Kili Paul: ಸೋಶಿಯಲ್ ಮೀಡಿಯಾ ಸ್ಟಾರ್ ಕಿಲಿ ಪೌಲ್‌ ಮೇಲೆ ಹಲ್ಲೆ, ಚಾಕುವಿನಿಂದ ಇರಿದು ಅಪರಿಚಿತರು ಎಸ್ಕೇಪ್!

ಕಿಲಿ ಪೌಲ್ ಮೇಲೆ ಐದು ಮಂದಿ ಅಪರಿಚಿತ ವ್ಯಕ್ತಿಗಳ ಗುಂಪು ಹಲ್ಲೆ ಮಾಡಿದೆ.  ಮೊದಲು ಕಿಲಿ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ ದುಷ್ಕರ್ಮಿಗಳು ಬಳಿಕ, ಪ್ರತಿ ದಾಳಿ ನಡೆಸಿದಾಗ ದೊಣ್ಣೆಯಿಂದ ಹೊಡೆದಿದ್ದಾರಂತೆ.

ಹಲ್ಲೆಗೊಳಗಾದ ಸೋಶಿಯಲ್ ಮೀಡಿಯಾ ಸ್ಟಾರ್ ಕಿಲಿ ಪೌಲ್

ಹಲ್ಲೆಗೊಳಗಾದ ಸೋಶಿಯಲ್ ಮೀಡಿಯಾ ಸ್ಟಾರ್ ಕಿಲಿ ಪೌಲ್

  • Share this:
ತಾಂಜೇನಿಯಾ: ಸೋಶಿಯಲ್ ಮೀಡಿಯಾದಲ್ಲಿ (Social Media) ಆ್ಯಕ್ಟೀವ್ (Active) ಇದ್ದವರು ಅಷ್ಟೇ ಅಲ್ಲ, ಸಾಮಾನ್ಯವಾಗಿ ಸೋಶಿಯಲ್ ಮೀಡಿಯಾ ಬಳಸುವ (Use) ಎಲ್ಲರಿಗೂ ಕಿಲಿ ಪೌಲ್ (Kili Paul) ಅಂದ್ರೆ ಯಾರು ಅಂತ ಗೊತ್ತಿರುತ್ತದೆ. ತಾಂಜೇನಿಯಾದ (Tanzania) ಸೋಶಿಯಲ್ ಮೀಡಿಯಾ ಸ್ಟಾರ್ (Social Media Star) ಈ ಕಿಲಿ ಪೌಲ್. ಇದೇ ಸೋಶಿಯಲ್ ಮೀಡಿಯಾ ಸ್ಟಾರ್ ಕಿಲಿ ಪೌಲ್ ಇದೀಗ ಹಲ್ಲೆಗೆ ಒಳಗಾಗಿದ್ದಾರಂತೆ. ಕಿಲಿ ಮೇಲೆ ಅಪರಿಚಿತ ದುಷ್ಕರ್ಮಿಗಳು ಚಾಕುವಿನಿಂದ (Knife) ದಾಳಿ (Attack) ಮಾಡಿದ್ದಾರೆ. ಬಳಿಕ ದೊಣ್ಣೆಯಿಂದಲೂ ಹೊಡೆದು ಎಸ್ಕೇಪ್ (Escape) ಆಗಿದ್ದಾರೆ. ಕಿಲಿ ಪೌಲ್ ಇದೀಗ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ (Hospital) ಚಿಕಿತ್ಸೆ (Treatment) ಪಡೆಯುತ್ತಿದ್ದಾರೆ. ಕಿಲಿ ಪೌಲ್ ಬೇಗ ಗುಣಮುಖರಾಗಲಿ (Cure) ಎಂದು ಅವರ ಅಭಿಮಾನಿಗಳು (Fans)  ಹಾರೈಸಿದ್ದಾರೆ.

ಕಿಲಿ ಪೌಲ್‌ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ

ಕಿಲಿ ಪೌಲ್ ಮೇಲೆ ಐದು ಮಂದಿ ಅಪರಿಚಿತ ವ್ಯಕ್ತಿಗಳ ಗುಂಪು ಹಲ್ಲೆ ಮಾಡಿದೆ.  ಮೊದಲು ಕಿಲಿ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ ದುಷ್ಕರ್ಮಿಗಳು ಬಳಿಕ, ಪ್ರತಿ ದಾಳಿ ನಡೆಸಿದಾಗ ದೊಣ್ಣೆಯಿಂದ ಹೊಡೆದಿದ್ದಾರಂತೆ. ಕಿಲಿ ಪೌಲ್ ರಕ್ತ ಸುರಿಸುತ್ತಾ, ಗಾಯದಿಂದ ನರಳುತ್ತಾ ನೆಲಕ್ಕೆ ಉರುಳುತ್ತಿದ್ದಂತೆ ಆ ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದಾರೆ.

ಕಿಲಿ ಪೌಲ್‌ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ

ದುಷ್ಕರ್ಮಿಗಳ ದಾಳಿಯಿಂದ ಕಿಲಿ ಪೌಲ್ ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ದೇಹದ ವಿವಿಧ ಭಾಗಗಳಿಗೆ 5 ಹೊಲಿಗೆ ಹಾಕಿದ್ದಾರೆ. ಸದ್ಯ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ ಅಂತ ವೈದ್ಯರು ಹೇಳಿದ್ದಾರೆ.

ಇದನ್ನೂ ಓದಿ: KGF-2: ರಾಕಿ ಭಾಯ್ ಡೈಲಾಗ್ ಹೇಳಿದ ಕಿಲಿ ಪೌಲ್, ವಿಡಿಯೋ ವೈರಲ್

ಇನ್ಸ್‌ಸ್ಟಾಗ್ರಾಮ್‌ನಲ್ಲಿ ಮಾಹಿತಿ ಹಂಚಿಕೊಂಡ ಕಿಲಿ

ಘಟನೆಯ ಬಗ್ಗೆ ಕಿಲಿ ತನ್ನ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ತನ್ನ ಗಾಯಗೊಂಡ ಚಿತ್ರದೊಂದಿಗೆ ಪೋಸ್ಟ್ ಮಾಡಿದ್ದಾನೆ. "ನನ್ನನ್ನು ರಕ್ಷಿಸಿಕೊಳ್ಳುವ ಹೋರಾಟದಲ್ಲಿ 5 ಜನರಿಂದ ನನ್ನ ಮೇಲೆ ದಾಳಿ ಮಾಡಲಾಯಿತು, ನನ್ನ ಬಲಗೈ ಬೆರಳಿಗೆ ಚಾಕುವಿನಿಂದ ಗಾಯವಾಯಿತು ಮತ್ತು ನನಗೆ 5 ಹೊಲಿಗೆಗಳು ಬಿದ್ದವು ಮತ್ತು ನಾನು ಕೋಲುಗಳು ಮತ್ತು ದೊಣ್ಣೆಗಳಿಂದ ಹೊಡೆದಿದ್ದೇನೆ ಅಂತ ಹೇಳಿದ್ದಾರೆ.

ನನಗಾಗಿ ಪ್ರಾರ್ಥಿಸಿ ಅಂತ ಅಭಿಮಾನಿಗಳಲ್ಲಿ ಮನವಿ

”ನಾನು ಇಬ್ಬರನ್ನು ಹೊಡೆದ ನಂತರ ನಾನು ನನ್ನನ್ನು ರಕ್ಷಿಸಿಕೊಳ್ಳುಲು ಸಾಧ್ಯವಾಯಿತು. ನಾನು ಹೊಡೆಯುತ್ತಿದ್ದಂತೆ ಅವರು ಓಡಿಹೋದರು ಆದರೆ ನಾನು ಈಗಾಗಲೇ ಗಾಯಗೊಂಡಿದ್ದೇನೆ. ದೇವರಿಗೆ ಧನ್ಯವಾದಗಳು, ಆದರೆ ನೀವು  ನನಗಾಗಿ ಪ್ರಾರ್ಥಿಸಿ ” ಅಂತ ಮನವಿ ಮಾಡಿದ್ದಾರೆ.

ಯಾರು ಈ ಕಿಲಿ ಪೌಲ್?

ತಾಂಜೇನಿಯಾದ ಕಿಲಿ ಪೌಲ್ ಮತ್ತು ಸಹೋದರಿ ನೀಮಾ ಪೌಲ್ ಇಬ್ಬರು ವಿಶ್ವದ ಪ್ರಸಿದ್ಧ ಹಾಡುಗಳಿಗೆ ಲಿಪ್ ಸಿಂಕ್ ಮಾಡಿ, ನರ್ತಿಸಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಅದರಲ್ಲೂ ಭಾರತದ ಹಾಡುಗಳಿಗೆ ಲಿಪ್ ಸಿಂಗ್ ಮಾಡುವ ಮೂಲಕ ಬಹಳ ಖ್ಯಾತಿ ಗಳಿಸಿದ್ದರು.

ಬಾಲಿವುಡ್, ಸ್ಯಾಂಡಲ್ ವುಡ್, ಟಾಲಿವುಡ್ ಸೇರಿದಂತೆ ಬಹುತೇಕ ಭಾಷೆಯ ಹಾಡುಗಳಿಗೆ ಲಿಪ್ ಸಿಂಕ್ ಮಾಡಿ ರೀಲ್ ಮಾಡುತ್ತಿದ್ದಾರೆ. ಕಿಲಿ ಪೌಲ್ ರೀಲ್ ಸಿಕ್ಕಾಪಟ್ಟೆ ವೈರಲ್ ಆಗುವ ಜೊತೆಗೆ ಭಾರಿ ಮೆಚ್ಚುಗೆಗೆ ಪಾತ್ರವಾಗಿವೆ. ಇನ್ಸ್ಟಾಗ್ರಾಮ್ ನಲ್ಲಿ ಮಿಲಿಯನ್ ಗಟ್ಟಲೇ ಫಾಲೋವರ್ಸ್ ಹೊಂದಿರುವ ಕಿಲಿ ಪೌಲ್ ಭಾರತೀಯರಿಗೂ ಅಚ್ಚುಮೆಚ್ಚು.

ಮೋದಿಯವರನ್ನು ಮೆಚ್ಚಿಕೊಂಡಿರುವ ಕಿಲಿ ಪೌಲ್

ಕಿಲಿ ಪೌಲ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕೂಡ ಮೆಚ್ಚುಗೆ ಮಾತುಗಳನ್ನು ಆಡಿದ್ದರು. ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮೋದಿ ಹೊಗಳಿದ್ದರು. ಬಳಿಕ ಕಿಲಿ ಪೌಲ್ ಧನ್ಯವಾದ ತಿಳಿಸಿದ್ದರು.

ಪ್ರಧಾನಿ ಮೋದಿ ಬೇರೆ ಬೇರೆ ಭಾಷೆಯ ಭಾರತೀಯ ಹಾಡುಗಳಿಗೆ ವಿಡಿಯೋ ಮಾಡುವಂತೆ ಸಲಹೆ ನೀಡಿದ್ದರು. ಮೋದಿ ಮಾತಿಗೆ ಕಿಲಿ ಪೌಲ್ ಸಂತೋಷಗೊಂಡಿದ್ದರು. ಪ್ರಧಾನಿ ಮೋದಿಯನ್ನು ಹಾಡಿಹೊಗಳಿದ್ದರು.

ಇದನ್ನೂ ಓದಿ: Modi About Kili: ಕಿಲಿ, ನೀಮಾರಂತೆ ಪ್ರಸಿದ್ಧ ಹಾಡುಗಳಿಗೆ ಲಿಪ್ ಸಿಂಕ್ ಮಾಡಿ ಎಂದ ಮೋದಿ

ಕಿಲಿ ಪೌಲ್‌ನನ್ನೂ ಕಾಡಿದ್ದ ಕೆಜಿಎಫ್‌ ಹಾಡು

ಇತ್ತೀಚಿಗಷ್ಟೆ ಕಿಲಿ ಪೌಲ್ ಕನ್ನಡದ ಕೆಜಿಎಫ್ ಹಾಡಿಗೂ ಲಿಪ್ ಸಿಂಗ್ ವಿಡಿಯೋ ಮಾಡಿದ್ದರು. ಈ ವಿಡಿಯೋ ಸಹ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಆರ್ ಆರ್ ಆರ್ ಸಿನಿಮಾ, ಸಮಂತಾ ಅವರ ಪುಷ್ಪ ಸಿನಿಮಾದ ಹಾಡು ಸೇರಿದಂತೆ ಅನೇಕ ಪ್ರಸಿದ್ಧ ಹಾಡುಗಳಿಗೆ ರೀಲ್ಸ್ ಮಾಡುವ ಮೂಲಕ ಸಿಕ್ಕಾಟ್ಟೆ ಫೇಮಸ್ ಆಗಿದ್ದರು.
Published by:Annappa Achari
First published: