Sneha Dubey: ವಿಶ್ವಸಂಸ್ಥೆಯ ಸಭೆಯಲ್ಲಿ ಪಾಕ್​ ಬೆವರಿಳಿಸಿದ ಸ್ನೇಹಾ ದುಬೆ: ಯುವ ಐಎಫ್​ಎಸ್​ ಅಧಿಕಾರಿ ಮಾತಿಗೆ ಮೆಚ್ಚುಗೆ ಮಹಾಪೂರ

ಸ್ನೇಹಾ 12 ವರ್ಷದವಳಿದ್ದಾಗಲೇ ಭಾರತೀಯ ವಿದೇಶಿ ಸೇವೆ ಸೇರಲು ಇಚ್ಛಿಸಿದ್ದರು. ಇದರ ಪರಿಣಾಮವಾಗಿ 2011ರಲ್ಲಿ ಮೊದಲ ಪ್ರಯತ್ನದಲ್ಲೇ ಯುಪಿಎಸ್​ಸಿಯ ನಾಗರೀಕ ಸೇವೆ ಪರೀಕ್ಷೆಯಲ್ಲಿ ಪಾಸ್​ ಆಗಿದ್ದರು.

ಸ್ನೇಹಾ ದುಬೆ

ಸ್ನೇಹಾ ದುಬೆ

 • Share this:
  ನವದೆಹಲಿ(ಸೆ. 25): ಪದೇ ಪದೇ ಕದನ ವಿರಾಮ ನೀತಿ ಉಲ್ಲಂಘಿಸುವ ಪಾಕಿಸ್ತಾನದ ವಿರುದ್ಧ ವಿಶ್ವಸಂಸ್ಥೆಯ (UN) ಸಾಮಾನ್ಯ ಸಭೆಯಲ್ಲಿ ಭಾರತದ ಅಧಿಕಾರಿ ಸ್ನೇಹಾ ದುಬೆ (Sneha Dubey)  ಎಚ್ಚರಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೇ, ಪಾಕಿಸ್ತಾನ ಭಯೋತ್ಪಾದನೆಯನ್ನು ಪೋಷಣೆ ಮಾಡುತ್ತಿದ್ದು, ಅಲ್ಪಸಂಖ್ಯಾತರ ದಮನಕಾರಿ ನಿಲುವು ತೆಗೆದುಕೊಳ್ಳುತ್ತಿದೆ. ಜಮ್ಮು ಮತ್ತು ಕಾಶ್ಮೀರದ ಆಕ್ರಮಿತ ಪ್ರದೇಶವನ್ನು ಕೂಡಲೇ ತೊರೆಯಬೇಕು ಎಂದು ಆಗ್ರಹಿಸಿದ್ದಾರೆ. ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ತಮ್ಮ ಗಟ್ಟಿ ನಿಲುವಿನ ಮೂಲಕ ಶತ್ರು ದೇಶದ ವಿರುದ್ಧ ಎಚ್ಚರಿಕೆ ನೀಡಿದ 2012ರ ಐಎಫ್​ಎಸ್​ ಅಧಿಕಾರಿ ಮಾತಿಗೆ ಈಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಆಕೆಯನ್ನು ಮುಕ್ತ ಕಂಠದಿಂದ ಹೊಗಳಲಾಗುತ್ತಿದ್ದು, ಎಲ್ಲರ ಕಣ್ಮಣಿಯಾಗಿ ಈಗ ಸ್ನೇಹ ದುವೆ ಹೊರ ಹೊಮ್ಮಿದ್ದಾರೆ.

  ವಿಶ್ವಸಂಸ್ಥೆಯಲ್ಲಿ ಭಾರತದ ಪ್ರಥಮ ಕಾರ್ಯದರ್ಶಿಯಾಗಿರುವ ಸ್ನೇಹಾ ದುಬೆ  (India’s first secretary at the United Nations) ಶನಿವಾರ ಸಾಮಾನ್ಯ ಸಭೆಯಲ್ಲಿ ಪಾಕ್​ ಬೆವರಿಳಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಆಕೆ ನಿರ್ವಹಿಸಿದ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ಈ ಹಿನ್ನಲೆ ಅನೇಕರು ಈಕೆ ಕುರಿತು ಸಂಶೋಧನೆಗೆ ಇಳಿದಿದ್ದಾರೆ. ಯುವ ಅಧಿಕಾರಿಯ ಖದರ್​ಗೆ ಮೆಚ್ಚಿದ ಅನೇಕರು ಆಕೆಯ ದಿಟ್ಟತನಕ್ಕೆ ಸಲಾಂ ಎಂದಿದ್ದಾರೆ.

  ವಿಶ್ವಸಂಸ್ಥೆಯಲ್ಲಿ ಸ್ನೇಹಾ ದುಬೆ ಆಡಿದ ಮಾತುಗಳು
  ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್‍ಖಾನ್ ನೀಡಿದ್ದ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಅವರು, ಪಾಕಿಸ್ತಾನ ಭಯೋತ್ಪಾದಕತೆಯನ್ನು ಹಿಂಬಾಗಿಲ ಮೂಲಕ ಪೋಷಿಸುತ್ತಿದೆ. ತಮ್ಮ ಭಯೋತ್ಪಾದಕ ಕೃತ್ಯಗಳನ್ನು ಮುಚ್ಚಿಡಲು ಅದು ಪ್ರಯತ್ನಿಸುತ್ತಿದೆ. ಪಾಕ್​ ಆಕ್ರಮಿಸಿರುವುದು ಭಾರತದ ಜಾಗ ಎಂಬುದು ಇಡೀ ಜಗತ್ತಿಗೆ ಗೊತ್ತಿದೆ. ಪಾಕಿಸ್ತಾನ ವಿಶ್ವಸಂಸ್ಥೆಯ ವೇದಿಕೆಗಳನ್ನು ಪದೇ ಪದೇ ದುರುಪಯೋಗ ಮಾಡಿಕೊಳ್ಳುತ್ತಿದೆ. ಆದರೆ, ಈ ವೇದಿಕೆಯಲ್ಲಿ ನಾವು ನಮ್ಮ ಧ್ವನಿ ಎತ್ತಲು ಬಳಸಿಕೊಳ್ಳುತ್ತೇವೆ ಎಂದು ತಿರುಗೇಟು ನೀಡಿದ್ದಾರೆ.

  ಯಾರೀ ಅಧಿಕಾರಿ?
  ಸ್ನೇಹಾ ದುಬೆ 2012ರ ಬ್ಯಾಚ್​ನ ಐಎಫ್​ಎಸ್​ ಅಧಿಕಾರಿ. ಗೋವಾದಲ್ಲಿ ಶಾಲಾ ಶಿಕ್ಷಣ ಮುಗಿಸಿರುವ ಇವರು ಪುಣೆಯ ಫೆರ್ಗುಸನ್​ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪಡೆದಿದ್ದಾರೆ. ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಇಂಟರ್ನ್ಯಾಷನಲ್ ಸ್ಟಡೀಸ್‌ನಿಂದ ಎಂಫಿಲ್ ಪದವಿ ಪಡೆದಿದ್ದಾರೆ.

  ಸ್ನೇಹಾ 12 ವರ್ಷದವಳಿದ್ದಾಗಲೇ ಭಾರತೀಯ ವಿದೇಶಿ ಸೇವೆ ಸೇರಲು ಇಚ್ಛಿಸಿದ್ದಳು. ಇದರ ಪರಿಣಾಮವಾಗಿ 2011ರಲ್ಲಿ ಮೊದಲ ಪ್ರಯತ್ನದಲ್ಲೇ ಯುಪಿಎಸ್​ಸಿಯ ನಾಗರೀಕ ಸೇವೆ ಪರೀಕ್ಷೆಯಲ್ಲಿ ಪಾಸ್​ ಆಗಿದ್ದರು.

  ಇದನ್ನು ಓದಿ: ಓದಿದ್ದು ಎಂಜಿನಿಯರಿಂಗ್; ಕನ್ನಡದಲ್ಲಿ ಪರೀಕ್ಷೆ ಬರೆದು ಯುಪಿಎಸ್ಸಿಯಲ್ಲಿ ಸಾಧನೆ ಮಾಡಿದ ಶ್ರೀನಿವಾಸ್

  ಅಂತರಾಷ್ಟ್ರೀಯ ವ್ಯವಹಾರಗಳ ಕಲಿಕೆ ಪಡೆಯಬಹುದು. ಜೊತೆಗೆ ಹೊಸ ಸಂಸ್ಕೃತಿಗಳ ಅರಿವು ಮೂಡಲಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸುವುದು, ಪ್ರಮುಖ ನೀತಿ ನಿರ್ಧಾರಗಳ ಭಾಗವಾಗಿ, ಜನರಿಗೆ ಸಹಾಯ ಮಾಡುವುದು ನನ್ನ ಉದ್ದೇಶ ಎಂದು ಈ ಹಿಂದೆ ತಿಳಿಸಿದ್ದರು.

  ಐಎಫ್​ಎಸ್​ ಆಗುವ ಕನಸು ನನಸು 

  ಸ್ನೇಹ ತಂದೆ ಮಲಟ್ಟಿನ್ಯಾಷನಲ್​ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೆ, ಅವರ ತಾಯಿ ಶಾಲಾ ಶಿಕ್ಷಕಿಯಾಗಿದ್ದರು. ತಮ್ಮ ಕುಟುಂಬದಲ್ಲಿ ನಾಗರಿಕ ಸೇವೆ ಸೇರಿದ ಮೊದಲ ವ್ಯಕ್ತಿ ಸ್ನೇಹ ಆಗಿದ್ದಾರೆ.

  ಇದನ್ನು ಓದಿ: 2016ರ ಟಾಪರ್ ಟೀನಾ ಡಾಬಿ ತಂಗಿ ರಿಯಾಗೆ ಯುಪಿಎಸ್​ಸಿಯಲ್ಲಿ 15ನೇ rank

  ಸ್ನೇಹಾ ದುಬೆ ಐಎಫ್​ಎಸ್​ ಆದ ಬಳಿಕ ಮೊದಲು ಯು ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ನೇಮಕ ಗೊಂಡಿದ್ದರು. ಬಳಿಕ 2014 ರಲ್ಲಿ ಮ್ಯಾಡ್ರಿಡ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ನೇಮಕಗೊಂಡರು. ಸದ್ಯ ವಿಶ್ವ ಸಂಸ್ಥೆಯ ಭಾರತದ ಮೊದಲ ಕಾರ್ಯದರ್ಶಿಯಾಗಿ ಅವರು ಸೇವೆ ಸಲ್ಲಿಸುತ್ತಿದ್ದಾರೆ.

  ವಿಶ್ವಸಂಸ್ಥೆಯಲ್ಲಿ ತಮ್ಮ ಭಾಷಣದ ವಿಡಿಯೋ ವೈರಲ್​ ಆಗುತ್ತಿದ್ದಂತೆ ಅವರು ಟ್ವಿಟರ್​ನಲ್ಲಿ ಮೆಚ್ಚುಗೆ ಪಡೆದಿದ್ದಾರೆ. ಸ್ನೇಹಾ ಅತ್ಯಂತ ಜಾಗುರುಕವಾಗಿ ತಮ್ಮ ಪದಗಳ ಮೂಲಕ ಪಾಕಿಸ್ತಾನದ ಬಾಯಿ ಮುಚ್ಚಿಸಿದ್ದಾರೆ ಎಂಬ ಹೊಗಳಿಕೆ ವ್ಯಕ್ತವಾಗಿದೆ.
  Published by:Seema R
  First published: