ಬಸ್ನಲ್ಲಿ (Bus) ಪ್ರಯಾಣ (Travel) ಮಾಡೊದರೆಂದರೆ ಬಹುತೇಕರಿಗೆ ಆರಾಮದಾಯಕ ಆಗಿರೋದಿಲ್ಲ. ವಾಂತಿ (Vomiting) ಬಂದತಾಗುವುದು, ತಲೆ ತಿರುಗುವುದು ಹೀಗೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ದುಡ್ಡು ಇದ್ದವರು ವಿಮಾನದಲ್ಲಿ (Flight) ಪ್ರಯಾಣಿಸುತ್ತಾರೆ, ಅದೇ ಮಧ್ಯಮ ವರ್ಗದವರು (Middle class) ಹೆಚ್ಚಾಗಿ ರೈಲಿನಲ್ಲಿ (Train) ಪ್ರಯಾಣ ಬೆಳೆಸಲು ಬಯಸುತ್ತಾರೆ. ರೈಲಿನಲ್ಲಿ ಪ್ರಯಾಣ ಮಾಡೋದೆಂದರೆ ಕೆಲವರಿಗೆ ಇಷ್ಟವಾಗುತ್ತದೆ, ಇನ್ನು ಕೆಲವರಿಗೆ ಇಷ್ಟವಾಗೋದಿಲ್ಲ. ರೈಲಿನ ಪ್ರಯಾಣವು ಆರಾಮದಾಯಕವೂ (Comfortable) ಆಗಿರುತ್ತದೆ ಜೊತೆಗೆ ಕಡಿಮೆ ಖರ್ಚಿನದ್ದೂ (Less expensive) ಆಗಿರುತ್ತದೆ. ರಾತ್ರಿ ಹೊತ್ತಿನಲ್ಲಿ ರೈಲಿನಲ್ಲಿ ಪ್ರಯಾಣ ಮಾಡುವಾಗ ಬೋರ್ (Bore) ಆದಾಗ ಕೆಲವರು ಮೊಬೈಲ್ (Mobile) ನಲ್ಲಿ ಲೌಡ್ ಸ್ಪೀಕರ್ (Loud Speaker) ಇಟ್ಟು ಹಾಡು (Song) ಕೇಳುತ್ತಿರುತ್ತಾರೆ ಆದರೆ ಇದು ಕೆಲವರಿಗೆ ಕಿರಿ ಕಿರಿ ಉಂಟು ಮಾಡುತ್ತದೆ. ಅಲ್ಲದೆ ಕೆಲವರು ರಾತ್ರಿ ಪ್ರಯಾಣದ ಸಂದರ್ಭದಲ್ಲಿ ಮೊಬೈಲ್ನಲ್ಲಿ ಏರಿದ ಧ್ವನಿಯಲ್ಲಿ ಮಾತನಾಡುತ್ತಿರುತ್ತಾರೆ. ಆದರೆ ಪ್ರಯಾಣಿಕರ ಆರಾಮದಾಯಕ ಪ್ರಯಾಣಕ್ಕಾಗಿ ಭಾರತೀಯ ರೈಲ್ವೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಹೊಸ ಮಾರ್ಗಸೂಚಿ ಬಿಡುಗಡೆ
ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣವನ್ನು ಖಾತರಿಪಡಿಸುವ ಉದ್ದೇಶದಿಂದ ಭಾರತೀಯ ರೈಲ್ವೆ ಹೊಸದಾಗಿ ಪ್ರಯಾಣಿಕ ಸ್ನೇಹಿ ಮಾರ್ಗಸೂಚಿಗಳನ್ನು ಹೊರಡಿಸಿದೆ. ಇದು ಪ್ರಯಾಣಿಕರಿಗೆ ರಾತ್ರಿ ಹೊತ್ತಿನಲ್ಲಿ ಆರಾಮದಾಯಕ ಪ್ರಯಾಣಕ್ಕೆ ಸಹಕಾರಿಯಾಗಲಿದೆ. ಈ ಮಾರ್ಗಸೂಚಿಯ ಪ್ರಕಾರ ಪ್ರಯಾಣಿಕರು ದೂರು ನೀಡಿದರೆ ಸಾಕು, ಆ ಸಮಸ್ಯೆ ಕೂಡಲೇ ಪರಿಹರಿಸುವ ಜವಾಬ್ದಾರಿ ರೈಲಿನಲ್ಲಿರುವ ಸಿಬ್ಬಂದಿಯದ್ದಾಗಿರುತ್ತದೆ.
ರೈಲಿನಲ್ಲಿರುವ ರೈಲ್ವೆ ತಪಾಸಣೆ ಸಿಬ್ಬಂದಿ, ಆರ್ಪಿಎಫ್, ಎಲೆಕ್ಟ್ರಿಷಿಯನ್, ಅಡುಗೆ ಮತ್ತು ನಿರ್ವಹಣೆ ಸಿಬ್ಬಂದಿ ಈ ಜವಾಬ್ದಾರಿಯನ್ನು ಹೊಂದಿರುತ್ತಾರೆ ಎಂದು ರೈಲ್ವೆ ತಿಳಿಸಿದೆ.
ಇದನ್ನೂ ಓದಿ: Private Jet: ಖಾಸಗಿ ಜೆಟ್ ಪ್ರಯಾಣದ ಪೇಚಾಟದ ಪ್ರಸಂಗಗಳು! ಈ ಫ್ಲೈಟ್ ಅಟೆಂಡೆಂಟ್ ಹೇಳಿದ್ದೆಲ್ಲಾ ಆಗುತ್ತಾ?
ರಾತ್ರಿ 10 ಗಂಟೆಯ ನಂತರ ಪ್ರಯಾಣಿಕರು ಮೊಬೈಲ್ನಲ್ಲಿ ಗಟ್ಟಿ ಧ್ವನಿಯಲ್ಲಿ ಮಾತನಾಡುವಂತಿಲ್ಲ. ಒಂದು ವೇಳೆ ಮಾತನಾಡುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ರೈಲ್ವೆ ಸಚಿವಾಲಯ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಈ ಷರತ್ತುಗಳ ನಡುವೆಯೂ 60 ವರ್ಷ ಮೇಲಿನ ಹಿರಿಯ ನಾಗರಿಕರು, ಅಂಗವಿಕಲರು ಮತ್ತು ಒಂಟಿ ಮಹಿಳಾ ಪ್ರಯಾಣಿಕರಿಗೆ ರೈಲ್ವೆ ಸಿಬ್ಬಂದಿ ಅಗತ್ಯ ನೆರವು ನೀಡುತ್ತಾರೆ.
ಹೊಸ ಮಾರ್ಗಸೂಚಿಗಳ ಕುರಿತು ರೈಲ್ವೆ ವಲಯ ಮಟ್ಟದಲ್ಲಿ, ಪ್ರಯಾಣಿಕರಿಗೆ ಜಾಗೃತಿ ಮೂಡಿಸಬೇಕು. ರೈಲಿನಲ್ಲಿ ಏರಿದ ಧ್ವನಿಯಲ್ಲಿ ಮೊಬೈಲ್ನಲ್ಲಿ ಮಾತನಾಡದಂತೆ ಹಾಗೂ ಇಯರ್ ಫೋನ್ ಇಲ್ಲದೆ ಸಂಗೀತ ಕೇಳದಂತೆ ಪ್ರಯಾಣಿಕರರಿಗೆ ಸಲಹೆಗಳನ್ನು, ಟಿಕೆಟ್ ಪರಿಶೀಲಕರು ಮತ್ತು ಇತರ ರೈಲ್ವೆ ಸಿಬ್ಬಂದಿ ನೀಡಬೇಕು ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.
ಆರಾಮದಾಯಕ ರೈಲಿನ ಪ್ರಯಾಣ
ಬಸ್ ಪ್ರಯಾಣಕ್ಕೆ ಹೋಲಿಸಿದರೆ ರೈಲಿನ ಪ್ರಯಾಣ ಬಹಳ ಆರಾಮದಾಯಕವಾಗಿರುತ್ತದೆ. ನಿಮಗೆ ಬೇಕೆಂದಾಗ ರೈಲಿನಲ್ಲಿ ಅತ್ತಿಂದಿತ್ತ ಓಡಾಡಬಹುದು, ಟೀ, ಕಾಫಿ ತಿಂಡಿ ಎಲ್ಲಾ ನೀವು ಕೂತಿರುವಲ್ಲಿಗೇ ಬರುತ್ತಿರುತ್ತದೆ. ಶೌಚಾಲಯಕ್ಕೂ ಹೋಗಬಹುದು. ಹಾಗಾಗಿ ವಯಸ್ಸಾದವರಿಗಂತೂ ರೈಲು ಪ್ರಯಾಣ ಸೂಕ್ತವಾಗಿದೆ. ಫ್ಯಾಮಿಲಿ ಜೊತೆ ಪ್ರವಾಸಕ್ಕೆ ಹೋಗುವಾಗ ಹೆಚ್ಚಿನವರು ರೈಲನ್ನೇ ಆಯ್ಕೆ ಮಾಡುತ್ತಾರೆ. ರಾತ್ರಿ ಹೊತ್ತಿನಲ್ಲಿ ಪ್ರಯಾಣ ಮಾಡುವುದಾದರೆ ಆರಾಮವಾಗಿ ಮಲಗಿಕೊಂಡು ಹೋಗಬಹುದು.
ಇದನ್ನೂ ಓದಿ: Holiday Plan: ಫ್ಯಾಮಿಲಿ ಜೊತೆ ಈ ಪ್ಲೇಸ್ಗಳಿಗೆ ಟ್ರಿಪ್ ಹೋಗಿ - ಎಂಜಾಯ್ ಮಾಡಿ
ಆದ್ದರಿಂದ ರೈಲ್ವೆ ಸಚಿವಾಲಯ ಇಂತಹ ಮಾರ್ಗಸೂಚಿಗಳನ್ನು ಹೊರಡಿಸಿರುವುದರಿಂದ ಪ್ರಯಾಣಿಕರಿಗೆ ಮತ್ತಷ್ಟು ಆರಾಮದಾಯಕವಾಗಿ ರೈಲಿನಲ್ಲಿ ಪ್ರಯಾಣ ಬೆಳೆಸಬಹುದಾಗಿದೆ. ನೀವೂ ರೈಲಿನಲ್ಲಿ ಇಂತಹ ಸಮಸ್ಯೆಗಳು ಎದುರಾದರೆ ನೀವು ಕೂಡಲೇ ಸಂಬಂಧಪಟ್ಟವರಿಗೆ ದೂರು ನೀಡಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ