ಜಮ್ಮು-ಕಾಶ್ಮೀರದಲ್ಲಿ ಪ್ರಿಪೇಯ್ಡ್ ಮೊಬೈಲ್​ನ ಎಸ್​ಎಂಎಸ್​, ವಾಯ್ಸ್​ ಕಾಲ್ ಸೇವೆ ಶೀಘ್ರ ಮರುಆರಂಭ

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ 370ನೇ ವಿಧಿಯನ್ನು ಆಗಸ್ಟ್​ 5ರಂದು ಕೇಂದ್ರ ಸರ್ಕಾರ ರದ್ದುಗೊಳಿಸಿದ ಬಳಿಕ ಜಮ್ಮು-ಕಾಶ್ಮೀರದಾದ್ಯಂತ ಮೊಬೈಲ್ ಹಾಗೂ ಅಂತರ್ಜಾಲ ಸೇವೆಯನ್ನು ತಡೆ ಹಿಡಿಯಲಾಗಿತ್ತು.

news18-kannada
Updated:January 18, 2020, 5:11 PM IST
ಜಮ್ಮು-ಕಾಶ್ಮೀರದಲ್ಲಿ ಪ್ರಿಪೇಯ್ಡ್ ಮೊಬೈಲ್​ನ ಎಸ್​ಎಂಎಸ್​, ವಾಯ್ಸ್​ ಕಾಲ್ ಸೇವೆ ಶೀಘ್ರ ಮರುಆರಂಭ
ರೇಖಾಚಿತ್ರ-ಮೀರ್ ಸುಹೈಲ್.
  • Share this:
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ನಿರ್ಬಂಧಿಸಲಾಗಿರುವ ಎಸ್​ಎಂಎಸ್​ ಸೇವೆ ಮತ್ತು ಪ್ರಿಪೇಯ್ಡ್ ಮೊಬೈಲ್​ ವಾಯ್ಸ್​ ಕಾಲ್​ ಸೌಲಭ್ಯವನ್ನು ಶೀಘ್ರದಲ್ಲಿಯೇ ಮರುಸ್ಥಾಪಿಸುವುದಾಗಿ ಸರ್ಕಾರದ ವಕ್ತಾರ ರೋಹಿತ್ ಕನ್ಸಾಲ್ ತಿಳಿಸಿದ್ದಾರೆ. 

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೋಹಿತ್, ಕಾಶ್ಮೀರ ನಿಗದಿತ ಪ್ರದೇಶಗಳಲ್ಲಿ ಪೋಸ್ಟ್​ಪೇಯ್ಡ್ ಮೊಬೈಲ್ ಬಳಕೆದಾರರಿಗೆ 2ಜಿ ಮೊಬೈಲ್ ಡಾಟಾ ಸೇವೆಯನ್ನು ವಿಸ್ತರಿಸಲಾಗಿದೆ. ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ಪರಿಶೀಲಿಸಿದ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವಿವರಿಸಿದರು.

ಜಮ್ಮು ಮತ್ತು ಕುಪ್ವಾರ, ಕಾಶ್ಮೀರದಲ್ಲಿನ ಬಂಡಿಪೊರ್ ವಲಯದ ಎಲ್ಲ ಹತ್ತು ಜಿಲ್ಲೆಗಳಲ್ಲಿ ಪೋಸ್ಟ್​ಪೇಯ್ಡ್ ಮೊಬೈಲ್​ ಮೇಲೆ 2ಜಿ ಅಂತರ್ಜಾಲ ಸೌಲಭ್ಯ ನೀಡಲಾಗಿದೆ. ಬುದ್ಗಾವ್, ಗಂದೆರ್​ಬಾಲ್​, ಬಾಲಾಮುಲ್ಲಾ, ಶ್ರೀನಗರ, ಅನಂತನಾಗ್​, ಶೊಪಿಯಾನ್ ಮತ್ತು ಪುಲ್ವಾಮಾದಲ್ಲಿ ಮೊಬೈಲ್ ಅಂತರ್ಜಾಲ ಸೇವೆ ರದ್ದತಿ ಮುಂದುವರೆಸಲಾಗಿದೆ ಎಂದು ರೋಹಿತ್ ತಿಳಿಸಿದರು.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ 370ನೇ ವಿಧಿಯನ್ನು ಆಗಸ್ಟ್​ 5ರಂದು ಕೇಂದ್ರ ಸರ್ಕಾರ ರದ್ದುಗೊಳಿಸಿದ ಬಳಿಕ ಜಮ್ಮು-ಕಾಶ್ಮೀರದಾದ್ಯಂತ ಮೊಬೈಲ್ ಹಾಗೂ ಅಂತರ್ಜಾಲ ಸೇವೆಯನ್ನು ತಡೆ ಹಿಡಿಯಲಾಗಿದ್ದು, ಇದೀಗ ಹಂತಹಂತವಾಗಿ ಮೊಬೈಲ್ ಹಾಗೂ ಅಂತರ್ಜಾಲ ಸೇವೆಯನ್ನು ಮರುಸ್ಥಾಪಿಸಲಾಗುತ್ತಿದೆ.

ಇದನ್ನು ಓದಿ: ಮಕ್ಕಳ ಶ್ಲೋಕ ಉಚ್ಛಾರಣೆಯಿಂದ ಮನಸು ಹಗುರವಾಯಿತು; ವಿವೇಕದೀಪಿನಿಯಲ್ಲಿ ಅಮಿತ್​ ಶಾ ಹರ್ಷ
First published:January 18, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading