COVID ವಿರುದ್ಧ ಮಕ್ಕಳಿಗೆ ಲಸಿಕೆ ಹಾಕಬೇಕಿಲ್ಲ ಎಂದು ಕೆಲ ವೈದ್ಯರು ಹೇಳ್ತಿರೋದು ಯಾಕೆ? ಈ ಸ್ಟೋರಿ ಓದಿ

ಮಕ್ಕಳ ಜನಸಂಖ್ಯೆಯ ಮೇಲೆ ವೈರಸ್‌ನ ಪರಿಣಾಮವು ತುಂಬಾ ಸೌಮ್ಯ ಮತ್ತು ಅತ್ಯಲ್ಪವಾಗಿದೆ ಎಂದು ಮಕ್ಕಳ ತಜ್ಞರು ಸೂಚಿಸುತ್ತಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಭಾರತದಲ್ಲಿ ಪ್ರತಿರಕ್ಷಣೆ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ (National Technical Advisory Group) ಗುಂಪಿನ (NTAGI) ಸದಸ್ಯರಾದ ಡಾ. ಜಯಪ್ರಕಾಶ್ ಮುಳಿಯಿಲ್  (Jayaprakash Muliel) ಇತ್ತೀಚೆಗೆ ಮಕ್ಕಳಿಗೆ COVID-19 ವಿರುದ್ಧ ಲಸಿಕೆ (Vaccinated) ಹಾಕುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಮಕ್ಕಳಿಗೆ ತುರ್ತಾಗಿ ಲಸಿಕೆ ಹಾಕದಿರುವ ನಿರ್ಧಾರದ ಬಗ್ಗೆ ಸಮಿತಿಯು ಕೇಂದ್ರ ಸರ್ಕಾರಕ್ಕೆ ತಿಳಿಸಿದೆ ಎಂದೂ ಅವರು ಹೇಳಿದರು. ಸಂದರ್ಶನವೊಂದರಲ್ಲಿ, ಡಾ ಮುಳಿಯಿಲ್ ಅವರು, "ಕೋವಿಡ್ -19 ನಿಂದಾಗಿ 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಒಂದೇ ಒಂದು ಸಾವಿಗೆ ಭಾರತ (Not Witnessed) ಸಾಕ್ಷಿಯಾಗಿಲ್ಲ. ಕ್ಯಾನ್ಸರ್, ಲ್ಯುಕೇಮಿಯಾ ಮತ್ತು ಇತರ ಕಾಯಿಲೆಗಳಿಂದಾಗಿ ನಾವು ಮಕ್ಕಳಲ್ಲಿ ಮರಣ ದಾಖಲಿಸಿದ್ದೇವೆ, ಆ ಮಕ್ಕಳಿಗೆ ಕೊರೊನಾ ಪಾಸಿಟಿವ್‌ ಬಂದಿದ್ದರೂ ಸಹ, ಆದರೆ ಅವರ ಸಾವಿಗೆ ಕೋವಿಡ್ -19 ಕಾರಣವೆಂದು ಹೇಳಲಾಗುವುದಿಲ್ಲ" ಎಂದೂ ಅವರು ಸಲಹೆ (Advised) ನೀಡುತ್ತಾರೆ.

ಮಕ್ಕಳು ಸುರಕ್ಷಿತವಾಗಿದ್ದಾರೆ
ಇದೇ ರೀತಿ, ಅನೇಕ ವೈದ್ಯರು ಮತ್ತು ತಜ್ಞರು ಚಿಕ್ಕ ಮಕ್ಕಳಿಗೆ ಲಸಿಕೆ ಹಾಕುವುದನ್ನು ವಿರೋಧಿಸಿ ಸಾಮಾಜಿಕ ವೇದಿಕೆಗಳಲ್ಲಿ ಅಭಿಪ್ರಾಯ ಪಟ್ಟಿದ್ದಾರೆ. ನೋವೆಲ್‌ ಕೊರೊನಾವೈರಸ್ ವಿರುದ್ಧ ಮಕ್ಕಳು ದೃಢವಾದ ಪ್ರತಿರಕ್ಷಣಾ ಪ್ರತಿಕ್ರಿಯೆ ಹೊಂದಿದ್ದಾರೆಂದು ಕೆಲವರು ಹೇಳುತ್ತಾರೆ. ಆದರೆ ಇತರರು ಭಾರತೀಯ ಜನಸಂಖ್ಯೆಯ ಬಹುಪಾಲು ಎರಡನೇ COVID ಅಲೆಯಿಂದ ಸ್ವಾಭಾವಿಕವಾಗಿ ರೋಗನಿರೋಧಕ ಶಕ್ತಿ ಪಡೆದುಕೊಂಡಿದ್ದಾರೆ ಎಂದು ನಂಬುತ್ತಾರೆ, ಇದು ಸ್ವಲ್ಪ ಮಟ್ಟಿಗೆ ಭಿನ್ನ-ನಿರೋಧಕವಾಗಿದೆ. ಓಮೈಕ್ರಾನ್ ಆತಂಕದ ನಡುವೆಯೂ, ರೂಪಾಂತರವು ಸೌಮ್ಯವಾಗಿದೆ ಮತ್ತು ಮಕ್ಕಳು ಸುರಕ್ಷಿತವಾಗಿದ್ದಾರೆ ಎಂದು ಹಲವರು ಹೇಳಿಕೊಳ್ಳುತ್ತಾರೆ.

ಇಲ್ಲಿಯವರೆಗೆ, ಮಕ್ಕಳಲ್ಲಿ ವ್ಯಾಕ್ಸಿನೇಷನ್ ಪರವಾಗಿ ಅಥವಾ ವಿರುದ್ಧವಾಗಿ ಯಾವುದೇ ನಿರ್ಣಾಯಕ ವರದಿಗಳಿಲ್ಲ. ಆದರೂ, ಮಕ್ಕಳಿಗೆ ಕೋವಿಡ್‌ ಲಸಿಕೆಗಳ ವಿರುದ್ಧ ವೈದ್ಯರು ಏಕೆ ಸಲಹೆ ನೀಡುತ್ತಿದ್ದಾರೆ ಎಂಬುದರ ಕುರಿತು ಉತ್ತಮ ತಿಳುವಳಿಕೆ ಪಡೆಯಲು ನಾವು ಉತ್ತರಗಳನ್ನು ಹುಡುಕಲು ಪ್ರಯತ್ನಿಸಿದ್ದೇವೆ ಮತ್ತು ಮಕ್ಕಳ ವೈದ್ಯರೊಂದಿಗೆ ಮಾತನಾಡಿದ್ದೇವೆ.

ಇದನ್ನೂ ಓದಿ: Corona Vaccine: 15-18ನೇ ವಯೋಮಾನದ ಮಕ್ಕಳಿಗೆ ಲಸಿಕೆ ಅಭಿಯಾನಕ್ಕೆ ಸಿಎಂ ಚಾಲನೆ: ವ್ಯಾಕ್ಸಿನ್ ಪಡೆಯುವಂತೆ ವಿದ್ಯಾರ್ಥಿಗಳಿಗೆ ಕರೆ

ಮಕ್ಕಳ ಮೇಲೆ ವೈರಸ್ ಪ್ರಭಾವವು ಸೌಮ್ಯವಾಗಿದೆ
ಬೆಂಗಳೂರಿನ ಮದರ್‌ಹುಡ್ ಹಾಸ್ಪಿಟಲ್ಸ್‌ನ ಕನ್ಸಲ್ಟೆಂಟ್ ನಿಯೋನಾಟಾಲಜಿಸ್ಟ್ ಮತ್ತು ಪಿಡಿಯಾಟ್ರಿಶಿಯನ್ ಡಾ.ಸಂತೋಷ್ ಕುಮಾರ್ ಪ್ರಕಾರ, ಕೋವಿಡ್-19 ಲಸಿಕೆಗಳು ರೋಗವನ್ನು ಸಂಪೂರ್ಣವಾಗಿ ನಿಲ್ಲಿಸುವುದಿಲ್ಲ ಅಥವಾ ವ್ಯಕ್ತಿಗೆ ಸೋಂಕು ತಗುಲುವುದನ್ನು ತಡೆಯುವುದಿಲ್ಲ. ವೈರಸ್ ರೂಪಾಂತರಗೊಳ್ಳುತ್ತಿರುವ ಕಾರಣ, ಲಸಿಕೆಗಳು ಹೊಸ ರೂಪಾಂತರಗಳ ವಿರುದ್ಧ ರಕ್ಷಿಸುವುದಿಲ್ಲ.

ಬಳಿಕ "ಒಂದು ಒತ್ತಡದ ವಿರುದ್ಧ ಮಗುವಿಗೆ ಲಸಿಕೆ ನೀಡಿದ್ದರೂ, ಬಹುಶಃ 6 ರಿಂದ 12 ತಿಂಗಳ ಬಳಿಕ ಅವರು ಹೊಸ ಒತ್ತಡಕ್ಕೆ ಒಡ್ಡಿಕೊಳ್ಳಬಹುದು. ಆದ್ದರಿಂದ, ವ್ಯಾಕ್ಸಿನೇಷನ್ ಅಂತಿಮ ಗುರಿಯಲ್ಲ. ಬದಲಿಗೆ ನಾವು ಹರ್ಡ್‌ ಇಮ್ಯುನಿಟಿಯ ಗುರಿಯನ್ನು ಹೊಂದಿರಬೇಕು" ಎಂದೂ ಹೇಳಿದರು. ಇದಲ್ಲದೆ, ಮಕ್ಕಳ ಜನಸಂಖ್ಯೆಯ ಮೇಲೆ ವೈರಸ್‌ನ ಪರಿಣಾಮವು ತುಂಬಾ ಸೌಮ್ಯ ಮತ್ತು ಅತ್ಯಲ್ಪವಾಗಿದೆ ಎಂದು ಮಕ್ಕಳ ತಜ್ಞರು ಸೂಚಿಸುತ್ತಾರೆ. "ನಾವು ಈಗ 2020ರಿಂದ ಹೊಸ ತಳಿಗಳನ್ನು ನೋಡುತ್ತಿದ್ದೇವೆ, ಪ್ರತಿ ಹೊಸ ತಳಿಗಳು ಮತ್ತು ವಯಸ್ಕ ಜನಸಂಖ್ಯೆಯು ಬಹಿರಂಗಗೊಳ್ಳುವುದರೊಂದಿಗೆ, ಮಕ್ಕಳು ಆಲ್ಫಾ, ಬೀಟಾ ಅಥವಾ ಡೆಲ್ಟಾ ಮತ್ತು ಈಗ ಓಮಿಕ್ರಾನ್ ಆಗಿರುವ ಎಲ್ಲಾ ರೂಪಾಂತರಗಳ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಅಭಿವೃದ್ಧಿಪಡಿಸಲು ಪ್ರಾರಂಭಿಸಿದ್ದಾರೆ ಎಂದೂ ಹೇಳುತ್ತಾರೆ.

ಓಮೈಕ್ರಾನ್ ಎಚ್ಚರಿಕೆಯ ಮಧ್ಯೆ, ಮಕ್ಕಳಿಗೆ ತ್ವರಿತವಾಗಿ ಲಸಿಕೆ ನೀಡಬೇಕೇ..?
ವಯಸ್ಕರಿಗೆ ಹೋಲಿಸಿದರೆ ಮಕ್ಕಳು ಮತ್ತು ಹದಿಹರೆಯದವರು ಸೌಮ್ಯವಾದ ಕಾಯಿಲೆ ಹೊಂದಿರುತ್ತಾರೆ. ಅವರು "ತೀವ್ರವಾದ COVID-19ನ ಹೆಚ್ಚಿನ ಅಪಾಯ"ದ ಗುಂಪಿನ ಭಾಗವಾಗಿರದಿದ್ದರೆ, ಅವರಿಗೆ ಲಸಿಕೆ ಹಾಕುವುದು ವಯಸ್ಸಾದ ಜನರಿಗಿಂತ, ದೀರ್ಘಕಾಲದ ಆರೋಗ್ಯ ಪರಿಸ್ಥಿತಿ ಹೊಂದಿರುವವರು ಮತ್ತು ಆರೋಗ್ಯ ಕಾರ್ಯಕರ್ತರಿಗಿಂತ "ಕಡಿಮೆ ತುರ್ತು" ಹೊಂದಿದೆ" ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಹೇಳುತ್ತದೆ.

ತಕ್ಷಣವೇ ಅಗತ್ಯವಿಲ್ಲ
ಹೊಸ ಕೊರೊನಾ ವೈರಸ್ ರೂಪಾಂತರದ ಓಮೈಕ್ರಾನ್ ಗಮನದಲ್ಲಿಟ್ಟುಕೊಂಡು, ಇದು ಇಲ್ಲಿಯವರೆಗೆ 'ಸೌಮ್ಯವಾಗಿದೆ' ಎಂದು ಡಾ. ಕುಮಾರ್ ಹೇಳುತ್ತಾರೆ. ಯುರೋಪಿಯನ್ ಮಾಹಿತಿಯ ಪ್ರಕಾರ, ಓಮೈಕ್ರಾನ್ ಸೋಂಕು ಸೌಮ್ಯವಾಗಿದೆ, ಮಕ್ಕಳಲ್ಲಿ ಗಂಭೀರ ಪ್ರಕರಣಗಳು ಮತ್ತು ಸಾವಿನ ಸಂಖ್ಯೆ ತುಂಬಾ ಕಡಿಮೆಯಾಗಿದೆ. ಇದು ಒಡ್ಡಿಕೊಳ್ಳುವುದರೊಂದಿಗೆ ಮಕ್ಕಳು ರೋಗನಿರೋಧಕ ಪಡೆಯುತ್ತಿದ್ದಾರೆ ಎಂದು ತೋರಿಸುತ್ತದೆ. ಜನಸಂಖ್ಯೆಯು ಎಕ್ಸ್‌ಪೋಸ್‌ ಆಗುವವರೆಗೆ ಮತ್ತು ರೋಗನಿರೋಧಕ ಶಕ್ತಿ ಅಭಿವೃದ್ಧಿಪಡಿಸಿಕೊಳ್ಳುವವರೆಗೆ ನಾವು ಬಹುಶಃ 6 ತಿಂಗಳಿಂದ 1 ವರ್ಷದವರೆಗೆ ಕಾಯಬಹುದು ಆದ್ದರಿಂದ, ಮಕ್ಕಳ ವ್ಯಾಕ್ಸಿನೇಷನ್‌ಗೆ ಸಂಬಂಧಿಸಿದಂತೆ, ನಾವು ಕಾಯಬಹುದು ಮತ್ತು "ಇದು ತಕ್ಷಣವೇ ಅಗತ್ಯವಿಲ್ಲ" ಎಂದೂ ಡಾ. ಕುಮಾರ್‌ ಹೇಳುತ್ತಾರೆ.

ಹರ್ಡ್‌ ಇಮ್ಯುನಿಟಿ ಸಾಕಷ್ಟು ಇರಬಹುದು
ಮಕ್ಕಳಿಗೆ ಅರ್ಹವಾದ ಲಸಿಕೆಗಳು ಹೊರಬಂದಾಗ ಲಸಿಕೆ ಪಡೆಯಬೇಕೇ ಎಂದು ಕೇಳಿದಾಗ, ದೊಡ್ಡ ಕೋವಿಡ್ ಲಸಿಕೆ ಪ್ರಯೋಗದ ಫಲಿತಾಂಶಗಳನ್ನು ಉಲ್ಲೇಖಿಸಿ ಮತ್ತು ನಂತರ ಅದನ್ನು ಆರಿಸಿಕೊಳ್ಳಲು ಡಾ. ಕುಮಾರ್ ಸಲಹೆ ನೀಡುತ್ತಾರೆ. ಸದ್ಯಕ್ಕೆ, 2ನೇ ಕೋವಿಡ್ ಅಲೆಯ ಹರ್ಡ್‌ ಇಮ್ಯುನಿಟಿ ಜನಸಂಖ್ಯೆಯನ್ನು ರಕ್ಷಿಸುತ್ತಿದೆ ಮತ್ತು ಮಕ್ಕಳಿಗೆ ಯಾವುದೇ ತಕ್ಷಣದ ಅಪಾಯವಿಲ್ಲ ಎಂದೂ ಅವರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಇದನ್ನೂ ಓದಿ: Vaccine for Kids:ಮಕ್ಕಳಿಗೆ ಲಸಿಕೆ ಹಾಕಿಸ್ಬೇಕಾ? Arogya Setu App ಮೂಲಕ ಹೀಗೆ ರಿಜಿಸ್ಟರ್ ಮಾಡಿ

ಮಕ್ಕಳನ್ನು ರಕ್ಷಿಸಲು ಪೋಷಕರು ಏನು ಮಾಡಬಹುದು..?
ಮೂರನೆಯ ಕೋವಿಡ್ ಬೂಸ್ಟರ್ ಜನರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆಯಾದರೂ, ಓಮಿಕ್ರಾನ್ ರೂಪಾಂತರದ ವಿರುದ್ಧ 2 ಡೋಸ್ ಲಸಿಕೆಯ ಪರಿಣಾಮಕಾರಿತ್ವದ ಬಗ್ಗೆ ತಜ್ಞರು ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆ, ಜನರು COVID-ಸೂಕ್ತ ನಡವಳಿಕೆ ಅನುಸರಿಸುವಂತೆ ವೈದ್ಯರು ಮತ್ತು ವೈದ್ಯಕೀಯ ವೃತ್ತಿಪರರು ಮನವಿ ಮಾಡಿದ್ದಾರೆ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಸರಿಯಾದ ನೈರ್ಮಲ್ಯ ಅನುಸರಿಸುವುದು ಸೋಂಕನ್ನು ತಡೆಗಟ್ಟಲು ಉತ್ತಮ ಮಾರ್ಗವಾಗಿದೆ ಎಮದೂ ಅವರು ಸಲಹೆ ನೀಡಿದ್ದಾರೆ.
Published by:vanithasanjevani vanithasanjevani
First published: