ಬಿಹಾರ ಸಿಎಂ ನಿತೀಶ್​ ಕುಮಾರ್​ ಮೇಲೆ ಚಪ್ಪಲಿ ಎಸೆತ; ಮೀಸಲಾತಿ ವ್ಯವಸ್ಥೆಯಿಂದ ಬೇಸತ್ತಿದ್ದ ಯುವಕನಿಂದ ಕೃತ್ಯ

sushma chakre | news18
Updated:October 11, 2018, 4:05 PM IST
ಬಿಹಾರ ಸಿಎಂ ನಿತೀಶ್​ ಕುಮಾರ್​ ಮೇಲೆ ಚಪ್ಪಲಿ ಎಸೆತ; ಮೀಸಲಾತಿ ವ್ಯವಸ್ಥೆಯಿಂದ ಬೇಸತ್ತಿದ್ದ ಯುವಕನಿಂದ ಕೃತ್ಯ
sushma chakre | news18
Updated: October 11, 2018, 4:05 PM IST
ನ್ಯೂಸ್​18 ಕನ್ನಡ

ನವದೆಹಲಿ (ಅ. 11):  ಜೆಡಿಯು ವತಿಯಿಂದ ಪಾಟ್ನಾದಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಬಿಹಾರದ ಮುಖ್ಯಮಂತ್ರಿ ನಿತೀಶ್​ ಕುಮಾರ್​ ಮೇಲೆ ವ್ಯಕ್ತಿಯೊಬ್ಬ ಚಪ್ಪಲಿ ಎಸೆದ ಘಟನೆ ಇಂದು ನಡೆದಿದೆ.

ವೇದಿಕೆ ಮೇಲೆ ಕುಳಿತಿದ್ದ ಸಿಎಂ ನಿತೀಶ್​ ಕುಮಾರ್​ ಮೇಲೆ ಔರಂಗಾಬಾದ್​ನ ಚಂದನ್​ ಕುಮಾರ್​ ಎಂಬ ವ್ಯಕ್ತಿ ಚಪ್ಪಲಿ ಎಸೆದಿದ್ದು, ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ಬಿಹಾರದಲ್ಲಿ ಮೀಸಲಾತಿ ಘೋಷಿಸಿದ್ದ ಸಿಎಂ ನಿತೀಶ್​ ಕುಮಾರ್ ಬಗ್ಗೆ ಕೋಪವಿದ್ದುದರಿಂದ ಈ ಕೃತ್ಯ ಎಸಗಿದ್ದಾಗಿ ಚಂದನ್​ ತಪ್ಪೊಪ್ಪಿಕೊಂಡಿದ್ದಾನೆ.

'ನಿತಿನ್​ ಕುಮಾರ್​ ಸರ್ಕಾರ ಘೋಷಿಸಿದ್ದ ಮೀಸಲಾತಿಯಿಂದ ಕಷ್ಟ ಅನುಭವಿಸಿದವರಲ್ಲಿ ನಾನೂ ಒಬ್ಬ. ನಾನು ಮೇಲ್ವರ್ಗದಲ್ಲಿ ಹುಟ್ಟಿದ್ದರಿಂದ ಉತ್ತಮ ಶಿಕ್ಷಣ ಪಡೆದಿದ್ದರೂ ಉದ್ಯೋಗ ಗಿಟ್ಟಿಸಲು ಸಾಧ್ಯವಾಗಲಿಲ್ಲ. ಇದಕ್ಕೆ ರಾಜ್ಯದಲ್ಲಿರುವ ಮೀಸಲಾತಿಯೇ ಕಾರಣ' ಎಂದು ತನ್ನ ಅಸಮಾಧಾನವನ್ನು ಪೊಲೀಸರ ಬಳಿ ಹೇಳಿಕೊಂಡಿದ್ದಾನೆ.

ನಿತೀಶ್​ ಕುಮಾರ್​ ಮೇಲೆ ಚಪ್ಪಲಿ ಎಸೆದ ಕೂಡಲೆ ಆ ಯುವಕನನ್ನು ಜೆಡಿಯು ಕಾರ್ಯಕರ್ತರು ಹಿಡಿದು ಥಳಿಸತೊಡಗಿದರು. ಆಗ ಅವರಿಂದ ಯುವಕನನ್ನು ಬಿಡಿಸಿದ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡು ಹೊಡೆತದಿಂದ ತಪ್ಪಿಸಿದ್ದಾರೆ.

ಇದನ್ನೂ ಓದಿ: ಕೇಂದ್ರ ಸಚಿವ ಅನಂತ್​ಕುಮಾರ್​ ಹೆಗಡೆಗೆ ಕಡಪದಲ್ಲಿ ಚಪ್ಪಲಿ ಎಸೆತ, ಪ್ರತಿಭಟನೆ

First published:October 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ