ಫೇಸ್​ಬುಕ್​ ಖಾತೆದಾರರ ಮಾಹಿತಿ ಸೋರಿಕೆ ಪ್ರಕರಣ; ಗೌಪ್ಯತೆ ರಕ್ಷಣೆಗೆ ಮುಂದಾದ ಸೋಷಿಯಲ್​ ಮೀಡಿಯಾ ಸಂಸ್ಥೆ

news18
Updated:April 6, 2018, 8:43 AM IST
ಫೇಸ್​ಬುಕ್​ ಖಾತೆದಾರರ ಮಾಹಿತಿ ಸೋರಿಕೆ ಪ್ರಕರಣ; ಗೌಪ್ಯತೆ ರಕ್ಷಣೆಗೆ ಮುಂದಾದ ಸೋಷಿಯಲ್​ ಮೀಡಿಯಾ ಸಂಸ್ಥೆ
news18
Updated: April 6, 2018, 8:43 AM IST
ನ್ಯೂಸ್​ 18 ಕನ್ನಡ

 ನವದೆಹಲಿ,(ಏ.06):  ಭಾರತದಲ್ಲಿ ಸುಮಾರು 5 ಲಕ್ಷ ಫೇಸ್​ಬುಕ್ ಖಾತೆದಾರರ ಮಾಹಿತಿ ಸೋರಿಕೆಯಿಂದ ಮುಜುಗರ ಅನುಭವಿಸಿದ್ದ ಫೇಸ್​ಬುಕ್​, ಇದೀಗ ತನ್ನ ತಪ್ಪನ್ನು ಸರಿಮಾಡಿಕೊಳ್ಳಲು ಮುಂದಾಗಿದೆ. ಖಾತೆದಾರರ ಗೌಪ್ಯತೆ ಕಾಪಾಡಲು ಸೋಷಿಯಲ್ ಮೀಡಿಯಾ ಸಂಸ್ಥೆ ಮುಂದೆ ಬಂದಿದೆ.

ಅಷ್ಟೇ ಅಲ್ಲದೆ ಇನ್ನೋಂದು ವರ್ಷದಲ್ಲೀ ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಚುನಾವಣೆ ಎದುರಾಗಲಿದೆ. ಹೀಗಾಗಿ ವೈಯಕ್ತಿಕ ಮಾಹಿತಿ ರಕ್ಷಣೆಗೆ ಇನ್ನಷ್ಟು ತಂತ್ರಜ್ಞಾನ ಅಳವಡಿಕೆ ಮಾಡುತ್ತಿದ್ದು, ಸುಮಾರು 20 ಸಾವಿರ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಿದೆ ಎಂದು ಫೇಸ್​ಬುಕ್​ ಸಂಸ್ಥಾಪಕ ಮಾರ್ಕ್​ ಝುಕರ್​ ಬರ್ಗ್​ ಹೇಳಿಕೆ ನೀಡಿದ್ದಾರೆ​.

ಇನ್ನೊಂದು ವರ್ಷದಲ್ಲಿ ಭಾರತ, ಪಾಕಿಸ್ತಾನ, ಬ್ರೆಜಿಲ್​, ಮೆಕ್ಸಿಕೋ, ಹಂಗೇರಿ ಹಾಗೂ ಅಮೆರಿಕಾದ ಮಧ್ಯಂತರ ಚುನಾವಣೆಗಳು ಎದುರಾಗಲಿವೆ. ಹಲವು ಪಕ್ಷಗಳು ತಮ್ಮ ಪ್ರಚಾರಕ್ಕಾಗಿ ಫೇಸ್​ಬುಕ್ ಅವಲಂಬಿಸಿದ್ದು, ಖಾತೆದಾರರ ಗೌಪ್ಯತೆ ಕಾಪಾಡಲು ಸಾಮಾಜಿಕ ಜಾಲತಾಣದ ದೈತ್ಯ ಸಂಸ್ಥೆ ಮುಂದಾಗಿದೆ. ಈಗಾಗಲೇ 15 ಸಾವಿರ ಉದ್ಯೋಗಿಗಳು ತಮ್ಮ ಕೆಲಸ ಪ್ರಾರಂಭಿಸಿದ್ದು, ವರ್ಷದ ಅಂತ್ಯದಲ್ಲಿ ಇನ್ನೂ 5 ಸಾವಿರ ಉದ್ಯೋಗಿಗಳನ್ನ ನೇಮಕ ಮಾಡಿಕೊಳ್ಳುವುದಾಗಿ ತಿಳಿಸಿದೆ.

 

 
First published:April 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ