• Home
  • »
  • News
  • »
  • national-international
  • »
  • SpiceJet: ಸ್ಪೈಸ್ ಜೆಟ್ ವಿಮಾನದಲ್ಲಿ ಹೊಗೆ: ದೇವರ ಮೊರೆ ಹೋಗುವಂತೆ ಪ್ರಯಾಣಿಕರಿಗೆ ಸೂಚಿಸಿದ ಸಿಬ್ಬಂದಿ

SpiceJet: ಸ್ಪೈಸ್ ಜೆಟ್ ವಿಮಾನದಲ್ಲಿ ಹೊಗೆ: ದೇವರ ಮೊರೆ ಹೋಗುವಂತೆ ಪ್ರಯಾಣಿಕರಿಗೆ ಸೂಚಿಸಿದ ಸಿಬ್ಬಂದಿ

ಸ್ಪೈಸ್ ಜೆಟ್

ಸ್ಪೈಸ್ ಜೆಟ್

ಗೋವಾದಿಂದ ಹೈದರಾಬಾದ್ ಗೆ ಹೊರಟಿದ್ದ ಸ್ಪೈಸ್ ಜೆಟ್ ವಿಮಾನದಲ್ಲಿ ಇದ್ದಕ್ಕಿದ್ದಂತೆಯೇ ಹೊಗೆ ತುಂಬಿದ್ದರಿಂದ ಪ್ರಯಾಣಿಕರಿಗೆ ಆ ಸಮಯದಲ್ಲಿ ಏನು ನಡೆಯುತ್ತಿದೆ ಅನ್ನೋದೆ ಅರ್ಥವಾಗಲಿಲ್ಲ. ಸೈಸ್ ಜೆಟ್ ವಿಮಾನದ ಸಿಬ್ಬಂದಿಗಳು ಪ್ರಯಾಣದ ಮಧ್ಯದಲ್ಲಿ ಕ್ಯಾಬಿನ್ ನಲ್ಲಿ ಹೊಗೆ ತುಂಬಿದ್ದರಿಂದ ದೇವರ ಪ್ರಾರ್ಥನೆಯನ್ನು ಪ್ರಾರಂಭಿಸುವಂತೆ ಪ್ರಯಾಣಿಕರಿಗೆ ಹೇಳಿದರು ಎಂದು ವರದಿಯಾಗಿದೆ.

ಮುಂದೆ ಓದಿ ...
  • News18 Kannada
  • Last Updated :
  • Hyderabad, India
  • Share this:

ಈ ವಿಮಾನದಲ್ಲಿ (plane) ಪ್ರಯಾಣಿಸುವಾಗ ಸಾಮಾನ್ಯವಾಗಿ ಒಂದು ಭಯ ಅನ್ನೋದು ಪ್ರಯಾಣಿಕರಲ್ಲಿ ಇದ್ದೇ ಇರುತ್ತದೆ. ಹೌದು.. ಕೆಲವರಿಗಂತೂ ವಿಮಾನ ಅಷ್ಟೇ ಅಲ್ಲದೆ, ಬಸ್ ಮತ್ತು ರೈಲಿನಲ್ಲಿ ಕುಳಿತು ದೂರದ ಊರಿಗೆ ಹೋಗುವುದು ಎಂದರೆ ತುಂಬಾನೇ ಹೆದರಿಕೆಯಾಗುತ್ತದೆ. ವಿಮಾನದ ಸಿಬ್ಬಂದಿಗಳು (Flight crews) ಅವಘಡದ ಸಂದರ್ಭವನ್ನು ಹೇಗೆ ಸಮರ್ಥವಾಗಿ ನಿಭಾಯಿಸಬೇಕು ಅಂತ ಅನೇಕ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಂಡಿರುತ್ತಾರೆ. ಆದರೂ ಸಹ ಎಲ್ಲಿ ಅಪಘಾತಗಳು (Accidents) ನಡೆದು ಹೋಗುತ್ತವೆ ಅನ್ನೋ ಭಯ ಕೆಲವರನ್ನು ಸದಾ ಕಾಡುತ್ತಾ ಇರುತ್ತದೆ. ಇಲ್ಲಿಯೂ ಸಹ ಅಂತಹದೇ ಒಂದು ಭಯಾನಕವಾದ ಘಟನೆ ನಡೆದಿದೆ ನೋಡಿ. ಈ ಘಟನೆ ನಿಜಕ್ಕೂ ಪ್ರಯಾಣಿಕರನ್ನು ಬೆಚ್ಚಿ ಬೀಳುವಂತೆ ಮಾಡಿತ್ತು.


ಸ್ಪೈಸ್ ಜೆಟ್ ವಿಮಾನದಲ್ಲಿ ಏನಾಗಿತ್ತು ?
ಇತ್ತೀಚಿಗೆ ರಾತ್ರಿ ಗೋವಾದಿಂದ ಹೈದರಾಬಾದ್ ಗೆ ಹೊರಟಿದ್ದ ಸ್ಪೈಸ್ ಜೆಟ್ ವಿಮಾನದಲ್ಲಿ ಇದ್ದಕ್ಕಿದ್ದಂತೆಯೇ ಹೊಗೆ ತುಂಬಿದ್ದರಿಂದ ಪ್ರಯಾಣಿಕರಿಗೆ ಆ ಸಮಯದಲ್ಲಿ ಏನು ನಡೆಯುತ್ತಿದೆ ಅನ್ನೋದೆ ಅರ್ಥವಾಗಲಿಲ್ಲ. ಸೈಸ್ ಜೆಟ್ ವಿಮಾನದ ಸಿಬ್ಬಂದಿಗಳು ಪ್ರಯಾಣದ ಮಧ್ಯದಲ್ಲಿ ಕ್ಯಾಬಿನ್ ನಲ್ಲಿ ಹೊಗೆ ತುಂಬಿದ್ದರಿಂದ ದೇವರ ಪ್ರಾರ್ಥನೆಯನ್ನು ಪ್ರಾರಂಭಿಸುವಂತೆ ಪ್ರಯಾಣಿಕರಿಗೆ ಹೇಳಿದರು ಎಂದು ವರದಿಯಾಗಿದೆ.


ಇದನ್ನೂ ಓದಿ:  Superhighway: ಸಮುದ್ರತೀರದಲ್ಲಿ ಪ್ರಾಚೀನ ಸೂಪರ್ ಹೈವೇ ಪತ್ತೆ!


ಆನಂತರ ಸ್ಪೈಸ್ ಜೆಟ್ ವಿಮಾನವನ್ನು ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ "ಸಂಪೂರ್ಣ ತುರ್ತು" ಭೂಸ್ಪರ್ಶ ಮಾಡಲು ಒತ್ತಾಯಿಸಲಾಯಿತು. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ತುರ್ತು ನಿರ್ಗಮನ ದ್ವಾರಗಳ ಮೂಲಕ ಸುರಕ್ಷಿತವಾಗಿ ಇಳಿಸಲಾಗಿದ್ದು, ಇಳಿಯುವಾಗ ಒಬ್ಬ ಪ್ರಯಾಣಿಕನ ಪಾದಕ್ಕೆ ಸ್ವಲ್ಪ ಗಾಯಗಳಾಗಿವೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.


ಏತನ್ಮಧ್ಯೆ, ವಿಮಾನದಲ್ಲಿದ್ದ ಸ್ಪೈಸ್ ಜೆಟ್ ಸಿಬ್ಬಂದಿಗಳು ವಿಮಾನ ಲ್ಯಾಂಡಿಂಗ್ ಆದ ಕೂಡಲೇ ತುರ್ತು ನಿರ್ಗಮನದ ಬಾಗಿಲುಗಳು ತೆರೆದ ತಕ್ಷಣ "ಜಿಗಿಯಲು ಮತ್ತು ಅಲ್ಲಿಂದ ಓಡಲು" ಜನರನ್ನು ಕೇಳಿದರು ಎಂದು ಪ್ರಯಾಣಿಕರೊಬ್ಬರು ಸುದ್ದಿ ಮಾಧ್ಯಮಕ್ಕೆ ತಿಳಿಸಿದರು.


ಕ್ಯಾಬಿನ್ ನಲ್ಲಿ ಹೊಗೆ ತುಂಬಿದ್ದರಿಂದ ದೇವರಲ್ಲಿ ಪ್ರಾರ್ಥಿಸಿ ಎಂದ ಸಿಬ್ಬಂದಿ
ವಿಮಾನದಲ್ಲಿ ಹಠಾತ್ತನೆ ಹೊಗೆ ತುಂಬಿದ್ದರಿಂದ ಕ್ಯಾಬಿನ್ ಸಿಬ್ಬಂದಿಗಳು ಪ್ರಯಾಣಿಕರನ್ನು ದೇವರಲ್ಲಿ ಪ್ರಾರ್ಥಿಸಲು ಕೇಳಿದರು ಎಂಬುದರ ಬಗ್ಗೆ ಇನ್ನೊಬ್ಬ ಪ್ರಯಾಣಿಕರು ಮಾತನಾಡಿದರು.


"ಸಿಬ್ಬಂದಿ ಸದಸ್ಯರು ದೇವರನ್ನು ಪ್ರಾರ್ಥಿಸಲು ನಮಗೆ ಹೇಳಿದರು. ಅದು ತುಂಬಾನೇ ಭಯಾನಕವಾದ ಸಮಯವಾಗಿತ್ತು. ನನ್ನ ಸಹಪ್ರಯಾಣಿಕರಲ್ಲಿ ಅನೇಕರು ಭಯಭೀತರಾಗಿ ಜೋರಾಗಿ ಕಿರುಚಲು ಪ್ರಾರಂಭಿಸಿದರು" ಎಂದು ಹೈದರಾಬಾದ್ ನ ಐಟಿ ವೃತ್ತಿಪರ ಶ್ರೀಕಾಂತ್ ಎಂ ಹೇಳಿದ್ದಾರೆ ಎಂದು ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ.


ಹೊಗೆ ತುಂಬಿದ ಕ್ಯಾಬಿನ್ ನ ದೃಶ್ಯಗಳನ್ನು ಅವರು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಘಟನೆಯ ಫೋಟೋಗಳು ಮತ್ತು ವಿಡಿಯೋಗಳನ್ನು ಅಳಿಸುವಂತೆ ಸಿಬ್ಬಂದಿ ಪ್ರಯಾಣಿಕರನ್ನು ಕೇಳಿದರು ಮತ್ತು ಅವರು ನಿರಾಕರಿಸಿದಾಗ ಅವರ ಫೋನ್ ಅನ್ನು ಸಹ ಕಸಿದುಕೊಂಡರು ಎಂದು ಶ್ರೀಕಾಂತ್ ಹೇಳಿದರು.


ಘಟನೆಯ ವಿಡಿಯೋ ಮತ್ತು ಫೋಟೋ ಡಿಲಿಟ್ ಮಾಡಲು ಹೇಳಿದ್ರಂತೆ!
"ಘಟನೆಯ ವಿಡಿಯೋಗಳು ಮತ್ತು ಫೋಟೋಗಳನ್ನು ಅಳಿಸಿ ಹಾಕುವಂತೆ ಎಂದರೆ ಡಿಲಿಟ್ ಮಾಡುವಂತೆ ವಿಮಾನಯಾನ ಸಿಬ್ಬಂದಿ ನಮ್ಮನ್ನು ಒತ್ತಾಯಿಸಿದರು. ನಾನು ನಿರಾಕರಿಸಿದಾಗ ಅವರು ನನ್ನ ಫೋನ್ ಕಸಿದುಕೊಂಡರು" ಎಂದು ಶ್ರೀಕಾಂತ್ ಅವರು ಹೇಳಿದರು. ಮತ್ತೊಬ್ಬ ಪ್ರಯಾಣಿಕ ಅನಿಲ್ ಪಿ “20 ನಿಮಿಷಗಳಲ್ಲಿ ನಮ್ಮ ಸುತ್ತಲೂ ಹೊಗೆ ಕಾಣಿಸಿಕೊಂಡಿತು, ಶೀಘ್ರದಲ್ಲಿಯೇ ಲೈಟ್ ಗಳೆಲ್ಲವೂ ಆನ್ ಆದವು ಮತ್ತು ಸಿಬ್ಬಂದಿ ನಮ್ಮ ಆಸನಗಳಿಂದ ಮೇಲೆಳಬೇಡಿ ಅಂತ ನಮಗೆ ಹೇಳಿದರು" ಎಂದು ಅವರು ಹೇಳಿದರು.


Q400 ವಿಮಾನ VT-SQB (ವಿಟಿ-ಎಸ್‌ಕ್ಯೂಬಿ) ಯಲ್ಲಿ 86 ಪ್ರಯಾಣಿಕರಿದ್ದರು ಮತ್ತು ತುರ್ತು ಭೂಸ್ಪರ್ಶದಿಂದಾಗಿ, ರಾತ್ರಿ 11 ಗಂಟೆ ಸುಮಾರಿಗೆ ಘಟನೆಯ ನಂತರ ಒಂಬತ್ತು ವಿಮಾನಗಳ ಮಾರ್ಗಗಳನ್ನು ಬದಲಾಯಿಸಲಾಗಿದೆ ಎಂದು ಹೈದರಾಬಾದ್ ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಇದನ್ನೂ ಓದಿ: Car Blast: ಕೊಯಮತ್ತೂರು ಬಳಿ ಸ್ಫೋಟಗೊಂಡ ಕಾರಿನ ಹಿಂದೆ ಉಗ್ರರ ಕೈವಾಡ! ಮೃತನ ಮನೆಯಲ್ಲಿ ಸಿಕ್ಕಿದೆ ಸ್ಫೋಟಕ ಸಾಕ್ಷ್ಯ!


ಸ್ಪೈಸ್ ಜೆಟ್ ಇತ್ತೀಚಿನ ದಿನಗಳಲ್ಲಿ ಕಾರ್ಯಾಚರಣೆ ಮತ್ತು ಹಣಕಾಸು ವಿಷಯದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದೆ ಮತ್ತು ಇದು ಡಿಜಿಸಿಎ ಕಣ್ಗಾವಲಿನಲ್ಲಿದೆ ಅಂತ ಹೇಳಲಾಗುತ್ತಿದೆ. ಈಗ ಈ ಘಟನೆಯ ಬಗ್ಗೆ ಸಹ ಡಿಜಿಸಿಎ ತನಿಖೆಗೆ ಆದೇಶಿಸಿದೆ.

Published by:Ashwini Prabhu
First published: