ಭಾರತೀಯ ಮಹಿಳೆಯರು ಗಂಡನ ಹಿಂದೆ ನಡೆಯಬೇಕಂತೆ; ಸ್ಮೃತಿ ಉತ್ತರ ಸಾಮಾಜಿಕ ಜಾಲತಾಣದಲ್ಲಿ ವೈರಲ್​​

ಭಾರತೀಯ ಮಹಿಳೆಯರು ಗಂಡನ ಹಿಂದೆಯೇ ನಡೆಯಬೇಕು ಎಂಬ ಒಂದು ಮಾತಿದೆ. ಯಾಕೆ ಎಂಬ ಕುರಿತು ಕೇಂದ್ರ ಸಚಿವೆ ಸ್ಮೃತಿ ನೀಡಿರುವ ಉತ್ತರ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

Seema.R | news18-kannada
Updated:January 3, 2020, 3:41 PM IST
ಭಾರತೀಯ ಮಹಿಳೆಯರು ಗಂಡನ ಹಿಂದೆ ನಡೆಯಬೇಕಂತೆ; ಸ್ಮೃತಿ ಉತ್ತರ ಸಾಮಾಜಿಕ ಜಾಲತಾಣದಲ್ಲಿ ವೈರಲ್​​
ಕೇಂದ್ರ ಸಚಿವೆ ಸ್ಮೃತಿ ಇರಾನಿ
  • Share this:
ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಕ್ರಿಯಾಶೀಲರಾಗಿರುವವರು ಕೇಂದ್ರ ಸಚಿವೆ ಸ್ಮೃತಿ ಇರಾನಿ. ಸದ್ಯ ಭಾರತೀಯ ಮಹಿಳೆಯರ ಬಗ್ಗೆ ಅವರು ಈ ಹಿಂದೆ ಆಡಿದ ಮಾತೊಂದು ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಎಲ್ಲರ ಮನಗೆದ್ದಿದೆ.

2018ರಲ್ಲಿ ದೆಹಲಿಯಲ್ಲಿ ನಡೆದ ಮಹಿಳಾದಿನದಲ್ಲಿ ಮಾತನಾಡಿದ ಸ್ಮೃತಿ, ಭಾರತೀಯ ಮಹಿಳೆಯರು ಗಂಡನ ಹಿಂದೆಯೇ ನಡೆಯಬೇಕು ಎಂಬ ಒಂದು ಮಾತಿದೆ. ಈ ಮಾತನ್ನು ಹೇಳಿದಾಕ್ಷಣ ನಾನು ತುಂಬಾ ಸಂಪ್ರದಾಯಸ್ಥೆ ಎನ್ನುತ್ತಾರೆ. ನಾನು ನಡೆಯುವಾಗ ಗಂಡನ ಎರಡು ಹೆಜ್ಜೆ ಹಿಂದೆಯೇ ಇರುತ್ತೇನೆ. ನನ್ನಂತೆಯೇ ಅನೇಕ ಮಹಿಳೆಯರು ಇರುತ್ತಾರೆ, ಕಾರಣ. ಗಂಡಂದಿರುವ ನಡೆಯುವಾಗ ಅನೇಕ ತಪ್ಪಾಗುತ್ತದೆ. ಅನೇಕ ವಿಷಯಗಳಲ್ಲಿ ಎಡವುತ್ತಾರೆ. ಅವರು ಬಾಳಿನಲ್ಲಿ ಎಡವದಂತೆ ಬೆಂಬಲವಾಗಿ ನಿಲ್ಲಲು ಮಹಿಳೆಯರು ಹಿಂದೆ ನಡೆಯಬೇಕು ಎಂದು ಸಲಹೆ ನೀಡಿದ್ದಾರೆ.ಅವರ ಈ ಮಾತು ಸದ್ಯ ಟಿಕ್​ಟಾಕ್​ನಲ್ಲಿ ಅತಿ ಹೆಚ್ಚು ಸಂಚಲನ ಸೃಷ್ಟಿಸುತ್ತಿದ್ದು, ಎಲ್ಲರ ಮನಗೆದ್ದಿದೆ.
First published:January 3, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading