HOME » NEWS » National-international » SOLDIER MARTYRED AND THEE TERRORIST KILLED IN JAMMU AND KASHMIR RMD

ಜಮ್ಮು-ಕಾಶ್ಮೀರದಲ್ಲಿ ಸೇನಾ ಕಾರ್ಯಾಚರಣೆ; 24 ಗಂಟೆಗಳಲ್ಲಿ 7 ಉಗ್ರರ ಹತ್ಯೆ

ಇತ್ತೀಚೆಗೆ ಜಮ್ಮು-ಕಾಶ್ಮೀರದಲ್ಲಿ ಸೇನೆ ಹಾಗೂ ಪೊಲೀಸರು ನಿರಂತರವಾಗಿ ಕಾರ್ಯಾಚರಣೆ ನಡೆಸಿ ಉಗ್ರರನ್ನು ಹತ್ಯೆ ಮಾಡುತ್ತಿದ್ದಾರೆ. ಆರ್ಟಿಕಲ್​ 370 ರದ್ದತಿ ನಂತರದಲ್ಲಿ ಕಾಶ್ಮೀರದಲ್ಲಿ ಕ್ಷೋಭೆ ಉಂಟಾಗಿತ್ತು. ಆದರೆ, ಈಗ ಮತ್ತೆ ಕಾಶ್ಮೀರ ಸಹಜ ಸ್ಥಿತಿಗೆ ಮರಳುತ್ತಿದೆ.

news18-kannada
Updated:August 29, 2020, 12:06 PM IST
ಜಮ್ಮು-ಕಾಶ್ಮೀರದಲ್ಲಿ ಸೇನಾ ಕಾರ್ಯಾಚರಣೆ; 24 ಗಂಟೆಗಳಲ್ಲಿ 7 ಉಗ್ರರ ಹತ್ಯೆ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ (ಆಗಸ್ಟ್​ 29): ಭಯೋತ್ಪಾದಕರನ್ನು ಹತ್ತಿಕ್ಕಲು ಶನಿವಾರ ಮುಂಜಾನೆ ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಓರ್ವ ಸೈನಿಕ ಹುತಾತ್ಮರಾಗಿದ್ದು, ಮೂವರು ಉಗ್ರರರನ್ನು ಹತ್ಯೆ ಮಾಡಲಾಗಿದೆ.

ದಕ್ಷಿಣ ಕಾಶ್ಮೀರದ ಪುಲ್ವಾಮಾದ ಜದೂರಾದಲ್ಲಿ ಈ ಎನ್​ ಕೌಟಂಟ್​ ನಡೆದಿದೆ. ಇಂದು ಮುಂಜಾನೆ ಉಗ್ರರು ಅಡಗಿರುವ ಖಚಿತ ಮಾಹಿತಿ ಮೇರೆಗೆ ಸೇನಾ ಸಿಬ್ಬಂದಿ ಕಾರ್ಯಾಚಾರಣೆಗೆ ಇಳಿದ್ದಿದ್ದರು. ಈ ವೇಳೆ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಓರ್ವ ಸೈನಿಕ ಹುತಾತ್ಮರಾಗಿದ್ದಾರೆ. ಮೂವರು ಉಗ್ರರರನ್ನು ಸೇನೆ ಹೊಡೆದುರುಳಿಸಿದೆ.
ಶೋಪಿಯಾನಾ ಭಾಗದಲ್ಲಿ ನಿನ್ನೆ ನಾಲ್ಕು ಉಗ್ರರರನ್ನು ಹೊಡೆದುರುಳಿಸಲಾಗಿತ್ತು. ಓರ್ವನನ್ನು ಅರೆಸ್ಟ್​ ಮಾಡಲಾಗಿತ್ತು. ಇತ್ತೀಚೆಗೆ ಪಂಚಾಯ್ತಿ ಸದಸ್ಯನನ್ನು ಅಪಹರಿಸಿ ಕೊಲೆ ಮಾಡಲಾಗಿತ್ತು. ನಿನ್ನೆ ಮೃತಪಟ್ಟವರು ಈ ಪ್ರಕರಣದಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ಸದ್ಯ ಬಂಧಿತನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಸಾಕಷ್ಟು ವಿಚಾರಗಳು ತಿಳಿದು ಬರುವ ಸಾಧ್ಯತೆ ಇದೆ.ಇತ್ತೀಚೆಗೆ ಜಮ್ಮು-ಕಾಶ್ಮೀರದಲ್ಲಿ ಸೇನೆ ಹಾಗೂ ಪೊಲೀಸರು ನಿರಂತರವಾಗಿ ಕಾರ್ಯಾಚರಣೆ ನಡೆಸಿ ಉಗ್ರರನ್ನು ಹತ್ಯೆ ಮಾಡುತ್ತಿದ್ದಾರೆ. ಆರ್ಟಿಕಲ್​ 370 ರದ್ದತಿ ನಂತರದಲ್ಲಿ ಕಾಶ್ಮೀರದಲ್ಲಿ ಕ್ಷೋಭೆ ಉಂಟಾಗಿತ್ತು. ಆದರೆ, ಈಗ ಮತ್ತೆ ಕಾಶ್ಮೀರ ಸಹಜ ಸ್ಥಿತಿಗೆ ಮರಳುತ್ತಿದೆ.
Published by: Rajesh Duggumane
First published: August 29, 2020, 12:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories