ಅಮನ್ ಕಮಿಟಿ ಪರಿಚಯಿಸಿ ಸೈ ಎನಿಸಿದ್ದ ಶ್ರೀವಾಸ್ತವ ಈಗ ದೆಹಲಿಯ ನೂತನ ಪೊಲೀಸ್ ಆಯುಕ್ತ

ಅಮೂಲ್ಯ ಪಾಟ್ನಾಯಕ್ ಅವರು ಕಳೆದ ತಿಂಗಳೇ ನಿವೃತ್ತಿಯಾಗಬೇಕಿತ್ತು. ಆದರೆ, ಸೇವಾವಧಿಯಲ್ಲಿ ಒಂದು ತಿಂಗಳಷ್ಟು ವಿಸ್ತರಿಸಲಾಗಿತ್ತು. ದೆಹಲಿಯಲ್ಲಿ ಹಿಂಸಾಚಾರ ಭುಗಿಲೆದ್ದ ಕಾರಣ ಕೆಲ ದಿನಗಳ ಹಿಂದೆ ಸಿಆರ್​ಪಿಎಫ್​ನಿಂದ ಶ್ರೀವಾಸ್ತವ ಅವರನ್ನು ಕರೆಸಿ ನವದೆಹಲಿಯ ವಿಶೇಷ ಪೊಲೀಸ್ ಆಯುಕ್ತರನ್ನಾಗಿ ಮಾಡಲಾಗಿತ್ತು.

Seema.R | news18-kannada
Updated:February 28, 2020, 12:01 PM IST
ಅಮನ್ ಕಮಿಟಿ ಪರಿಚಯಿಸಿ ಸೈ ಎನಿಸಿದ್ದ ಶ್ರೀವಾಸ್ತವ ಈಗ ದೆಹಲಿಯ ನೂತನ ಪೊಲೀಸ್ ಆಯುಕ್ತ
ನೂತನ ಪೊಲೀಸ್​ ಕಮಿಷನರ್​ ಶ್ರೀವಾಸ್ತವ
  • Share this:
ನವದೆಹಲಿ (ಫೆ.28): ಪೌರತ್ವ ಕಾಯ್ದೆ ಪರ ವಿರೋಧಿ ಗುಂಪುಗಳ ನಡುವಿನ ಹಿಂಸಾಚಾರ ಹತ್ತಿಕ್ಕಲು ಕೇಂದ್ರ ಸರ್ಕಾರ ಹರಸಾಹಸ ನಡೆಸುತ್ತಿರುವ ಹೊತ್ತಲ್ಲೇ ಎಸ್​.ಎನ್.​ ಶ್ರೀವಾಸ್ತವ ಅವರು ನವದೆಹಲಿಯ ನೂತನ ಪೊಲೀಸ್​ ಕಮಿಷನರ್​ ಆಗಿ ನೇಮಕಗೊಂಡಿದ್ದಾರೆ. ಅಮೂಲ್ಯ ಪಾಟ್ನಾಯಕ್ ಅವರ ಅಧಿಕಾರಾವಧಿ ಮುಗಿದ ಹಿನ್ನೆಲೆಯಲ್ಲಿ ಶ್ರೀವಾಸ್ತವ ಅವರು ಆ ಸ್ಥಾನ ತುಂಬಲಿದ್ಧಾರೆ. ನೂತನ ಪೊಲೀಸ್ ಆಯುಕ್ತರಾಗಿ ಶ್ರೀವಾಸ್ತವ ಅವರ ನೇಮಕಾತಿಗೆ ಕೇಂದ್ರ ಗೃಹ ಇಲಾಖೆ ಅಂತಿಮ ಮುದ್ರೆ ಒತ್ತಿದೆ.


ಅಮೂಲ್ಯ ಪಾಟ್ನಾಯಕ್ ಅವರು ಕಳೆದ ತಿಂಗಳೇ ನಿವೃತ್ತಿಯಾಗಬೇಕಿತ್ತು. ಆದರೆ, ಸೇವಾವಧಿಯಲ್ಲಿ ಒಂದು ತಿಂಗಳಷ್ಟು ವಿಸ್ತರಿಸಲಾಗಿತ್ತು. ದೆಹಲಿಯಲ್ಲಿ ಹಿಂಸಾಚಾರ ಭುಗಿಲೆದ್ದ ಕಾರಣ ಕೆಲ ದಿನಗಳ ಹಿಂದೆ ಸಿಆರ್​ಪಿಎಫ್​ನಿಂದ ಶ್ರೀವಾಸ್ತವ ಅವರನ್ನು ಕರೆಸಿ ನವದೆಹಲಿಯ ವಿಶೇಷ ಪೊಲೀಸ್ ಆಯುಕ್ತರನ್ನಾಗಿ ಮಾಡಲಾಗಿತ್ತು.

ಸಚಿದಾನಂದ ಶ್ರೀವಾಸ್ತವ ಅವರು 1985 ಬ್ಯಾಚ್​ನ AGMUT (ಅರುಣಾಚಲ ಪ್ರದೇಶ –ಗೋವಾ-ಮಿಜೋರಾಂ ಮತ್ತು ಕೇಂದ್ರಾಳಿತ ಪ್ರದೇಶಗಳು) ಕೇಡರ್​ ಅಧಿಕಾರಿ ಇವರಾಗಿದ್ದಾರೆ. ದೆಹಲಿ ಪೊಲೀಸ್​ನ ಉಗ್ರ ನಿಗ್ರಹ ಪಡೆಯ ಮಾಜಿ ಅಧಿಕಾರಿಯಾಗಿಯೂ ಇವರು ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಜಮ್ಮು ಮತ್ತು ಕಾಶ್ಮೀರದ ಸಿಆರ್​ಪಿಎಫ್​ನ ವಿಶೇಷ ನಿರ್ದೇಶಕರಾಗಿಯೂ ಇವರು ಕರ್ತವ್ಯ ನಿರ್ವಹಿಸಿದ್ದಾರೆ.

ಇದನ್ನು ಓದಿ: ದೆಹಲಿಯಲ್ಲಿ ಗಲಭೆ ನಿಯಂತ್ರಿಸಿ ಸಹಜ ಸ್ಥಿತಿಗೆ ತನ್ನಿ: ಕೇಂದ್ರ ಸರ್ಕಾರಕ್ಕೆ ಆರೆಸ್ಸೆಸ್ ಆಗ್ರಹ

ಸೇವೆಗೆ ಸೇರಿದ ಹೊಸದರಲ್ಲಿ ಇವರು ತೋರಿದ ಕಾರ್ಯಕ್ಷಮತೆ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿತ್ತು. ದೆಹಲಿಯಲ್ಲಿ ಇವರು ಅಮನ್ ಸಮಿತಿ ಎಂಬ ಕ್ರಮವನ್ನು ಮೊದಲ ಬಾರಿಗೆ ಜಾರಿಗೆ ತಂದ ಶ್ರೇಯಸ್ಸು ಹೊಂದಿದ್ದಾರೆ. ಸೂಕ್ಷ್ಮ ಸಂದರ್ಭಗಳನ್ನು ನಿಭಾಯಿಸಲು ಈ ಅಮನ್ ಕಮಿಟಿ ಬಹಳ ಪರಿಣಾಮಕಾರಿಯಾಗಿರುತ್ತಿತ್ತು. ಈಗ ದಳ್ಳುರಿಯಿಂದ ಹೊತ್ತಿ ಉರಿಯುತ್ತಿರುವ ದೆಹಲಿಯಲ್ಲಿ ಶ್ರೀವಾಸ್ತವ ಅವರ ಅನುಭವಗಳು ಸಹಾಯಕ್ಕೆ ಬರುವ ನಿರೀಕ್ಷೆ ಇದೆ.

ಕಳೆದ ನಾಲ್ಕು ದಿನಗಳಿಂದ ಹಿಂಸಾಚಾರಕ್ಕೆ ರಾಷ್ಟ್ರರಾಜಧಾನಿ ಹೊತ್ತಿ ಉರಿಯುತ್ತಿದ್ದು, 38 ಜನ ಸಾವನ್ನಪ್ಪಿದ್ದಾರೆ. ಕಳೆದ 36 ಗಂಟೆಯಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಇನ್ನು ಈ ಹಿಂಸಾಚಾರ ಕುರಿತು ದೆಹಲಿ ಹೈ ಕೋರ್ಟ್​ ಪೊಲೀಸರಿಗೆ ನೋಟಿಸ್​ ಜಾರಿ ಮಾಡಿದೆ.
First published: February 28, 2020, 12:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading