Timber Smugglers: ಸ್ಲೀಪರ್ ಬಸ್ ನಲ್ಲಿ ತೇಗದ ಮರ ಕಳ್ಳಸಾಗಾಣಿಕೆ; ಅಸಲಿ ಜೀವನದ ‘ಪುಷ್ಪಾ’ ಬಗ್ಗೆ ಅಧಿಕಾರಿಯ ಫನ್ನಿ ಟ್ವೀಟ್

ತೇಗದ ಮರದ ಕಳ್ಳ ಸಾಗಣಿಕೆಯ ಪ್ರಕರಣವೊಂದನ್ನು ಸೂಪರ್ ಹಿಟ್ ಸಿನಿಮಾ ‘ಪುಷ್ಪಾ’ದ ಜೊತೆ ಹೋಲಿಸಿ, ಟ್ವಿಟ್ಟರ್‍ನಲ್ಲಿ ಆ ಕುರಿತ ಮಾಹಿತಿಯನ್ನು ಪೋಸ್ಟ್ ಮಾಡಲಾಗಿದೆ. ಪಶ್ಚಿಮ ಬಂಗಾಳದ ಭಾರತೀಯ ಅರಣ್ಯ ಸೇವಾ ಅಧಿಕಾರಿ, ಪರ್ವಿನ್ ಕಸ್ವಾನ್ ಇದನ್ನು ಪೋಸ್ಟ್ ಮಾಡಿದ್ದಾರೆ.

ಅಸಲಿ ಜೀವನದ ಪುಷ್ಪ ಗ್ಯಾಂಗ್

ಅಸಲಿ ಜೀವನದ ಪುಷ್ಪ ಗ್ಯಾಂಗ್

  • Share this:
ಪುಷ್ಪ: ದಿ ರೈಸ್, ಅಲ್ಲು ಅರ್ಜುನ್ ಅಭಿಮಾನಿಗಳು ಮಾತ್ರವಲ್ಲ, ವಿಶ್ವದಾದ್ಯಂತ ಕೋಟಿಗಟ್ಟಲೆ ಜನರು ಮೆಚ್ಚಿದ ಸಿನಿಮಾ (Cinema). ಇತ್ತೀಚಿನ ದಿನಗಳಲ್ಲಿ ಬಿಡುಗಡೆಯಾದ ಅತೀ ದೊಡ್ಡ ಬ್ಲಾಕ್‍ಬಸ್ಟರ್‍ಗಳಲ್ಲಿ ಒಂದಾಗಿರುವ ಈ ಸಿನಿಮಾದ ಡೈಲಾಗ್‍ಗಳು, ಹಾಡುಗಳು ಪ್ರೇಕ್ಷಕರ ಮನಗೆದ್ದಿದ್ದವು. ಗಲ್ಲಾಪೆಟ್ಟಿಗೆಯನ್ನು (Box Office) ಲೂಟಿ ಮಾಡಿದ್ದ ಈ ಸಿನಿಮಾದ ಕಥೆ ಕೂಡ ಲೂಟಿಗೆ, ಅಂದರೆ ಕಳವಿಗೆ ಸಂಬಂಧಿಸಿದ್ದಾಗಿತ್ತು. ಕಠಿಣ ಹಿನ್ನೆಲೆಯಿಂದ ಎದ್ದು ಬರುವ ಈ ಸಿನಿಮಾದ ಕಥಾ ನಾಯಕ ಪುಷ್ಪಾ (Pushpa), ಮರಗಳ ಕಳ್ಳ ಸಾಗಣೆಯ (Smuggling of timber) ಮೂಲಕ ಸಂಪತ್ತನ್ನು ಸಂಗ್ರಹಿಸುತ್ತಾನೆ. ಪುಷ್ಪಾ ಬೇರೆ ಕಳ್ಳ ಸಾಗಣಿಕೆದಾರರ ನೇತೃತ್ವ ವಹಿಸುತ್ತಾನೆ ಮತ್ತು ಹಾಗೆ ಮಾಡುವ ಸಂದರ್ಭದಲ್ಲಿ ನಾನಾ ಉಪಾಯಗಳ ಮೂಲಕ ಪೊಲೀಸರಿಗೆ (Police) ಚಳ್ಳೆ ಹಣ್ಣು ತಿನ್ನಿಸಿ, ತಪ್ಪಿಸಿಕೊಳ್ಳುವುದನ್ನು ಈ ಸಿನಿಮಾದಲ್ಲಿ ಕಾಣಬಹುದು.

ಪಶ್ಚಿಮ ಬಂಗಾಳದಲ್ಲಿ ಅಸಲಿ ಜೀವನದ ಪುಷ್ಪ ಗ್ಯಾಂಗ್
ಇದು ಸಿನಿಮಾದ ಕಥೆಯಾಯಿತು. ಆದರೆ ಪಶ್ಚಿಮ ಬಂಗಾಳದಲ್ಲಿ ಅಸಲಿ ಜೀವನದ ಪುಷ್ಪ ಗ್ಯಾಂಗ್ ಅಂದರೆ, ಮರದ ಕಳ್ಳ ಸಾಗಣಿಕೆದಾರರು ಪೊಲೀಸರ ಕಣ್ಣಿಗೆ ಮಣ್ಣೆರಚಿ ತಮ್ಮ ಕಾರ್ಯ ಸಾಧಿಸಿಕೊಳ್ಳುವುದರಲ್ಲಿ ವಿಫಲಾಗಿದ್ದಾರೆ. ತೇಗದ ಮರದ ಕಳ್ಳ ಸಾಗಣಿಕೆಯ ಪ್ರಕರಣವೊಂದನ್ನು ಸೂಪರ್ ಹಿಟ್ ಸಿನಿಮಾ ‘ಪುಷ್ಪಾ’ದ ಜೊತೆ ಹೋಲಿಸಿ, ಟ್ವಿಟ್ಟರ್‍ನಲ್ಲಿ ಆ ಕುರಿತ ಮಾಹಿತಿಯನ್ನು, ಪೋಸ್ಟ್ ಮಾಡಲಾಗಿದೆ. ಪಶ್ಚಿಮ ಬಂಗಾಳದ ಭಾರತೀಯ ಅರಣ್ಯ ಸೇವಾ ಅಧಿಕಾರಿ, ಪರ್ವಿನ್ ಕಸ್ವಾನ್ ಇದನ್ನು ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: Property: ಗಂಡನ ಶವ ಮನೆಯಲ್ಲೇ ಬಿಟ್ರು, ಆಫೀಸ್‌ಗೆ ಓಡೋಡಿ ಹೋದ್ರು; ಆಸ್ತಿಗಾಗಿ ಇಬ್ಬರು ಹೆಂಡತಿಯರ ರೇಸ್!

ತಮ್ಮ ಪೋಸ್ಟ್ ನಲ್ಲಿ ಅರಣ್ಯಧಿಕಾರಿ ಪರ್ವೀನ್ ಕಸ್ವಾನ್ ತಿಳಿಸಿರುವ ಮಾಹಿತಿ ಹೀಗಿದೆ:
ಸ್ಲೀಪರ್ ಬಸ್ ಒಂದರಲ್ಲಿ ತೇಗದ ಮರದ ತುಂಡುಗಳನ್ನು ಕಳ್ಳ ಸಾಗಾಣಿಕೆ ಮಾಡಲಾಗುತ್ತಿತ್ತು. ಪೋಲೀಸರು ಆ ಬಸ್ಸನ್ನು ಮಂಗಳವಾರ ಬೆಳಗ್ಗಿನ ಜಾವ 3.30 ನಿಮಿಷಕ್ಕೆ ತಡೆದು ನಿಲ್ಲಿಸಿದರು. ಆದರೆ ಕಸ್ವಾನ್ ಅವರು, ಈ ಘಟನೆ ಎಲ್ಲಿ ನಡೆಯಿತು ಎಂಬ ಬಗ್ಗೆ ತಮ್ಮ ಪೋಸ್ಟ್ ನಲ್ಲಿ ಮಾಹಿತಿ ನೀಡಿಲ್ಲ. “ಊಹಿಸಿಕೊಳ್ಳಿ, ಒಂದು ವೋಲ್ವೋ ಸ್ಲೀಪರ್ ಬಸ್ಸನ್ನು ತೇಗದ ಮರದ ಕಳ್ಳ ಸಾಗಣಿಕೆಗೆ ಬಳಸಿಕೊಳ್ಳಲಾಗುತ್ತಿದೆ.ಈ ಪುಷ್ಪ , ತಮ್ಮ ತಂಡಗಳನ್ನು ಕಡಿಮೆ ಎಂದು ಅಂದಾಜಿಸಿದ್ದಳು. ಒಳ್ಳೆಯದೇ ಆಯಿತು, ನಮ್ಮ ಬಳಿ ಒಂದು ಡೀಲಕ್ಸ್ ಬಸ್ ಇದೆ” ಎಂದು ಕಸ್ವಾನ್ ಟ್ವೀಟ್ ಮಾಡಿದ್ದರು. ಜೊತೆಗೆ ಆ ಬಸ್‍ನ ಹಾಗೂ ಅದರಿಂದ ವಶಪಡಿಸಿಕೊಂಡ ಕಳ್ಳಸಾಗಾಣಿಕೆಯ ವಸ್ತುಗಳ ಪೋಟೋಗಳನ್ನು ಕೂಡ ಪೋಸ್ಟ್ ಮಾಡಿದ್ದಾರೆ.

ಕಸ್ವಾನ್ ಅವರ ಈ ಟ್ವೀಟ್‍ಗೆ ನೆಟ್ಟಿಗರು ಹೇಳಿದ್ದೇನು ನೋಡಿ
ಕಸ್ವಾನ್ ಅವರ ಈ ಟ್ವೀಟ್‍ಗೆ ನೆಟ್ಟಿಗರಿಂದ ಹಲವಾರು ಬಗೆಯ ತಮಾಷೆಯ ಪ್ರತಿಕ್ರಿಯೆಗಳು ಮತ್ತು ಅರಣ್ಯ ಅಧಿಕಾರಿಗಳ ಕುರಿತು ಪ್ರಶಂಸೆ ವ್ಯಕ್ತವಾಗಿದೆ. “ಪುಷ್ಪಾದ ಬಗೆಗಿನ ಉಲ್ಲೇಖ ಇಲ್ಲಿ ಸೂಕ್ತವಾಗಿದೆ. ಎಂದಿನಂತೆ ಅತ್ಯುತ್ತಮ ಕೆಲಸ. ಎಂದು ಒಬ್ಬರು ಬರೆದಿದ್ದರೆ, ಇನ್ನೊಬ್ಬರು , “ ಪುಷ್ಪಾ ಕೂಡ ಅವರ ವೃತ್ತಿ ಜೀವನದ ಆರಂಭದಲ್ಲಿ ಸಿಕ್ಕಿ ಬಿದ್ದಿದ್ದರು” ಎಂದು ತಮಾಷೆಯಾಗಿ ಬರೆದಿದ್ದಾರೆ.

ಇದನ್ನೂ ಓದಿ:  Father Rapes Daughter: ಹೆಂಡತಿ ಸಾವಿನ ನಂತರ ತಂದೆಯಿಂದಲೇ ಮಗಳ ಮೇಲೆ ನಿರಂತರ ಅತ್ಯಾಚಾರ

“ ಅದ್ಭುತವಾದ ಕೆಲಸ ಮಾಡಿದ್ದೀರಿ ಸರ್. ನಿಮಗೆ ಮತ್ತು ನಿಮ್ಮ ತಂಡಕ್ಕೆ ಅಭಿನಂದನೆ, ನಮ್ಮ ಸೆಲ್ಯೂಟ್” ಎಂದು ಒಬ್ಬ ಟ್ವಿಟ್ಟರ್ ಬಳಕೆದಾರರೊಬ್ಬರು ಪ್ರಶಂಸಿಸಿದ್ದರೆ, “ ಈಗ ಅವರು ಪುಷ್ಪ 2 ಮಾಡಲು ಯೋಚಿಸುತ್ತಿದ್ದಾರೆ, ಇದು ಮತ್ತಷ್ಟು ಅರಣ್ಯ ಮಾಫಿಯಾಗೆ ಕಾರಣವಾಗುತ್ತದೆ. ಅದರ ಬದಲು, ಜನಪ್ರಿಯ ಕನ್ನಡ ನಟ ಡಾ.ರಾಜ್ ಕುಮಾರ್ ಅವರ ಗಂಧದ ಗುಡಿ -1, ಶಿವರಾಜ್ ಕುಮಾರ್ ಅವರ ಗಂಧದ ಗುಡಿ -2 ರ ರೀತಿ ಪ್ರಾಮಾಣಿಕ ಅರಣ್ಯಾಧಿಕಾಗಿಗಳನ್ನು ಬಿಂಬಿಸುವ ಸಿನಿಮಾ ಮಾಡಬೇಕು” ಎಂದು ಮತ್ತೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬರು, “ಕೇವಲ ಖಚಿತ ಪಡಿಸಿಕೊಳ್ಳಲು ಬಯಸುತ್ತಿದ್ದೇನೆ ಅಷ್ಟೆ, ಪುಷ್ಪ ತಲೆಬಾಗಿದನೆ ಇಲ್ಲವೇ. ..?” ಎಂದು ನಗೆ ಚಟಾಕಿ ಹಾರಿಸಿದ್ದಾರೆ.
Published by:Ashwini Prabhu
First published: