟ್ಟುಕೊಡಿ; ಮೋದಿಗೆ ಸಿಎಂಗಳ ಆಗ್ರಹ

ಒಂದು ಕಟ್ಟದಲ್ಲಿ ಕೊರೋನಾ ವೈರಸ್​ ಪತ್ತೆ ಆದರೆ, ಇಡೀ ಕಟ್ಟಡವನ್ನೆ ಸೀಲ್​ಡೌನ್​ ಮಾಡಲಾಗುತ್ತಿತ್ತು. ಆದರೆ, ಆ ರೀತಿ ಮಾಡಬೇಡಿ ಎಂದು ಮೋದಿ ಸಿಎಂಗಳಿಗೆ ಸಲಹೆ ನೀಡಿದ್ದಾರೆ.

ವಿಡಿಯೋ ಕಾನ್ಫರೆನ್ಸ್​ನಲ್ಲಿ ಮೋದಿ ಜೊತೆ ಯಡಿಯೂರಪ್ಪ ಚರ್ಚೆ

ವಿಡಿಯೋ ಕಾನ್ಫರೆನ್ಸ್​ನಲ್ಲಿ ಮೋದಿ ಜೊತೆ ಯಡಿಯೂರಪ್ಪ ಚರ್ಚೆ

  • Share this:
ಬೆಂಗಳೂರು (ಏ.28): ಕೊರೋನಾ ವೈರಸ್​ ನಿಯಂತ್ರಣಕ್ಕೆ ಘೋಷಿಸಲಾದ ಲಾಕ್​ಡೌನ್​ 34 ದಿನಗಳನ್ನು ಪೂರೈಸಿದೆ. ಲಾಕ್​ಡೌನ್​ನಿಂದ ಆದಾಯ ತೀವ್ರ ಕುಸಿತ ಕಂಡಿದ್ದು, ಎಲ್ಲ ರಾಜ್ಯಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಹೀಗಾಗಿ, ಆಯಾ ರಾಜ್ಯಗಳ ಪಾಲಿನ ಜಿಎಸ್​ಟಿಯನ್ನು ಅವುಗಳಿಗೆ ಬಿಟ್ಟುಕೊಡಿ ಎಂದು ಕೆಲ ರಾಜ್ಯಗಳ ಸಿಎಂಗಳು ಪ್ರಧಾನಿ ನರೇಂದ್ರ ಮೋದಿ ಬಳಿ ಒತ್ತಾಯ ಮಾಡಿದ್ದಾರೆ.

ಲಾಕ್​ಡೌನ್​ ಹಾಗೂ ಕೊರೋನಾ ವಿಚಾರದ ಬಗ್ಗೆ ಮಾಹಿತಿ ಪಡೆಯಲು ಮೋದಿ ಅವರು ಸಿಎಂಗಳ ಜೊತೆ ಸಭೆ ನಡೆಸಿದ್ದರು. ಈ ವೇಳೆ ಪಂಜಾಬ್, ಕೇರಳ, ದೆಹಲಿ ಮತ್ತಿತರ ರಾಜ್ಯಗಳ ಸಿಎಂಗಳು 2020ರ ಅಂತ್ಯದವರೆಗೂ ಜಿಎಸ್​ಟಿಯನ್ನು ಆಯಾ ರಾಜ್ಯಗಳಿಗೇ ಬಿಟ್ಟುಕೊಡಿ ಎನ್ನುವ ಬೇಡಿಕೆ ಇಟ್ಟಿದ್ದಾರೆ.

“ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ ನೆರವಿನ ಅಗತ್ಯವಿದೆ. ಸೇವಾ ಕ್ಷೇತ್ರಗಳಿಗೆ ಹೆಚ್ಚಿನ‌ ಪರಿಹಾರ ಬೇಕಾಗಿದೆ. ಸಂಪನ್ಮೂಲದ‌ ಕೊರತೆ ಎದುರಿಸುತ್ತಿರುವ ರಾಜ್ಯಗಳಿಗೆ ಇದು ಅನಿವಾರ್ಯ,” ಎಂದು ಸಿಎಂಗಳು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಲಾಕ್​​ಡೌನ್​ ಮಧ್ಯೆಯೇ ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಲಕ್ಷ ಮೌಲ್ಯದ ಗಂಧದ ಮರ ಕದ್ದೊಯ್ದ ಕಳ್ಳರು

ಸಲಹೆ ನೀಡಿದ ಮೋದಿ:

ಒಂದು ಕಟ್ಟದಲ್ಲಿ ಕೊರೋನಾ ವೈರಸ್​ ಪತ್ತೆ ಆದರೆ, ಇಡೀ ಕಟ್ಟಡವನ್ನೆ ಸೀಲ್​ಡೌನ್​ ಮಾಡಲಾಗುತ್ತಿತ್ತು. ಆದರೆ, ಆ ರೀತಿ ಮಾಡಬೇಡಿ ಎಂದು ಮೋದಿ ಸಿಎಂಗಳಿಗೆ ಸಲಹೆ ನೀಡಿದ್ದಾರೆ.

“ಒಬ್ಬರಿಗೆ ಕೊರೋನಾ ಪತ್ತೆಯಾದರೆ ಇಡೀ ಬಿಲ್ಡಿಂಗ್ ಸೀಲ್ ಡೌನ್ ಮಾಡಬೇಡಿ. ಅವರ ಸಂಪರ್ಕದಲ್ಲಿರುವ ವ್ಯಕ್ತಿಗಳನ್ನು ಮಾತ್ರ ಕ್ವಾರಂಟೈನ್ ಮಾಡಿ. ಇದರಿಂದ ಕಚೇರಿ ಕೆಲಸಕ್ಕೆ ತೆರಳುವವರಿಗೆ ಸಮಸ್ಯೆ ಆದೀತು. ಆರ್ಥಿಕ ಚಟುವಟಿಕೆ ಚುರುಕುಗೊಳಿಸುವ ದೃಷ್ಟಿಯಲ್ಲಿ ಸೀಲ್ ಡೌನ್ ಬೇಡ,” ಎಂದು ಮೋದಿ ಹೇಳಿದ್ದಾರೆ.
First published: