Mayawati: ಉತ್ತರಪ್ರದೇಶ ಚುನಾವಣೆಗೂ ಮುನ್ನವೇ ಮುರಿದು ಬೀಳಲಿದೆಯಾ ಬಿಎಸ್​ಪಿ ಪಕ್ಷ?; ಶಾಸಕರಿಂದ ಪ್ರತ್ಯೇಕ ಪಕ್ಷದ ಕೂಗು!

ಕಳೆದ ವರ್ಷ ಐದು ಶಾಸಕರಾದ, ಅಸ್ಲಂ ಚೌಧರಿ, ಅಸ್ಲಂ ರೈನಿ, ಮುಜ್ತಾಬಾ ಸಿದ್ದಿಕಿ, ಹಕಮ್ ಲಾಲ್ ಬೈಂಡ್ ಮತ್ತು ಗೋವಿಂದ್ ಜಾದವ್ - ಅಖಿಲೇಶ್ ನೇತೃತ್ವದ ಸಮಾಜವಾದಿ ಪಕ್ಷಕ್ಕೆ ಸೇರಿದ್ದರು. ಬಿಎಸ್​ಪಿ ಇಂತಹ ದೊಡ್ಡ ಹಿನ್ನಡೆ ಎದುರಿಸಿದ್ದು ಇದೇ ಮೊದಲು.

ಬಿಎಸ್​ಪಿ ನಾಯಕಿ ಮಾಯಾವತಿ.

ಬಿಎಸ್​ಪಿ ನಾಯಕಿ ಮಾಯಾವತಿ.

 • Share this:
  ಕಾನ್ಪುರ (ಜೂನ್ 15); ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ 2022ರಲ್ಲಿ ನಡೆಯಲಿದ್ದು, ಎಲ್ಲಾ ಪಕ್ಷಗಳೂ ಈಗಾಗಲೇ ಚುನಾವಣೆ ಕಣಕ್ಕೆ ಸಿದ್ಧತೆ ಆರಂಭಿಸಿವೆ. ಬಿಜೆಪಿ ಪಕ್ಷದಲ್ಲಿ ಬಿರುಸಿನ ಚಟುವಟಿಕೆಗಳು ಆರಂಭವಾಗಿವೆ. ಆದರೆ, ಈ ನಡುವೆ ಮಾಯಾವತಿ ಅವರ ಬಹುಜನ ಸಮಾಜವಾದಿ ಪಕ್ಷವು ಅತಿದೊಡ್ಡ ಬಿಕ್ಕಟ್ಟೊಂದನ್ನು ಎದುರಿಸುತ್ತಿದೆ ಎಂದು ವರದಿಯಾಗಿದೆ. ಸುಮಾರು 12 ಬಂಡಾಯ ಶಾಸಕರು ವಿಧಾನಸಭಾ ಸ್ಪೀಕರ್‌ಗೆ ಸದನದೊಳಗೆ ತಮಗೆ ‘ಪ್ರತ್ಯೇಕ ಪಕ್ಷ’ ಎಂದು ಮಾನ್ಯತೆ ನೀಡುವಂತೆ ಮನವಿ ಸಲ್ಲಿಸಲು ಮುಂದಾಗಿದ್ದರೆ, ಮತ್ತೆ ಕೆಲವು ಶಾಸಕರು ಅಖಿಲೇಶ್ ಯಾದವ್ ನೇತೃತ್ವದ ಸಮಾಜವಿ ಪಕ್ಷದ ಕದ ತಟ್ಟುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಗಳು ಮಾಯಾವತಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ ಎನ್ನಲಾಗಿದೆ.

  ಸುಮಾರು ಒಂಬತ್ತು ಶಾಸಕರು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರನ್ನು ಮಂಗಳವಾರ ಭೇಟಿಯಾದ ನಂತರದ ಈ ಬೆಳವಣಿಗೆಗಳು ಬೆಳಕಿಗೆ ಬಂದಿದೆ. ಉತ್ತರಪ್ರದೇಶ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಈ ಎಲ್ಲಾ ಶಾಸಕರು ಸಮಾಜವಾದಿ ಪಕ್ಷಕ್ಕೆ ಪಕ್ಷಾಂತರವಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

  ದೇಶದ ಅತಿದೊಡ್ಡ ರಾಜ್ಯ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಉತ್ತರಪ್ರದೇಶದ ವಿಧಾನಸಭೆಯಲ್ಲಿ ಬಹುಜನ ಸಮಾಜವಾದಿ ಪಕ್ಷಕ್ಕೆ 18 ಶಾಸಕರು ಇದ್ದರು. ಅವರಲ್ಲಿ ಒಂಬತ್ತು ಮಂದಿಯನ್ನು ಕಳೆದ ವರ್ಷ ಅಮಾನತುಗೊಳಿಸಲಾಗಿದೆ. ಈ ವೇಳೆ ಕೆಲವರು ಎಸ್‌ಪಿಗೆ ಸೇರಿದ್ದರು. ಆದರೆ, ಎಲ್ಲರೂ ಯಾದವ್ ಶಿಬಿರಕ್ಕೆ ಸೇರ್ಪಡೆಯಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ.

  ಇದನ್ನೂ ಓದಿ: ಸಂಕಷ್ಟದಲ್ಲಿ ಬಂಗಾಳದ ಬಿಜೆಪಿ; ರಾಜ್ಯಪಾಲರ ಭೇಟಿಗೆ 24 ಕಮಲ ಶಾಸಕರು ಗೈರು, ಹೈಕಮಾಂಡ್​ಗೆ ತಲೆನೋವಾದ ವಲಸೆ!

  ಇಬ್ಬರು ದೊಡ್ಡ ನಾಯಕರಾದ ಲಾಲ್ಜಿ ವರ್ಮಾ ಮತ್ತು ರಾಮ್ ಅಚಲ್ ರಾಜ್‌ಭರ್ ಅವರ ನಿರ್ಗಮನವು ಮಾಯಾವತಿಯ ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗಿದೆ. ಏಕೆಂದರೆ ಅವರು ಯುಪಿ ರಾಜಕೀಯದಲ್ಲಿ ಹೆಚ್ಚಿನ ಹಿಂದುಳಿದ ಜಾತಿಗಳ (ಎಂಬಿಸಿ) ಪ್ರಮುಖ ಮುಖಗಳೆಂದು ತಿಳಿದುಬಂದಿದೆ. ಅಲ್ಲದೆ, ಅವರು ಬಿಎಎಸ್​ಪಿ ಪಕ್ಷದ ಸ್ಥಾಪಕ ನಾಯಕರೂ ಆಗಿದ್ದಾರೆ.

  ಕಳೆದ ವರ್ಷ ಐದು ಶಾಸಕರಾದ, ಅಸ್ಲಂ ಚೌಧರಿ, ಅಸ್ಲಂ ರೈನಿ, ಮುಜ್ತಾಬಾ ಸಿದ್ದಿಕಿ, ಹಕಮ್ ಲಾಲ್ ಬೈಂಡ್ ಮತ್ತು ಗೋವಿಂದ್ ಜಾದವ್ - ಅಖಿಲೇಶ್ ನೇತೃತ್ವದ ಸಮಾಜವಾದಿ ಪಕ್ಷಕ್ಕೆ ಸೇರಿದ್ದರು. ಬಿಎಸ್​ಪಿ ಇಂತಹ ದೊಡ್ಡ ಹಿನ್ನಡೆ ಎದುರಿಸಿದ್ದು ಇದೇ ಮೊದಲು, ಮತ್ತು ಅದೂ ಸಹ ಅವರ 2019 ಮಿತ್ರರಾಷ್ಟ್ರದಿಂದ ಎಂಬುದು ಉಲ್ಲೇಖಾರ್ಹ.

  ಇದನ್ನೂ ಓದಿ: ಆಟೋವನ್ನು ಆ್ಯಂಬುಲೆನ್ಸ್ ಮಾಡಿದ ಬಂಗಾಳದ ಮೊದಲ ಇ-ಆಟೋ ಚಾಲಕಿ

  ಉತ್ತರಪ್ರದೇಶದಲ್ಲಿ ಕೊರೋನಾ ಸೋಂಕನ್ನು ನಿಯಂತ್ರಿಸುವಲ್ಲಿ ಸಿಎಂ ಯೋಗಿ ಆದಿತ್ಯನಾಥ್ ವಿಫಲವಾಗಿದ್ದಾರೆ ಎಂದು ಬಿಜೆಪಿ ಹೈಕಮಾಂಡ್ ಅವರ ವಿರುದ್ಧ ಅಸಮಾಧಾನ ಹೊಂದಿದೆ. ಹೀಗಾಗಿ ಮುಂದಿನ ಚುನಾವಣೆ ಸಂದರ್ಭದಲ್ಲಿ ಯೋಗಿ ಆದಿತ್ಯನಾಥ್ ತಲೆದಂಡವಾದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ. ಆದರೆ, ಈ ಎಲ್ಲಾ ಬೆಳವಣಿಗೆಗಾಗಿ ಚುನಾವಣೆ ವರೆಗೆ ಕಾದು ನೋಡಬೇಕಿದೆ.  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:MAshok Kumar
  First published: