UK Business: ಕೋವಿಡ್‌ನಿಂದ ಹಾನಿಯಾದ ಉದ್ದಿಮೆಗಳ ಚೇತರಿಕೆಗೆ ರಿಶಿ ಸುನಕ್ ಸಕತ್‌ ಪ್ಯಾಕೇಜ್‌ ಘೋಷಣೆ

ಈ ಘೋಷಣೆಯಿಂದಾಗಿ ಸುನಕ್ ನಿಜಕ್ಕೂ ಜನರು ಈ ಕಷ್ಟದ ಪರಿಸ್ಥಿತಿಯಲ್ಲಿ ಕೇಳಬಯಸುವ ಘೋಷಣೆ ಮಾಡಿದಂತಹ ಏಕೈಕ ಮಂತ್ರಿಯಾಗಿ ಹೊರಹೊಮ್ಮಿದ್ದಾರೆಂದರೂ ತಪ್ಪಾಗಲಾರದು.

ರಿಶಿ ಸುನಕ್

ರಿಶಿ ಸುನಕ್

  • Share this:

ಬ್ರಿಟನ್ (Britain) ದೇಶವು ಸದ್ಯ ಕೋವಿಡ್ ಹೊಸ ರೂಪಾಂತರಿಯಿಂದ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದೆ. ಸೋಂಕಿತರ ಸಂಖ್ಯೆ ದಿನೇ ದಿನೇ ಏರುತ್ತಲೇ ಇದೆ ಎಂದು ವರದಿಯಾಗುತ್ತಿದೆ. ಅಲ್ಲದೆ ಈ ಕೋವಿಡ್ ಏರಿಕೆಯಿಂದಾಗಿ ಹಲವಾರು ಉದ್ದಿಮೆಗಳು( Industries )ನೆಲಕಚ್ಚುತ್ತಿವೆ (Backdrop) ಇದೊಂದು ಕಷ್ಟಕರ ಸಮಯವಾಗಿದ್ದು ಈ ಹಿನ್ನೆಲೆಯಲ್ಲಿ ಭಾರತ (India-born) ಸಂಜಾತರಾದ ರಿಶಿ ಸುನಕ್ (Rishi Sunak) ಎಂಬುವವರು ಕುಸಿಯುತ್ತಿರುವ ಉದ್ದಿಮೆಗಳಿಗೆ ಮತ್ತೆ ಮರುಜೀವ(Declining) ತುಂಬಲು ಮುಂದಾಗಿದ್ದಾರೆ.


ರಿಶಿ ಸುನಕ್ ಅವರ ಕೊಡುಗೆ: ಬ್ರಿಟಿಷ್ ಖಜಾನೆಯ ಚಾನ್ಸಲರ್ ಆಗಿರುವ ರಿಶಿ ಸುನಕ್ ಪ್ರಸ್ತುತ ಪರಿಸ್ಥಿತಿಯಲ್ಲಿ ದೇಶ ಎದುರಿಸುತ್ತಿರುವ ರಾಜಕೀಯ ಹಾಗೂ ಆರ್ಥಿಕ ಹಿನ್ನಡೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಮುನ್ನೆಲೆಗೆ ಬಂದಿದ್ದು ದೇಶದಲ್ಲಿ ಕೋವಿಡ್ ಪ್ರಕರಣಗಳ ದಿಢೀರ್‌ ಏರಿಕೆಯಿಂದಾಗಿ ಕುಸಿಯುತ್ತಿರುವ ಉದ್ದಿಮೆಗಳು ಮತ್ತೆ ಮರುಹುಟ್ಟು ಪಡೆಯುವಂತೆ ಅನುಕೂಲವಾಗಲು ಒಂದು ಬಿಲಿಯನ್ ಪೌಂಡ್‌ಗಳಷ್ಟು ಆರ್ಥಿಕ ಪ್ಯಾಕೇಜ್ ಘೋಷಿಸಿದ್ದಾರೆ. ಈ ಮೊತ್ತ ಉದ್ದಿಮೆಗಳು ಚೇತರಿಸಿಕೊಳ್ಳಲು ಬಲು ಕಡಿಮೆ ಎಂದೇ ಹೇಳಲಾಗುತ್ತಿದ್ದರೂ ಒಂದು ಸ್ತರದಲ್ಲಿ ಮಹತ್ವ ಪ್ರಮಾಣವೂ ಸಹ ಆಗಿದೆ ಎಂಬ ಅಭಿಪ್ರಾಯ ಮೂಡಿ ಬಂದಿದೆ.


ಅಲೋಕ್ ಶರ್ಮಾ ಸುರಕ್ಷಿತ: ಈ ಘೋಷಣೆಯಿಂದಾಗಿ ಸುನಕ್ ನಿಜಕ್ಕೂ ಜನರು ಈ ಕಷ್ಟದ ಪರಿಸ್ಥಿತಿಯಲ್ಲಿ ಕೇಳಬಯಸುವ ಘೋಷಣೆ ಮಾಡಿದಂತಹ ಏಕೈಕ ಮಂತ್ರಿಯಾಗಿ ಹೊರಹೊಮ್ಮಿದ್ದಾರೆಂದರೂ ತಪ್ಪಾಗಲಾರದು. ಬ್ರಿಟನ್ನಿನ ಪ್ರಸ್ತುತ ಮಂತ್ರಿ ಮಂಡಲದಲ್ಲಿ ಸದಾ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲ ಮತ್ತೊಬ್ಬ ವ್ಯಕ್ತಿಯೆಂದರೆ ಭಾರತ ಮೂಲದ ಅಲೋಕ್ ಶರ್ಮಾ. ಆದರೆ ಅವರು ಈಗ ಕ್ಲೈಮೇಟ್ ಬದಲಾವಣೆ ಸಮ್ಮಿಟ್ ಕಾಪ್-26ಗೆ ಅಧ್ಯಕ್ಷರಾಗಿದ್ದಾರೆ.


ಈ ಮುಂಚೆ ಅಲೋಕ್ ಉದ್ಯಮ ಕಾರ್ಯದರ್ಶಿ ಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಈಗ ಅವರಿಗೆ ಕ್ಯಾಬಿನೆಟ್ ಸ್ಥಾನಮಾನವಿದೆಯಾದರೂ ಮಂತ್ರಿಯ ಹುದ್ದೆ ಇಲ್ಲದೆ ಇರುವುದರಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಬರುವುದಿಲ್ಲ. ಹೀಗಾಗಿ ಈಗಾಗಲೇ ಈ ಪರಿಸ್ಥಿತಿ ನಿಭಾಯಿಸುವ ಕುರಿತಂತೆ ಕ್ಯಾಬಿನೆಟ್ ಮಂತ್ರಿಗಳೊಂದಿಗೆ ಸಾಕಷ್ಟು ಕಷ್ಟಪಡುತ್ತಿರುವ ಪ್ರಧಾನಿ ಬೋರಿಸ್ ಜಾನ್ಸನ್ ಗಿಂತ ಸುರಕ್ಷಿತ ಸ್ಥಾನದಲ್ಲಿ ಈಗ ಅಲೋಕ್ ಇದ್ದಾರೆ ಎಂದೇ ಹೇಳಬಹುದಾಗಿದೆ.


ಇದನ್ನೂ ಓದಿ: Bitcoin: 3000 ಕೋಟಿ ರೂ. ಮೌಲ್ಯದ ಬಿಟ್ ಕಾಯಿನ್ ಎಸೆದ್ಬಿಟ್ಟ.. 8 ವರ್ಷದಿಂದ ಹುಡುಕ್ತಿದ್ರೂ ಸಿಕ್ತಿಲ್ವಂತೆ!

ಟ್ವೀಟ್ ಮೂಲಕ ತೊಂದರೆಗೆ ಸಿಲುಕಿಕೊಂಡ ಎಂಪಿ ಪ್ರೀತ್ ಗಿಲ್: ಲೇಬರ್ ಪಕ್ಷದ ಎಂಪಿ ಆಗಿರುವ ಪ್ರೀತ್ ಗಿಲ್ ಇತ್ತೀಚಿನ ಗೋಲ್ಡನ್ ಟೆಂಪಲ್ ವಿವಾದ ಕುರಿತಂತೆ ತಮ್ಮ ಟ್ವಿಟ್ಟರ್‌ ಖಾತೆಯ ಮೂಲಕ ಸ್ಪಷ್ಟವಾಗಿ ಸುಳ್ಳು ಎಂದೇ ಹೇಳಬಹುದಾದ ಟ್ವಿಟ್ ಮಾಡಿದ್ದು ಅದೀಗ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಖಲಿಸ್ತಾನಿಗಳ ಕೃಪಾಕಟಾಕ್ಷದೊಂದಿಗೆ ವೃತ್ತಿಯಲ್ಲಿ ಬಡ್ತಿ ಪಡೆದಿರುವರು ಎಂಬ ಅಭಿಪ್ರಾಯ ಹೊಂದಿರುವ ಪ್ರೀತ್ ಗಿಲ್ ತಮ್ಮ ಟ್ವೀಟ್‌ನಲ್ಲಿ ಅದೊಂದು ಹಿಂದೂಗಳ ಷಡ್ಯಂತ್ರ ಎಂದು ಪ್ರತಿಪಾದಿಸಿ ತದನಂತರ ಅದನ್ನು ಅಳಿಸಿಹಾಕಿದ್ದರು. ಆದರೆ ಈ ಸಂಬಂಧ ಬ್ರಿಟನ್ನಿನ ಹಿಂದೂಪರ ಸಂಘಟನೆಗಳು ಅವರ ವಿರುದ್ಧ ದೂರು ದಾಖಲಿಸಿವೆ.


ಓಮೈಕ್ರಾನಿನ ಅತಿ ಹಗುರ ಲಕ್ಷಣ ಕೊಂಚ ನಿಟ್ಟುಸಿರು ಬಿಡುವಂತೆ ಮಾಡಿದೆ :ಈಗ ಎಲ್ಲೆಡೆ ನಿಧಾನವಾಗಿ ಓಮೈಕ್ರಾನಿ ಹಾವಳಿ ಉಂಟಾಗುವ ಆತಂಕ ಮನೆ ಮಾಡಿದೆ. ನಿಧಾನವಾಗಿ ಓಮೈಕ್ರಾನಿ ಪ್ರಕರಣಗಳಲ್ಲಿ ಏರಿಕೆಯಾಗುತ್ತಿರುವುದೇ ಇದಕ್ಕೆ ಕಾರಣವಾಗಿದೆ. ಆದರೂ ಈ ಮೊದಲು ಜನರು ಓಮೈಕ್ರಾನಿ ಬಗ್ಗೆ ಮೊದಲಿಗೆ ಕೇಳಿದ್ದಾಗ ಪಡುತ್ತಿದ್ದ ಆತಂಕದ ವಾಸ್ತವತೆ ಈಗ ಸುಳ್ಳಾಗುತ್ತಿದೆ ಎಂಬ ಅನಿಸಿಕೆ ಉಂಟಾಗುತ್ತಿದೆ.


ಇದನ್ನೂ ಓದಿ: Explainer: ಕ್ರಿಸ್‌ಮಸ್ ಪಾರ್ಟಿ ಹಗರಣದಲ್ಲಿ ಸಿಲುಕಿರುವ ಯುಕೆ ಸರ್ಕಾರ..! ಏನಿದು ಪ್ರಕರಣ..?

ಏಕೆಂದರೆ ಮೊದಲ ಎರಡು ವೈರಾಣುಗಳಂತೆ ಓಮೈಕ್ರಾನಿ ಆತಂಕಪಡುವ ಮಟ್ಟಿನಷ್ಟು ಇಲ್ಲಿಯವರೆಗೂ ಹಾನಿ ಮಾಡದೆ ಇರುವುದು ಈಗ ಬಹುತೇಕ ಜನರು ಸ್ವಲ್ಪ ನಿರಾತಂಕದ ನಿಟ್ಟುಸಿರು ಬಿಡುವಂತಾಗಿದೆ. ಮೊದಲಿನಂತೆ ಪ್ರತಿ 2 ದಿನಗಳಿಗೊಮ್ಮೆ ಪ್ರಕರಣಗಳು ದುಪ್ಪಟ್ಟಾಗುತ್ತಿಲ್ಲ. ಆಸ್ಪತ್ರೆಗೆ ದಾಖಲಾದವರಲ್ಲಿ ಸಾವಿನ ಪ್ರಮಾಣ ಕಡಿಮೆಯಾಗುತ್ತಿದೆ. ಇದು ಒಟ್ಟಾರೆಯಾಗಿ ಸ್ವಲ್ಪ ಮಟ್ಟಿಗೆ ನಿರಾತಂಕದ ವಾತಾವರಣ ಮೂಡಿಸಿದಂತಾಗಿದೆ. ಅಷ್ಟಕ್ಕೂ ಈ ಕುರಿತು ನಿಖರವಾಗಿ ಏನೂ ಹೇಳಲು ಸಾಧ್ಯವಿಲ್ಲವಾಗಿದ್ದು ಕಾದು ನೋಡಬೇಕಾಗಿದೆ ಅಷ್ಟೆ.

Published by:vanithasanjevani vanithasanjevani
First published: