'ಚಾಕೋಲೇಟ್​ ಕಿತ್ತುಕೊಂಡರೆ ಮಗುವನ್ನು ಸಮಾಧಾನ ಮಾಡಲೂ ಗೊತ್ತಿರಬೇಕು'; ಸ್ಪೀಕರ್​ ಸುಮಿತ್ರಾ ಮಹಾಜನ್​ ಹೇಳಿದ್ದೇನು?

news18
Updated:September 7, 2018, 9:18 AM IST
'ಚಾಕೋಲೇಟ್​ ಕಿತ್ತುಕೊಂಡರೆ ಮಗುವನ್ನು ಸಮಾಧಾನ ಮಾಡಲೂ ಗೊತ್ತಿರಬೇಕು'; ಸ್ಪೀಕರ್​ ಸುಮಿತ್ರಾ ಮಹಾಜನ್​ ಹೇಳಿದ್ದೇನು?
news18
Updated: September 7, 2018, 9:18 AM IST
ನ್ಯೂಸ್​ 18 ಕನ್ನಡ

ನವದೆಹಲಿ (ಸೆ. 7):  'ನೀವೀಗ ಮಕ್ಕಳ ಕೈಗೆ ಚಾಕೋಲೇಟ್​ ಕೊಟ್ಟಾಗಿದೆ. ಅದನ್ನು ಕಿತ್ತುಕೊಂಡರೆ ಮಕ್ಕಳು ಅಳುತ್ತಾರೆ, ರಂಪಾಟ ಮಾಡುತ್ತಾರೆ. ಅದರ ಬದಲು, ಅತಿಯಾದ ಚಾಕೋಲೇಟ್​ ತಿನ್ನುವುದರಿಂದ ಆಗುವ ಸಮಸ್ಯೆಯನ್ನು ಸಮಾಧಾನವಾಗಿ ಬಿಡಿಸಿ ಹೇಳಿ ಅವರ ಮನವೊಲಿಸಿದರೆ ಅರ್ಥಮಾಡಿಕೊಳ್ಳುತ್ತಾರೆ. ಆಯ್ಕೆಯನ್ನು ನೀವೇ ನಿರ್ಧರಿಸಬೇಕು'

ಇದೇನಿದು ಚಾಕೋಲೇಟ್​ ಕತೆ ಅಂತ ಆಶ್ಚರ್ಯಪಡಬೇಡಿ. ಸದ್ಯಕ್ಕೆ ದೇಶದಲ್ಲಿ ಭುಗಿಲೆದ್ದಿರುವ ಎಸ್ಸಿ, ಎಸ್ಟಿ ತಿದ್ದುಪಡಿ ಕಾಯ್ದೆ ಜಾರಿಯ ಬಗ್ಗೆ ಲೋಕಸಭಾ ಸ್ಪೀಕರ್​ ಸುಮಿತ್ರಾ ಮಹಾಜನ್​ ಕೇಂದ್ರ ಸರ್ಕಾರಕ್ಕೆ ನೀಡಿರುವ ಸರಳ ಸಲಹೆಯಿದು.

'ನಾವು ಪೇಟೆಯಿಂದ ಬರುವಾಗ ಮಕ್ಕಳಿಗಾಗಿ ದೊಡ್ಡದೊಂದು ಚಾಕೋಲೇಟ್​ ತರುತ್ತೇವೆ. ಅದನ್ನು ನೋಡಿದ ಮಕ್ಕಳು ಖುಷಿಯಾಗುತ್ತಾರೆ. ಆದರೆ, ಅಷ್ಟು ದೊಡ್ಡ ಚಾಕೋಲೇಟ್​ ಕೊಟ್ಟರೆ ಒಂದೇ ಸಲ ತಿಂದು ಬಿಡುತ್ತಾರೆ. ಅದರಿಂದ ಅವರ ಆರೋಗ್ಯ ಹಾಳಾಗುತ್ತದೆ ಎಂಬುದು ಚಾಕೋಲೇಟ್​ ಕೊಟ್ಟ ನಂತರ ನಮಗೆ ತಿಳಿಯುತ್ತದೆ. ಒಮ್ಮೆ ಮಕ್ಕಳ ಕೈಗೆ ಚಾಕೋಲೇಟ್​ ಸಿಕ್ಕಮೇಲೆ ಅವರು ವಾಪಾಸ್​ ಕೊಡುತ್ತಾರಾ? ಅದನ್ನು ನೀವು ಕಿತ್ತುಕೊಂಡರೆ ಅವರ ಅಳು, ರಂಪಾಟವನ್ನು ಎದುರಿಸಲು ಸಿದ್ಧರಾಗಿರಬೇಕು. ಆದರೆ, ಕೆಲವೇ ಕೆಲವು ಜಾಣ ಅಪ್ಪ-ಅಮ್ಮಂದಿರು ಮಾತ್ರ ಮಕ್ಕಳಿಗೆ ಅರ್ಥ ಮಾಡಿಸಿ, ಅವರಿಗೆ ಎಷ್ಟು ಬೇಕೋ ಅಷ್ಟೇ ಚಾಕೋಲೇಟ್​ ತಿಂದು ಬೇರೆಯವರಿಗೂ ಕೊಡುವಂತೆ ಮನವೊಲಿಸುತ್ತಾರೆ ಅಥವಾ ಆ ಚಾಕೋಲೇಟನ್ನು ಮಕ್ಕಳಿಂದ ವಾಪಾಸ್​ ಪಡೆಯುತ್ತಾರೆ.'

ಎಸ್ಸಿ ಎಸ್ಟಿ ತಿದ್ದುಪಡಿ ಕಾಯ್ದೆ ಜಾರಿಯ ಕುರಿತು ನಿನ್ನೆ ಭಾರತ್​ ಬಂದ್​ ಆಚರಿಸಲಾಗಿತ್ತು. ಈ ಬಗ್ಗೆ ದಿನದಿಂದ ದಿನಕ್ಕೆ ಪ್ರತಿಭಟನೆಗಳು ಹೆಚ್ಚಾಗುತ್ತಲೇ ಇವೆ. ಈ ಸಮಸ್ಯೆಯನ್ನು ಬಗೆಹರಿಸಬೇಕೆಂಬ ಉದ್ದೇಶವಿದ್ದರೆ ಎಲ್ಲ ರಾಜಕೀಯ ಪಕ್ಷಗಳೂ ಒಂದಾಗಿ ಕೂತು ಸಮಾಲೋಚಿಸಿ ನಿರ್ಧಾರ ಕೈಗೊಳ್ಳಬೇಕು. ಎಲ್ಲಿಯವರೆಗೂ ರಾಜಕೀಯ ಪಕ್ಷಗಳು ಈ ವಿಷಯವನ್ನು ತಮ್ಮ ದಾಳವನ್ನಾಗಿ ಮಾಡಿಕೊಳ್ಳುತ್ತಾವೋ ಅಲ್ಲಿಯವರೆಗೆ ಜನರ ಸಮಸ್ಯೆಯೂ ಬಗೆಹರಿಯುವುದಿಲ್ಲ, ಸಮಾಜದ ಸ್ವಾಸ್ಥ್ಯವೂ ಸುಧಾರಿಸುವುದಿಲ್ಲ ಎಂದು ಸುಮಿತ್ರಾ ಮಹಾಜನ್​ ಸಲಹೆ ನೀಡಿದ್ದಾರೆ.

ಲೋಕಸಭೆಯನ್ನು ಕಾಯ್ದೆಯನ್ನು ಅನುಷ್ಠಾನಗೊಳಿಸುವುದೇನೋ ಸರಿ. ಆದರೆ, ಎಲ್ಲ ಸಂಸದರು ಈ ಬಗ್ಗೆ ವಸ್ತುನಿಷ್ಠವಾಗಿ ಯೋಚಿಸಬೇಕು. ಸಮಾಜದಲ್ಲಿ ಈ ಬಗ್ಗೆ ಜನರಿಗೆ ಚರ್ಚಿಸಲು ಮುಕ್ತ ವಾತಾವರಣ ನಿರ್ಮಿಸಬೇಕು. ಒಬ್ಬರ ಕೈಯಲ್ಲಿರುವ ವಸ್ತುವನ್ನು ಯಾರಾದರೂ ಕಿತ್ತುಕೊಳ್ಳಲು ಬಂದರೆ ಖಂಡಿತ ಅವರು ಅದನ್ನು ಸಹಿಸುವುದಿಲ್ಲ. ಹಾಗಾಗಿ, ಅಂತಹ ಸಂದರ್ಭದಲ್ಲಿ ಜಾಣತನದಿಂದ ವರ್ತಿಸಬೇಕು ಎಂದು ಹೇಳಿದ ಸುಮಿತ್ರಾ ಮಹಾಜನ್​ ಕಾನೂನು ತಿದ್ದುಪಡಿಯ ಬಗ್ಗೆ ಸೂಕ್ತ ಚರ್ಚೆಯಾಗಬೇಕು ಎಂದು ಒತ್ತಿಹೇಳಿದರು.
Loading...

ಕೆಳವರ್ಗದ ಜನರ ಮೇಲೆ ಯಾವುದೇ ದೌರ್ಜನ್ಯ ಮಾಡಬಾರದು ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಂಡರೆ ಸಮಸ್ಯೆಯೇ ಇರುವುದಿಲ್ಲ. ಹಾಗೇ, ಈ ಮೊದಲು ಒಬ್ಬರಿಗೆ ಅನ್ಯಾಯವಾಗಿತ್ತು ಎಂದು ಈಗ ಅವರಿಗೆ ನ್ಯಾಯ ಕೊಡಿಸುವ ಭರದಲ್ಲಿ ಮತ್ತೊಬ್ಬರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವುದು ಕೂಡ ಪ್ರತಿಯೊಬ್ಬರ ಜವಾಬ್ದಾರಿ ಎಂದು ಮಹಾಜನ್​ ಹೇಳಿದರು.
First published:September 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626