ಕಣಿವೆ ರಾಜ್ಯದಲ್ಲಿ ಮತ್ತೆ ಗುಂಡಿನ ಸದ್ದು; ಇಬ್ಬರು ಉಗ್ರರ ಹತ್ಯೆ

ಈ ಭಯೋತ್ಪಾದಕರು ಪಾಕಿಸ್ತಾನ ಮೂಲದ ಜೈಷ್​​ ಎ ಮೊಹಮ್ಮದ್​ ಸಂಘಟನೆಗೆ ಸೇರಿದ್ದವರಾಗಿದ್ದಾರೆ.  ಸ್ಥಳದಲ್ಲಿ ಇನ್ನು ಭಯೋತ್ಪಾದಕರು ಅಡಗಿಕುಳಿತಿದ್ದು, ಅವರಿಗಾಗಿ ಶೋಧ ನಡೆಸಲಾಗಿದೆ.

Seema.R | news18
Updated:June 18, 2019, 2:48 PM IST
ಕಣಿವೆ ರಾಜ್ಯದಲ್ಲಿ ಮತ್ತೆ ಗುಂಡಿನ ಸದ್ದು; ಇಬ್ಬರು ಉಗ್ರರ ಹತ್ಯೆ
ಸಾಂದರ್ಭಿಕ ಚಿತ್ರ
  • News18
  • Last Updated: June 18, 2019, 2:48 PM IST
  • Share this:
ಶ್ರೀನಗರ (ಜೂ.18): ಜಮ್ಮು ಕಾಶ್ಮೀರದ ಅನಂತ್​ನಾಗ್​ ಜಿಲ್ಲೆಯಲ್ಲಿ ಭದ್ರತಾಪಡೆ ಹಾಗೂ ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ಎನ್​ಕೌಂಟರ್​ನಲ್ಲಿ ಇಬ್ಬರು ಭಯೋತ್ಪಾದಕರು ಗುಂಡಿಗೆ ಬಲಿಯಾಗಿದ್ದು, ಓರ್ವ ಸೈನಿಕ ಸಾವನ್ನಪ್ಪಿದ್ದಾರೆ.

ಬಿಜ್​ಬೇಹರ್​ ಪ್ರದೇಶದಲ್ಲಿಉಗ್ರರು ಅಡಗಿ ಕುಳಿತಿರುವ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು, ಈ ಮಾಹಿತಿ ಮೇರೆಗೆ ಭದ್ರತಾ ಪಡೆ ಇಂದು ಶೋಧ ಕಾರ್ಯಕ್ಕೆ ಮುಂದಾಗಿದ್ದು,  ಈ ವೇಳೆ ಗುಂಡಿನ ಕಾಳಗ ನಡೆದಿದೆ. ಎನ್​ಕೌಂಟರ್​ನಲ್ಲಿ ಓರ್ವ ಯೋಧ ಗಾಯಗೊಂಡಿದ್ದು, ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಭಯೋತ್ಪಾದಕರು ಪಾಕಿಸ್ತಾನ ಮೂಲದ ಜೈಷ್​​ ಎ ಮೊಹಮ್ಮದ್​ ಸಂಘಟನೆಗೆ ಸೇರಿದ್ದವರಾಗಿದ್ದಾರೆ.  ಸ್ಥಳದಲ್ಲಿ ಇನ್ನು ಭಯೋತ್ಪಾದಕರು ಅಡಗಿಕುಳಿತಿದ್ದು, ಅವರಿಗಾಗಿ ಶೋಧ ನಡೆಸಲಾಗಿದೆ.

ಸೋಮವಾರ ಅಚಬಾಲ್​ ಪ್ರದೇಶದಲ್ಲಿ ನಡೆದ ಎನ್​ಕೌಂಟರ್​ ದಾಳಿಯಲ್ಲಿ ಮೇಜರ್​ ಹಾಗೂ ಸೇನಾಧಿಕಾರಿ, ಇಬ್ಬರು ಯೋಧರು ಗಂಭೀರವಾಗಿ ಗಾಯಗೊಂಡಿದ್ದರು. ಈ ಬೆನ್ನಲ್ಲೇ ಇಂದು ಮತ್ತೊಮ್ಮೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ.

ಇದನ್ನು ಓದಿ: ಜಮ್ಮು-ಕಾಶ್ಮೀರದ ಅನಂತ್​ನಾಗ್​ ಜಿಲ್ಲೆಯಲ್ಲಿ ಎನ್​ಕೌಂಟರ್​; ಇಬ್ಬರು ಉಗ್ರರ ಹತ್ಯೆ

ಸೇನಾ ಗಸ್ತುವಾಹನದ ಗುರಿಯಾಗಿಸಿಕೊಂಡು ವಾಹನ ಗುರಿಯಾಗಿಸಿಕೊಂಡು ಉಗ್ರರು ನಿನ್ನೆ ದಾಳಿ ನಡೆಸಿದರು. ಈ ದಾಳಿಯಲ್ಲಿ ಒಂಭತ್ತು ಯೋಧರು ಹಾಗೂ ಇಬ್ಬರು ನಾಗರಿಕರು ಗಂಭೀರವಾಗಿ ಗಾಯಗೊಂಡಿದ್ದರು.

First published:June 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ