ಇಂದು ಮಧ್ಯರಾತ್ರಿಯಿಂದಲೇ ಕಾಶ್ಮೀರದಲ್ಲಿ ಎಸ್​​ಎಂಎಸ್​​​ ಸೇವೆ ಆರಂಭ: ನಾಳೆಯಿಂದ ಇಂಟರ್​​ನೆಟ್ ಸೇವೆ​​​ ಲಭ್ಯ

ಆಗಸ್ಟ್​ 5ರಂದು ಕಾಶ್ಮೀರದ 370ನೇ ವಿಧಿ  ರದ್ದುಗೊಳಿಸಿದ ಬಳಿಕ ಕಟ್ಟುನಿಟ್ಟಿನ ಬಂದೋಬಸ್ತ್​ ಮಾಡಲಾಗಿತ್ತು. ಮಾಜಿ ಮುಖ್ಯಮಂತ್ರಿಗಳು ಸೇರಿ ಪ್ರಮುಖ ರಾಜಕೀಯ ಮುಖಂಡರನ್ನು ಗೃಹಬಂಧನದಲ್ಲಿ ಇಡಲಾಗಿತ್ತು. ಪ್ರಮುಖ ರಾಜಕೀಯ ನಾಯಕರನ್ನು ಪೊಲೀಸ್​ ಕಣ್ಗಾವಲಿನಲ್ಲಿಯೇ ಇರಿಸಲಾಗಿತ್ತು.

news18-kannada
Updated:December 31, 2019, 7:16 PM IST
ಇಂದು ಮಧ್ಯರಾತ್ರಿಯಿಂದಲೇ ಕಾಶ್ಮೀರದಲ್ಲಿ ಎಸ್​​ಎಂಎಸ್​​​ ಸೇವೆ ಆರಂಭ: ನಾಳೆಯಿಂದ ಇಂಟರ್​​ನೆಟ್ ಸೇವೆ​​​ ಲಭ್ಯ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ(ಡಿ.31): 370ನೇ ವಿಧಿ ರದ್ದುಗೊಳಿಸಿದ ಐದು ತಿಂಗಳ ಬಳಿಕ ಜಮ್ಮು-ಕಾಶ್ಮೀರದಲ್ಲಿ ಮತ್ತೆ ಮೊಬೈಲ್​​ ಎಸ್​​ಎಂಎಸ್​​(ಸಂದೇಶ) ಸೇವೆ ಆರಂಭವಾಗುತ್ತಿದೆ. ಇಂದು ಡಿಸೆಂಬರ್​​ 31ನೇ ತಾರೀಕು ಮಂಗಳವಾರ ಮಧ್ಯರಾತ್ರಿಯಿಂದಲೇ ಎಸ್‌ಎಂಎಸ್ ಸೇವೆ ಪುನಾರಂಭವಾಗಲಿದೆ ಎಂದು ಜಮ್ಮು-ಕಾಶ್ಮೀರ ಪ್ರಧಾನ ಕಾರ್ಯದರ್ಶಿ ರೋಹಿತ್ ಕನ್ಸಾಲ್ ಹೇಳಿದ್ಧಾರೆ. ಹಾಗೆಯೇ ನಾಳೆಯಿಂದ ಇಂಟರ್​​ನೆಟ್​​​ ಸೇವೆಯೂ ಶುರುವಾಗಲಿದೆ ಎಂದು ಅಧಿಕೃತ ಮಾಹಿತಿ ಲಭ್ಯವಾಗಿದೆ.

ಕಣಿವೆ ರಾಜ್ಯ ಎನ್ನಲಾಗುತ್ತಿದ್ದ ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಸಾಕಷ್ಟು ಬದಲಾವಣೆಗಳಾಗಿತ್ತು. ಜಮ್ಮು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಲಾಗಿತ್ತು. ಅಂತೆಯೇ ಕಳೆದ ಅಕ್ಟೋಬರ್​​​ 31ನೇ ತಾರೀಕು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್ ಕೇಂದ್ರಾಡಳಿತ ಪ್ರದೇಶಗಳಿಗೆ ಮೊದಲ ಲೆಫ್ಟಿನೆಂಟ್ ಗವರ್ನರ್​ಗಳಾಗಿ ಗಿರೀಶ್ ಚಂದ್ರ ಮುರ್ಮು ಮತ್ತು ಆರ್​.ಕೆ. ಮಾಥೂರ್ ಅಧಿಕಾರ ಸ್ವೀಕರಿಸಿದ್ದರು.

ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮ ದಿನಾಚರಣೆಯಾದಂದೇ ಲೆ. ಗವರ್ನರ್​ಗಳು ಅಧಿಕಾರ ವಹಿಸಿಕೊಂಡಿದ್ದರು. ಜಮ್ಮು ಕಾಶ್ಮೀರಕ್ಕಿದ್ದ 370ನೇ ವಿಧಿಯನ್ನು ರದ್ದುಗೊಳಿಸಬೇಕೆಂಬುದು ಸರ್ದಾರ್ ವಲ್ಲಭಭಾಯಿ ಪಟೇಲ್ ಕನಸಾಗಿತ್ತು. ಆ ಕನಸನ್ನು ಅವರ ಹುಟ್ಟುಹಬ್ಬದ ದಿನವೇ ಅಧಿಕೃತವಾಗಿ ಜಾರಿಗೆ ತರಲು ಮುಂದಾದೆವು ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿತ್ತು.

ಇದನ್ನೂ ಓದಿ: ಭಾರತೀಯ ಮುಸ್ಲಿಮರ ವಲಸೆ?: ಗಡಿಭಾಗದಲ್ಲಿ ಮೊಬೈಲ್ ಸರ್ವಿಸ್ ಬಂದ್ ಮಾಡಿಸಿದ ಬಾಂಗ್ಲಾದೇಶ

ಆಗಸ್ಟ್​ 5ರಂದು ಕಾಶ್ಮೀರದ 370ನೇ ವಿಧಿ  ರದ್ದುಗೊಳಿಸಿದ ಬಳಿಕ ಕಟ್ಟುನಿಟ್ಟಿನ ಬಂದೋಬಸ್ತ್​ ಮಾಡಲಾಗಿತ್ತು. ಮಾಜಿ ಮುಖ್ಯಮಂತ್ರಿಗಳು ಸೇರಿ ಪ್ರಮುಖ ರಾಜಕೀಯ ಮುಖಂಡರನ್ನು ಗೃಹಬಂಧನದಲ್ಲಿ ಇಡಲಾಗಿತ್ತು. ಪ್ರಮುಖ ರಾಜಕೀಯ ನಾಯಕರನ್ನು ಪೊಲೀಸ್​ ಕಣ್ಗಾವಲಿನಲ್ಲಿಯೇ ಇರಿಸಲಾಗಿತ್ತು. ಇಂಟರ್​ನೆಟ್​, ಮೊಬೈಲ್​ ಸೇವೆಗಳೂ ಸ್ಥಗಿತಗೊಂಡಿದ್ದವು. ಯಾವುದೇ ಅಹಿತಕರ ಘಟನೆಗಳು ನಡೆಯದಿರಲಿ ಎಂದು ಈ ಕ್ರಮಗಳನ್ನು ಕೈಗೊಳ್ಳಲಾಗಿತ್ತು.

ಈಗಾಗಲೇ ಕೇಂದ್ರ ಸರ್ಕಾರ ಕೆಲವು ರಾಜಕಾರಣಿಗಳನ್ನು ಬಿಡುಗಡೆ ಮಾಡಿದೆ. ಆದರೆ, ಇನ್ನೂ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಮತ್ತು ಒಮರ್​ ಅಬ್ದುಲ್ಲಾರನ್ನು ಬಿಡುಗಡೆ ಮಾಡಿಲ್ಲ. ಈ ಮಧ್ಯೆಯೇ ಜಮ್ಮು ಮತ್ತು ಕಾಶ್ಮೀರದಲ್ಲಿ ಮೊಬೈಲ್​ ಎಸ್​ಎಂಎಸ್ ಸೇವೆ ಇಂದು ಮಧ್ಯರಾತ್ರಿಯಿಂದಲೇ ಮರು ಆರಂಭ ಮಾಡಲು ಕೇಂದ್ರ ಸರ್ಕಾರ ಆದೇಶಿಸಿದೆ.
First published:December 31, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ