ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದಕ್ಕೆ ಎನ್​ಡಿಎ ಮೈತ್ರಿಕೂಟದಲ್ಲಿಯೇ ಅಪಸ್ವರ

news18
Updated:September 1, 2018, 2:17 PM IST
ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದಕ್ಕೆ ಎನ್​ಡಿಎ ಮೈತ್ರಿಕೂಟದಲ್ಲಿಯೇ ಅಪಸ್ವರ
news18
Updated: September 1, 2018, 2:17 PM IST
ನ್ಯೂಸ್​ 18 ಕನ್ನಡ

ಪಟ್ನಾ (ಸೆ.1): 2019ರ ಲೋಕಸಭಾ ಚುನಾವಣೆಗೆ ಮತ್ತೆ ನರೇಂದ್ರ ಮೋದಿ ಪ್ರಧಾನಿಯಾಗುವುದಕ್ಕೆ ಎನ್​ಡಿಎ ಮೈತ್ರಿಕೂಟದಲ್ಲಿಯೇ ಅಪಸ್ವರ ಕೇಳಿಬಂದಿದೆ. ಎನ್​ಡಿಎ ಮಿತ್ರಕೂಟ ಪಕ್ಷವಾದ ರಾಷ್ಟ್ರೀಯ ಲೋಕ ಸಮತಾ ಪಕ್ಷದ ಮುಖ್ಯಸ್ಥ ಉಪೇಂದ್ರ ಕುಶ್ವಾ ಮತ್ತೆ ಮೋದಿ ಪ್ರಧಾನಿ ಅಭ್ಯರ್ಥಿಯಾಗುವುದಕ್ಕೆ ಪಕ್ಷದಲ್ಲಿ ವಿರೋಧವಿದೆ ಎಂದು ಬಹಿರಂಗಪಡಿಸಿದ್ದಾರೆ.

ಎನ್​ಡಿಎ ಮಿತ್ರಕೂಟದಲ್ಲಿ ಕೆಲವೊಬ್ಬರು ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದಕ್ಕೆ ವಿರೋಧಿಸಿದ್ದಾರೆ. ಅಂತಹ ಜನರು ಉದ್ಧೇಶಪೂರ್ವಕವಾಗಿ ಎನ್​ಡಿಎ ಒಳಗೆ ಸಂಘರ್ಷ ಪ್ರಚೋದಿಸಲು ವದಂತಿಗಳನ್ನು ಹರಡುತ್ತಿದ್ದಾರೆ ಎಂದು  ಮಾನವ ಅಭಿವೃದ್ಧಿ ರಾಜ್ಯ ಸಚಿವ ಉಪೇಂದ್ರ ಕುಶ್ವಾ ತಿಳಿಸಿದ್ದಾರೆ. ಆದರೆ , ನಾನು ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಆಶಿಸುತ್ತೇನೆ ಎಂದು ಕುಶ್ವಾ ತಿಳಿಸಿದ್ದಾರೆ.

ಇತ್ತೀಚೆಗೆ ಬಿಹಾರ ಮುಖ್ಯಮಂತ್ರಿ ನಿತೀಶ್​ ಕುಮಾರ್​ 2020ರಲ್ಲಿ ನಾಲ್ಕನೇ ಬಾರಿಯಾದರೂ ತಮ್ಮ ಚುನಾವಣೆಗೆ ನಿಲ್ಲದಂತೆ ನಿರ್ಣಯ ಕೈಗೊಳ್ಳಬೇಕು ಎಂದು ಹೇಳಿಕೆ ನೀಡುವ ಮೂಲಕ ಮೈತ್ರಿ ಪಕ್ಷದ ನಾಯಕರನ್ನು ಇಕ್ಕಟಿಗೆ ಸಿಲುಕಿಸಿದ್ದರು.

ಬ್ರಾಹ್ಮಣರಿಂದ ಸಕ್ಕರೆ, ಚೌದರಿಯರಿಂದ ತುಳಸಿ, ಹಿಂದುಳಿದ ವರ್ಗದಳಿಂದ ಒಣ ಹಣ್ಣುಗಳನ್ನು ಹಾಕಿ ಅದ್ಭುತವಾಗಿ ಪಾಯಸ ಅಥವಾ ಖೀರ್​ ತಯಾರಿಸಬಹುದು . ಈ ಮೂಲಕ ಎಲ್ಲಾ ವರ್ಗಗಳನ್ನು ಪರಿಗಣನೆಗೆ ತೆಗೆದುಕೊಂಡು ಲೋಕಸಭಾ ಚುನಾವಣೆಯಲ್ಲಿ ಮುನ್ನಡೆಯಬೇಕು ಎಂದಿದ್ದಾರೆ.

ಅಷ್ಟೇ ಅಲ್ಲದೇ ಈ ಖೀರ್​ ಯಾತ್ರೆಯನ್ನು ಸೆ.5ರಿಂದ ತಾನೇ ಕೈಗೊಳ್ಳುತ್ತೇನೆ. ಎಲ್ಲಾ ವರ್ಗದ ಜನರನ್ನು ಒಳಗೊಂಡ ರುಚಿಕರ ಖಾದ್ಯ ನಿರ್ಮಾಣ ಮಾಡುತ್ತೇನೆ ಎಂದರು
First published:September 1, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ