ಭಾರತದಿಂದ ಮಹತ್ವಾಕಾಂಕ್ಷಿ ಗಗನಯಾನ; 3 ವರ್ಷದಲ್ಲಿ ಬಾಹ್ಯಾಕಾಶಕ್ಕೆ ಹಾರಲಿದ್ದಾರೆ ಮೂವರು ಭಾರತೀಯರು

ಜಿಎಸ್​ಎಲ್​ವಿ ಮಾರ್ಕ್-2 ರಾಕೆಟ್ ಮೂಲಕ ಬಾಹ್ಯಾಕಾಶ ನೌಕೆಗಳನ್ನ ಗಗನಕ್ಕೆ ಕಳುಹಿಸಲಾಗುತ್ತದೆ. ಯೋಜನೆಗೆ ಚಾಲನೆ ಸಿಕ್ಕ 40 ತಿಂಗಳೊಳಗೆ ಮೊದಲ ಮಾನವಸಹಿತ ನೌಕೆ ಹಾರಾಟದ ಪ್ರಯೋಗ ನಡೆಸುವ ಗುರಿ ಹಾಕಲಾಗಿದೆ. ಇದಕ್ಕೂ ಮುನ್ನ ತಂತ್ರಜ್ಞಾನದ ಬಗ್ಗೆ ವಿಶ್ವಾಸ ಮೂಡಲು ಎರಡು ಬಾರಿ ಮಾನವರಹಿತ ನೌಕೆಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗುತ್ತದೆ ಎಂದು ಕೇಂದ್ರ ಸರಕಾರ ಹೇಳಿದೆ.

Latha CG | news18india
Updated:December 28, 2018, 5:43 PM IST
ಭಾರತದಿಂದ ಮಹತ್ವಾಕಾಂಕ್ಷಿ ಗಗನಯಾನ; 3 ವರ್ಷದಲ್ಲಿ ಬಾಹ್ಯಾಕಾಶಕ್ಕೆ ಹಾರಲಿದ್ದಾರೆ ಮೂವರು ಭಾರತೀಯರು
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ(ಡಿ. 28): ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಶುಕ್ರವಾರ ಗಗನಯಾನ್ ಕಾರ್ಯಕ್ರಮದ​​ ದೇಶೀಯ ಮಾನವ ಬಾಹ್ಯಾಕಾಶ ಯೋಜನೆಗೆ ಅನುಮೋದನೆ ನೀಡಿದೆ. 2022 ರ ವೇಳೆಗೆ, ಅಂದರೆ ಇನ್ನು ಮೂರು ವರ್ಷದೊಳಗೆ ಮೂವರು ಭಾರತೀಯರು 7 ದಿನಗಳ ಕಾಲ ಬಾಹ್ಯಾಕಾಶಕ್ಕೆ ಹೋಗಲಿದ್ದಾರೆ. ಎರಡು ಮಾನವರಹಿತ ವಿಮಾನಗಳು ಹಾಗೂ ಒಂದು ಮಾನವಸಹಿತ ವಿಮಾನ ಹಾರಾಟವು ಈ ಯೋಜನೆಯ ಭಾಗವಾಗಿರುತ್ತದೆ.

ಈ ಗಗನಯಾನ ಕಾರ್ಯಕ್ರಮಕ್ಕೆ ಒಟ್ಟು 10 ಸಾವಿರ ಕೋಟಿ ವೆಚ್ಚವಾಗುವ ಅಂದಾಜಿದೆ. ತಂತ್ರಜ್ಞಾನ ಅಭಿವೃದ್ಧಿ, ವಿಮಾನ ಸಾಧನಗಳು ಮತ್ತು ಅಗತ್ಯ ಮೂಲಸೌಕರ್ಯಗಳ ವೆಚ್ಚವನ್ನು ಇದು ಒಳಗೊಂಡಿದೆ.

ಗಗನಯಾನ್​ ಕಾರ್ಯಕ್ರಮವು ಇಸ್ರೋ, ಶೈಕ್ಷಣಿಕ, ಉದ್ಯಮ, ರಾಷ್ಟ್ರೀಯ ಸಂಸ್ಥೆಗಳು ಮತ್ತು ಇತರೆ ವೈಜ್ಞಾನಿಕ ಸಂಸ್ಥೆಗಳ ನಡುವಿನ ಸಹಯೋಗಕ್ಕಾಗಿ ವಿಶಾಲ ಚೌಕಟ್ಟನ್ನು ನಿರ್ಮಿಸುತ್ತದೆ. ಈ ಯೋಜನೆ ಸಾಕಷ್ಟು ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಜೊತೆಗೆ ವ್ಯಕ್ತಿಗಳಿಗೆ ಸುಧಾರಿತ ತಂತ್ರಜ್ಞಾನದಲ್ಲಿ ತರಬೇತಿ ನೀಡುತ್ತದೆ. ರಾಷ್ಟ್ರೀಯ ಅಭಿವೃದ್ಧಿಗೆ ಸಹಾಯ ಮಾಡುವ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ತಮ್ಮ ವೃತ್ತಿಯಾಗಿ ಆಯ್ಕೆ ಮಾಡಿಕೊಳ್ಳಲು ಯುವಕರಿಗೆ ಪ್ರೇರೇಪಿಸುತ್ತದೆ ಎನ್ನಲಾಗಿದೆ.

ಇದನ್ನೂ ಓದಿ: ಜಿಎಸ್​ಟಿ ಬಿಸಿ; ತೆಲುಗು ನಟ ಪ್ರಿನ್ಸ್​ ಮಹೇಶ್​ ಬಾಬು ಬ್ಯಾಂಕ್​ ಅಕೌಂಟ್​ ಸೀಜ್

ಜಿಎಸ್​ಎಲ್​ವಿ ಮಾರ್ಕ್-2 ರಾಕೆಟ್ ಮೂಲಕ ಬಾಹ್ಯಾಕಾಶ ನೌಕೆಗಳನ್ನ ಗಗನಕ್ಕೆ ಕಳುಹಿಸಲಾಗುತ್ತದೆ. ಯೋಜನೆಗೆ ಚಾಲನೆ ಸಿಕ್ಕ 40 ತಿಂಗಳೊಳಗೆ ಮೊದಲ ಮಾನವಸಹಿತ ನೌಕೆ ಹಾರಾಟದ ಪ್ರಯೋಗ ನಡೆಸುವ ಗುರಿ ಹಾಕಲಾಗಿದೆ. ಇದಕ್ಕೂ ಮುನ್ನ ತಂತ್ರಜ್ಞಾನದ ಬಗ್ಗೆ ವಿಶ್ವಾಸ ಮೂಡಲು ಎರಡು ಬಾರಿ ಮಾನವರಹಿತ ನೌಕೆಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗುತ್ತದೆ ಎಂದು ಕೇಂದ್ರ ಸರಕಾರ ಹೇಳಿದೆ.

ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 15 ರಂದು ಭಾರತದ 72 ನೇ ಸ್ವಾತಂತ್ರ ದಿನದಂದು ಮಾತನಾಡಿ, 2022 ರ ವೇಳೆಗೆ ಭಾರತೀಯ ವ್ಯಕ್ತಿಯೊಬ್ಬರು 'ಗಗನಯಾನ' ಯೋಜನೆಯಡಿ ಬಾಹ್ಯಾಕಾಶ ಪಯಣ ಬೆಳೆಸಲಿದ್ದಾರೆ ಎಂದು ಹೇಳಿದ್ದರು.

ಭಾರತದ ಈ ಬಾಹ್ಯಾಕಾಶ ಯೋಜನೆಯು ದೇಶದ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಪುಷ್ಟಿ ಕೊಡುವ ನಿರೀಕ್ಷೆ ಕೇಂದ್ರಕ್ಕಿದೆ. ವೈದ್ಯಕೀಯ, ಕೃಷಿ, ಔದ್ಯಮಿಕ ಸುರಕ್ಷತೆ, ಮಾಲಿನ್ಯ, ಕಸ ನಿರ್ವಹಣೆ, ನೀರು ಮತ್ತು ಆಹಾರ ಸಂಪನ್ಮೂಲ ನಿರ್ವಹಣೆ ಇತ್ಯಾದಿ ಕ್ಷೇತ್ರಗಳಲ್ಲಿ ಉತ್ತಮ ತಂತ್ರಜ್ಞಾನದ ಅಭಿವೃದ್ಧಿಯಾಗಬಹುದು. ಜೊತೆಗೆ, ಉದ್ಯೋಗ ಸೃಷ್ಟಿ, ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ಔದ್ಯಮಿಕ ಸಾಮರ್ಥ್ಯವೃದ್ಧಿ ಇತ್ಯಾದಿಗಳ ಮೂಲಕ ದೇಶದ ಆರ್ಥಿಕತೆಗೆ ಸಕರಾತ್ಮಕ ಪರಿಣಾಮ ಬೀರುತ್ತದೆ ಎಂದು ಕೇಂದ್ರ ಸರಕಾರ ಆಶಿಸಿದೆ.ಚಂದ್ರಯಾನ(ಅಕ್ಟೋಬರ್​-2008), ಮಂಗಳಯಾನ(ಸೆಪ್ಟೆಂಬರ್​-2014) ಇವುಗಳ ನಂತರ ಭಾರತ ದೇಶ ಇಟ್ಟ ಮಹತ್ವದ ಹೆಜ್ಜೆ ಆಗಿದೆ.  ಈ ಯೋಜನೆ 15 ಸಾವಿರ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ಇಸ್ರೋ ಮುಖ್ಯಸ್ಥ ಕೆ. ಶಿವನ್​ ಹೇಳಿದ್ದಾರೆ.

First published:December 28, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ