RIL AGM 2020: ದೇಶದ ಆರ್ಥಿಕತೆಗೆ ಸಣ್ಣ ಉದ್ಯಮಗಳೇ ಮೂಲಾಧಾರ ಎಂದ ಫೇಸ್​ಬುಕ್ ಸಿಇಓ ಮಾರ್ಕ್ ಜುಕರ್​ಬರ್ಗ್

ಬುಧವಾರ ನಡೆದ ಎಜಿಎಂನಲ್ಲಿ ಗೂಗಲ್ ಮತ್ತು ಜಿಯೋದ ಸಹಭಾಗಿತ್ವದಲ್ಲಿ ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಸ್ಮಾರ್ಟ್​ ಫೋನ್ ಬಿಡುಗಡೆ ಮಾಡುವುದಾಗಿ ಘೋಷಿಸಲಾಗಿದೆ.

news18-kannada
Updated:July 16, 2020, 9:08 AM IST
RIL AGM 2020: ದೇಶದ ಆರ್ಥಿಕತೆಗೆ ಸಣ್ಣ ಉದ್ಯಮಗಳೇ ಮೂಲಾಧಾರ ಎಂದ ಫೇಸ್​ಬುಕ್ ಸಿಇಓ ಮಾರ್ಕ್ ಜುಕರ್​ಬರ್ಗ್
ಫೇಸ್​ಬುಕ್​ ಸಂಸ್ಥಾಪಕ ಮಾರ್ಕ್​ ಜುಕರ್​ಬರ್ಗ್​
  • Share this:
ನವದೆಹಲಿ (ಜು. 15): ಭಾರತವನ್ನು 2ಜಿ ಮುಕ್ತಗೊಳಿಸಬೇಕೆಂಬ ಉದ್ದೇಶದಿಂದ ಜಿಯೋ ಮತ್ತು ಗೂಗಲ್ ಸಹಭಾಗಿತ್ವದಲ್ಲಿ ಉತ್ತಮ ಗುಣಮಟ್ಟದ ಮತ್ತು ಕಡಿಮೆ ಬೆಲೆಯ 4ಜಿ ಸ್ಮಾರ್ಟ್​ಫೋನ್​ಗಳನ್ನು ಪರಿಚಯಿಸಲಿದೆ. ಅಲ್ಲದೆ, ಜಿಯೋದಲ್ಲಿ ಗೂಗಲ್ 33,000 ಕೋಟಿ ರೂ.ಗಳ ಹೂಡಿಕೆಯನ್ನೂ ಮಾಡಿದೆ. ಈ ಬಗ್ಗೆ ಜಿಯೋದ ಮೊದಲ ವರ್ಚುವಲ್ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ರಿಲಯನ್ಸ್​ ಇಂಡಿಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಘೋಷಿಸಿದ್ದಾರೆ.

ಈ ವೇಳೆ ಜಿಯೋದ ಹೊಸ ವೆಂಚರ್​ಗೆ ಶುಭಾಶಯಗಳನ್ನು ತಿಳಿಸಿರುವ ಫೇಸ್​ಬುಕ್​ ಸಿಇಓ ಮಾರ್ಕ್ ಜುಕರ್​ಬರ್ಗ್, ಜಿಯೋದೊಂದಿಗೆ ಕೈಜೋಡಿಸಿ ನಾವು ವಿಭಿನ್ನವಾದ ಪ್ರಾಜೆಕ್ಟ್​ಗಳನ್ನು ಕೈಗೆತ್ತಿಕೊಳ್ಳಲಿದ್ದೇವೆ. ನಮ್ಮ ಹೊಸ ಪ್ರಯತ್ನದಿಂದಾಗಿ ಭಾರತದ ವಾಣಿಜ್ಯ ಕ್ಷೇತ್ರದಲ್ಲಿ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಪ್ರತಿಯೊಂದು ದೇಶದ ಆರ್ಥಿಕತೆಗೆ ಸಣ್ಣ ಉದ್ಯಮಗಳೇ ಮೂಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: RIL AGM 2020: Jioದಲ್ಲಿ Google 33,000 ಕೋಟಿ ರೂ. ಹೂಡಿಕೆ; ಮುಕೇಶ್ ಅಂಬಾನಿ ಘೋಷಣೆ

ಭಾರತೀಯ ಟೆಲಿಕಾಂನಲ್ಲಿ ಹೊಸ ಅಲೆ ಸೃಷ್ಟಿಸಿದ್ದ ಉದ್ಯಮಿ ಮುಕೇಶ್​ ಅಂಬಾನಿ ಒಡೆತನದ ಜಿಯೋ ತನ್ನ ಶೇ.9.99 ಷೇರನ್ನು ಅಮೆರಿಕದ ಟೆಕ್​ ಸಂಸ್ಥೆ ಫೇಸ್​ಬುಕ್​ಗೆ ಮಾರಾಟ ಮಾಡಿತ್ತು. ಫೇಸ್​ಬುಕ್ ಜಿಯೋದಲ್ಲಿ 43,574 ಕೋಟಿ ರೂ. ಹೂಡಿಕೆ ಮಾಡಿತ್ತು. ಈಗಾಗಲೇ ಜಿಯೋ ಪ್ಲಾಟ್​ಫಾರ್ಮ್​ನಲ್ಲಿ ಫೇಸ್​ಬುಕ್, ಕ್ವಾಲ್ಕಂ ವೆಂಚರ್ಸ್​ ಮುಂತಾದ 10ಕ್ಕೂ ಹೆಚ್ಚು ಸಂಸ್ಥೆಗಳು ಬಂಡವಾಳ ಹೂಡಿಕೆ ಮಾಡಿವೆ. ಭಾರತದಲ್ಲಿ 1.3 ಶತಕೋಟಿ ಜನರಿಗೆ ಉದ್ಯೋಗಾವಕಾಶ ನೀಡುವುದಷ್ಟೇ ಅಲ್ಲದೆ ಡಿಜಿಟಲ್ ಇಂಡಿಯಾ ಪರಿಕಲ್ಪನೆಯನ್ನು ಕಾರ್ಯರೂಪಕ್ಕಿಳಿಸುವುದು ರಿಲಯನ್ಸ್​ ಇಂಡಸ್ಟ್ರೀಸ್​ನ ಉದ್ದೇಶ. ಈ ಹಿನ್ನೆಲೆಯಲ್ಲಿ ಜಿಯೋ ವೇದಿಕೆಯನ್ನು ಬಂಡವಾಳ ಹೂಡಿಕೆಗೆ ಮುಕ್ತವಾಗಿಸಲಾಗಿದೆ.

ಇದನ್ನೂ ಓದಿ: RIL AGM 2020: ಸದ್ಯದಲ್ಲೇ ದೇಶದಲ್ಲಿ ಜಿಯೋ 5ಜಿ ಸೇವೆ ಆರಂಭ: ಬೇರೆ ದೇಶಗಳಿಗೂ 5ಜಿ ಸೊಲ್ಯೂಷನ್​ ಸೇವೆ

2017ರ ಜುಲೈ 21ರಂದು ನಡೆದಿದ್ದ ರಿಲಯನ್ಸ್ ಜಿಯೋ ಎಜಿಎಂನಲ್ಲಿ ಜಿಯೋ ಫೋನ್ ಬಿಡುಗಡೆಯಾಗಿತ್ತು. ನಂತರ 2018ರ ಜುಲೈ 31ರಂದು ಜಿಯೋ ಫೋನ್ 2 ಅನ್ನು 2,999 ರೂ.ಗೆ ಬಿಡುಗಡೆ ಮಾಡಲಾಗಿತ್ತು. ಬುಧವಾರ ನಡೆದ ಎಜಿಎಂನಲ್ಲಿ ಗೂಗಲ್ ಮತ್ತು ಜಿಯೋದ ಸಹಭಾಗಿತ್ವದಲ್ಲಿ ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಸ್ಮಾರ್ಟ್​ ಫೋನ್ ಬಿಡುಗಡೆ ಮಾಡುವುದಾಗಿ ಘೋಷಿಸಲಾಗಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ವರ್ಚುವಲ್ ಈವೆಂಟ್ ಷೇರುದಾರರು ಸೇರಿದಂತೆ ಜಾಗತಿಕ ಹೂಡಿಕೆದಾರರನ್ನು ಆಕರ್ಷಿಸುವ ಸಲುವಾಗಿ Chatbot‌ ಅನ್ನು ಪ್ರಾರಂಭಿಸಲಾಗಿದೆ. ಈಗಾಗಲೇ ವಿಶ್ವದ 6ನೇ ಅತಿ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಮುಕೇಶ್ ಅಂಬಾನಿ ಪಾತ್ರರಾಗಿದ್ದಾರೆ. ವಿಶ್ವದ ಟಾಪ್​ 10 ಶ್ರೀಮಂತರ ಪಟ್ಟಿಯಲ್ಲಿರುವ ಏಷ್ಯಾದ ಏಕೈಕ ವ್ಯಕ್ತಿ ಮುಕೇಶ್ ಅಂಬಾನಿ. ಭಾರತದ ಶ್ರೀಮಂತರ ಪೈಕಿ ಮುಕೇಶ್ ಅಂಬಾನಿ ಮೊದಲ ಸ್ಥಾನದಲ್ಲಿದ್ದಾರೆ.
Published by: Rajesh Duggumane
First published: July 16, 2020, 9:08 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading