ಎರಡಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಮತದಾನದ ಹಕ್ಕು ನೀಡಬೇಡಿ; ಬಾಬಾ ರಾಮದೇವ್ ಸಲಹೆ!

ಒಂದುವೇಳೆ ನಾನೂ ಮದುವೆ, ಮಕ್ಕಳೆಂದು ಸಾಂಸಾರಿಕ ಸಂತೋಷದತ್ತ ಆಕರ್ಷಿತನಾಗಿದ್ದರೆ ಇಷ್ಟು ತೃಪ್ತಿ ಮತ್ತು ಯಶಸ್ವಿ ಜೀವನ ಕಟ್ಟಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ನನಗೂ ಮಕ್ಕಳಾಗಿದ್ದರೆ ಅವರು ನನ್ನ ಸಂಪಾದನೆ, ಪತಂಜಲಿಯಲ್ಲಿ ಪಾಲು ಕೇಳುವ ಸಾಧ್ಯತೆಯಿತ್ತು. ಆಗ ಲಾಭ ಮಾಡಬೇಕೆಂಬುದೇ ನನ್ನ ಗುರಿಯಾಗುತ್ತಿತ್ತು. ಈ ವಿಷಯದಲ್ಲಿ ಆ ದೇವರೇ ನನ್ನನ್ನು ಕಾಪಾಡಿದ ಎಂಬುದು ಬಾಬಾ ರಾಮದೇವ್​ ಉವಾಚ.

sushma chakre | news18
Updated:November 4, 2018, 8:37 PM IST
ಎರಡಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಮತದಾನದ ಹಕ್ಕು ನೀಡಬೇಡಿ; ಬಾಬಾ ರಾಮದೇವ್ ಸಲಹೆ!
ಬಾಬಾ ರಾಮದೇವ್
sushma chakre | news18
Updated: November 4, 2018, 8:37 PM IST
ನ್ಯೂಸ್​18 ಕನ್ನಡ

ನವದೆಹಲಿ (ನ. 4): 'ದೇಶದಲ್ಲಿರುವ ಬ್ರಹ್ಮಚಾರಿಗಳಿಗೆ ಪ್ರೋತ್ಸಾಹ ಮತ್ತು ವಿಶೇಷ ಗೌರವ ನೀಡಬೇಕು. ಹಾಗೇ, ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ದಂಪತಿಗೆ ಮತದಾನದ ಹಕ್ಕನ್ನು ನಿರಾಕರಿಸಬೇಕು' ಎಂದು ಯೋಗ ಗುರು ಹಾಗೂ ಪತಂಜಲಿ ಸಂಸ್ಥಾಪಕ ಬಾಬಾ ರಾಮದೇವ್ ಹೇಳಿದ್ದಾರೆ.

ಪತಂಜಲಿ ಯೋಗಪೀಠದಲ್ಲಿ ಮಾತನಾಡಿದ ಬಾಬಾ ರಾಮದೇವ್, ಪುರಾತನ ಕಾಲದ ವೇದಗಳ ಪ್ರಕಾರ ಒಬ್ಬರು 10 ಮಕ್ಕಳನ್ನು ಹೊಂದಲು ಅವಕಾಶವಿತ್ತು. ಆದರೆ, ಇಂದು ಜನಸಂಖ್ಯೆ ಹೆಚ್ಚುತ್ತಿರುವುದರಿಂದ ಹೆಚ್ಚು ಮಕ್ಕಳಿಗೆ ಜನ್ಮ ನೀಡುವುದನ್ನು ನಿಯಂತ್ರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದವರಿಗೆ ಮತದಾನದ ಹಕ್ಕನ್ನು ನೀಡದಿದ್ದರೆ ಸ್ವಲ್ಪವಾದರೂ ಜನರು ಎಚ್ಚೆತ್ತುಕೊಳ್ಳುತ್ತಾರೆ ಎಂದಿದ್ದಾರೆ.

ಈ ದೇಶದಲ್ಲಿ ಯಾರು ಮದುವೆಯಾಗಲು ಇಚ್ಛೆ ಪಡುವುದಿಲ್ಲವೋ, ನನ್ನ ಹಾಗೆ ಬ್ರಹ್ಮಚಾರಿಯಾಗಿರಲು ಬಯಸುತ್ತಾರೋ ಅವರಿಗೆ ವಿಶೇಷ ಗೌರವ ಸಿಗುವಂತೆ ಮಾಡಬೇಕು ಎಂದ ಅವರು, ಜನಸಂಖ್ಯೆಯನ್ನು ನಿಯಂತ್ರಣಕ್ಕೆ ತರಲು ಪ್ರತಿಯೊಬ್ಬರೂ ಮನಸು ಮಾಡಬೇಕು ಎಂದು ಸಲಹೆ ನೀಡಿದ್ದಾರೆ.

ಮದುವೆಯಾಗಿದ್ದರೆ ನಾನಿಷ್ಟು ಯಶಸ್ವಿಯಾಗುತ್ತಿರಲಿಲ್ಲ:

ಈ ಮೊದಲು ಏಪ್ರಿಲ್​ನಲ್ಲಿ ಗೋವಾ ಫೆಸ್ಟ್​ನಲ್ಲಿ ಮಾತನಾಡುವಾಗಲೂ ಇದೇ ವಿಷಯ ಪ್ರಸ್ತಾಪಿಸಿದ್ದ ಬಾಬಾ ರಾಮದೇವ್, ನಾನು ಇಷ್ಟು ಸಂತೋಷದಿಂದ ಮತ್ತು ಯಶಸ್ವಿ ಜೀವನ ನಡೆಸುತ್ತಿರುವುದಕ್ಕೆ ನಾನು ಅವಿವಾಹಿತನಾಗಿರುವುದೇ ಕಾರಣ ಎಂದು ಹೇಳಿದ್ದರು. ಒಂದುವೇಳೆ, ನನಗೂ ಹೆಂಡತಿ, ಮಕ್ಕಳು ಇದ್ದಿದ್ದರೆ ಪತಂಜಲಿ ಸಂಸ್ಥೆಯಲ್ಲಿ ತಮ್ಮ ಹಕ್ಕನ್ನು ಕೇಳುತ್ತಿದ್ದರು. ಈ ವಿಷಯದಲ್ಲಿ ಆ ದೇವರೇ ನನ್ನನ್ನು ಕಾಪಾಡಿದ್ದಾನೆ ಎಂದು ನನಗೆ ಅನಿಸುತ್ತದೆ. ನಾನು ಮದುವೆಯಾಗದೆ ಉಳಿದಿದ್ದು ಖಂಡಿತ ತಪ್ಪಲ್ಲ. ನಾವು ಸಂತೋಷವಾಗಿರಲು ಸಂಸಾರ, ಮಕ್ಕಳು ಬೇಕೆಂಬ ಭಾವನೆ ತಪ್ಪು. ಅವ್ಯಾವುದೂ ಇಲ್ಲದೆಯೂ ನಾನು ಸದಾ ಸಂತೋಷದಿಂದ, ನಗುನಗುತ್ತಲೇ ಇರುತ್ತೇನೆ ಎಂದು ಹೇಳಿದ್ದರು.

First published:November 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...