Surya Grahan 2021: ಭಾರತದಲ್ಲೂ ಗೋಚರವಾಗುತ್ತಾ ವರ್ಷದ ಮೊದಲ ಸೂರ್ಯಗ್ರಹಣ?; ನಾಳೆಯ ಗ್ರಹಣದ ಬಗ್ಗೆ ನಿಮಗೆಷ್ಟು ಗೊತ್ತು?

Solar Eclipse 2021: ಈ ವರ್ಷದ ಮೊದಲ ಸೂರ್ಯಗ್ರಹಣ ನಾಳೆ ಅಂದರೆ ಜೂನ್ 10ರಂದು ನಡೆಯಲಿದೆ. ನಾಳೆಯ ಸೂರ್ಯಗ್ರಹಣ ಭಾರತದಲ್ಲೂ ಗೋಚರವಾಗುತ್ತದಾ? ಎಂಬಿತ್ಯಾದಿ ಮಾಹಿತಿ ಇಲ್ಲಿದೆ...

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನಾಳೆ ಈ ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸಲಿದ್ದು, ಇಡೀ ಜಗತ್ತು ಈ ಖಗ್ರಾಸ ಸೂರ್ಯಗ್ರಹಣಕ್ಕೆ ಸಾಕ್ಷಿಯಾಗಲಿದೆ. ಕೆಲವು ದಿನಗಳ ಹಿಂದೆ ಸೂಪರ್​ಮೂನ್ ಮತ್ತು ಚಂದ್ರಗ್ರಹಣವನ್ನು ವೀಕ್ಷಿಸಿದ್ದ ಜನರು ಜೂನ್ 10ರಂದು ಸೂರ್ಯಗ್ರಹಣವನ್ನು ವೀಕ್ಷಿಸಬಹುದು. ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದಾಗ ಸೂರ್ಯಗ್ರಹಣ ಸಂಭವಿಸುತ್ತದೆ. ಹಾಗಿದ್ದರೆ ನಾಳೆಯ ಸೂರ್ಯಗ್ರಹಣ ಭಾರತದಲ್ಲೂ ಗೋಚರವಾಗುತ್ತದಾ? ಸೂರ್ಯಗ್ರಹಣದ ಸಂದರ್ಭದಲ್ಲಿ ಯಾವೆಲ್ಲ ಎಚ್ಚರಿಕೆಗಳನ್ನು ಅನುಸರಿಸಬೇಕು? ಬರಿಗಣ್ಣಿನಲ್ಲಿ ಸೂರ್ಯಗ್ರಹಣವನ್ನು ನೋಡಬಹುದಾ? ಎಂಬಿತ್ಯಾದಿ ಪ್ರಶ್ನೆಗಳಿಗೆ ಮಾಹಿತಿ ಇಲ್ಲಿದೆ...

ಈ ವರ್ಷದ ಮೊದಲ ಸೂರ್ಯಗ್ರಹಣ ನಾಳೆ ಅಂದರೆ ಜೂನ್ 10ರಂದು ನಡೆಯಲಿದೆ. ಈಶಾನ್ಯ ಅಮೇರಿಕಾ, ಅಟ್ಲಾಂಟಿಕ್ ಸಾಗರದ ಕೆಲವು ಭಾಗ, ಯುರೋಪ್, ಏಷ್ಯಾ, ಕೆನಡಾ, ರಷ್ಯಾ ರಾಷ್ಟ್ರಗಳಲ್ಲಿ ಸೂರ್ಯಗ್ರಹಣ ಸಂಪೂರ್ಣವಾಗಿ ಗೋಚರವಾಗಲಿದೆ. ನಾಳೆ ಅಮಾವಾಸ್ಯೆ ದಿನವಾಗಿದ್ದು, ನಾಳೆಯೇ ಶನಿ ಜಯಂತಿ ಕೂಡ ಇದೆ. ಹೀಗಾಗಿ, ಈ ಬಾರಿಯ ಸೂರ್ಯಗ್ರಹಣ ಕೊಂಚ ವಿಶೇಷವಾಗಿರಲಿದೆ.

ಇದನ್ನೂ ಓದಿ: Petrol Price Today: ರಾಜಸ್ಥಾನದಲ್ಲಿ 1 ಲೀಟರ್​ ಪೆಟ್ರೋಲ್​ಗೆ 106 ರೂ.!; ಸದ್ಯದಲ್ಲೇ ಶತಕ ಬಾರಿಸಲಿದೆ ಬೆಂಗಳೂರು

ನಾಳೆ ಶೇ. 97ರಷ್ಟು ಭಾಗ ಚಂದ್ರನು ಸೂರ್ಯನನ್ನು ಆವರಿಸಲಿದ್ದಾನೆ. ಎಲ್ಲೆಲ್ಲಿ ಸೂರ್ಯಗ್ರಹಣ ಗೋಚರವಾಗುತ್ತದೆಯೋ ಅಲ್ಲಿ ಸೂತಕದ ಅವಧಿ ಇರಲಿದೆ. ಆ ಪ್ರದೇಶಗಳಲ್ಲಿ ಸೂರ್ಯಗ್ರಹಣದ ಸಂದರ್ಭದಲ್ಲಿ ಊಟ, ತಿಂಡಿಗಳನ್ನು ಮಾಡದಿರುವುದು ಉತ್ತಮ ಎನ್ನಲಾಗಿದೆ. ಈ ಬಾರಿ ವೃಷಭ ರಾಶಿ ಮತ್ತು ಮೃಗಶಿರಾ ನಕ್ಷತ್ರದಲ್ಲಿ ಸೂರ್ಯಗ್ರಹಣ ನಡೆಯಲಿದ್ದು, ವೃಷಭ ರಾಶಿಯವರ ಮೇಲೆ ಸೂರ್ಯಗ್ರಹಣದ ಪ್ರಭಾವ ಹೆಚ್ಚಾಗಿರಲಿದೆ.

ಭಾರತದಲ್ಲೂ  ಸೂರ್ಯಗ್ರಹಣ ಗೋಚರ?:
ಹಾಗಿದ್ದರೆ ನಾಳೆಯ ಸೂರ್ಯಗ್ರಹಣ ಭಾರತದಲ್ಲೂ ಗೋಚರವಾಗಲಿದೆಯಾ? ಎಂಬ ಅನುಮಾನ ನಿಮಗಿದ್ದರೆ ಇಲ್ಲಿ ಓದಿ. ನಾಳೆಯ ಸೂರ್ಯಗ್ರಹಣ ಭಾರತದಲ್ಲಿ ಗೋಚರವಾಗುವುದಿಲ್ಲ. ಆದರೆ, ಈಶಾನ್ಯ ರಾಜ್ಯದವರಿಗೆ, ಜಮ್ಮು ಮತ್ತು ಕಾಶ್ಮೀರದ ಭಾಗದಲ್ಲಿ ಮಾತ್ರ ಗೋಚರವಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಅರುಣಾಚಲ ಪ್ರದೇಶ, ಲಡಾಖ್, ಜಮ್ಮು ಕಾಶ್ಮೀರದ ಭಾಗದಲ್ಲಿ ಸೂರ್ಯಾಸ್ತಕ್ಕೂ ಮುನ್ನ ಸೂರ್ಯಗ್ರಹಣ ಗೋಚರವಾಗಲಿದೆ ಎನ್ನಲಾಗಿದೆ. ಕರ್ನಾಟಕ ಸೇರಿ ದಕ್ಷಿಣ ಭಾರತದಲ್ಲಿ ಸೂರ್ಯಗ್ರಹಣ ಗೋಚರವಾಗುವುದಿಲ್ಲ.

ನಾಳೆ ಮಧ್ಯಾಹ್ನ 1.42ಕ್ಕೆ ಆರಂಭವಾಗುವ ಸೂರ್ಯಗ್ರಹಣ ಸಂಜೆ 6.41ರವರೆಗೂ ಇರಲಿದೆ. ಈ ಅವಧಿಯೊಳಗೆ ನಡೆಯುವ ಸೂರ್ಯಗ್ರಹಣ ಕೇವಲ 3 ನಿಮಿಷ 51 ಸೆಕೆಂಡ್​ಗಳ ಕಾಲ ಮಾತ್ರ ಗೋಚರವಾಗಲಿದೆ. ವರ್ಷದ ಮೊದಲ ಈ ವಿಶೇಷವಾದ ಸೂರ್ಯಗ್ರಹಣವನ್ನು ಕಣ್ತುಂಬಿಕೊಳ್ಳಲು ಇಡೀ ವಿಶ್ವವೇ ಕಾದು ಕುಳಿತಿದೆ. ನಾಸಾ ನೀಡಿರುವ ಮಾಹಿತಿ ಪ್ರಕಾರ, ರಷ್ಯಾ, ಕೆನಡಾ ಮತ್ತು ಗ್ರೀನ್​ಲ್ಯಾಂಡ್​ನಲ್ಲಿ ಸಂಪೂರ್ಣವಾಗಿ ಸೂರ್ಯಗ್ರಹಣದ ದರ್ಶನವಾಗಲಿದೆ.

ಇದನ್ನೂ ಓದಿ: Kanpur Accident: ಕಾನ್ಪುರದ ರಸ್ತೆ ಅಪಘಾತದಲ್ಲಿ 17 ಜನ ಸಾವು; ಪ್ರಧಾನಿ ಮೋದಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ

ಈ ಹಿಂದೆ 1873ರಲ್ಲಿ ಶನಿ ಜಯಂತಿಯಂದು ಸೂರ್ಯಗ್ರಹಣ ಸಂಭವಿಸಿತ್ತು. ಅದಾದ 148 ವರ್ಷಗಳ ನಂತರ ಶನಿ ಜಯಂತಿ ದಿನದಂದು ನಾಳೆ ಸೂರ್ಯಗ್ರಹಣ ಸಂಭವಿಸಲಿದೆ.
ಸೂರ್ಯಗ್ರಹಣವು ನಾಳೆ ಮಧ್ಯಾಹ್ನ 01.42 ರಿಂದ ಗ್ರಆರಂಭವಾಗಲಿದ್ದು, ಸಂಜೆ 6:41 ಕ್ಕೆ ಕೊನೆಯಾಗಲಿದೆ. ಈ ಅವಧಿಯನ್ನು ಸೂತಕಕಾಲ ಎಂದು ಪರಿಗಣಿಸಲಾಗಿದೆ.

ಜೂನ್ 10ರ ಬಳಿಕ ಮುಂದಿನ ಸೂರ್ಯಗ್ರಹಣ ಡಿಸೆಂಬರ್ 4ರಂದು ನಡೆಯಲಿದೆ. ಈ ಸೂರ್ಯಗ್ರಹಣ ಕೂಡ ಭಾರತದಲ್ಲಿ ಗೋಚರವಾಗುವುದಿಲ್ಲ. ದಕ್ಷಿಣ ಆಫ್ರಿಕಾ, ಫೆಸಿಫಿಕ್ ದ್ವೀಪ, ಅಟ್ಲಾಂಟಿಕ್ ಸಾಗರ, ಹಿಂದೂ ಮಹಾಸಾಗರದ ಜನರಿಗೆ ಈ ವರ್ಷದ ಎರಡೂ ಸೂರ್ಯಗ್ರಹಣಗಳು ಗೋಚರವಾಗಲಿವೆ. ಆದರೂ ನಾಳೆಯ ಖಗ್ರಾಸ ಸೂರ್ಯಗ್ರಹಣದ ಪ್ರಭಾವ ಭಾರತದ ಕೆಲವು ರಾಜ್ಯಗಳಲ್ಲಿ ಇರಲಿದೆ.
Published by:Sushma Chakre
First published: