• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Smriti Irani: ಗರ್ಭಪಾತವಾದ ಮರುದಿನವೂ ಶೂಟಿಂಗ್​ಗೆ ಬರಲೇಬೇಕು ಎಂದಿದ್ದರು; ಕಷ್ಟದ ದಿನಗಳ ಬಗ್ಗೆ ಹೇಳಿಕೊಂಡ ಸಚಿವೆ

Smriti Irani: ಗರ್ಭಪಾತವಾದ ಮರುದಿನವೂ ಶೂಟಿಂಗ್​ಗೆ ಬರಲೇಬೇಕು ಎಂದಿದ್ದರು; ಕಷ್ಟದ ದಿನಗಳ ಬಗ್ಗೆ ಹೇಳಿಕೊಂಡ ಸಚಿವೆ

ಸ್ಮೃತಿ ಇರಾನಿ (ಫೈಲ್​ ಫೋಟೋ)

ಸ್ಮೃತಿ ಇರಾನಿ (ಫೈಲ್​ ಫೋಟೋ)

 ಗರ್ಭಪಾತದ ಬಗ್ಗೆ ಸುಳ್ಳು ಹೇಳುತ್ತಿದ್ದೇನೆ ಎಂದು ಧಾರಾವಾಹಿಯ ನಿರ್ಮಾಪಕಿ ಏಕ್ತಾ ಕಪೂರ್ ತಿಳಿದಿದ್ದರು. ಹಾಗಾಗಿ ಮರುದಿನವೇ ಶೂಟಿಂಗ್​ಗೆ ಬರಲೇಬೇಕು ಎಂದು ಹೇಳಿದ್ದರು ಎಂದು ಸ್ಮೃತಿ ಅವರು ತಮ್ಮ ಕಷ್ಟದ ದಿನಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

 • Trending Desk
 • 2-MIN READ
 • Last Updated :
 • Delhi, India
 • Share this:

ಕೇಂದ್ರ ಸಚಿವೆ ಸ್ಮೃತಿ ಇರಾನಿ (Smriti Irani) ಅವರಿಗೆ  ರಾಜಕಾರಣಿಗಿಂತ ನಟಿಯಾಗಿ (Actress) ಹೆಚ್ಚು ವರ್ಷಗಳ ಅನುಭವವಿದೆ.  ಸ್ಮೃತಿ ಅವರ ಅಭಿನಯದ ‘ಕ್ಯುಕಿ ಸಾಸ್ ಭಿ ಕಭಿ ಬಹು ಥಿ’ ( Kyunki Saas Bhi Kabhi Bahu Thi) ಧಾರಾವಾಹಿ ಯಾರಿಗೆ ತಾನೇ ನೆನಪಿರುವುದಿಲ್ಲ ಹೇಳಿ? ಈ ಧಾರಾವಾಹಿಯಲ್ಲಿ ‘ತುಳಸಿ’ ಎಂಬ ಪಾತ್ರವನ್ನು ಒಂದಲ್ಲ, ಎರಡಲ್ಲ ಬರೋಬ್ಬರಿ ಏಳು ವರ್ಷಗಳ ಕಾಲ ನಿರ್ವಹಿಸಿದ್ದರು. ಈ ಧಾರಾವಾಹಿಯಿಂದಲೇ ಸ್ಮೃತಿ ಇರಾನಿ ಅವರು ಮೊದಲಿಗೆ ಮನೆಮಾತಾದರು. ಇತ್ತೀಚಿನ ಒಂದು ಸಂದರ್ಶನದಲ್ಲಿ ತಮ್ಮ ಹಳೆಯ ನಟನೆಯ ದಿನಗಳನ್ನು ನೆನಪು ಮಾಡಿಕೊಂಡಿರುವ ಸ್ಮೃತಿ ಒಂದು ಘಟನೆಯ ಬಗ್ಗೆ ಮಾತ್ರ ತುಂಬಾನೇ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ.


ಗರ್ಭಪಾತವಾದರೂ ಸಹ ಬಂದು ಶೂಟಿಂಗ್ ಮಾಡ್ಕೊಡಿ ಅಂದ್ರಂತೆ ನಿರ್ಮಾಪಕಿ


ಗರ್ಭಪಾತದ ಬಗ್ಗೆ ಸುಳ್ಳು ಹೇಳುತ್ತಿದ್ದೇನೆ ಎಂದು ಧಾರಾವಾಹಿಯ ನಿರ್ಮಾಪಕಿ ಏಕ್ತಾ ಕಪೂರ್ ತಿಳಿದಿದ್ದರು.  ಅದೇ ಸಮಯದಲ್ಲಿ, ಸ್ಮೃತಿ ರಾಮಾಯಣ ಧಾರಾವಾಹಿಯಲ್ಲೂ ಸಹ ಸೀತೆಯ ಪಾತ್ರ ಮಾಡುತ್ತಿದ್ದರಂತೆ, ಆ ಧಾರಾವಾಹಿಯ ನಿರ್ದೇಶಕ ರವಿ ಚೋಪ್ರಾ ಅವರು ಸ್ಮೃತಿ ಅವರ ಗರ್ಭಪಾತದ ವಿಷಯ ಕೇಳಿ ಅವರಿಗೆ ವಿಶ್ರಾಂತಿ ಪಡೆಯುವಂತೆ ಮತ್ತು ಕೆಲಸಕ್ಕೆ ಬರದಂತೆ ಕೇಳಿಕೊಂಡಿದ್ದರಂತೆ ಎಂದು ಖುದ್ದು ಸ್ಮೃತಿ ಹೇಳಿಕೊಂಡಿದ್ದಾರೆ.


ಮಾಜಿ ನಟಿ ಇತ್ತೀಚೆಗೆ ನೀಲೇಶ್ ಮಿಶ್ರಾ ಅವರ ‘ದಿ ಸ್ಲೋ ಇಂಟರ್ವ್ಯೂ’ ಎಂಬ ಒಂದು ಸಂದರ್ಶನದಲ್ಲಿ ನೀಲೇಶ್ ಮಿಶ್ರಾ ಅವರೊಂದಿಗೆ ಮಾತನಾಡಿದರು ಮತ್ತು ಗರ್ಭಪಾತವಾದಾಗ 'ಮಾನವೀಯತೆ' ಬಗ್ಗೆ ದೊಡ್ಡ ಪಾಠವನ್ನು ಕಲಿತರು ಎಂಬುದನ್ನು ಸ್ಮೃತಿ ಹಂಚಿಕೊಂಡರು. ಧಾರಾವಾಹಿಯಲ್ಲಿ ಇತರ 50 ಪಾತ್ರಗಳು ಇರುವುದರಿಂದ ‘ಕ್ಯುಕಿ ಸಾಸ್ ಭಿ ಕಭಿ ಬಹು ಥಿ’ ಯಲ್ಲಿ ಶೂಟಿಂಗ್ ಸಮಯವನ್ನು ಮುಂದಕ್ಕೆ ಹಾಕುವುದು ಸುಲಭವಾಗಿತ್ತು ಎಂದು ಹೇಳುವ ಮೂಲಕ ಅವರು ತಮ್ಮ ಕಥೆಯನ್ನು ಪ್ರಾರಂಭಿಸಿದರು, ಆದರೆ ರಾಮಾಯಣದಲ್ಲಿ ಸೀತೆಯ ಪಾತ್ರವನ್ನು ಬದಲಾಯಿಸಲು ಸಾಧ್ಯವಾಗಲಿಲ್ಲ. ಆದರೂ ಸಹ ರಾಮಾಯಣ ಧಾರವಾಹಿಯ ನಿರ್ದೇಶಕ ರವಿ ಚೋಪ್ರಾ ಅವರು ಏಕ್ತಾ ಕಪೂರ್ ಗಿಂತಲೂ ಹೆಚ್ಚು ಕಾಳಜಿ ವಹಿಸಿದರು ಎಂದು ಸ್ಮೃತಿ ಹೇಳಿದರು.


ಧಾರವಾಹಿ ನಿರ್ಮಾಪಕಿ ಏಕ್ತಾ ಕಪೂರ್​, ಸ್ಮೃತಿ ಇರಾನಿ


ಗರ್ಭಪಾತದ ಕಷ್ಟ ಬಿಚ್ಚಿಟ್ಟ ಸ್ಮೃತಿ


ತನ್ನ ಆ ಗರ್ಭಪಾತದ ಘಟನೆಯನ್ನು ವಿವರಿಸಿದ ಸ್ಮೃತಿ "ನಾನು ಗರ್ಭಿಣಿ ಎಂದು ನನಗೆ ತಿಳಿದಿರಲಿಲ್ಲ. ನಾನು ಕ್ಯೂಕಿ ಸಾಸ್ ಭಿ ಕಭಿ ಬಹು ಥಿ ಧಾರಾವಾಹಿ ಸೆಟ್ ನಲ್ಲಿದ್ದೆ . ನಾನು ಚಿತ್ರೀಕರಣದಲ್ಲಿ ಇರುವಾಗ ನನಗೆ ಆರೋಗ್ಯ ಅಷ್ಟೊಂದು ಚೆನ್ನಾಗಿಲ್ಲ ಎಂದು ಅಲ್ಲಿನ ನಿರ್ಮಾಪಕರಿಗೆ ಹೇಳಿದೆ. ಮನೆಗೆ ಹೋಗಲು ಅವಕಾಶ ನೀಡುವಂತೆ ಕೇಳಿದೆ. ಆದರೂ, ನಾನು ಕೆಲಸ ಮಾಡುತ್ತಿದ್ದೆ. ಅವರು ನನ್ನನ್ನು ಹೋಗಲು ಬಿಡುವ ಹೊತ್ತಿಗೆ, ಆಗಲೇ ಸಂಜೆಯಾಗಿತ್ತು.


ಸೋನೋಗ್ರಫಿಗೆ ಹೋಗುವಂತೆ ವೈದ್ಯರು ನನಗೆ ಸೂಚಿಸಿದರು. ದಾರಿಯಲ್ಲಿ, ನನಗೆ ರಕ್ತಸ್ರಾವವಾಗಲು ಪ್ರಾರಂಭಿಸಿತು. ಜೋರಾಗಿ ಮಳೆ ಸಹ ಬೀಳುತ್ತಿತ್ತು ಎಂದು ನನಗೆ ನೆನಪಿದೆ. ನಾನು ಹೋಗುತ್ತಿದ್ದ ಆಟೋ ನಿಲ್ಲಿಸಿ ನನ್ನನ್ನು ಆಸ್ಪತ್ರೆಗೆ ಕರೆದೊಯ್ಯುವಂತೆ ಚಾಲಕನನ್ನು ಕೇಳಿದೆ. ನಾನು ಆಸ್ಪತ್ರೆಯನ್ನು ತಲುಪಿದೆ, ನನಗೆ ರಕ್ತಸ್ರಾವವಾಗುತ್ತಿರುವಾಗ ಒಬ್ಬ ನರ್ಸ್ ನನ್ನನು ನೋಡಿ ಆಟೋಗ್ರಾಫ್ ಕೇಳಲು ಓಡಿ ಬಂದರು. ನಾನು ಅವಳಿಗೆ ಆಟೋಗ್ರಾಫ್ ಕೊಟ್ಟು 'ನನಗೆ ಗರ್ಭಪಾತವಾದಂತಿದೆ’ ಎಂದು ಹೇಳಿದೆ” ಎಂದು ಸ್ಮೃತಿ ಹಳೆಯದ್ದನ್ನು ನೆನಪಿಸಿಕೊಂಡರು.


ಗರ್ಭಪಾತವಾಗಿದೆ ಅಂತ ಹೇಳಿದ್ರೆ, ಪರವಾಗಿಲ್ಲ ಮಧ್ಯಾಹ್ನ ಬನ್ನಿ ಅಂದ್ರಂತೆ..


ಗರ್ಭಪಾತವಾದ ಮರುದಿನ ಸ್ಮೃತಿಗೆ ಕ್ಯುಕಿ ಸಾಸ್ ಭಿ ಕಭಿ ಬಹು ಥಿ ಧಾರಾವಾಹಿಯ ನಿರ್ಮಾಣ ತಂಡದಿಂದ ಕರೆ ಬಂತು ಮತ್ತು ಮರುದಿನ ಕೆಲಸಕ್ಕೆ ಬರಲು ಕೇಳಲಾಯಿತು. "ನಾನು ಈಗಾಗಲೇ ನಿಮಗೆ ಹೇಳಿದ್ದೆನೆ, ನನಗೆ ಆರೋಗ್ಯ ಸರಿಯಿಲ್ಲ ಅಂತ, ನನಗೆ ಗರ್ಭಪಾತವಾಗಿದೆ” ಎಂದು ಸ್ಮೃತಿ ಹೇಳಿದರಂತೆ. ಅದಕ್ಕೆ ಕರೆ ಮಾಡಿದ ಆ ವ್ಯಕ್ತಿ ಯಾವುದೇ ಸಮಸ್ಯೆ ಇಲ್ಲ, ಮಧ್ಯಾಹ್ನ 2 ಗಂಟೆಯ ಶಿಫ್ಟ್ ಗೆ ಬನ್ನಿ ಅಂತ ಹೇಳಿದರಂತೆ. ಆ ಸಮಯದಲ್ಲಿ, ಸ್ಮೃತಿ ಡಬಲ್ ಶಿಫ್ಟ್ ಗಳಲ್ಲಿ ಕೆಲಸ ಮಾಡುತ್ತಿದ್ದರು. ಬೆಳಿಗ್ಗೆ ಹೊತ್ತು ಅವರು ರವಿ ಚೋಪ್ರಾ ಅವರ ರಾಮಾಯಣ ಮತ್ತು ಮಧ್ಯಾಹ್ನದ ನಂತರ ಕ್ಯುಕಿ ಸಾಸ್ ಭಿ ಕಭಿ ಬಹು ಥಿ ಧಾರಾವಾಹಿಯ ಚಿತ್ರೀಕರಣದಲ್ಲಿ ತೊಡಗಿರುತ್ತಿದ್ದರಂತೆ.
ರವಿ ಚೋಪ್ರಾ ಮಾತ್ರ ಸ್ಮೃತಿಗೆ ವಿಶ್ರಾಂತಿ ತಗೊಳ್ಳಿ ಅಂದ್ರಂತೆ


ಈ ಪರಿಸ್ಥಿತಿಯ ಬಗ್ಗೆ ಸ್ಮೃತಿ ಅವರು ರವಿ ಚೋಪ್ರಾ ಅವರಿಗೆ ತಿಳಿಸಿದಾಗ ಅವರು ಸ್ಮೃತಿಯನ್ನು ವಿಶ್ರಾಂತಿ ಪಡೆಯುವಂತೆ ಕಟ್ಟುನಿಟ್ಟಾಗಿ ಹೇಳಿದರು. "ನಾನು ಬೆಳಿಗ್ಗೆ 7 ರ ಶಿಫ್ಟ್ ಗೆ ಬೆಳಿಗ್ಗೆ 8 ಗಂಟೆಗೆ ಬರಬಹುದೇ ಎಂದು ವಿನಂತಿಸಿದೆ. ಆಗ ಅವರು ನಿನಗೆ ತಲೆ ಕೆಟ್ಟಿದೆಯೇ? ಗರ್ಭಪಾತವಾಗಿದೆ ನಿನಗೆ ಸ್ವಲ್ಪ ದಿನಗಳ ಕಾಲ ವಿಶ್ರಾಂತಿ ಬೇಕು, ನಾಳೆ ಸಹ ನೀನು ಕೆಲಸಕ್ಕೆ ಬರುವ ಅಗತ್ಯವಿಲ್ಲ. ನಾನು ಹೇಗಾದರೂ ಮಾಡಿ ಎಲ್ಲವನ್ನೂ ನಿಭಾಯಿಸುತ್ತೇನೆ ಅಂತ ರವಿ ಹೇಳಿದರಂತೆ” ಎಂದು ಸ್ಮೃತಿ ನೆನಪಿಸಿಕೊಂಡರು.


ಆದರೆ ಏಕ್ತಾ ಕಪೂರ್ ಅವರ ಕ್ಯೂಕಿ ಸಾಸ್ ಭಿ ಕಭಿ ಬಹು ಥಿ ಧಾರಾವಾಹಿಯಲ್ಲಿ ಶೂಟಿಂಗ್ ಗೆ ನಾನು ಮಧ್ಯಾಹ್ನ ಕೆಲಸ ಮಾಡುವುದಾಗಿ ಚೋಪ್ರಾ ಅವರಿಗೆ ಹೇಳಿದರಂತೆ. "ನಾನು ಮಧ್ಯಾಹ್ನ 2 ಗಂಟೆಗೆ ಅಲ್ಲಿಗೆ ಹೋಗುತ್ತಿದ್ದೇನೆ, ಇಲ್ಲದಿದ್ದರೆ ನನ್ನನ್ನು ಕೆಲಸದಿಂದ ತೆಗೆದು ಹಾಕುತ್ತಾರೆ ಎಂದು ನಾನು ಅವರಿಗೆ ಹೇಳಿದೆ. ಅವರು ಅದಕ್ಕೆ ನನಗೆ ಅವರ ಬಗ್ಗೆ ಗೊತ್ತಿಲ್ಲ, ನನ್ನ ಸೆಟ್ ಗೆ ಬರಲು ತಲೆಕೆಡಿಸಿಕೊಳ್ಳಬೇಡಿ. ನೀವು 2 ಗಂಟೆಗೆ ಅಲ್ಲಿಗೆ ಹೋಗಬೇಕಾದರೆ, ನನ್ನ ಶಿಫ್ಟ್ ಅನ್ನು ವಿಶ್ರಾಂತಿ ಪಡೆಯಲು ಬಳಸಿಕೊಳ್ಳಿ ಅಂತ ರವಿ ಹೇಳಿದ್ದರು ಅಂತ ಸ್ಮೃತಿ ಹೇಳಿದರು.


ಇದನ್ನೂ ಓದಿ: Khushbu Sundar: ಮೋದಿ ಸರ್‌ನೇಮ್ ಬಗ್ಗೆ ಬಿಜೆಪಿಯ ಖುಷ್ಬೂ ಸುಂದರ್ ಹಳೆ ಟ್ವೀಟ್, ಕಾಂಗ್ರೆಸ್ ಟೀಕೆ

top videos


  ಮರುದಿನ, ಅವರು ಏಕ್ತಾ ಅವರ ಧಾರಾವಾಹಿಯ ಸೆಟ್ ಗೆ ಹೋದಾಗ ಸಹ-ನಟರೊಬ್ಬರು ನಿರ್ಮಾಪಕರ ಕಿವಿಗಳಲ್ಲಿ ತನ್ನ ಗರ್ಭಪಾತವು ನಿಜವಲ್ಲ ಎಂದು ಗಾಸಿಪ್ ಗಳಿಂದ ತುಂಬಿದ್ದರು ಎಂದು ಸ್ಮೃತಿ ಕಂಡುಕೊಂಡರಂತೆ. "ನನ್ನ ಮನೆಯ ಇಎಂಐ ಅನ್ನು ಪಾವತಿಸಲು ನನಗೆ ಹಣದ ಅಗತ್ಯವಿರುವುದರಿಂದ ನಾನು ಕೆಲಸಕ್ಕೆ ಹಿಂತಿರುಗಿದ್ದೇನೆ ಎಂದು ಆ ವ್ಯಕ್ತಿಗೆ ತಿಳಿದಿರಲಿಲ್ಲ. ಮರುದಿನ, ಇದು ನಾಟಕವಲ್ಲ ಎಂದು ಹೇಳಲು ನಾನು ನನ್ನ ಎಲ್ಲಾ ವೈದ್ಯಕೀಯ ದಾಖಲೆಗಳನ್ನು ಏಕ್ತಾ ಬಳಿಗೆ ತೆಗೆದುಕೊಂಡು ಹೋದೆ. ಅವರು ಆಗ ಆ ಕಾಗದಗಳನ್ನು ತೋರಿಸಬೇಡ ಎಂದು ಹೇಳಿದಳು. ಭ್ರೂಣವೂ ಇದ್ದಿದ್ದರೆ ನಾನು ನಿಮಗೆ ಅದನ್ನು ತೋರಿಸುತ್ತಿದ್ದೆ ಅಂತ ಸ್ಮೃತಿ ಏಕ್ತಾ ಎದುರಿಗೆ ಹೇಳಿದ್ರಂತೆ.

  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು