ಕೋಲ್ಕತ್ತಾ: ಮಧ್ಯಾಹ್ನದ ಬಿಸಿಯೂಟ (Mid Day Meal) ಯೋಜನೆಯು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಒಂದು ಪ್ರತಿಷ್ಠಿತ ಕಾರ್ಯಕ್ರಮವಾಗಿದ್ದು, 1 ರಿಂದ 10ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ ರಾಜ್ಯದ ಸರ್ಕಾರಿ, ಅನುದಾನಿತ ಶಾಲೆಗಳ ಮತ್ತು ಬಾಲಕಾರ್ಮಿಕ (ಎನ್.ಸಿ.ಎಲ್.ಪಿ) ಮದರಸಗಳ ಮತ್ತು ಪರ್ಯಾಯ ಶಿಕ್ಷಣ ಕೇಂದ್ರಗಳಲ್ಲಿ ಎಲ್ಲಾ ಮಕ್ಕಳಿಗೆ (Childrens) ಮಧ್ಯಾಹ್ನದ ಬಿಸಿಯೂಟ ನೀಡಲಾಗುತ್ತಿದೆ. ಈ ನಡುವೆ ಪಶ್ಚಿಮ ಬಂಗಾಳದ (West Bengal) ಬಿರ್ಭೂಮ್ ಜಿಲ್ಲೆಯಲ್ಲಿ (Birbhum District) ಮಧ್ಯಾಹ್ನದ ಬಿಸಿಯೂ ಸೇವಿಸಿದ ಬಳಿಕ ಹಲವು ವಿದ್ಯಾರ್ಥಿಗಳು (Students) ಅಸ್ವಸ್ಥಗೊಂಡಿದ್ದಾರೆ. ಅಲ್ಲದೇ ಬಿಸಿಯೂಟದಲ್ಲಿ ಹಾವು ಪತ್ತೆಯಾಗಿದೆ.
ಮಧ್ಯಾಹ್ನ ನೀಡಿದ್ದ ಬೇಳೆ ಪಾತ್ರೆಯಲ್ಲಿ ಹಾವು ಪತ್ತೆ
ಬಿರ್ಭೂಮ್ನ ಮಯೂರೇಶ್ವರ ಬ್ಲಾಕ್ನಲ್ಲಿರುವ ಮಂಡಲಪುರ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ವಿದ್ಯಾರ್ಥಿಗಳಿಗೆ ಮಧ್ಯಾಹ್ನ ನೀಡಿದ್ದ ಊಟದಲ್ಲಿ ಬೇಳೆ ಸಾರು ತುಂಬಿದ್ದ ಪಾತ್ರೆಯಲ್ಲಿ ಸತ್ತ ಹಾವೊಂದು ಪತ್ತೆಯಾಗಿದೆ. ಆದರೆ ಹಾವು ಇರುವುದು ತಿಳಿಯುವಷ್ಟರಲ್ಲಿ ವಿದ್ಯಾರ್ಥಿಗಳು ಊಟವನ್ನು ಸೇವಿಸಿದ್ದಾರೆ.
ಆಹಾರ ಸೇವಿಸಿದ ನಂತ್ರ ವಾಂತಿ ಮಾಡಲಾರಂಭಿಸಿದ ಮಕ್ಕಳು
ಆಹಾರ ಸೇವಿಸಿದ ನಂತರ ವಿದ್ಯಾರ್ಥಿಗಳು ಏಕಾಏಕಿ ವಾಂತಿ ಮಾಡಲು ಆರಂಭಿಸಿದ್ದಾರೆ. ನಂತರ ಆಹಾರ ಪಾತ್ರೆಯನ್ನು ಪರಿಶೀಲಿಸಿದಾಗ ಬೇಳೆ ತುಂಬಿದ ಪಾತ್ರೆಯಲ್ಲಿ ಹಾವು ಕಂಡು ಬಂದಿದೆ. ಇದರಿಂದ ಅಸ್ವಸ್ಥಗೊಂಡ 30 ವಿದ್ಯಾರ್ಥಿಗಳನ್ನು ಕೂಡಲೇ ಸಮೀಪದ ಸಾಯಿಥಿಯಾನ್ ಬ್ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕೆಲವು ವಿದ್ಯಾರ್ಥಿಗಳನ್ನು ರಾಮ್ಪುರಹತ್ ಆಸ್ಪತ್ರೆಗೆ ದಾಖಲಾಗಿದೆ.
ಶಿಕ್ಷಕರ ಬೈಕ್ ಧ್ವಂಸಗೊಳಿಸಿ ಪೋಷಕರಿಂದ ಆಕ್ರೋಶ
ಘಟನೆ ಬಳಿಕ ವಿದ್ಯಾರ್ಥಿಗಳ ಪೋಷಕರು ಶಾಲೆಯಲ್ಲಿಯೇ ಪ್ರತಿಭಟನೆ ನಡೆಸಿದರು. ಜೊತೆಗೆ ಶಿಕ್ಷಕರ ಬೈಕ್ಗಳನ್ನು ಧ್ವಂಸಗೊಳಿಸಿ ಆಕ್ರೋಶ ಹೊರಹಾಕಿದರು. ಜೊತೆಗೆ ಶಿಕ್ಷಕ ಮತ್ತು ಅಡುಗೆಯವರ ಅಸಡ್ಡೆಯಿಂದ ಈ ತಪ್ಪು ನಡೆದಿದೆ ಎಂದು ಆರೋಪಿಸಿದ್ದಾರೆ.
ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸುತ್ತಿರುವ ಪೋಷಕರು
ಬಿಪಿಎಂ ಪೌಷ್ಟಿಕಾಂಶದ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದಲ್ಲಿ ಕೋಳಿ ಮತ್ತು ಹಣ್ಣುಗಳನ್ನು ನೀಡಲು ಮಮತಾ ಸರ್ಕಾರ ಆದೇಶ ಹೊರಡಿಸಿದ ನಂತರ ಈ ಘಟನೆ ಜರುಗಿದೆ. ಇದೀಗ ಈ ಘಟಣೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ. ಆದರೆ ಆಡಳಿತ ಮಂಡಳಿ ಮಾತ್ರ ಈ ಬಗ್ಗೆ ಮೌನ ವಹಿಸಿದೆ.
ಈ ಮುನ್ನ ಕೊಪ್ಪಳದಲ್ಲೂ ಇದೇ ರೀತಿ ಘಟನೆ
ಇದೇ ರೀತಿ ಈ ಮುನ್ನ ಕೊಪ್ಪಳ ಜಿಲ್ಲೆಯ ಅಳವಂಡಿಯ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ದೋಷಪೂರಿತ ಬಿಸಿಯೂಟ ಸೇವಿಸಿ 20ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿದ್ದರು. ಕಳಪೆ ಆಹಾರ ಪೂರೈಕೆ ಮಾಡಲಾಗುತ್ತಿದ್ದು, ಅಡುಗೆ ಸರಿಯಾಗಿ ಮಾಡುತ್ತಿಲ್ಲ. ಸ್ವಚ್ಛತೆ ಪಾಲನೆ ಮಾಡುತ್ತಿಲ್ಲ ಎಂದು ಆಕ್ರೋಶ ಪಡಿಸಿದ ವಿದ್ಯಾರ್ಥಿನಿಯರು ಶಾಲಾ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದರು.
ರಾಯಚೂರಿನಲ್ಲೂ ಬಿಸಿಯೂಟ ಸೇವಿಸಿ ಅಸ್ವಸ್ಥರಾಗಿದ್ದ ಮಕ್ಕಳು
ಕಳೆದ ವರ್ಷ ಆಗಸ್ಟ್ನಲ್ಲಿ ಕೂಡ ರಾಯಚೂರಿನ ಸರ್ಕಾರಿ ಶಾಲೆಯೊಂದರಲ್ಲಿ ಬಿಸಿಯೂಟ ಸೇವಿಸಿ 20ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿದ್ದರು.
ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಅಮೀನಗಡ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ವರದಿಯಾಗಿತ್ತು. ಬಿಸಿಯೂಟ ಸೇವಿಸಿದ ಬಳಿಕ ವಿದ್ಯಾರ್ಥಿಗಳು ಹೊಟ್ಟೆ ನೋವಿನಿಂದ ನರಳಾಡಿದ್ದರು. ತಕ್ಷಣ ಅಸ್ವಸ್ಥ ಮಕ್ಕಳಿಗೆ ಕವಿತಾಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು.
ಇದನ್ನೂ ಓದಿ:Koppal Viral Video: ಬಿಸಿಯೂಟಕ್ಕೆ ದಿಢೀರ್ ಅತಿಥಿಯಾಗಿ ಬಂದ ಕೋತಿ! ವೈರಲ್ ಆಗ್ತಿದೆ ಈ ವಿಡಿಯೋ
ಎಂದಿನಂತೆ ಮಕ್ಕಳು ಶಾಲೆಯಲ್ಲಿ ಮಧ್ಯಾಹ್ನ ಬಿಸಿಯೂಟ ಸೇವಿಸಿದ್ದರು. ಬಿಸಿಯೂಟ ಸೇವನೆ ಬಳಿಕ 20ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಾಂತಿ, ಭೇದಿಯಾಗಿತ್ತು. ಜೊತೆಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿತು. ಹಾಗಾಗಿ ಮಕ್ಕಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ