Phone Explodes: ಆನ್‌ಲೈನ್ ತರಗತಿಯ ಸಮಯದಲ್ಲಿ ಸ್ಮಾರ್ಟ್​ಫೋನ್ ಸ್ಫೋಟಗೊಂಡು ವಿದ್ಯಾರ್ಥಿ ಸಾವು

Online Class: ಆನ್‌ಲೈನ್ ತರಗತಿಯ ಸಮಯದಲ್ಲಿ ಸ್ಮಾರ್ಟ್​ಫೋನ್ ಸ್ಫೋಟಗೊಂಡ ನಂತರ ವಿಯೆಟ್ನಾಂನಲ್ಲಿರುವ ನೇ ಅನ್ ಪ್ರಾಂತ್ಯದಲ್ಲಿ 5ನೆಯ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ ಸುಟ್ಟ ಗಾಯಗಳಿಂದ ಮೃತಪಟ್ಟಿದ್ದಾನೆ.

Smartphones (Google)

Smartphones (Google)

  • Share this:
    Smartphone Explodes: ಆನ್‌ಲೈನ್ ತರಗತಿಯ ಸಮಯದಲ್ಲಿ ಸ್ಮಾರ್ಟ್​ಫೋನ್ ಸ್ಫೋಟಗೊಂಡು ವಿದ್ಯಾರ್ಥಿ ಸಾವು ಆನ್‌ಲೈನ್ ತರಗತಿಯ ಸಮಯದಲ್ಲಿಸ್ಮಾರ್ಟ್​ಫೋನ್ ಸ್ಫೋಟಗೊಂಡು ವಿದ್ಯಾರ್ಥಿ ಸಾವುಈ ಕೋವಿಡ್-19 ವೈರಸ್ ಹಾವಳಿಯಿಂದಾಗಿ ಇಡೀ ವಿಶ್ವವೇ ತತ್ತರಿಸಿ ಹೋಗಿದ್ದು, ನಾವೆಲ್ಲಾ ನೋಡಿದ್ದೇವೆ. ಅದರಲ್ಲೂ ಈ ಮಕ್ಕಳಿಗೆ ಒಂದೂವರೆ ವರ್ಷದಿಂದ ಶಾಲೆಗೆ ಹೋಗದೆ ಮನೆಯಲ್ಲಿಯೇ ಕುಳಿತು ಮೊಬೈಲ್ ಮತ್ತು ಮನೆಯಲ್ಲಿರುವ ಕಂಪ್ಯೂಟರ್ ಬಳಸಿ ಆನ್‌ಲೈನ್ ತರಗತಿಗೆ ಪಡೆದುಕೊಳ್ಳುವಂತಾಗಿದೆ.ಈ ಆನ್‌ಲೈನ್ ತರಗತಿಗಳಿಂದ ಮಕ್ಕಳ ಮೇಲೆ ಆಗುತ್ತಿರುವ ಪರಿಣಾಮಗಳು ಒಂದೆರಡಲ್ಲ. ಸತತವಾಗಿ ಮೊಬೈಲ್ ಮತ್ತು ಕಂಪ್ಯೂಟರ್ ನೋಡುವುದರಿಂದ ಅವರ ಕಣ್ಣುಗಳ ಮೇಲೆ ಅಗಾಧ ಪರಿಣಾಮ ಬಿರುತ್ತಿದೆ, ಅಲ್ಲದೆ ಶಾಲೆಗೆ ಹೋಗಿ ಕಲಿಯುವುದು ಬೇರೆ ಮಕ್ಕಳ ಜೊತೆ ಬೆರೆಯುವುದು ಎಲ್ಲವೂ ವಿಭಿನ್ನವಾಗಿರುತ್ತದೆ. ಆದರೆ ಇಲ್ಲೊಂದು ಹೃದಯ ವಿದ್ರಾವಕ ಘಟನೆಯಲ್ಲಿ ಈ ಆನ್‌ಲೈನ್ ತರಗತಿಯು 11 ವರ್ಷದ ಬಾಲಕನ ಪ್ರಾಣವನ್ನೇ ಬಲಿ ತೆಗೆದುಕೊಂಡಿದೆ.

    ಆನ್‌ಲೈನ್ ತರಗತಿಯ ಸಮಯದಲ್ಲಿ ಸ್ಮಾರ್ಟ್​ಫೋನ್ ಸ್ಫೋಟಗೊಂಡ ನಂತರ ವಿಯೆಟ್ನಾಂನಲ್ಲಿರುವ ನೇ ಅನ್ ಪ್ರಾಂತ್ಯದಲ್ಲಿ 5ನೆಯ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ ಸುಟ್ಟ ಗಾಯಗಳಿಂದ ಮೃತಪಟ್ಟಿದ್ದಾನೆ. ಆನ್‌ಲೈನ್ ತರಗತಿಯ ಸಮಯದಲ್ಲಿ ಸ್ಮಾರ್ಟ್​ಫೋನ್ ಚಾರ್ಜ್ ಗೆ ಹಾಕಿದ್ದು, ಇದರಿಂದಾಗಿ ಬ್ಯಾಟರಿ ಬಿಸಿಯಾಗಿದೆ ಮತ್ತು ನಂತರ ಅದು ಸ್ಫೋಟಗೊಂಡಿದೆ ಎಂದು ಹೇಳಲಾಗುತ್ತಿದೆ.

    ಸ್ಮಾರ್ಟ್​ಫೋನ್ ಸ್ಫೋಟಗೊಂಡಿದ್ದರಿಂದ ಹುಡುಗನಿಗೆ ತೀವ್ರ ಸುಟ್ಟ ಗಾಯಗಳಾಗಿದ್ದು, ನಂತರ ಅವನ ಪೋಷಕರು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಹುಡುಗನಿಗೆ ಚಿಕಿತ್ಸೆ ನೀಡುತ್ತಿದ್ದ ಸಮಯದಲ್ಲಿ ನಿಧನರಾಗಿದ್ದಾರೆ ಎಂದು ತಿಳಿಸಲಾಗಿದೆ.

    ಅಧಿಕೃತ ಮೂಲಗಳ ಪ್ರಕಾರ, ಮೊಬೈಲ್ ಸ್ಫೋಟಗೊಂಡ ನಂತರ ಹುಡುಗನು ಹಾಕಿಕೊಂಡ ಬಟ್ಟೆಗೆ ಬೆಂಕಿ ಹತ್ತಿಕೊಂಡಿತು ಮತ್ತು ಅವನಿಗೆ ಸುಟ್ಟು ಗಾಯಗಳಾದವು ಎಂದು ಹೇಳಲಾಗುತ್ತಿದೆ.

    ಸ್ಮಾರ್ಟ್​ಫೋನ್ ಸ್ಫೋಟಗೊಂಡಾಗ ಹುಡುಗ ಇಯರ್ ಫೋನ್ ಧರಿಸಿ ಮನೆಯಲ್ಲಿ ಓದುತ್ತಿದ್ದ ಎಂದು ನಾಮ್‌ಡೆನ್ ಜಿಲ್ಲಾ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ದಿನಪತ್ರಿಕೆಯೊಂದಕ್ಕೆ ಮಾಹಿತಿ ನೀಡಿದ್ದಾರೆ. ಈ ಘಟನೆಯು ಅಕ್ಟೋಬರ್ 14 ರಂದು ಸಂಜೆ 4 ಗಂಟೆ ಸುಮಾರಿಗೆ ಸಂಭವಿಸಿದೆ.

    Read Also: Xiaomi: ಸ್ಮಾರ್ಟ್​ಫೋನ್ ಥರಾ ಇನ್ಮೇಲೆ ಸ್ಮಾರ್ಟ್ ಕಾರ್… ಎಲೆಕ್ಟ್ರಿಕ್ ವಾಹನದತ್ತ ಶಿಯೋಮಿ ಚಿತ್ತ

    ಜಿಲ್ಲೆಗಳಲ್ಲಿ ಶಾಲೆಗಳು ಕಳೆದ ತಿಂಗಳು ತೆರೆದಿದ್ದವು. ಆದರೆ ಮತ್ತೆ ಶಾಲೆಗಳನ್ನು ಮುಚ್ಚುವ ಸಂದರ್ಭ ಬಂದರೆ ಆನ್‌ಲೈನ್ ತರಗತಿಗೆ ಮಕ್ಕಳು ಮತ್ತು ಶಿಕ್ಷಕರು ಸಿದ್ದರಾಗಿರಬೇಕು ಎಂದು ಅಧಿಕಾರಿಗಳು ವಾರಕ್ಕೊಮ್ಮೆ ಆನ್‌ಲೈನ್ ತರಗತಿಗಳಿಗೆ ಹಾಜರಾಗುವಂತೆ ವಿದ್ಯಾರ್ಥಿಗಳಿಗೆ ಹೇಳಿದ್ದರು ಎಂದು ದಿನಪತ್ರಿಕೆಯೊಂದು ವರದಿ ಮಾಡಿದೆ.

    ಈ ಕೋವಿಡ್ ಸಾಂಕ್ರಾಮಿಕ ರೋಗವು ಬಹುತೇಕ ಎಲ್ಲರನ್ನೂ ಡಿಜಿಟಲ್ ಸಾಧನಗಳನ್ನು ಬಳಸಲು ಒತ್ತಾಯಿಸಿದೆ ಎಂದು ಹೇಳಬಹುದು. ಶಾಲಾ ವಿದ್ಯಾರ್ಥಿಗಳು ಸಹ ತಮ್ಮ ಸ್ಮಾರ್ಟ್​ಫೋನ್ ಗಳಲ್ಲಿ, ಟ್ಯಾಬ್ಲೆಟ್ ಇತ್ಯಾದಿಗಳಲ್ಲಿ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಈ ಎಲೆಕ್ಟ್ರಾನಿಕ್ ಸಾಧನಗಳನ್ನು ದೀರ್ಘಕಾಲದವರೆಗೆ ಬಳಸುವುದರಿಂದ ವಿದ್ಯಾರ್ಥಿಗಳು ಅನೇಕ ರೀತಿಯ ಅಪಾಯಗಳನ್ನು ಎದುರಿಸಬೇಕಾಗುತ್ತದೆ ಮತ್ತು ಇದು ಅವರ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.

    Read Also: Log-in to God: ಆ್ಯಪ್​ ಬಳಸಿ ದೇವರಿಗೆ ಪ್ರಾರ್ಥನೆ ಸಲ್ಲಿಸಿ!, ‘‘ಕ್ಲಿಕ್ ಟು ಪ್ರೇ‘‘ಮತ್ತೆ ಆರಂಭಿಸಿದ ಪೋಪ್​ ಫ್ರಾನ್ಸಿಸ್​

    ಇತ್ತೀಚೆಗೆ ಭಾರತದಲ್ಲಿ 18 ವರ್ಷದ ಕಾಲೇಜು ವಿದ್ಯಾರ್ಥಿಯೊಬ್ಬ ತನ್ನ ಸ್ಮಾರ್ಟ್​ಫೋನ್ ಚಾರ್ಜ್‌ಗೆ ಹಾಕಿದ್ದಾಗ ವಿದ್ಯುದಾಘಾತಕ್ಕೆ ಒಳಗಾಗಿದ್ದನ್ನು ಸಹ ಇಲ್ಲಿ ನೆನಪಿಸಿ ಕೊಳ್ಳಬಹುದಾಗಿದೆ. ಸ್ಮಾರ್ಟ್​ಫೋನ್‌ಗಳನ್ನು ಬಳಸಿಕೊಂಡು ಆನ್‌ಲೈನ್ ತರಗತಿಗಳಿಗೆ ಹಾಜರಾಗುವಂತೆ ವಿದ್ಯಾರ್ಥಿಗಳನ್ನು ಒತ್ತಾಯಿಸುತ್ತಿರುವುದರಿಂದ ಹಲವಾರು ದೇಶಗಳಿಂದ ಇತ್ತೀಚೆಗೆ ಅನೇಕ ರೀತಿಯ ಅಹಿತಕರ ಘಟನೆಗಳು ವರದಿಯಾಗಿವೆ.
    First published: