ರೈಲಿನಲ್ಲಿ ಗೊರಕೆ ಹೊಡೆದ ವ್ಯಕ್ತಿಗೆ ರಾತ್ರಿಯಿಡೀ ಎದ್ದು ಕೂರಿಸಿ ಹಿಂಸೆ ಕೊಟ್ಟ ಪುಂಡರ ಗುಂಪು..!


Updated:February 14, 2018, 7:26 PM IST
ರೈಲಿನಲ್ಲಿ ಗೊರಕೆ ಹೊಡೆದ ವ್ಯಕ್ತಿಗೆ ರಾತ್ರಿಯಿಡೀ ಎದ್ದು ಕೂರಿಸಿ ಹಿಂಸೆ ಕೊಟ್ಟ ಪುಂಡರ ಗುಂಪು..!

Updated: February 14, 2018, 7:26 PM IST
ಮುಂಬೈ(ಫೆ.14): ರೈಲಿನಲ್ಲಿ ಗೊರಕೆ ಹೊಡೆದು ತಮ್ಮ ನಿದ್ರೆ ಹಾಳು ಮಾಡಿದನೆಂಬ ಕಾರಣಕ್ಕೆ ವ್ಯಕ್ತಿಯೊಬ್ಬನನ್ನ ಪುಂಡರ ಗುಂಪೊಂದು ರಾತ್ರಿ ಇಡೀ ನಿದ್ರೆ ಮಾಡದಂತೆ ಬಲವಂತವಾಗಿ ಎದ್ದು ಕೂರಿಸಿದ ಘಟನೆ ಮುಂಬೈನಿಂದ ವರದಿಯಾಗಿದೆ.

ಕಳೆದ ವಾರ ಮುಂಬೈನ ದರ್ಬಾಂಗಾ ಪವನ್ ಎಕ್ಸ್​ಪ್ರೆಸ್ ರೈಲಿನಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಪಕ್ಕದಲ್ಲಿ ಗೊರಕೆ ಹೊಡೆಯುತ್ತಿದ್ದ ವ್ಯಕ್ತಿಯಿಂದ ತಮ್ಮ ನಿದ್ರೆ ಹಾಳಾಯಿತೆಂದು ಭಾವಿಸಿದ ಗುಂಪು ನಾವು ನಿದ್ದೆ ಮಾಡಬೇಕೆಂದರೆ ಆತನನ್ನ ರಾತ್ರಿಯಿಡೀ ಎಚ್ಚರದಿಂದಿರುವಂತೆ ನೋಡಿಕೊಳ್ಳಬೇಕು ಎಂದು ನಿರ್ಧರಿಸಿದೆ. ಹೀಗಾಗಿ, ಐದಾರು ಗಂಟೆ ಈ ವ್ಯಕ್ತಿ ಮಲಗದಂತೆ ಹಿಂಸೆ ಕೊಟ್ಟಿದ್ದಾರೆ. ಸಂತ್ರಸ್ತನನ್ನ ರಾಮಚಂದ್ರ ಎಂದು ಗುರ್ತಿಸಲಾಗಿದೆ. ರಾಮಚಂದ್ರ ಎಚ್ಚರದಿಂದಿರುವಂತೆ ಟಾರ್ಚರ್ ಕೊಟ್ಟು ತಾವು ನಿದ್ರೆಗೆ ಜಾರಿದ್ದಾರೆ.

ಘಟನೆ ಬಗ್ಗೆ ಪುಂಡರ ಗುಂಪು ಮತ್ತು ರಾಮಚಂದ್ರ ಅವರ ನಡುವೆ ಕಾವೇರಿದ ಮಾತುಕತೆ ಸಹ ನಡೆದಿದೆ. ಪಶ್ಚಿಮ ಕೇಂದ್ರ ರೈಲ್ವೆಯ ಜಬಲ್ಪುರದ ಚೀಫ್ ಟಿಕೆಟ್ ಇನ್ಸ್​ಪೆಕ್ಟರ್ ಗಣೇಶ್ ಎಸ್ ವಿರ್ಹಾ ಘಟನೆಯನ್ನ ಖಚಿತಪಡಿಸಿದ್ದಾರೆ. ಆದರೆ, ಹಿಂಸೆ ಅನುಭವಿಸಿದ ರಾಮಚಂದ್ರ ದೂರು ನೀಡಲು ಹಿಂದೇಟು ಹಾಕಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಬೆಳಗ್ಗೆ 5 ಗಂಟೆ ಸುಮಾರಿಗೆ ಜಬಲ್ಪುರದಲ್ಲಿ ರೈಲು ಹತ್ತಿದಾಗ ನಡೆದ ಘಟನೆ ಬಗ್ಗೆ ಪ್ರಯಾಣಿಕರು ನಮಗೆ ವಿವರಿಸಿದರು. ಘಟನೆ ಸಂಬಂಧ ನಡೆದ ಮಾತಿನ ಚಕಮಕಿ ಕುರಿತಂತೆಯೂ ನನಗೆ ಮಾಹಿತಿ ಸಿಕ್ಕಿತು. ರಾಮಚಂದ್ರ ಘಟನೆಯ ಎಲ್ಲ ವಿಚಾರ ತಿಳಿಸಿದರು. ಆದರೆ, ಅವರು ದೂರು ನೀಡಲು ಸಿದ್ಧವಿರಲಿಲ್ಲ. ತಮ್ಮೊಳಗೆ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಂಡಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.

 
First published:February 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ