ಅಮೇಥಿಯಲ್ಲಿ ಸ್ಮೃತಿ ಇರಾನಿ ಬೆಂಬಲಿಗನ ಗುಂಡಿಟ್ಟು ಹತ್ಯೆ; ರಾಜಕೀಯ ಕೊಲೆ ಶಂಕೆ

ಗ್ರಾಮ ಮುಖ್ಯಸ್ಥನ ಹುದ್ದೆ ತೊರೆದು ಸ್ಮೃತಿ ಇರಾನಿ ಪರ ಪ್ರಚಾರ ಕಾರ್ಯದಲ್ಲಿ ಸುರೇಂದ್ರ ಸಿಂಗ್ ತೊಡಗಿಸಿಕೊಂಡಿದ್ದರು. ಇವರ ಅಂತ್ಯಕ್ರಿಯೆಯಲ್ಲಿ ಸ್ವತಃ ಸ್ಮೃತಿ ಇರಾನಿ ಅವರೇ ಪಾಲ್ಗೊಂಡರು.

Vijayasarthy SN | news18
Updated:May 26, 2019, 5:38 PM IST
ಅಮೇಥಿಯಲ್ಲಿ ಸ್ಮೃತಿ ಇರಾನಿ ಬೆಂಬಲಿಗನ ಗುಂಡಿಟ್ಟು ಹತ್ಯೆ; ರಾಜಕೀಯ ಕೊಲೆ ಶಂಕೆ
ಸ್ಮೃತಿ ಇರಾನಿ ಜೊತೆ ಸುರೇಂದ್ರ ಸಿಂಗ್ ಇದ್ದ ಫೋಟೋ
  • News18
  • Last Updated: May 26, 2019, 5:38 PM IST
  • Share this:
ಅಮೇಥಿ(ಮೇ 26): ರಾಹುಲ್ ಗಾಂಧಿ ವಿರುದ್ಧ ಸ್ಮೃತಿ ಇರಾನಿ ಗೆಲ್ಲುವ ಮೂಲಕ ದೇಶಾದ್ಯಂತ ಸಂಚಲನ ಮೂಡಿಸಿರುವ ಅಮೇಥಿ ಲೋಕಸಭಾ ಕ್ಷೇತ್ರದಲ್ಲಿ ದಾರುಣ ಹತ್ಯೆ ಘಟನೆಯೊಂದು ನಡೆದಿದೆ. ಸ್ಮೃತಿ ಇರಾನಿ ಅವರ ಆಪ್ತ ಬೆಂಬಲಿಗರನೆನ್ನಲಾದ 50 ವರ್ಷದ ಸುರೇಂದ್ರ ಸಿಂಗ್ ಅವರನ್ನು ಅಪರಿಚಿತ ವ್ಯಕ್ತಿಗಳು ಗುಂಡಿಟ್ಟು ಹತ್ಯೆಗೈದಿದ್ದಾರೆ. ಬರೋಲಿಯಾ ಗ್ರಾಮದಲ್ಲಿ ಬೆಳಗ್ಗೆ 11:30ಕ್ಕೆ ಈ ಘಟನೆ ನಡೆದಿರುವುದು ವರದಿಯಾಗಿದೆ. ಮನೆಯ ಹೊರಗೆ ಮಲಗಿದ್ದ ಸುರೇಂದ್ರ ಸಿಂಗ್ ಅವರನ್ನು ಇಬ್ಬರು ಅಪರಿಚಿತರು ಗುಂಡಿಟ್ಟು ಹೊಡೆದಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲು ಯತ್ನಿಸಲಾಯಿತಾದರೂ ಜೀವ ಉಳಿಯಲಿಲ್ಲ. ಇಂದು ಸಂಜೆಯೇ ಇವರ ಅಂತ್ಯ ಕ್ರಿಯೆ ನಡೆದಿದ್ದು, ಈ ಕಾರ್ಯದಲ್ಲಿ ನೂತನ ಸಂಸದೆ ಸ್ಮೃತಿ ಇರಾನಿ ಅವರೇ ಖುದ್ದಾಗಿ ಪಾಲ್ಗೊಂಡಿದ್ದರು.

ಸುರೇಂದ್ರ ಸಿಂಗ್ ಅವರ ಶವಯಾತ್ರೆಯಲ್ಲಿ ಸ್ಮೃತಿ ಇರಾನಿ ಭಾಗಿಯಾಗಿರುವುದು


ಇದು ರಾಜಕೀಯ ಕೊಲೆ ಸಾಧ್ಯತೆ ಇರಬಹುದೆಂದು ಶಂಕಿಸಲಾಗಿದೆ. ಪೊಲೀಸರೂ ಕೂಡ ಈ ಸಾಧ್ಯತೆಯನ್ನು ಶಂಕಿಸಿದ್ದಾರಾದರೂ ವೈಯಕ್ತಿದ ಧ್ವೇಷದ ಸಾಧ್ಯತೆಯನ್ನು ಅವರು ತಳ್ಳಿಹಾಕಿಲ್ಲ. ಈ ಪ್ರಕರಣ ಸಂಬಂಧ ಪೊಲೀಸರು ಇಬ್ಬರು ಶಂಕಿತ ವ್ಯಕ್ತಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಇದನ್ನೂ ಓದಿ: ರಾಹುಲ್, ಪ್ರಿಯಾಂಕಾ, ಮೋದಿ, ಅಮೇಥಿ ಬಗ್ಗೆ ಸ್ಮೃತಿ ಇರಾನಿ ಏನು ಹೇಳ್ತಾರೆ? ಇಲ್ಲಿದೆ Exclusive ಸಂದರ್ಶನದ ಹೈಲೈಟ್ಸ್

ಹತ್ಯೆಯಾದ ಸುರೇಂದ್ರ ಸಿಂಗ್ ಅವರು ಸ್ಮೃತಿ ಇರಾನಿ ಪರವಾಗಿ ಅಮೇಥಿಯಲ್ಲಿ ಸಾಕಷ್ಟು ಕೆಲಸ ಮಾಡಿದ್ದರು. ಸ್ಥಳೀಯವಾಗಿ ಇವರು ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದು, ಸಾಕಷ್ಟು ಜನಪ್ರಿಯತೆಯನ್ನೂ ಗಳಿಸಿದ್ದರೆನ್ನಲಾಗಿದೆ. ಬರೋಲಿಯಾ ಗ್ರಾಮದ ಮುಖ್ಯಸ್ಥರಾಗಿದ್ದು ಇವರು ತಮ್ಮ ಹುದ್ದೆ ತೊರೆದು ಬಿಜೆಪಿಯ ಚುನಾವಣಾ ಪ್ರಚಾರ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಸ್ಮೃತಿ ಕೂಡ ಚುನಾವಣಾ ಪ್ರಚಾರದ ವೇಳೆಯಲ್ಲಿ ಸುರೇಂದ್ರ ಸಿಂಗ್ ಅವರನ್ನು ಅನೇಕ ಬಾರಿ ಹೊಗಳಿಸಿದ್ದರು.

ರಾಹುಲ್ ಗಾಂಧಿ ಅವರನ್ನು ಅವಹೇಳನ ಮಾಡುವುದಕ್ಕಾಗಿ ಇದೇ ಬರೋಲಿಯಾ ಗ್ರಾಮದಲ್ಲಿ ಶೂಗಳನ್ನು ಹಂಚಲಾಗಿದೆ ಎಂದು ಚುನಾವಣಾ ಪ್ರಚಾರ ಸಮಯದಲ್ಲಿ ಪ್ರಿಯಾಂಕಾ ಗಾಂಧಿ ಅವರು ಆರೋಪ ಮಾಡಿದ್ದರು. ಆ ಸಂದರ್ಭದಲ್ಲಿ ಶೂ ಹಂಚುವ ಕೆಲಸದಲ್ಲಿ ತೊಡಗಿಸಿದವರಲ್ಲಿ ಸುರೇಂದ್ರ ಸಿಂಗ್ ಪ್ರಮುಖರು.

ಇದನ್ನೂ ಓದಿ: ವಂಚನೆಗೊಳಗಾದ ಮುಸ್ಲಿಮರ ವಿಶ್ವಾಸ ಗಳಿಸಿ: ಎನ್​​ಡಿಎ ಸಂಸದರಿಗೆ ಪ್ರಧಾನಿ ಮೋದಿ ಕಿವಿಮಾತುಸುರೇಂದ್ರ ಸಿಂಗ್ ಅವರ ಹತ್ಯೆಯ ಹಿಂದೆ ರಾಜಕೀಯ ಸಂಚು ಇದೆ ಎಂದು ಅವರ ಮಗ ಆರೋಪಿಸಿದ್ದಾರೆ. ಅಮೇಥಿ ಕ್ಷೇತ್ರದ ಬಿಜೆಪಿ ಸಂಚಾಲಕ ರಾಜೇಶ್ ಅಗ್ರಹಾರಿ ಅವರೂ ಕೂಡ ಕಾಂಗ್ರೆಸ್​ನತ್ತ ಬೊಟ್ಟು ಮಾಡಿದ್ದು, ಈ ಹತ್ಯೆ ಘಟನೆಯನ್ನು ಉನ್ನತ ಮಟ್ಟದ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಇದೇ ವೇಳೆ, ಇಂದು ಬೆಳಗ್ಗೆ ಹತ್ಯೆಯಾದ ಸುರೇಂದ್ರ ಸಿಂಗ್ ಅವರ ಅಂತ್ಯಕ್ರಿಯೆ ಇವತ್ತು ಸಂಜೆ ಬರೋಲಿಯಾ ಗ್ರಾಮದಲ್ಲಿ ನೆರವೇರಿದೆ. ಸಂಸದೆ ಸ್ಮೃತಿ ಇರಾನಿ ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಿಂಗ್ ಶವಯಾತ್ರೆಯಲ್ಲಿ ಭಾಗಿಯಾಗಿದರು.

ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್​ನಲ್ಲೂ ಹಿಂಬಾಲಿಸಿ
First published:May 26, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading