• Home
  • »
  • News
  • »
  • national-international
  • »
  • Solar Flare Alert: ಸೌರ ಜ್ವಾಲೆಯ ಬಗ್ಗೆ ನಾಸಾ ಎಚ್ಚರಿಕೆ, GPS ಮೇಲೆ ಪರಿಣಾಮ ಬೀರಲಿದೆಯಾ?

Solar Flare Alert: ಸೌರ ಜ್ವಾಲೆಯ ಬಗ್ಗೆ ನಾಸಾ ಎಚ್ಚರಿಕೆ, GPS ಮೇಲೆ ಪರಿಣಾಮ ಬೀರಲಿದೆಯಾ?

 ಸೌರ ಜ್ವಾಲೆ

ಸೌರ ಜ್ವಾಲೆ

ಸೂರ್ಯನಿಂದ ಹೊರಹೊಮ್ಮಿದ ಸೌರ ಜ್ವಾಲೆಯ ಬಗ್ಗೆ ಯುಎಸ್‍ಎ ನ ರಾಷ್ಟ್ರೀಯ ಸಾಗರ ಮತ್ತು ವಾತಾವರಣದ ಆಡಳಿತ ಎಚ್ಚರಿಕೆ ನೀಡಿದೆ.  ಸೌರ ಜ್ವಾಲೆಯ ಎಚ್ಚರಿಕೆ ನೀಡಿದ್ದು, ಜಿಪಿಎಸ್ ಮೇಲೆ ಪರಿಣಾಮ ಬೀರಬಹುದು ಎಂದು ಎಚ್ಚರಿಕೆ ನೀಡಿದೆ. ಜುಲೈ 14 ರಂದು ಸೂರ್ಯನಿಂದ ಹೊರ ಹೊಮ್ಮಿದ ಸೌರ ಜ್ವಾಲೆಯು ಜುಲೈ 19 ರಂದು ಭೂಮಿಗೆ ಅಪ್ಪಳಿಸುವ ನಿರೀಕ್ಷೆಯಿದೆ.

ಮುಂದೆ ಓದಿ ...
  • Share this:

ಮನುಷ್ಯರ ಮೇಲೆ ಶನಿ ದೇವ ವಕ್ರದೃಷ್ಟಿ ಬೀರ್ತಾನೆ ಎಂದು ಕೇಳ್ತಿದ್ವಿ. ಸೂರ್ಯ (Sun)ನ ವಕ್ರ ದೃಷ್ಟಿಯು ಭೂಮಿಯ ಮೇಲೆ ಕಾಡ ತೊಡಗಿದೆ. ಮಾನವರಿಗೆ ಇದು ಮಹಾ ವಿನಾಶದ ಮುನ್ಸೂಚನೆನಾ ಅನ್ನೋ ಅನುಮಾನ ಕಾಡ್ತಿದೆ. ಜುಲೈ 14 ರಂದು ಸೂರ್ಯನಿಂದ ಹೊರಹೊಮ್ಮಿದ ಸೌರ ಜ್ವಾಲೆಯ ಬಗ್ಗೆ ಯುಎಸ್‍ಎ (USA) ನ ರಾಷ್ಟ್ರೀಯ (National) ಸಾಗರ ಮತ್ತು ವಾತಾವರಣದ ಆಡಳಿತ (NOAA) ಎಚ್ಚರಿಕೆ ನೀಡಿದೆ.  ಸೌರ ಜ್ವಾಲೆಯ ಎಚ್ಚರಿಕೆ ನೀಡಿದ್ದು, ಜಿಪಿಎಸ್ (GPS) ಮೇಲೆ ಪರಿಣಾಮ ಬೀರಬಹುದು ಎಂದು ಎಚ್ಚರಿಕೆ ನೀಡಿದೆ. ಈ ಸೌರ ಜ್ವಾಲೆಯು (Solar Flare Alert) ಮಾನವೀಯತೆಯ ಅಂತ್ಯದಂತಹ ನಾಟಕೀಯತೆಯನ್ನು ಅರ್ಥೈಸುವುದಿಲ್ಲ, ಆದರೆ ಸಾಕಷ್ಟು ಶಕ್ತಿಯುತವಾದ ಸೌರ ಜ್ವಾಲೆಯು ನಮ್ಮ ಉಪಗ್ರಹಗಳನ್ನು ನಿಷ್ಕ್ರಿಯಗೊಳಿಸಬಹುದು. ಇದು ಭೂಮಿಯ ಮೇಲಿನ ಅನೇಕ ಕಾರ್ಯಗಳ ಮೇಲೆ ಪ್ರಮುಖ ಪರಿಣಾಮವನ್ನು ಬೀರೋ ಸಾಧ್ಯತೆ ಇದೆ.


ನಾಸಾ ಹೇಳುತ್ತಿರುವುದು ಏನು?
"ಸೌರ ಜ್ವಾಲೆಯು ಸೂರ್ಯನ ಮಚ್ಚೆಗಳೊಂದಿಗೆ ಸಂಬಂಧಿಸಿದ ಕಾಂತೀಯ ಶಕ್ತಿಯ ಬಿಡುಗಡೆಯಿಂದ ಬರುವ ವಿಕಿರಣದ ತೀವ್ರವಾದ ಸ್ಫೋಟವಾಗಿದೆ. ಜ್ವಾಲೆಗಳು ನಮ್ಮ ಸೌರವ್ಯೂಹದ ಅತಿದೊಡ್ಡ ಸ್ಫೋಟಕ ಘಟನೆಗಳಾಗಿವೆ. ಅವು ಸೂರ್ಯನ ಮೇಲೆ ಪ್ರಕಾಶಮಾನವಾದ ಪ್ರದೇಶಗಳಾಗಿ ಕಂಡುಬರುತ್ತವೆ ಮತ್ತು ಅವು ನಿಮಿಷಗಳಿಂದ ಗಂಟೆಗಳವರೆಗೆ ಇರುತ್ತದೆ" ಎಂದು ನಾಸಾ ಹೇಳುತ್ತಿದೆ.


ಜಿಪಿಎಸ್ ಮೇಲೆ ಹೆಚ್ಚು ಪರಿಣಾಮ ಸಾಧ್ಯತೆ
ಈ ಸೌರ ಜ್ವಾಲೆಯು ಮಾನವೀಯತೆಯ ಅಂತ್ಯದಂತಹ ನಾಟಕೀಯತೆಯನ್ನು ಅರ್ಥೈಸುವುದಿಲ್ಲ, ಆದರೆ ಸಾಕಷ್ಟು ಶಕ್ತಿಯುತವಾದ ಸೌರ ಜ್ವಾಲೆಯು ನಮ್ಮ ಉಪಗ್ರಹಗಳನ್ನು ನಿಷ್ಕ್ರಿಯಗೊಳಿಸಬಹುದು. ಇದು ಭೂಮಿಯ ಮೇಲಿನ ಅನೇಕ ಕಾರ್ಯಗಳ ಮೇಲೆ ಪ್ರಮುಖ ಪರಿಣಾಮವನ್ನು ಬೀರಬಹುದು. ನಾವು ಸುರಕ್ಷಿತವಾಗಿರುತ್ತೇವೆ ಏಕೆಂದರೆ ಭೂಮಿಯ ಕಾಂತೀಯ ಕ್ಷೇತ್ರವು ಹಾನಿಕಾರಕ ವಿಕಿರಣದಿಂದ ನಮ್ಮನ್ನು ರಕ್ಷಿಸುತ್ತದೆ. ಆದರೆ ಜಿಪಿಎಸ್ ಮೇಲೆ ಹೆಚ್ಚು ಪರಿಣಾಮ ಸಾಧ್ಯತೆ. ಭೂಮಿಯ ಮೇಲಿನ ಸಂವಹನದಲ್ಲಿ ಅಡಚಣೆಯು ಆಧುನಿಕ ಜೀವನದ ಮೇಲೆ ಪರಿಣಾಮ ಬೀರಬಹುದು.


ಇದನ್ನೂ ಓದಿ: Good News: ರಾಜ್ಯದ ರೈತರಿಗೆ ಬಂಪರ್ ನ್ಯೂಸ್​! 10 ಸಾವಿರ ಸೌರಶಕ್ತಿ ಚಾಲಿತ ಕೃಷಿ ಪಂಪ್‌ಸೆಟ್ ಕೊಡ್ತಿದೆ ಸರ್ಕಾರ


ಜುಲೈ 19 ರಂದು ಭೂಮಿಗೆ ಅಪ್ಪಳಿಸುತ್ತಾ ಸೌರಜಾಲೆ?
ಜುಲೈ 14 ರಂದು ಸೂರ್ಯನಿಂದ ಹೊರ ಹೊಮ್ಮಿದ ಸೌರ ಜ್ವಾಲೆಯು ಜುಲೈ 19 ರಂದು ಭೂಮಿಗೆ ಅಪ್ಪಳಿಸುವ ನಿರೀಕ್ಷೆಯಿದೆ.


ಬಾಹ್ಯಾಕಾಶ ಹವಾಮಾನ ತಜ್ಞೆ ಡಾ. ತಮಿತಾ ಸ್ಕೋವ್ ಹೇಳಿದ್ದೇನು?
"ಉದ್ದವಾದ ಹಾವಿನಂತಿರುವ ಫಿಲಮೆಂಟ್ ಕಾರ್ಟ್‍ವೀಲ್‍ಗಳು ಬೆರಗುಗೊಳಿಸುವ ಬ್ಯಾಲೆಯಲ್ಲಿ ಸೂರ್ಯನತ್ತ ಸಾಗಿತು. ಈ ಭೂಮಿ-ನಿರ್ದೇಶಿತ ಸೌರಬಿರುಗಾಳಿಯ ಕಾಂತೀಯ ದೃಷ್ಟಿಕೋನವು ಊಹಿಸಲು ಕಠಿಣವಾಗಿದೆ. ಜಿ2-ಮಟ್ಟದ ಪರಿಸ್ಥಿತಿಗಳು ಕಾಂತಕ್ಷೇತ್ರವು ಸಂಭವಿಸಬಹುದು ಈ ಚಂಡಮಾರುತವು ದಕ್ಷಿಣದ ಕಡೆಗೆ ಕೇಂದ್ರೀಕೃತವಾಗಿದೆ!" ಎಂದು ಡಾ ತಮಿತಾ ಸ್ಕೋವ್ ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ.


'ಸೌರ ಜ್ವಾಲೆ'ಗೆ ದೊಡ್ಡ ಇತಿಹಾಸವಿದೆ


ಹೀಗೆ ಸೂರ್ಯ ರೌದ್ರಾವತಾರ ತೋರಿಸುತ್ತಿರುವುದು ಇದೇ ಮೊದಲೇನಲ್ಲ. ಭೀಕರ 'ಸೌರ ಜ್ವಾಲೆ'ಗೆ ದೊಡ್ಡ ಇತಿಹಾಸವಿದೆ. 1859, 1921ರಲ್ಲಿ ಭೀಕರ ಸೌರ ಚಂಡಮಾರುತ ಬೀಸಿತ್ತು. ಇತ್ತೀಚೆಗೆ 1989ರಲ್ಲಿ ಸೂರ್ಯನ ಕೋಪಕ್ಕೆ ಮಾನವ ತತ್ತರಿಸಿದ್ದ. 1989ರಲ್ಲಿ ಭೂಮಿಗೆ ಬಡಿದಿದ್ದ ಸೌರ ಜ್ವಾಲೆಗೆ ಪವರ್ ಗ್ರಿಡ್‌ಗಳೇ ನಾಶವಾಗಿ ಹೋಗಿದ್ದವು. ಕೆನಡಾದಲ್ಲಿ ವಿದ್ಯುತ್ ಸಂಪರ್ಕವೇ ನಿಂತುಹೋಗಿತ್ತು. ಆದರೆ ಈ ಹಿಂದೆ ಸಂಭವಿಸಿದ್ದ ಇಂತಹ ದುರಂತ ಸಮಯದಲ್ಲಿ ಡಿಜಿಟಲ್ ಯುಗ ಇರಲಿಲ್ಲ. ಈಗ ಎಲ್ಲಾ ಇಂಟರ್‌ನೆಟ್ ಮೇಲೆ ಅವಲಂಬಿತವಾಗಿದೆ. ಪರಿಸ್ಥಿತಿ ಹೀಗಿರುವಾಗ ಸೂರ್ಯ ಮುನಿಸಿಕೊಂಡರೆ ಬಹುದೊಡ್ಡ ಆಪತ್ತ ಎದುರಾಗೋದು ಗ್ಯಾರಂಟಿ.


ಇದನ್ನೂ ಓದಿ: Sun Transit in Gemini: ಮಿಥುನ ರಾಶಿಯಲ್ಲಿ ಸೂರ್ಯನ ಸಂಕ್ರಮಣ: ಯಾವ ರಾಶಿಗೆ ಶುಭ, ಅಶುಭ? ಇಲ್ಲಿದೆ ವಿವರ


ಸಾಕಷ್ಟು ಶಕ್ತಿಯುತವಾದ ಸೌರ ಜ್ವಾಲೆಯು ನಮ್ಮ ಉಪಗ್ರಹಗಳನ್ನು ನಿಷ್ಕ್ರಿಯಗೊಳಿಸಬಹುದು. ಇದು ಭೂಮಿಯ ಮೇಲಿನ ಅನೇಕ ಕಾರ್ಯಗಳ ಮೇಲೆ ಪ್ರಮುಖ ಪರಿಣಾಮವನ್ನು ಬೀರೋ ಸಾಧ್ಯತೆ ಇದೆ.

Published by:Savitha Savitha
First published: